Upanyasa - VNU492

ಶ್ರೀಮದ್ ಭಾಗವತಮ್ — 1 — ಭಾಗವತದ ಮಾಹಾತ್ಮ್ಯ

ಶ್ರೀಮದ್ ಭಾಗವತದ ಅರ್ಥಾನುಸಂಧಾನವನ್ನು ಮಾಡುವದಕ್ಕಿಂತ ಮುಂಚೆ ಅದರ ಮಾಹಾತ್ಮ್ಯವನ್ನು ಕೀರ್ತನೆ ಮಾಡಿ ಅರ್ಥಾನುಸಂಧಾನ ಮಾಡಬೇಕು ಎನ್ನುವದು ಶ್ರೀ ವೇದವ್ಯಾಸದೇವರೇ ಹಾಕಿಕೊಟ್ಟ ಸತ್ಸಂಪ್ರದಾಯ. ಶ್ರೀ ಶುಕಾಚಾರ್ಯರು, ಶ್ರೀ ಸನಕಾದಿಗಳು ಮುಂತಾದ ಮಹಾನುಭಾವರು ಅಚರಿಸಿದ ಶ್ರೇಷ್ಠ ಸಂಪ್ರದಾಯ. ಪ್ರಾಯಃ ಎಲ್ಲ ಪುರಾಣಗಳಲ್ಲಿಯೂ ಭಾಗವತದ ಮಾಹಾತ್ಮ್ಯವನ್ನು ಶ್ರೀ ವೇದವ್ಯಾಸದೇವರು ತಿಳಿಸಿದ್ದಾರೆ. ಅದರಲ್ಲಿಯೂ ಪದ್ಮಪುರಾಣ ಮತ್ತು ಸ್ಕಂದಪುರಾಣಗಳಲ್ಲಿ ವಿಸ್ತೃತವಾಗಿ ಅದು ನಿರೂಪಿತವಾಗಿದೆ. 

ಅಜ್ಞಾನವನ್ನು ಕಳೆಯುವ ಕಥೆ, ಕರ್ಣಾನಂದಕರವಾದ ಕಥೆ, ವಿವೇಕವನ್ನು ಕರುಣಿಸುವ ಕಥೆ, ನಮ್ಮ ಮಾಯಾಮೋಹವನ್ನು ಕಳೆಯುವ ಕಥೆ ಭಾಗವತದ ಕಥೆ. ಕ್ಷೀರಸಾಗರವನ್ನು ಮಥನ ಮಾಡಿ ಪಡೆದ ಅಮೃತವೂ ಈ ಭಾಗವತದ ಕಥೆಗೆ ಸಾಟಿಯಾದುದಲ್ಲ ಎಂಬ ಮಹತ್ತ್ವದ ಮಾತನ್ನು ವಿವರಿಸಿ ಸೂತರು ಶೌನಕಾದಿಗಳಿಗೆ ತಿಳಿಸಿ ಭಾಗವತದ ಮಾಹಾತ್ಮ್ಯವನ್ನು , ಸಪ್ತಾಹದ ಮಹತ್ತ್ವವನ್ನು ತಿಳಿಸುತ್ತಾರೆ. ಪದ್ಮಪುರಾಣದ ಆ ಭಾಗದ ಅನುವಾದ ಇಲ್ಲಿದೆ. 

ಪರೀಕ್ಷಿದ್ರಾಜರು ಪ್ರಾಯೋಪವೇಶಕ್ಕೆ ಕುಳಿತಿದ್ದಾರೆ. ಅಲ್ಲಿಗೆ ಸಮಸ್ತ ಋಷಿಗಳೂ ಆಗಮಿಸುತ್ತಾರೆ. ಶುಕಾಚಾರ್ಯರೂ ಬರುತ್ತಾರೆ. ಪರೀಕ್ಷಿದ್ರಾಜ ಅವರನ್ನು ಪ್ರಶ್ನೆ ಮಾಡಿದಾಗ ಉತ್ತರವಾಗಿ ಭಾಗವತವನ್ನು ಹೇಳಲು ಶುಕಾಚಾರ್ಯರು ಉಪಕ್ರಮಿಸುತ್ತಾರೆ. ಆಗ ಸಮಸ್ತ ದೇವತೆಗಳೂ ಅಮೃತದ ಕೊಡವನ್ನೇ ತೆಗೆದುಕೊಂಡು ಬಂದು ಪರೀಕ್ಷಿತರಿಗೆ ಈ ಅಮೃತ ಕೊಡಿ, ನಮಗೆ ಕಥಾಮೃತವನ್ನು ನೀಡಿ ಎಂದು ಕೇಳುತ್ತಾರೆ. ಆಗ ಶುಕಾಚಾರ್ಯರು क्व सुधा क्व कथा लोके क्व काचः क्व मणिर्महान् । ಎಲ್ಲಿಯ ಅಮೃತ, ಎಲ್ಲಿಯ ಭಾಗವತ, ಗಾಜಿಗೂ ರತ್ನಕ್ಕೂ ಸಾಮ್ಯವೇ ಎಂದು ಭಾಗವತದ ಮಾಹಾತ್ಮ್ಯವನ್ನು ತಿಳಿಸುವ ಅಪೂರ್ವ ಘಟನೆಯ ವಿವರ ಇಲ್ಲಿದೆ. 

