Upanyasa - VNU494

ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 4A

29/08/2017

ಶ್ರೀರಾಘವೇಂದ್ರೋ ಹರಿಪಾದಕಂಜ-
ನಿಷೇವಣಾಲ್ಲಬ್ಧಸಮಸ್ತಸಂಪತ್ । 

ಶ್ರೀರಾಘವೇಂದ್ರಃ — ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು
ಹರಿಪಾದಕಂಜನಿಷೇವಣಾಲ್ಲಬ್ಧಸಮಸ್ತಸಂಪತ್ — ಶ್ರೀಹರಿಯ ಪಾದಪದ್ಮಗಳನ್ನು ಸೇವಿಸಿ ಅನಭೀಷ್ಟ-ಇಷ್ಟಪುಣ್ಯಗಳನ್ನು ಪಡೆದವರು. 

ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಸಕಲಪ್ರದಾತರು ಎಂಬ ಮಾತನ್ನು ಹಿಂದಿನ ಉಪನ್ಯಾಸದಲ್ಲಿ ಕೇಳಿದೆವು. ಶ್ರೀರಾಘವೇಂದ್ರತೀರ್ಥರ ಬಳಿ ಎಲ್ಲವೂ ಇದ್ದಾಗ ಮಾತ್ರ ಎಲ್ಲವನ್ನೂ ನೀಡಲು ಸಾಧ್ಯ, ನಮಗೆ ನೀಡುವಷ್ಟು ಸಂಪತ್ತು ಅವರಲ್ಲಿ ಹೇಗೆ ಬಂದಿದೆ, ಯಾಕಾಗಿ ಅವರದನ್ನು ನೀಡುತ್ತಾರೆ ಎಂಬ ವಿಷಯಗಳ ಕುರಿತ ಚರ್ಚೆ ಇಲ್ಲಿದೆ. 

ಸಕಾಮ ಕರ್ಮ ಎಂದರೇನು, ಅದರ ಫಲದ ವಿನಿಯೋಗ ಹೇಗೆ, ದುಷ್ಟರೂ ಸಕಾಮಕರ್ಮ ಮಾಡುತ್ತಾರೆ, ಸಜ್ಜನರೂ ಸಕಾಮ ಕರ್ಮ ಮಾಡುತ್ತಾರೆ, ಎರಡಕ್ಕೂ ವ್ಯತ್ಯಾಸವೇನು? ರಾಯರಲ್ಲಿನ ಅನಭೀಷ್ಟಪುಣ್ಯಕ್ಕೂ ಬೇರೆಯವರ ಪುಣ್ಯಕ್ಕೂ ಇರುವ ವ್ಯತ್ಯಾಸವೇನು ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ. 

Play Time: 45:44

Size: 7.72 MB


Download Upanyasa Share to facebook View Comments
8652 Views

Comments

(You can only view comments here. If you want to write a comment please download the app.)
 • P.R.SUBBA RAO,BANGALORE

  9:45 PM , 16/09/2017

  ಶ್ರೀ ಗುರುಭ್ಯೋನಮಃ
  ಶ್ರೀಗುರುರಾಯರ ಅನಂತ ಕಾರುಣ್ಯವನ್ನು ತಿಳಿದೆವು. ಅನೇಕ ಸೂಕ್ಷ್ಮ ಪ್ರಮೇಯಗಳು, ಭಕ್ತಿ ಮಾಡುವ ಕ್ರಮ ಮತ್ತು ಸಾಧಕನಲ್ಲಿ ಇರಬೇಕಾದ ಎಚ್ಚರವನ್ನು ತಿಳಿದೆವು.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ
 • mangala gowri,Bangalore

