Upanyasa - VNU495

ಶ್ರೀಮದ್ ಭಾಗವತಮ್ — 3 — ಭಕ್ತಿಯ ಮಾಹಾತ್ಮ್ಯ, ನಾರದರ ಪ್ರತಿಜ್ಞೆ

ಭಕ್ತಿದೇವತೆಯೊಂದಿಗೆ ಮಾತನಾಡುತ್ತಿರುವ ಶ್ರೀನಾರದರು, ಕಲಿಯುಗದ ದೋಷಗಳನ್ನೂ ಹೇಳಿ, ಭಕ್ತಿಯ ಮಾಹಾತ್ಮ್ಯವನ್ನೂ ತಿಳಿಸಿ ಈ ದುಷ್ಟ ಕಲಿಯುಗದಲ್ಲಿಯೂ ಸರ್ವಸಜ್ಜನರ ಮನಸ್ಸಿನಲ್ಲಿ ಭಕ್ತಿಯನ್ನು ಸ್ಥಾಪಿಸುತ್ತೇನೆ ಎಂಬ ದಿವ್ಯವಾದ ಪ್ರತಿಜ್ಞೆಯನ್ನು ಮಾಡುತ್ತಾರೆ. ಭಕ್ತಿಯ ಮಾಹಾತ್ಮ್ಯವರ್ಣನೆಯಿಂದ ಭಕ್ತಿದೇವತೆಗೆ ಪುಷ್ಟಿ ದೊರೆಯುತ್ತದೆ. ಆದರೆ, ಆ ಭಕ್ತಿಯ ಮಕ್ಕಳಾದ ಜ್ಞಾನ, ವೈರಾಗ್ಯಗಳನ್ನು ಎಬ್ಬಿಸಲು ಸಾಧ್ಯವಾಗದೇ ಇದ್ದಾಗ, “ಮಹಾಸತ್ಕರ್ಮದ ಆಚರಣೆಯಿಂದ ಇವರು ಪುಷ್ಟರಾಗುತ್ತಾರೆ, ಜ್ಞಾನಿವರೇಣ್ಯರು ನಿಮಗೆ ಆ ಸತ್ಕರ್ಮವೇನು ಎನ್ನುವದನ್ನು ತಿಳಿಸುತ್ತಾರೆ” ಎಂಬ ಅಶರೀರವಾಣಿಯಾಗುತ್ತದೆ. ಆ ಸಾಧುಗಳು ಯಾರು ಎಂದು ಅರಸಿಕೊಂಡು ಶ್ರೀನಾರದರು ಬದರಿಕಾಶ್ರಮಕ್ಕೆ ಬಂದು ಸನಕಾದಿಯೋಗಿವರ್ಯರನ್ನು ಭೇಟಿಯಾಗುವ ಪ್ರಸಂಗದವರೆಗಿನ ಚಿತ್ರಣ ಇಲ್ಲಿದೆ. 

Play Time: 43:26

Size: 7.84 MB


Download Upanyasa Share to facebook View Comments
13314 Views

Comments

(You can only view comments here. If you want to write a comment please download the app.)
 • Laxmi Padaki,Pune

  10:18 AM, 01/09/2022

  ಶ್ರೀ ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು.ನಿಜಕ್ಕೂ ಭಾಗವತ ಅತ್ಯಂತ ಭಕ್ತಿ ಮೂಡಿಸುತ್ತದೆ.ನಿಮ್ಮಿಂದ ಕೇಳಿದಾಗ ಮೈಮರೆಯುವಂತೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಊಟ ನಿದ್ರೆ ಗಳ ಅಗತ್ಯವನ್ನು ಮರೆಸುತ್ತದೆ.ನಮೋ ನಮಃ.🙏🙏
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:00 AM, 09/03/2022

  🙏🙏🙏
 • Sowmya,Bangalore

  7:34 PM , 23/01/2022

  🙏🙏🙏
 • Mahadi Sethu Rao,Bengaluru

  1:21 AM , 09/06/2020

  HARE KRISHNA
 • Chandrika prasad,Bangalore

  1:36 PM , 12/07/2019

  No words to say kaliyugadallu intaha jnanigalu innu iddare Namma punya bhagyave sari. Pranamagalu
 • Mrs laxmi padaki,Pune

  8:01 PM , 05/04/2018

  👏👏👏👏👏
 • Sudha B.G.,Bangalore

  8:46 PM , 20/10/2017

  జై విజయ రాయ జై భారతీశా
 • Arjun,Bangalore

  8:27 PM , 30/09/2017

  Shri gurubhyo namaha..gurugale neevu pravachanadhalli "Bhagavathavannu 7 dhina kelisi .jnana vairagya galu nidre yanna kaledhukolluthave endu...Nanna prashne "jnana vairagya galu nidre maaduthiruvaaga hege bhagavatha kelalaguthadhe..sorry if I am asking wrong..

  Vishnudasa Nagendracharya

  ಭಕ್ತಿ ಜ್ಞಾನ ವೈರಾಗ್ಯಗಳಿಗೆ ಅಭಿಮಾನಿಗಳಾದವರು ನಿದ್ರೆ ಮಾಡುತ್ತಿದ್ದರ ಉಲ್ಲೇಖವಿಲ್ಲ, ಕೃಶರಾಗಿದ್ದರು ಎಂದು ಅಲ್ಲಿರುವದು. 
  
