Upanyasa - VNU493

ಶ್ರೀಮದ್ ಭಾಗವತಮ್ — 2 — ಕಲಿಯುಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳ ಪರಿಸ್ಥಿತಿ

ಕಲಿಯುಗ ಆರಂಭವಾಗಿ ಸುಮಾರು ಇನ್ನೂರೈವತ್ತು ವರ್ಷಗಳಾಗಿದ್ದಾಗ ಶ್ರೀ ನಾರದರು ಭೂಲೋಕದಲ್ಲಿ ಕಲಿಯ ಪ್ರಾಬಲ್ಯವನ್ನು ಕಾಣುತ್ತ ವೃಂದಾವನಕ್ಕೆ ಬರುತ್ತಾರೆ. ಅಲ್ಲಿ ಭಕ್ತಿ ಜ್ಞಾನ ವೈರಾಗ್ಯಗಳಿಗೆ ಅಭಿಮಾನಿಗಳಾದ ದೇವತೆಗಳ ದೀನ ಪರಿಸ್ಥಿತಿಯನ್ನು ಕಾಣುತ್ತಾರೆ. ಈ ಅವಸ್ಥೆಗೆ ಕಾರಣ ಕಲಿಯುಗವೇ ಎಂದು ಹೇಳಿದಾಗ, ಭಕ್ತಿದೇವತೆಯು ಕೇಳುವ “ಪರೀಕ್ಷಿದ್ರಾಜ ಮುಂತಾದವರು ಯಾಕಾಗಿ ಕಲಿಯುಗಕ್ಕೆ ಅವಕಾಶ ಮಾಡಿಕೊಟ್ಟರು” ಎಂಬ ಪ್ರಶ್ನೆಗೆ ನಾರದರು ದಿವ್ಯವಾದ ಉತ್ತರಗಳನ್ನು ನೀಡುತ್ತಾರೆ. ಆಚಾರ್ಯರ ನಿರ್ಣಯದೊಂದಿಗೆ ಆ ಉತ್ತರದ ವಿವರಣೆ ಈ ಭಾಗದಲ್ಲಿದೆ. 

Play Time: 55:08

Size: 7.72 MB


Download Upanyasa Share to facebook View Comments
14747 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:00 AM, 09/03/2022

  🙏🙏🙏
 • Sowmya,Bangalore

  8:02 PM , 21/01/2022

  🙏🙏🙏
 • Mahadi Sethu Rao,Bengaluru

  4:42 PM , 08/06/2020

  HARE KRISHNA.
 • Vikram Shenoy,Doha

  7:04 PM , 14/10/2019

  ಆಚಾರ್ಯರ ನಿಮ್ಮ ಧ್ವನಿ ಕೇಳಿದ ಕೂಡಲೇ ಒಂದು ತರಹ ಹೃದಯದ ಕಲ್ಮಶ ನಾಶ ಆಗುತ್ತೆ. ನಾವು ಆಭಾರಿ!!
 • Chandrika prasad,Bangalore

  12:59 PM, 12/07/2019

  Vishvanandini App iruvudarinda aalavagi bhagavata keluva sowbhagya nanage dayamayanada Devanagari karuneyinda sikkide.Tumba Chennai mudibandide.Acharyarige pranamagalu.
 • Bharatheesha,Anathapur

  8:23 PM , 11/05/2019

  Achar Achar shukracharya suit Acharya
 • Aditya Nadagowda,Dharawad

  11:44 AM, 04/05/2019

  Very very informative
  
  Acaharya u have opened my eyes.
  
  This pravachan helped to uplift my Bakthi.
 • MOHAN KUMAR,Bangalore

  5:23 AM , 02/11/2017

  ಶುಭೋದಯ
 • Mrs laxmi laxman padaki,Pune

  12:17 PM, 16/10/2017

  👌👌👏👏kaliugadabagge chennagi thilisddiri.Dhanyavadagalu.
 • prema raghavendra,coimbatore

  11:01 AM, 18/09/2017

  Danyavadagalu! Nimma anthargatha bharathiramanamukya pranaanthargatha sri lskshmi hyagreevarige  anantha namaskaragalu! Acharyare!!
 • ಸುದರ್ಶನ್,ಬೆಂಗಳೂರು

  9:29 AM , 11/09/2017

  Dhanyavadagalu acharyarige
 • ಸುದರ್ಶನ್,ಬೆಂಗಳೂರು

  9:29 AM , 11/09/2017

  Dhanyavadagalu acharyarige
 • ಸುದರ್ಶನ್,ಬೆಂಗಳೂರು

  8:48 PM , 10/09/2017

  ನಮಸ್ಕಾರ ಆಚಾರ್ಯರಿಗೆ ನಾರದ ಮಹರ್ಷಿಗಳ ಕಾಲದಲ್ಲಿಯೂ ಮುಸ್ಲಿಂ ಸಮುದಾಯದ ವರ್ಗವಿದ್ದಿತೇ.