-- 

ಈ ಪವಿತ್ರ ಜ್ಞಾನಯಜ್ಞ ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರರಾದ ಶ್ರೀರಂಗಕ್ಷೇತ್ರನಿವಾಸಿಗಳಾದ ಶ್ರೀಮದ್ ವಿದ್ಯಾವಾರಿಧಿತೀರ್ಥಗುರುಸಾರ್ವಭೌಮರಿಗೆ ಅವರಲ್ಲಿ ಸನ್ನಿಹಿತರಾದ ಸಮಸ್ತ ಗುರು ದೇವತೆಗಳಿಗೆ ಅವರಲ್ಲಿ ನೆಲೆನಿಂತ ಕಮಲೇಶ ನರಸಿಂಹ, ಶ್ರೀ ಭೂ ದುರ್ಗಾಸಮೇತ ಶ್ರೀ ವೇದವ್ಯಾಸ, ಮಾರುತಿ-ಸೀತಾಸಮೇತ ಪಟ್ಟಾಭಿರಾಮ, ಶ್ರೀ ಭೈಷ್ಮೀಸತ್ಯಾಸಮೇತ ಶ್ರೀ ಮೂಲಗೋಪಾಲಕೃಷ್ಣದೇವರ ಚರಣಾರವಿಂದಗಳಿಗೆ ಸಮರ್ಪಿತ. 

ಶ್ರೀಪುರಂದರದಾಸಾರ್ಯಾದಿ ಸಮಸ್ತ ದಾಸವರೇಣ್ಯರು, ಆಚಾರ್ಯರ ಪವಿತ್ರಪರಂಪರೆಗಳ ಸಮಸ್ತ ಭೂಷಾಮಣಿಗಳಾದ ಯತಿವರೇಣ್ಯರು, ವಿಶೇಷವಾಗಿ ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದಾಚಾರ್ಯರೆಂಬ ಮುನಿತ್ರಯರು, ಸಮಸ್ತ ತತ್ವಾಭಿಮಾನಿದೇವತೆಗಳು, ಹನುಮಭೀಮಮಧ್ವಾತ್ಮಕ ಭಾರತೀಪತಿ ಮುಖ್ಯಪ್ರಾಣದೇವರು, ಅವರ ಹೃದಯಸಿಂಹಾಸನಾಧೀಶ್ವರನಾದ ಶ್ರೀ ಲಕ್ಷ್ಮೀಪತಿವಿಷ್ಣುನಾಮಕನಾದ ಭಗವಂತ ನಿಮ್ಮೆಲ್ಲರಿಂದ ನಿರ್ವಿಘ್ನವಾಗಿ ಶ್ರವಣ ಮಾಡಿಸಲೆಂದು ಅವರೆಲ್ಲರನ್ನೂ ಭಕ್ತಿಯಿಂದ ಪ್ರಾರ್ಥಿಸುತ್ತೇನೆ. 

- ವಿಷ್ಣುದಾಸ ನಾಗೇಂದ್ರಾಚಾರ್ಯPlay Time: 39:06

Size: 7.10 MB


Download Upanyasa Share to facebook View Comments
24304 Views

Comments

(You can only view comments here. If you want to write a comment please download the app.)
 • Jayanthi Venugopal,Bangalore

  12:28 PM, 18/04/2022

  🙏🏻🙏🏻
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:00 AM, 09/03/2022

  🙏🙏🙏
 • Sowmya,Bangalore

  8:03 PM , 20/01/2022

  🙏🙏🙏
 • Sowmya Manchenalli Venkatesh,Bangalore

  9:25 PM , 18/06/2021

  ನಾನು 8 ತಿಂಗಳ ಗರ್ಭಿಣಿಯಾಗಿದ್ದು..ನಾನು ಇಂದಿನಿಂದ ಭಾಗವತ ಕೇಳಲು ಶುರು ಮಾಡಿದೆನು....ನನ್ನ ಮಗು ಒಳ್ಳೆ ಆಯುಸ್ಸು ಆರೋಗ್ಯ ಹಣೆಬರಹ ಅದೃಷ್ಟ ವಿದ್ಯೆ ಬುಧ್ಧಿ ಗುಣ ಸಂಸ್ಕಾರ ದಿಂದ ಹುಟ್ಟಬೇಕು.... ಒಳ್ಳೆ ಹೆಸರು ಕೀರ್ತಿ ಸಂಪಾದಿಸಲಿ ಅಂತ ಆಶೀರ್ವಾದ ಮಾಡಿ

  Vishnudasa Nagendracharya

  ತುಂಬ ಸಂತೋಷ. 
  