  8:52 AM , 08/09/2017

  Acharyare thamage Bari namaskara yendare saladu koti namaskaragalu namma guru sarvabowmara mahathneyanu adestu vaibavadinda amogavagi saralavagi helidiri huvininda naru swarga seruvanthe namanela pavanagolisuthidiri Rayaru hege thamma punyavanu thamma baktharige hanchuvaro hage thavu padedukonda aparavada jnanadinda namanela punithanagisuthidiri. thamage sira bagi thamma padagalige nanna yeradu kannugalanu sparsisi namaskarisuve manasikavagi.
 • Jayashree Karunakar,Bangalore

  5:24 PM , 02/09/2017

  ಗುರುಗಳೆ ಈ ಶ್ಲೋಕವನ್ನು ಒಮ್ಮೆ ಪೂಣ೯ವಾಗಿ ಪಠಣಮಾಡಿ ತಿಳಿಕೊಡಿ
 • P N Deshpande,Bangalore

  10:44 PM, 01/09/2017

  S.Namadkagalu rayar anugraha virali
 • Jayashree,Bangalore

  3:02 PM , 01/09/2017

  Sri gurubhyo namaha. 
  
  One of the most beautiful upanyasas to date , Acharyare. Truly blessed are we to be hearing this.

  Vishnudasa Nagendracharya

  ರಾಯರ ಪರಮಾನುಗ್ರಹ. ಅವರ ಮಾಹಾತ್ಮ್ಯದ ಮಹಿಮೆಯಿದು. 
 • Jayashree Karunakar,Bangalore

  3:55 PM , 01/09/2017

  ಗುರುಗಳೆ
  ಈಗ ಈ ಜನ್ಮದಲ್ಲಿ ಕೆಲವೂಂದಿಷ್ಟು ಸಕಾಮ ಕಮ೯ ಮತೆ ಸ್ವಲ್ಪ ನಿಷ್ಕಾಮ ಕಮ೯ ಮತ್ತು ದುಷ್ಟ ಕಮ೯ಗಳನ್ನು ನಾವು ಮಾಡಿ, ಮರಣ ಹೊಂದಿ, ಮತ್ತೆ ಮುಂದಿನ ಜನ್ಮದಲ್ಲಿ ಅದೆ ತರಹ.ಹಾಗೆ ನಮ್ಮ ಮುಂದಿನ ಜನ್ಮಗಳಲ್ಲಿ , ನಮ್ಮ ಸತ್ಕಮ೯ಗಳು ಮುಂದಿನ ಹಂತದ್ದಾಗಿರುತ್ತದೆಯ ? ಅಥವಾ ಮೊದಲಿನಿ ಹಂತದಿಂದ ಪ್ರಾರಂಭಮಾಡಿಸುತ್ತಾನ ಭಗವಂತ ?
  
  ಅಂದರೆ ನಮ್ಮ ಜ್ಞಾನದ ಹಂತ ಮುಂದೆ ಮುಂದೆ ಹೋಗುತ್ತದೆಯೆ ?

  Vishnudasa Nagendracharya

  ನಮ್ಮ ಪ್ರತಿಯೊಂದು ಕರ್ಮವೂ ಹಿಂದಿನ ಕರ್ಮದೊಂದಿಗೆ ಬೆಸುಗೆ ಹೊಂದಿರುತ್ತದೆ. ಹಿಂದಿನ ಕರ್ಮ ಇಂದಿನದರೊಂದಿಗೆ. ಇಂದಿನ ಕರ್ಮ ಮುಂದಿನದರೊಂದಿಗೆ. 
  
  ಒಂದೊಂದು ಸತ್ಕರ್ಮದಿಂದಲೂ ನಾವು ಮೇಲಿನ ಹಂತ ತಲುಪುತ್ತೇವೆ, ಹೆಚ್ಚಿನ ಸಾಧನೆ ಮಾಡುತ್ತೇವೆ. 
  
  ಭಗವಂತನ ಪ್ರೀತ್ಯರ್ಥವಾಗಿ ಮಾಡುವ ಯಾವ ಸತ್ಕರ್ಮವೂ ಎಂದಿಗೂ ನಾಶವಾಗುವದಿಲ್ಲ. ಅದು ಫಲ ನೀಡುತ್ತದೆ. 
  