  Vishnudasa Nagendracharya

  ಮುಸ್ಲಿಮರು ಬೇರೆ, ಯವನರು ಬೇರೆ. 
  
  ಅಂದಿನ ಯವನರ ಮುಂದುವರೆದ ಭಾಗ ಇವತ್ತಿನ ಮುಸ್ಲಿಮರು ಎಂದು ತೋರುತ್ತದೆ. 
  
  ಭಾರತದ ಸಮುದ್ರದ ಆಚೆಯ ದ್ವೀಪಗಳಲ್ಲಿ ವಾಸ ಮಾಡುತ್ತಿದ್ದ ಒಂದು ಸಮುದಾಯ ಯವನರು ಎನ್ನುವದು. ಯವನರು ಮಹಾಭಾರತದ ಕಾಲಕ್ಕೇ ಇದ್ದರೆ. ಕಾಲಯವನ ಇರಲಿಲ್ಲವೇ? ಅದರ ಹಿಂದೆಯೂ ಇದ್ದರು. 
  
  ಕಲಿಯುಗ ಆರಂಭವಾಗುತ್ತಿದ್ದಂತೆ ಈ ಯವನರ ಆಕ್ರಮಣ ನಮ್ಮ ದೇಶದ ಮೇಲಾಗಿತ್ತು. ಅನೇಕ ದೇವಾಲಯಗಳು ಆಗಲೇ ವಿಧ್ವಂಸಗೊಂಡಿದ್ದವು. ಅದರ ಉಲ್ಲೇಖವನ್ನು ಶ್ರೀ ನಾರದರು ಪದ್ಮಪುರಾಣದಲ್ಲಿ ಮಾಡುತ್ತಿರುವದು. 
 • Laxmi rao,Bangalore

  1:11 PM , 02/09/2017

  Hari sarvottama vaauy jivottama
 • Shantha.raghothamachar,Bangalore

  10:18 PM, 31/08/2017

  ನಮಸ್ಕಾರಗಳು. ಸಪ್ತ ಧಾತುಗಳಿಗೂ, ಸಪ್ತಾವರ್ಣಗಳಿಗೂ ಏನಾದರೂ ಸಂಬಂಧಗಳಿವೆಯೆ?ಆಚಾರ್ಯ ರೇ ತಿಳಿಸಿ.

  Vishnudasa Nagendracharya

  ಸಪ್ತಧಾತುಗಳಿಗೂ ಸಪ್ತಾವರಣಗಳಿಗೂ ಯಾವ ಸಂಬಂಧವೂ ಇಲ್ಲ. 
  
  ಸಪ್ತಧಾತುಗಳು ನಮ್ಮ ದೇಹದಲ್ಲಿರುತ್ತವೆ. 
  
  ಸಪ್ತಾವರಣಗಳು ಜೀವನಿಗೆ ಸಂಬಂಧಿಸಿದ್ದು. 
 • P.R.SUBBA RAO,BANGALORE

  10:50 PM, 31/08/2017

  ಗುರು ಗಳಿಗೆ ಅನಂತಾನಂತ ನಮಸ್ಕಾರ ಗಳು. ಇಷ್ಟು ಜನ ಪ್ರಪಂಚದ ಮೂಲೆ ಮೂಲೆಯಿಂದ ತಮ್ಮ ಉಪಕಾರವನ್ನು ಹೊಗಳುತ್ತಿರುವಾಗ ನಾನು ಏನು ಹೇಳಬೇಕೆಂದು ತೋರುತ್ತಿಲ್ಲ
  - ತಮ್ಮ ವಿಧೇಯ
  - ಸುಬ್ಬರಾವ್
 • P.R.SUBBA RAO,BANGALORE