  ಶ್ರೇಷ್ಠ ವೈಷ್ಣವ ಸಂತಾನವಾಗಲಿ. ಶ್ರೀಹರಿಗುರುಗಳ ಕುರುಣೆಗೆ ಪಾತ್ರವಾಗಲಿ. 
  
  ನಿಮ್ಮ ಕುಟುಂಬದಲ್ಲಿ ಸದಾ ಸಂತೋಷ, ಮನಸ್ಸಿನಲ್ಲಿ ನೆಮ್ಮದಿ ತುಂಬಿರಲಿ. 
 • Mahadi Sethu Rao,Bengaluru

  3:47 PM , 08/06/2020

  HARE KRISHNA.
 • Mahadi Sethu Rao,Bengaluru

  3:46 PM , 08/06/2020

  HARE KRISHNA.
 • Mahadi Sethu Rao,Bengaluru

  3:46 PM , 08/06/2020

  HARE KRISHNA.
 • Chandrika prasad,Bangalore

  8:51 PM , 05/07/2019

  1varshadinda bhagavata kelutta bandiddene newbie tilisidante ragi kalina Kali bhagadashtu swami jnana,bhakti,vyragyavannu karuneyinda dayapalisiddane.ivattinda nimminda punaha prarambha maduttene.Acharyarige namskaragalu.
 • Ramakrishna,Benglore

  11:46 AM, 14/01/2019

  ಆಚಾರ್ಯರೇ ಹೀಗೆ ಮಾಡುವುದರಿಂದ ಈ ಅಮೂಲ್ಯ ಉಪನ್ಯಾಸ ಅಪಾತ್ರರ ಕೈಗೂ ಸಿಗಬಹುದಲ್ಲವಾ???
 • Manoj,Bengaluru

  1:02 PM , 10/01/2019

  Gurugale where can i get this book of bhagavata
 • Vishwanandini User,Bengaluru

  7:15 AM , 08/12/2018

  ಶ್ರೀ ಗುರುಭ್ಯೋ ನಮಃ
  ಗುರುಗಳೇ, ಇಲ್ಲಿ ನೀವು ಜೀವನಿಗೆ ಸಪ್ತವರಣಗಳು ಎಂದು ಹೇಳಿ, ಭಾಗವದಿಚ್ಛಾ, ಪ್ರಕೃತಿ, ಲಿಂಗ ದೇಹ, ಕಾಮ, ಕರ್ಮ, ಅವಿದ್ಯಾ, ಜೀವಾಚ್ಛಾದಿಕಾ, ಪರಮಾಚ್ಛಾದಿಕಾ ಎಂದು 8 ಹೇಳಿದ್ದೀರಿ. ಯಾವೆರಡನ್ನು ಒಂದು ಎಂದು ತೆಗೆದುಕೊಳ್ಳಬೇಕು?

  Vishnudasa Nagendracharya

  ಕಾಮ ಎನ್ನುವದು ಅವಿದ್ಯೆಯ ಕಾರ್ಯ. ತುಂಬ ಪ್ರಧಾನವಾದ್ದರಿಂದ ಅದನ್ನೂ ಉಲ್ಲೇಖಿಸಲಾಗಿದೆ. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  6:35 AM , 30/05/2018

  ಗುರುಗಳೆ🙏
  ಶ್ರೀಮದ್ ಭಾಗವತದ ಶ್ರವಣೋತ್ಸವ ನಿರ್ವಿಘ್ನವಾಗಿ ಸಾಗಲಿ ಎಂದು ಅನುಗ್ರಹಿಸಿ🙏🙏🙏😊
 • Mythreyi Rao,Bengaluru

  12:41 PM, 09/05/2018

  ಧನ್ಯವಾದಗಳು ಗುರುಗಳೆ
 • Vijayakumar Kaushik,Tirumakudalu Narasipura

  8:35 PM , 26/02/2018

  ಧನ್ಯೋಸ್ಮೀ...ಅದ್ಭುತ ಪ್ರವಚನ ಆಚಾರ್ಯರೇ.
 • Geetha,Kumbakonam

  2:46 PM , 29/11/2017

  Anantha anantha koti namaskargalu nimigae.
 • MOHAN KUMAR,Bangalore

  12:28 AM, 02/11/2017

  ನಮಸ್ಕಾರ
 • MOHAN KUMAR,Bangalore

  12:24 AM, 02/11/2017

  ನಮಸ್ಕಾರ
 • Kamalakar,Banglore

  7:39 PM , 28/10/2017

  18
 • Kamalakar,Banglore

  7:39 PM , 28/10/2017

  18
 • parimala,Bangalore

  12:24 PM, 18/09/2017

  nimma bhagwat tumba chennai modi brookside or jerri ann kathy
 • prema raghavendra,coimbatore