  ಈ ಜನ್ಮದಲ್ಲಿ ಒಂದು ಸತ್ಕರ್ಮ ಮಾಡಿ, ಮಹಾ ದುಷ್ಕರ್ಮವನ್ನೂ ಮಾಡಿ ಅದರ ಫಲವಾಗಿ ಸುಮಾರು ಒಂದು ಕೋಟಿ ಜನ್ಮಗಳು ಪಾಪಯೋನಿಗಳಲ್ಲಿ ಹುಟ್ಟಿ ಒದ್ದಾಡಿದೆವು ಎಂದಿಟ್ಟುಕೊಳ್ಳೋಣ. ಆ ಪಾಪಯೋನಿಗಳು ಮುಗಿದ ನಂತರ ಮತ್ತೆ ಸಾಧಕ ಜನ್ಮ ಬಂದಾಗ ಆ ಹಿಂದಿನ ಸತ್ಕರ್ಮ ಹಾಗೆಯೇ ಉಳಿದಿರುತ್ತದೆ. ಅದರ ಮುಂದಿನ ಸತ್ಕರ್ಮವನ್ನು ಪರಮಾತ್ಮ ಮಾಡಿಸುತ್ತಾನೆ. ಅದಕ್ಕಾಗಿಯೇ ಅವನು ಕರುಣಾಳು. 
  
  ಭಗವಂತನ ಪ್ರೀತ್ಯರ್ಥವಾಗಿ, ಭಕ್ತಿಯಿಂದ ಒಂದು ಬಾರಿ ರಾಮ ಎಂದು ಸ್ಮರಣೆ ಮಾಡಿದರೂ ಆ ಕರ್ಮ ಎಂದಿಗೂ ನಾಶವಾಗುವದಿಲ್ಲ. ಅನಂತ ಫಲವನ್ನು ನೀಡುತ್ತದೆ. 
  
  ಹಾಗೆಯೇ ಈ ಜನ್ಮದಲ್ಲಿ ಗಳಿಸಿದ ಜ್ಞಾನ ಮುಂದಿನ ಜನ್ಮದಲ್ಲಿಯೂ ಇರುತ್ತದೆ. 
  
  ಉದಾಹರಣೆಗೆ -
  
  ಈ ಜನ್ಮದಲ್ಲಿ ಗೀತೆಯ ಎರಡು ಅಧ್ಯಾಯಗಳ ಜ್ಞಾನವನ್ನು ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ದೀರ್ಘ ಅಧ್ಯಯನ ಮಾಡಿ ಪಡೆದೆವು. ಆ ನಂತರ ಸಾವುಂಟಾಯಿತು. 
  
  ಮುಂದಿನ ಜನ್ಮದಲ್ಲಿ (ಪಾಪ ಮಾಡದೇ, ವೈಷ್ಣವ ಜನ್ಮವನ್ನು ಪಡೆದಲ್ಲಿ) ಆ ಎರಡು ಅಧ್ಯಾಯಗಳನ್ನು ಅಧ್ಯಯನ ಮಾಡಲು ಆರಂಭಿಸಿದಾಗ ಒಂದೆರಡು ತಿಂಗಳುಗಳಲ್ಲಿಯೇ ಅದರ ಪೂರ್ಣ ಜ್ಞಾನ ದೊರೆಯುತ್ತದೆ. ಆ ನಂತರ ಮುಂದಿನ ಅಧ್ಯಾಯ ಆರಂಭ. 
  