  10:50 PM, 31/08/2017

  ಗುರು ಗಳಿಗೆ ಅನಂತಾನಂತ ನಮಸ್ಕಾರ ಗಳು. ಇಷ್ಟು ಜನ ಪ್ರಪಂಚದ ಮೂಲೆ ಮೂಲೆಯಿಂದ ತಮ್ಮ ಉಪಕಾರವನ್ನು ಹೊಗಳುತ್ತಿರುವಾಗ ನಾನು ಏನು ಹೇಳಬೇಕೆಂದು ತೋರುತ್ತಿಲ್ಲ
  - ತಮ್ಮ ವಿಧೇಯ
  - ಸುಬ್ಬರಾವ್
 • ಸುದರ್ಶನ ಶ್ರೀ. ಲ.,ಬೆಂಗಳೂರು

  7:29 PM , 31/08/2017

  ನಮಗೆ ಭಗವಂತನನ್ನು ಮಹಾನುಭಾವರ ತರಹ ಯಥಾಯೋಗ್ಯವಾಗಿ ತಪಸ್ಸು ಮಾಡುವುದು ಅಸಾಧ್ಯ ಯಾಕೆ ?
  ಸಾಧನೆಯ ಮಾರ್ಗದಲ್ಲಿ ಈ ರಿತಿಯಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಆಸೆಯಾಗುತ್ತದೆ. ಅವರ ತರಹ ದೀರ್ಘವಾಗಿ ಮಾಡಲು ವಸ್ತುಸ್ಥಿತಿಯಲ್ಲಿ ಅಸಾಧ್ಯ ಆದರೆ ಮಾಡಲು ಪ್ರಾರ್ಥನೆಯನ್ನು ಮಾಡಿ ಯಥಾಯೋಗ್ಯವಾಗಿ ಮಾಡಬಹುದಲ್ಲವೆ ಗುರುಗಳೆ🙏

  Vishnudasa Nagendracharya

  ಯಥಾಯೋಗ್ಯವಾಗಿ ತಪಸ್ಸು ಮಾಡುವದು ಸರ್ವಥಾ ಅಸಾಧ್ಯವಲ್ಲ. 
  
  ಕಲಿಯುಗದಲ್ಲಿ ಹುಟ್ಟಿ ನಾನಾವಿಧಕಷ್ಟಗಳ ಮಧ್ಯದಲ್ಲಿ ಬದುಕುತ್ತ ಭಗವಂತನ ಸಾಕ್ಷಾತ್ಕಾರಾಕ್ಕಾಗಿ ಪ್ರಯತ್ನ ಪಡುವದೇ ನಮ್ಮ ತಪಸ್ಸು. 
  
  ಈ ಕಲಿಯುಗದಲ್ಲಿಯೂ ಶ್ರೀಮಧ್ವಾನುಜಾಚಾರ್ಯರು, ಶ್ರೀ ಪುರುಷೋತ್ತಮತೀರ್ಥರು, ಶ್ರೀ ಲಕ್ಷ್ಮೀನಾರಾಯಣತೀರ್ಥರು, ಶ್ರೀ ಮಾದನೂರಿನ ವಿಷ್ಣುತೀರ್ಥರು ಮುಂತಾದ ಮಹಾನುಭಾವರು ಶಾಸ್ತ್ರೋಕ್ತವಾದ ತಪಸ್ಸಿನ ಆಚರಣೆಯನ್ನೇ ಮಾಡಿದ್ದಾರೆ. ಶ್ರೀಮದ್ವಾದಿರಾಜಗುರುಸಾರ್ವಭೌಮರಂತೂ ಅನ್ಯಾದೃಶವಾದ ತಪಸ್ಸಿನ ಆಚರಣೆ ಮಾಡಿದ್ದಾರೆ. 
  
  ನಾವು ಶಾಸ್ತ್ರಾಧ್ಯಯನವನ್ನು ಮುಗಿಸಿ ಉಪಾಸನೆಯ ಹಂತವನ್ನು ಮುಟ್ಟಿದಾಗ ಯಾವ ರೀತಿಯ ತಪಸ್ಸು ಮಾಡಬೇಕು ಎನ್ನುವದನ್ನು ನಮ್ಮ ಗುರುಗಳು ನಮಗೆ ಆದೇಶಿಸುತ್ತಾರೆ. 
  
  ಹೀಗಾಗಿ ಅವಶ್ಯವಾಗಿ ಆ ರೀತಿಯ ತಪಸ್ಸನ್ನೂ ನಾವು ಮಾಡುತ್ತೇವೆ. 
  