  10:16 AM, 18/09/2017

  Nimma anthargatha bharathi ramanamukyapranthargatha sri lakshminarasimhage anantha namaskara! Nanninda ishte aguthe acharyare!
 • H V Gururaja,ಬೆಂಗಳೂರು

  4:03 AM , 15/09/2017

  Prannams
 • Ananda Teertha,Bangalore

  9:59 PM , 07/09/2017

  ಆಚಾರ್ಯರ ಪಾದಾರವಿಂದಗಳಿಗೆ ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು. 🙏🙏
 • Anil,Bangalore

  10:21 PM, 02/09/2017

  Request to upload this file again, since the already uploaded file is not playing

  Vishnudasa Nagendracharya

  The file is working fine.
  
  Please delete and download again. The problem will be resolved. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  3:49 PM , 03/09/2017

  Anil sir please check if you can play from website.
 • s n bhat,udupi..kaup

  9:55 AM , 03/09/2017

  🙏🙏🙏🙏
 • Anil,Bangalore

  10:21 PM, 02/09/2017

  Request to upload this file again, since the already uploaded file is not playing
 • Meera jayasimha,Bengaluru

  9:36 PM , 02/09/2017

  ಗುರು ಗಳಿಗೆ ಅನಂತಾನಂತ ನಮನಗಳು. ಭಾದ್ರಪದ ನವಮಿ ಯಿಂದ ಮೂಡಿ ಬರುತ್ತಿ ರುವ ಭಾಗವತ ಪ್ರವಚನಗಳು ಕೇಳಿ ನನ್ನ ಜನುಮ ಸಾರ್ಥಕವಾಗಿದೆ. ಯಾವ ಜನಮದ ಪುಣ್ಯ ದಫಲ ದಿಂದಲೋ ಈ ಭಾಗ್ಯ ದೊರಕಿದೆ.ಧನ್ಯವಾದಗಳು ಗುರು ಗಳೆ.
 • Mahendranath Damodar Alageri,Bangalore

  2:21 PM , 02/09/2017

  Very good
 • Jayashree Karunakar,Bangalore

  9:40 PM , 01/09/2017

  ಉತ್ತಮವಾದ ಪ್ರಶ್ನೆಗೆ , ಅತ್ಯುತ್ತಮವಾದ ಉದಾಹರಣೆಯೊಂದಿಗೆ ಉತ್ತರ ನೀಡಿದ್ದೀರ ಗುರುಗಳೆ. ಲೌಕಿಕ ರೀತಿಯಲ್ಲಿ ಪ್ರಶ್ನೆಗಳನ್ನು ಬಿಡಿಸಿದಾಗ ತತ್ವಗಳು ಬೇಗ ಅಥ೯ವಾಗುತ್ತದೆ ಗುರುಗಳೆ. ಧನ್ಯವಾದಗಳು
 • ಸುದರ್ಶನ ಶ್ರೀ. ಲ.,ಬೆಂಗಳೂರು

  2:07 PM , 01/09/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏😊
  
  ಭಗವಂತನನ್ನು ಮತ್ತು ತತ್ವಗಳನ್ನು ಗೀತೆ, ವಿಷ್ಣುಸಹಸ್ರನಾಮ, ವೇದ, ಮಹಾಭಾರತ ತಿಳಿಸುತ್ತವೆ. ಇದೆಲ್ಲಕ್ಕಿಂತ ಬ್ರಹ್ಮ ಸೂತ್ರಗಳು ಹೇಗೆ ಉತ್ತಮ ಸ್ಥಾನವನ್ನು ಪಡೆದಿದೆ ?
  
  ಮತ್ತು ನೀವು ತಿಳಿಸಿದ ರೀತಿಯಲ್ಲಿ ಆಯಾ ಗ್ರಂಥಗಳಿಗೆ ಆಯಾ ಸ್ಥಾನ ಯಾಕೆ ?