  
 • Jayashree Karunakar,Bangalore

  5:38 PM , 01/09/2017

  ಗುರುಗಳೆ
  ಒಬ್ಬ ತನ್ನ ಮೇಲಿನ ಅಧಿಕಾರಿಯ ಆಜ್ಞಾನುಸಾರವಾಗಿ ಗಲ್ಲು ಶಿಕ್ಷಯನ್ನು ಅಪರಾಧಿಗೆ ನೀಡಿರುತ್ತಾನೆ.ಅವನದು ಅಲ್ಲಿ ಕಮ೯ ಮಾತ್ರ ಇರುತ್ತದೆ. ಆದರೆ ಕೊಲ್ಲಬೇಕೆಂಬ ದುಷ್ಟ ಭಾವವಿರುವುದಿಲ್ಲ.
  
  ಅದು ದುಷ್ಟ ಕಮ೯ವಾಗುತ್ತದೆಯೆ ?

  Vishnudasa Nagendracharya

  ಒಬ್ಬ ವ್ಯಕ್ತಿ ತನ್ನ ವರ್ಣ-ಆಶ್ರಮ ಧರ್ಮಗಳಿಗೆ ಅನುಸಾರವಾಗಿ ಕರ್ತವ್ಯವನ್ನು ನಿಭಾಯಿಸಿದಲ್ಲಿ ಅದು ಅಪರಾಧವಾಗುವದಿಲ್ಲ. 
  
  ಉದಾಹರಣೆಗೆ, ಒಬ್ಬ ಕೃಷಿಕ ನೇಗಿಲನ್ನು ಹೂಡಿ ಭೂಮಿಯನ್ನು ಉಳುತ್ತಾನೆ. ಆಗ ಅನೇಕ ಕ್ರಿಮಿ ಕೀಟಗಳು ಸಾಯುತ್ತವೆ. ಆದರೆ ಕೃಷಿಕನಿಗೆ ಅದರಿಂದ ಪಾಪವಿಲ್ಲ. ಕಾರಣ, ಅವನು ತನ್ನ ಧರ್ಮದ ಆಚರಣೆಯನ್ನು ಮಾಡುತ್ತಿದ್ದಾನೆ. ಆದರೆ, ಅದೇ ಕೃಷಿಕ ಬುದ್ಧಿಪೂರ್ವಕವಾಗಿ ಒಂದು ಇರುವೆಯನ್ನು ಕೊಂದರೂ ಅದರಿಂದ ಪಾಪ ಉಂಟಾಗುತ್ತದೆ. 
  
  ಹಾಗೆ ಗಲ್ಲೇರಿಸುವ ಕಾರ್ಯ ಮಾಡುವ ವ್ಯಕ್ತಿಗೆ ಅದು ಅವನ ವೃತ್ತಿಯಾದುದರಿಂದ ಅದು ಪಾಪವಾಗುವದಿಲ್ಲ. 
  
  
 • Shamala R,Bangalore

  7:17 PM , 31/08/2017

  Wow.................. ಗುರುಗಳೇ.. ಈ ನಿಮ್ಮಚಿಂತನೆ ಕೇಳುತ್ತಿರುವಾಗ ನಾನು ಎಷ್ಟು ಆಳದಲ್ಲಿ ಬಿದ್ದಿದ್ದೆ ಎಂಬ ಅರಿವಾಗುತ್ತಿದೆ. ಅರಿವಿನ ಬಯಲಿಗೆ ಎಳೆದು ತರುತ್ತಿರುವ ನಮಗೆ ನಮ್ಮ ಕೋಟಿ ನಮನಗಳು... ೩ ಬಾರಿ ಇದನ್ನು ಕೇಳಿದೆ.... ಆಗ ಸ್ವಲ್ಪ ಸ್ವಲ್ಪ ಅರ್ಥವಾಯಿತು.... ಆನಂದವೂ ಆಯಿತು.. ಭರವಸೆಯೂ ಮೂಡಿತು.. ಧನ್ಯವಾದಗಳು...
 • Jayashree Karunakar,Bangalore

  4:18 PM , 31/08/2017

  ಗುರುಗಳೆ ರಾಯರ ಮಾಹತ್ಮ್ಯ ತುಂಬಾ ಅದ್ಭತವಾಗಿದೆ.
  