  ಕಷ್ಟಗಳ ಸಹನೆ ತಪಸ್ಸು. 
  
  ಶಾಸ್ತ್ರೋಕ್ತವಾದ ರೀತಿಯಲ್ಲಿ ದೇಹದಂಡನೆ ತಪಸ್ಸು. 
  
  ಶಾಸ್ತ್ರದ ಅಧ್ಯಯನ ಅಧ್ಯಾಪನಗಳು ಸರ್ವೋತ್ತಮವಾದ ತಪಸ್ಸು. 
  
  ಈ ಮೂರನ್ನೂ ಸಮಸ್ತ ಸಜ್ಜೀವರೂ ಯಥಾಯೋಗ್ಯವಾಗಿ ಮಾಡಿಯೇ ಮಾಡುತ್ತೇವೆ. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  7:30 PM , 31/08/2017

  ಶಠ ಮತ್ತು ಶಾಠ್ಯ ಎಂದರೇನು ಗುರುಗಳೆ🙏

  Vishnudasa Nagendracharya

  VNP107 ರಲ್ಲಿ ಉತ್ತರ ನೀಡಿದ್ದೇನೆ. 
 • Anjana,Bangalore

  8:41 PM , 31/08/2017

  Thank you so much it is so wonderful to listen everyday i was waiting for this from a very long time.
 • ಗುರುರಾಜಾಚಾರ್ಯ ಕೃ. ಪುಣ್ಯವಂತ.,ಹುಬ್ಬಳ್ಳಿ

  7:16 PM , 31/08/2017

  ಆಚಾರ್ಯರೆ ನಮಸ್ಕಾರಗಳು. 
  ತಮ್ಮಿಂದ ಸಂಪೂರ್ಣವಾಗಿ ಭಾಗವತಕೇಳುವ, ಅರಗಿಸಿಕೊಳ್ಳುವ ಸಮಯ ಶಕ್ತಿ ಭಗಂತ ದಯಪಾಲಿಸಲಿ. ನಿಸ್ಸಂಶಯವಾಗಿ ಮುಕ್ತಿ ದೊರಕುವದು.
 • Madhav Rao,Melbourne/ Australia

  6:29 PM , 31/08/2017

  Madhav Rao from Melbourne.
  Acharyarige Namaskaragalu. Bhagavatha is coming out very well. Very very fortunate to have been living to listen to this epic story especially from you. 40min a day is very well thoughtful and practical. Please keep going the best way you know. I know for sure for many people it is the first time in their lifetime to listen Bhagavatha in such detail. We are certainly very very fortunate and blessed by harivayugalu. Anantha Namaskaragalu.
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  2:21 PM , 31/08/2017

  ಆಚಾರ್ಯರಿಗೆ ನಮಸ್ಕಾರಗಳು. ಕಲಿಯುಗದಲ್ಲಿ ಮುಕ್ತಿ ಪಡೆಯಲು ಮಾರ್ಗವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.
 • Vyasasharma,Kolar

  11:13 AM, 31/08/2017

  Acharyarige namaskaragalu  nimma pravachnagalinda naavu sadhana maargadalli nadeuvante maaduthideri naavu dhanyaru.
 • P N Deshpande,Bangalore

  10:58 AM, 31/08/2017

  S.Namaskargalu. Kaliya badheayennu kalichuwantea Mattu kalada mahimeayelli Namma Sadhana purnwaguwante anugrhisiri.
 • P N Deshpande,Bangalore

  10:58 AM, 31/08/2017

  S.Namaskargalu. Kaliya badheayennu kalichuwantea Mattu kalada mahimeayelli Namma Sadhana purnwaguwante anugrhisiri.
 • Poornima Venkatesh,Mysore

  10:11 AM, 31/08/2017

  ಆಚಾರ್ಯರಿಗೆ ನಮೋ ನಮಃ . ಚೆನ್ನಾಗಿ ಮೂಡಿ ಬರುತ್ತಿದೆ .
 • Deshmukh seshagiri rao,Banglore

  7:25 AM , 31/08/2017

  ಶೀ ಗುರುಬೋನಮಃ
 • H. Suvarna kulkarni,Bangalore

  5:29 AM , 31/08/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಮತ್ತೆ ಮತ್ತೆ ಕೇಳುವಂತಿದೆಧನ್ಯರುುನಾವುು