  Vishnudasa Nagendracharya

  ಶಾಸ್ತ್ರಗ್ರಂಥಗಳ ತಾರತಮ್ಯ ಹೀಗಿದೆ - 
  
  ಬ್ರಹ್ಮಸೂತ್ರಗಳು
  
  ವಿಷ್ಣುಸಹಸ್ರನಾಮ ಮತ್ತು ಭಗವದ್ಗೀತೆ
  
  ಮಹಾಭಾರತ
  
  ಸಮಗ್ರ ವೇದಗಳು
  
  ಮೂಲರಾಮಾಯಣ 
  
  ಪಂಚರಾತ್ರ
  
  ಬ್ರಹ್ಮತರ್ಕ
  
  ಶ್ರೀಮದ್ ಭಾಗವತ
  
  ಪುರಾಣಗಳು
  
  ಸ್ಮೃತಿಗ್ರಂಥಗಳು
  
  ವಸ್ತುಸ್ಥಿತಿಯಲ್ಲಿ ತತ್ವವನ್ನು ತಿಳಿಸುವ ಗ್ರಂಥಹಳು ವೇದಗಳೇ. ಆ ವೇದದ ತತ್ವವನ್ನು ದೃಷ್ಟಾಂತಪೂರ್ವಕವಾಗಿ ತಿಳಿಸಿದ ಗ್ರಂಥಗಳು ಮಹಾಭಾರತಾದಿಗಳು. 
  
  ಆದರೆ, ವೇದದ ಅರ್ಥ ಹೀಗೆಯೇ ಎಂದು ನಿರ್ಣಯಿಸುವ ಶಕ್ತಿ ನಮಗಿಲ್ಲ. ಇದೇ ಅದರರ್ಥ ಎಂದು ವೇದವ್ಯಾಸದೇವರು ಬ್ರಹ್ಮಸೂತ್ರಗಳಲ್ಲಿ ನಿರ್ಣಯಿಸಿದ್ದಾರೆ. ಬ್ರಹ್ಮಸೂತ್ರದ ನಿರ್ಣಯದ ಅನುಸಾರವಾಗಿ ವೇದಗಳನ್ನು ತಿಳಿಯಲಿಲ್ಲ ಎಂದಾದಲ್ಲಿ ನಮಗೆ ಶುದ್ದ ತತ್ವಜ್ಞಾನ ದೊರೆಯುವದಿಲ್ಲ, ಅನರ್ಥವೇ ಉಂಟಾಗುತ್ತದೆ. 
  
  ಹೀಗಾಗಿ ವೇದಗಳ ಅರ್ಥವನ್ನು ನಿರ್ಣಯಿಸುವ ಬ್ರಹ್ಮಸೂತ್ರಗಳು ವೇದಗಳಿಗಿಂತ ಉತ್ತಮ ಎಂದು ನಿರ್ಣೀತವಾಯಿತು. 
  
  ಸರಳವಾದ ದೃಷ್ಟಾಂತ ನೀಡುತ್ತೇನೆ - 
  
  ಉತ್ತಮನಾದ ವಕೀಲರೊಬ್ಬರು ತುಂಬ ಪರಿಶುದ್ಧವಾಗಿ ಒಂದು ವಾದವನ್ನು ಮಂಡಿಸುತ್ತಾರೆ. 
  
  ಆದರೆ ನ್ಯಾಯಾಧೀಶರು ಮತ್ತೊಬ್ಬ ವಕೀಲನ ವಕಾಲತ್ತನ್ನೂ ಕೇಳಿ, ನಿಷ್ಪಕ್ಷಪಾತವಾಗಿ ನಿರ್ಣಯ ನೀಡುತ್ತಾನೆ. 
  
  ಹೀಗಾಗಿ ವಕೀಲನಿಗಿಂತ ನ್ಯಾಯಾಧೀಶ ಉತ್ತಮ. ಕಾರಣ ಅವನು ನಿರ್ಣಯವನ್ನು ನೀಡುತ್ತಿದ್ದಾನೆ. ಇಬ್ಬರು ವಕೀಲರಲ್ಲಿ ಒಬ್ಬ ವಕೀಲ ಹೇಳುವ ಮಾತನ್ನೇ ನ್ಯಾಯಾಧೀಶ ಹೇಳುವದು. ಆದರೆ ವಕೀಲ ಹೇಳಿದರೆ ನಿರ್ಣಯವಲ್ಲ, ನ್ಯಾಯಾಧೀಶ ಹೇಳಿದರೆ ನಿರ್ಣಯ. 
  
  ಹಾಗೆ ವೇದಗಳು ತತ್ವವನ್ನು ತಿಳಿಸುತ್ತವೆ. ಆ ತತ್ವವನ್ನು ನಿರ್ಣಯ ಮಾಡಿ ತಿಳಿಸುವದು ಬ್ರಹ್ಮಸೂತ್ರಗಳು. 
 • Laxmi rao,Bangalore

  7:33 PM , 31/08/2017

  Acharyri bhakthi purvaka namanagalu bahala swarasya vagide
 • Poornima Venkatesh,Mysore

  9:58 AM , 31/08/2017

  Superb. We are off to a good start. We are really blessed to hear this. Easily understood by common people.  We had only heard of the name Bhagavatha. Now to hear in detail by a knowledgeable person like Nagendracharyaru is a boon to lesser mortal like me. He takes pain to cover every detail and narrates in his own style beautifully. One must listen to experience this divine feeling. Thank you, thank you Acharyare.
 • H. Suvarna kulkarni,Bangalore