  ಆದರೆ ಒಂದು ಪ್ರಶ್ನೆ ಮೂಡುತ್ತದೆ.
  
  ಒಬ್ಬನಿಗೆ ತಾನು ಹಿಂದೆ ಮಾಡಿದ ಒಂದು ಸತ್ಕಮ೯ವಿದೆ.ಈಗ ಒಂದು ಕಷ್ಟವಿದೆ, ರಾಯರ ಸೇವೆ ಭಕ್ತಿಯಿಂದ ಮಾಡಿದ, ಹಿಂದಿನ ಸತ್ಕಮ೯ದ ಫಲವನ್ನು ಪಡೆಯಲು ಪ್ರತಿಬಂಧಕವಾಗಿ ಕುಳಿತಿದ್ದಂತಹ ಒಂದು ಪಾಪ ಕಮ೯ವು ಇತ್ತು, ಅದನ್ನು ರಾಯರ ಸೇವೆಯಿಂದ ಪರಿಹರಿಸಿಕೊಂಡ.
  
  ಇನ್ನೂಬ್ಬನಿಗೆ ಹಿಂದಿನ ಸತ್ಕಮ೯ವಿಲ್ಲ, ಆದರೂ ಅದೇ ಭಕ್ತಿಯಿಂದ ರಾಯರ ಸೇವೆ ಮಾಡಿದ, ರಾಯರು ತಮ್ಮಲ್ಲಿದ್ದ ಸಕಾಮ ಕಮ೯ದ ಪುಣ್ಯದಿಂದ ಅನುಗ್ರಹಿಸಿದರು ಎಂದಿರಿ.
  
  ಇದು ಭೇದ ಮಾಡಿದಂತಾಗಲಿಲ್ಲವೆ.
  
  ಬ್ಯಾಂಕಿನಲ್ಲಿ ಹಣ ಇಟ್ಟವನು ಹೋಗಿ ಹಣ ಕೇಳಿದ, ಅವರು ಕೊಟ್ಟರು.
  
  ಅಕೌಂಟ ಇಲ್ಲದವನೂ ಹೋಗಿ ಕೇಳಿದಾಗ, ಬ್ಯಾಂಕಿನವರು ತಮ್ಮಲ್ಲಿದ್ದ ಹಣವನ್ನು ಅವನಿಗೆ ಕೊಟ್ಟಂತಾಗಲಿಲ್ಲವೆ.
  
  ತಪ್ಪಿದ್ದರೆ ಕ್ಷಮಿಸಿ ಗುರುಗಳೆ

  Vishnudasa Nagendracharya

  ಖಂಡಿತ ವೈಷಮ್ಯ ಉಂಟಾಗುವದಿಲ್ಲ. 
  
  ಉದಾಹರಣೆ ನೀಡುತ್ತೇನೆ - 
  
  ಪ್ರತಿಬಂಧಕವಾದ ಪಾಪವನ್ನು ಕಳೆದುಕೊಳ್ಳಲು ಮಾಡಬೇಕಾದ ಸೇವೆ ತುಂಬ ಕಡಿಮೆ. ಉದಾಹರಣೆಗೆ, ಯಾವುದೋ ಕಷ್ಟದಲ್ಲಿ ಸಿಲುಕಿದ್ದೇವೆ. ಹೊರಬರಲು ಸಾಧ್ಯವಿಲ್ಲ ಎಂದು ಅರಿವಾಗುತ್ತದೆ. ಆಗ ಭಕ್ತಿಯಿಂದ ಇದ್ದಲ್ಲೇ ರಾಯರ ಸ್ಮರಣೆ ಮಾಡುತ್ತೇವೆ, ಕಷ್ಟ ಪರಿಹಾರವಾಗುತ್ತದೆ. ಅಂದರೆ ರಾಯರ ಸ್ಮರಣೆಯಿಂದ ಪ್ರತಿಬಂಧಕ ವಿನಾಶವಾಯಿತು. ನಮ್ಮ ಸತ್ಕರ್ಮದ ಫಲವನ್ನು ಪಡೆದೆವು. 
  
