24/08/2017
ಶ್ರೀರಾಘವೇಂದ್ರಃ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿಮಧ್ಭ್ಯಃ ಅಘಾದ್ರಿಸಂಭೇದನದೃಷ್ಟಿವಜ್ರಃ ಕ್ಷಮಾಸುರೇಂದ್ರೋವತು ಮಾಂ ಸದಾಯಮ್ ।। ೩ ।। ಜ್ಞಾನಿಗಳು ಯಾವ ರೀತಿ ಭಕ್ತರ ಪಾಪಗಳನ್ನು ವಿನಾಶ ಮಾಡುತ್ತಾರೆ ಎಂಬ ತತ್ವವನ್ನು ಆಚಾರ್ಯರು ಭಾಗವತತಾತ್ಪರ್ಯದ ಹತ್ತನೆಯ ಸ್ಕಂಧದಲ್ಲಿ ತಿಳಿಸುತ್ತಾರೆ. ಆ ತತ್ವದ ಅನುಸಂಧಾನದೊಂದಿಗೆ ರಾಯರ ಕಾರುಣ್ಯದ ಚಿಂತನೆ ಇಲ್ಲಿದೆ. ಸ್ವಪಾದಕಂಜದ್ವಯಭಕ್ತಿಮಧ್ಭ್ಯಃ — ತಮ್ಮ ಪಾದಪದ್ಮಗಳಲ್ಲಿ ಭಕ್ತಿಯುಳ್ಳ ಸಜ್ಜನರಿಗೆ ಸಕಲಪ್ರದಾತಾ — ಸರ್ವ ಅಭೀಷ್ಟಗಳನ್ನೂ ನೀಡುವ ಅಘಾದ್ರಿಸಂಭೇದನದೃಷ್ಟಿವಜ್ರಃ — ತಮ್ಮ ಕಣ್ಣೋಟದಿಂದ ಭಕ್ತರ ಪಾಪರಾಶಿಗಳನ್ನು ನಾಶ ಮಾಡುವ ಕ್ಷಮಾಸುರೇಂದ್ರಃ — ಭೂಮಿಯ ಇಂದ್ರನಂತಿರುವ ಶ್ರೀರಾಘವೇಂದ್ರಃ — ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಮಾಂ — ನನ್ನನ್ನು ಸದಾ — ಯಾವಾಗಲೂ ಅವತು — ರಕ್ಷಿಸಲಿ ಈ ವಿಷಯಗಳ ವಿವರಣೆ ಇಲ್ಲಿದೆ.
Play Time: 31:39
Size: 5.90 MB