  3:03 AM , 31/08/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ಆರಂಭ ಸೊಗಸಾಗಿ ಮೂಡಿ ಬಂದಿದೆ ಈ ಕಲಿಯುಗದಲ್ಲಿ ಯಂತ್ರಶಕ್ತಿ ಅದ್ಬುತವಾದದ್ದು ಅಮೆರಿಕದಲ್ಲಿರುವ ನಾವು ಈ ಮೊಬೈಲ್ ಫೋನ್ ಇಂಟರ್ನೆಟ್ ವಾಟ್ಸಪ್ ಇಲ್ಲದಿದ್ದಲ್ಲಿ ನಿಮ್ಮ ದ್ವನಿ ಕೇಳಲು ಆಗುತ್ತಿರಲಿಲ್ಲ ಅದಕ್ಕಾಗಿ ಈ ಯಂತ್ರಶಕ್ತಿ ಕೆಡದಿರಲಿ ಎಂದು ಭಗವಂತನನ್ನು ಪ್ರಾಥಿ೯ಸುತ್ತೇನೆ
 • Nagaraj Cochi,Tirupati

  12:04 AM, 31/08/2017

  Namaskaragalu achaaryare
 • Laxmi Ramchandra Nagavi,Mumbai

  10:57 PM, 30/08/2017

  Gurugale namaskar 🙏🙏
 • Muralidhar Bhat,Almaty Kazakhstan

  10:51 PM, 30/08/2017

  Sir I am unable to download the upanyasa! It has hanged when it was 1% further when I tried again it shows option only to play which does not play as there was no file
 • Shamala R,Bangalore

  10:02 PM, 30/08/2017

  ಸ್ವಕಾರ್ಯ ಕುಶಲತೆ ಎಂಬುದನ್ನು ಇನ್ನೂ ಸ್ವಲ್ಪ ವಿವರಿಸುವಿರಾ???? ಗುರುಗಳೇ ...

  Vishnudasa Nagendracharya

  ಸ್ವಕಾರ್ಯ ಎಂದರೆ ತಮ್ಮ ಕಾರ್ಯ ಎಂದರ್ಥ.
  
  ಸ್ವಕಾರ್ಯಕುಶಲಾಃ ಸುರಾಃ ಎಂದರೆ ತಮ್ಮ ಕಾರ್ಯವನ್ನು ಸಾಧಿಸುವಲ್ಲಿ ಕುಶಲರಾದ ದೇವತೆಗಳು ಎಂದರ್ಥ. 
  
  ಉಪನ್ಯಾಸವನ್ನು ಕೇಳಿದ ಬಳಿಕ ನಿಮಗೆ ಈ ಪ್ರಶ್ನೆ ಮೂಡಬಹದು. 
  
  ದೇವತೆಗಳನ್ನು ಸ್ವಕಾರ್ಯಕುಶಲರು ಎಂದು ಕರೆದಿದ್ದಾರೆ. ಆದರೆ ಅಮೃತವನ್ನು ಕೊಟ್ಟು ಭಾಗವತವನ್ನು ಪಡೆಯುವ ಆ ಕಾರ್ಯ ಸಫಲವಾಗಲಿಲ್ಲವಲ್ಲ ಎಂದು. 
  
  ವಸ್ತುಸ್ಥಿತಿಯಲ್ಲಿ ದೇವತೆಗಳಿಗೆ ಭಾಗವತದ ಮಾಹಾತ್ಮ್ಯವನ್ನು ತಿಳಿಸುವದೇ ಸ್ವಕಾರ್ಯ. 
  
  ಅದನ್ನು ಸಮರ್ಥವಾದ ರೀತಿಯಲ್ಲಿಯೇ ಅವರು ನಿಭಾಯಿಸಿದರು. 
  
  ಭಾಗವತ ಆರಂಭವಾಗುವ ವೇಳೆಗೆ ಅಮೃತವನ್ನು ತೆಗೆದುಕೊಂಡು ಬಂದರು. 
  
  ಸಾಯಲಿದ್ದ ಪರೀಕ್ಷಿತರಿಗೆ ಅದನ್ನು ನೀಡುವ ಪ್ರಲೋಭನೆಯನ್ನೂ ಒಡ್ಡಿದರು. 
  
  ಪರೀಕ್ಷಿತರು ಅಮೃತವನ್ನು ತಿರಸ್ಕರಿಸಿ ಕಥೆಯೇ ಬೇಕೆಂದರು. 
  