  ನಮಗೆ ಹಿಂದಿನ ಸತ್ಕರ್ಮವೇ ಇಲ್ಲ ಎಂತಾದಲ್ಲಿ ಕೇವಲ ನಾಮಸ್ಮರಣೆಯಿಂದ, ಅಥವಾ ಸಣ್ಣ ಸೇವೆಯಿಂದ ಫಲ ಪಡೆಯಲು ಸಾಧ್ಯವಿಲ್ಲ. ಅನೇಕ ದಿವಸಗಳವರೆಗೆ ಕಠಿಣತರ ಸೇವೆಯನ್ನು ಮಾಡಿ ರಾಯರ ಅನುಗ್ರಹವನ್ನು ಸಂಪಾದಿಸಿದೆವು. 
  
  ಇದರ ಮೇಲೆ ಮೂಡ ಬಹುದಾದ ಪ್ರಶ್ನೆಗೂ ಉತ್ತರಿಸುತ್ತೇನೆ. ಕೆಲವರಿಗೆ ಕ್ಷಿಪ್ರಕಾಲದಲ್ಲಿ ಬಹುಫಲ, ಕೆಲವರಿಗೆ ಬಹುಕಾಲದಲ್ಲಿ ಸ್ವಲ್ಪವೇ ಫಲ ಹೀಗೇಕೆ 
  
  ಮೂರು ದಿವಸ ಸೇವೆ ಮಾಡಿದವರಿಗೂ, ಇಡಿಯ ಜನ್ಮ ಸೇವೆ ಮಾಡಿದವರಿಗೂ ಫಲದಲ್ಲಿ ವ್ಯತ್ಯಾಸ ಇದ್ದೇ ಇದೆ. ಇದಕ್ಕಿಂತ ಮಿಗಿಲಾಗಿ ಮತ್ತೊಂದು ಮಾತಿದೆ. ಪರೋಪಕಾರ, ಸತ್ಯ, ಅಹಿಂಸೆ, ಶೌಚ, ಆಚಾರ ಮುಂತಾದ ಸದ್ಹುಣಗಳಿಲ್ಲದೆ ಅನೇಕ ವರ್ಷಗಳ ಕಾಲ ಸೇವೆ ಮಾಡಿದರೂ ದೊರೆಯುವ ಫಲ ಕಡಿಮೆ. ಭಕ್ತಿ, ಶೌಚ, ಆಚಾರ, ಪರೋಪಕಾರ ಮುಂತಾದ ಸದ್ಗುಣಗಳಿಂದ ಯುಕ್ತರಾಗಿ ಒಂದು ದಿವಸ ಸೇವೆ ಮಾಡಿದರೂ ದೊರೆಯುವ ಫಲ ಅತ್ಯಧಿಕ.
  
  ಯಾವುದೇ ರೀತಿಯ ಅನುಗ್ರಹಕ್ಕೂ ರಾಯರ ಪ್ರೀತಿಗೆ ಕಾರಣರಾಗಬೇಕು. 
  
  ರಾಯರ ಪ್ರೀತಿಯಾಗಬೇಕಾದರೆ, 
  
  ವಿಷ್ಣುಭಕ್ತಿ ಮುಂತಾದ ಮಹಾಸದ್ಹುಣಗಳು
  
  ಪರೋಪಕಾರ ಮುಂತಾದ ಶ್ರೇಷ್ಠ ಗುಣಗಳು
  
  ನಿರಂತರ ಸೇವಾದಿಗಳು ಕಾರಣವಾಗುತ್ತವೆ.