  ಸಾಯಲು ಹೊರಟ ಮನುಷ್ಯನಿಗೆ ಅಮೃತಕ್ಕಿಂತ ಭಾಗವತ ಕಥೆಯೇ ಮಿಗಿಲಾಯಿತು ಎಂದರೆ, ಭಾಗವತವೇ ಅಮೃತಕ್ಕಿಂತ ಶ್ರೇಷ್ಠ ಎಂದು ನಿರ್ವಿವಾದವಾಗಿ ಸಿದ್ಧವಾಯಿತು. 
  
  ಹೀಗಾಗಿ ದೇವತೆಗಳು ಸ್ವಕಾರ್ಯಕುಶಲರು ಎನ್ನುವ ಮಾತು ಸತ್ಯವಾಯಿತು. 
  
  ಜ್ಞಾನಪ್ರದಾನಾಯ ಸತಾಮ್, ತದನ್ಯಜ್ಞಾನಪ್ರಣಾಶಾಯ ಚ ವಿಷ್ಣುನೈತೇ ಕ್ಲೃಪ್ತಾಃ ಎಂದು ಆಚಾರ್ಯರು, ಸಜ್ಜನರಿಗೆ ಜ್ಞಾನವನ್ನು ನೀಡುವದೇ ದೇವತೆಗಳ ಸ್ವಕಾರ್ಯ ಎಂದು ತಾತ್ಪರ್ಯನಿರ್ಣಯದಲ್ಲಿ ನಿರ್ಣಯಿಸಿದ್ದಾರೆ. 
 • Raghunandan s,Udupi

  10:11 PM, 30/08/2017

  Sashtanga namaskaragalu.
 • Rangavitala Purohit,Suggenahalli ,Hospet taluk ,Ballari district

  7:26 PM , 30/08/2017

  ಅನಂತಾನಂತ ನಮಸ್ಕಾರಗಳು ಆಚಾರ್ಯರೆ,,,,,
 • Dattatreya,Sandur

  6:36 PM , 30/08/2017

  ನಮಸ್ಕಾರ ಗುರುಗಳೇ,
  ನಮ್ಮ ಜೀವನ ಸಾರ್ಥಕವಗುತ್ತಿದೆ ನಿಮ್ಮ ಈ ಬಹಳ ಪವಿತ್ರವಾದ ಶ್ರೀಮದ್ ಭಾಗವತದ ಉಪನ್ಯಾಸದಿಂದ.ಇದೂಂದು ಆದ್ಬುತ ಕ್ರಮ ಮನೆ ಮನೆಗೆ ಈ ಭಾಗವತದ ತಲುಪವಂತಾಗಲಿ
 • PRAVEEN,Bangalore

  4:07 PM , 30/08/2017

  Very happy
 • Shashikala.p,Hubli

  2:47 PM , 30/08/2017

  ಶಶಿಕಲಾ ಪದಕಿ.     ಹುಬ್ಬಳ್ಳಿ.         ಗುರು ಗಳಿಗೆ ಧನ್ಯವಾಧಗಳು.ಭಾಗವತ ಪ್ರವಚನ ಕರ್ಣಾನಂದವಾಗಿದೆ
 • savitha kiran rao,dubai

  1:37 PM , 30/08/2017

  Modalige nammellara acchumechina Madhwacharyarige avara gurugalada vedavysarige avara antaryamiyada vishnunamaka nada bhagavantanige samasta tatwabhimani devategalige hagu Dada yativarenyarige bhakti 
  poorvaka sallisutta nimmalli karuneyinda vignapisikolluvudu enendare hoovininda naru swargakke seridante bhagavatavemba amrutavañnu nammanta mandamatifalife tilisikodalu tonka Katti ninta nimma padakamalagalige pamaralada nimma sodariya vandanegalu. Neevu nityavu aradisuva lakshmi narasimatmaka moola ramadevaru nammannu karuneyinda anugrahisi katha shravanavannu kelalu anugrahisali. Shrikrishnarpanamastu.
 • Jayashree Karunakar,Bangalore

  12:48 PM, 30/08/2017

  ಗುರುಗಳೆ ತಾವು ನೀಡುವ ಕಣಾ೯ನಂದಕರವಾದ ಭಗವಂತನ ಗುಣಗಾನವು ನಮಗೆ ನಿರಂತರವಾಗಿ ದೊರೆಯಲಿ ಎಂದು ನನ್ನ ಪ್ರಾಥ೯ನೆ.
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  12:31 PM, 30/08/2017

  ಆಚಾರ್ಯರಿಗೆ ನಮಸ್ಕಾರಗಳು. ಉಪನ್ಯಾಸ ಬಹಳ ಚೆನ್ನಾಗಿ ಮೂಡಿಬಂದಿದೆ. ಸಾಮಾನ್ಯರಿಗೂಅರ್ಥವಾಗುವಂತೆ ವಿವರಿಸಿದ್ದೀರಿ. ನಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳುವದಕ್ಕೆ ನಿಮ್ಮ ಪ್ರವಚನಗಳು ಬಹಳ ಉಪಕಾರವಾಗುತ್ತದೆ . ಅನೇಕ ನಮಸ್ಕಾರಗಳು.
 • Parimala krishnamurthy,Bengaluru

  12:07 PM, 30/08/2017

  Ananta namaskaragalu.
 • Madhvwshachar,Bangalore

  11:30 AM, 30/08/2017

  ನಿಮ್ಮ ಕಾರ್ಯ ನಿರ್ವಿಘ್ನವಾಗಿ ಸಾಗುವಂಥೆ. ನಮ್ಮ ಶ್ರವಣಾ ಭಾಗ್ಯವು ನಿರ್ವಿಘ್ನವಾಗಿ ನಡೆಯುವಂತೆ ನಿಮ್ಮ ಅಂತರ್ಗತ ಮಧ್ವಾಂತರ್ಗತ ವೇದವ್ಯಸರಲ್ಲಿ ಪ್ರಾರ್ಥನೆ ಸಲ್ಲಿಸುತ್ತೆನೆ
 • Keshava Bhat Kekanaje,Puttur

  10:21 AM, 30/08/2017

  ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ... ಸಂತೋಷವಾಗುತ್ತಿದೆ...
 • Keshava Bhat Kekanaje,Puttur

  10:21 AM, 30/08/2017

  ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ... ಸಂತೋಷವಾಗುತ್ತಿದೆ...
 • P N Deshpande,Bangalore

  9:34 AM , 30/08/2017

  S.Namaskargalu. Bhagwanatana anugrhadind Namma Purwa punnyadind SrimadBagwatwannu tammantha Shrestha gaynigalind keluwa sowbhaggy doreatiddakke Anant pranamagalu. Ondu dinwu bidadante muuru varshagal kaal idara panawannu maduwa bhaggywu tamma anugrhadind aagali endu prathisikollttenea
 • Sangeetha Prasanna,Bangalore

  9:03 AM , 30/08/2017

  ಗುರುಗಳಿಗೆ ನಮಸ್ಕಾರಗಳು .ಧನ್ಯತೆಯ ಭಾವ ಮೂಡಿದೆ .🙏🙏
 • Ramamurthy N S,Bangalore

  9:02 AM , 30/08/2017

  ಭಾಗವತ ಪ್ರವಚನಕ್ಕೆ ಧನ್ಯವಾದಗಳು.
 • Mohan kumar,Bangalore

  8:54 AM , 30/08/2017

  Gurugale nirvignavaagi nadesikodirenfu kelikolluttene..
 • Shantha.raghothamachar,Bangalore

  8:34 AM , 30/08/2017

  ಆಚಾರ್ಯ ರೇತಮಗೆ ತ್ರಿಕರಣಶುದ್ಧಿಯಿಂದ ನಮಸ್ಕಾರಮಾಡಿ.ನಿರ್ವಿಘ್ನವಾಗಿ ಶ್ರವಣಮಾಡಲು ಆಸೀರ್ವದಿಸಿ ಎಂದು ಕೇಳಿ ಕೊಳ್ಳತ್ತೇನೆ
 • Shantha.raghothamachar,Bangalore

  8:34 AM , 30/08/2017

  ಆಚಾರ್ಯ ರೇತಮಗೆ ತ್ರಿಕರಣಶುದ್ಧಿಯಿಂದ ನಮಸ್ಕಾರಮಾಡಿ.ನಿರ್ವಿಘ್ನವಾಗಿ ಶ್ರವಣಮಾಡಲು ಆಸೀರ್ವದಿಸಿ ಎಂದು ಕೇಳಿ ಕೊಳ್ಳತ್ತೇನೆ
 • ಗುರುರಾಜಾಚಾರ್ಯ ಕೃ. ಪುಣ್ಯವಂತ.,ಹುಬ್ಬಳ್ಳಿ

  8:10 AM , 30/08/2017

  ತಪ್ಪದೇ ಎಲ್ಲವನ್ನೂ ಶ್ರವಣಮಾಡುವಂತೆ ,ನಿರ್ವಿಘ್ನವಾಗಿಸಾಗುವಂತೆ ನಿಮ್ಮ ,ನಿಮ್ಮ ಅಂತರ್ಯಾಮಿಯಾದ ವೇದವ್ಯಾಸರ ಅನುಗ್ರಹವಾಗಲಿ.ಶಿರಸಾಷ್ಠಾಂಗ ನಮಸ್ಕಾರಗಳು.
 • Anusha Achyut Mirji,Bangalore

  7:28 AM , 30/08/2017

  Namma Janma sarthaka vaitu , gurugalige Anant koti pranamagalu