  ಹೇಗೆ ಆಹಾರವಿಲ್ಲದ ದೇಹ ಕೃಶವಾಗುತ್ತದೆಯೋ ಹಾಗೆ ಭಕ್ತಿ ಜ್ಞಾನ ವೈರಾಗ್ಯಗಳ ಅಭಿಮಾನಿಗಳು ಕೃಶರಾಗಿದ್ದರು. ಶ್ರೀಮದ್ ಭಾಗವತಾಮೃತವನ್ನು ಸಜ್ಜನರು ಪಾನ ಮಾಡಿದ್ದರಿಂದ ಅವರಲ್ಲಿ ವಾಸ ಮಾಡಿದ ಭಕ್ತಿ ಜ್ಞಾನ ವೈರಾಗ್ಯಗಳು ಪುಷ್ಟವಾದವು, ಕೃಶತೆಯನ್ನು ಕಳೆದುಕೊಂಡವು ಎಂದು ಇಲ್ಲಿ ನಿರೂಪಿತವಾಗಿರುವ ತತ್ವ. 
 • Anilkumar B Rao,Bangalore

  11:14 PM, 02/09/2017

  Thanks a lot for the reply about having LEkhana for shreemadbhagavatha. ತಾವು ಜ್ಞಾನ ಸಮುದ್ರ. ನಾವು ಒಂದು ಬಿಂದು. ಹೀಗಾಗಿ ತಮ್ಮ ನಿರ್ಧಾರಕ್ಕೆ ನಾನು ಬದ್ಧ.  Still I have earnest request for the articles of Shreemadbhagavatha, at the earliest.  ಆಚಾರ್ಯರಿಗೆ ನಮೋ ನಮಃ
 • H. Suvarna kulkarni,Bangalore

  1:16 AM , 02/09/2017

  ಗುರುಗಳಿಗೆ ಪ್ರಣಾಮಗಳು ಭಕ್ತಿ ಎಂದರೇನು ಎಂಬುದು ಮನಮುಟ್ಟುವಂತೆ ತಿಳಿಸಿದ್ದೀರಿ ಧನ್ಯವಾದಗಳು
 • P N Deshpande,Bangalore

  9:42 AM , 01/09/2017

  S.Namaskagalu. SriNardaru tammalli nintu namgea Bhakkiti prdyakragli endu prathisuttene mamgalmayewada upannaysa

  Vishnudasa Nagendracharya

  ಸಮಸ್ತ ಗುರುದೇವತೆಗಳ ಅನುಗ್ರಹ.
 • Anilkumar B Rao,Bangalore

  9:23 AM , 01/09/2017

  today morning listened to part 3. Acharyarige AnEka namaskaaragaLu & dhanyavaadagaLu. Acharyaralli vondu kaLa kaLiya praarthane, if possible please please arrange for pdf text material for aĺl that is said in upanyaasa. Namma mananakke thumba thumba help aagatthe. With text material we
  can recall upanyaasagaLu quickly. I hope many will agree to this view. This request I am repeating several times.  Please forgive me if this irritates you. But this is my earnest request. 🙏🙏🙏

  Vishnudasa Nagendracharya

  ಶಾಸ್ತ್ರಾಧ್ಯಯನದಲ್ಲಿ ನಿಮಗಿರುವ ಆಸಕ್ತಿ ಖಂಡಿತ ಶ್ಲಾಘನೀಯ. 
  
  ಸದ್ಯಕ್ಕೆ ವಿಶ್ವನಂದಿನಿಯಲ್ಲಿ ಈ ಕೆಳಕಂಡ ನಿಯಮಗಳನ್ನು ಅನುಸರಿಸುತ್ತಿದ್ದೇನೆ. 
  
  ಸದಾಚಾರಸ್ಮೃತಿ ಮತ್ತು ಪೂಜಾನಿರ್ಣಯದ ವಿಷಯದಲ್ಲಿ ಸಾಕಷ್ಟು ಸಂಶೋಧನೆಯ ಅಗತ್ಯವಿದೆ.ಹೀಗಾಗಿ ಅದರ ಲೇಖನ ಮತ್ತು ಉಪನ್ಯಾಸಗಳು ಏಕಕಾಲಕ್ಕೆ ನೀಡಬಹುದು. ಶ್ರೀಮದ್ ಭಾಗವತವನ್ನೂ ಬರೆಯಲು ಸಮಯ ಸಾಕಾಗುತ್ತಿಲ್ಲ. ಮುಂದೆ ಸಮಯವಾಗುತ್ತಿದ್ದಂತೆ ಖಂಡಿತ ಬರೆದು ನೀಡುತ್ತೇನೆ. ಈಗ ಕೇಳಿ ಆಸ್ವಾದಿಸಬಹುದು. ಆಗ ಓದಿ ಮನನ ಮಾಡಬಹುದು. 
  
  ಈಗಾಗಲೇ ಸುಮಾರು ಐನೂರಕ್ಕೆ ಹೆಚ್ಚಿನ ಪ್ರಶ್ನೆಗಳು ವಿಶ್ವನಂದಿನಿಯಲ್ಲಿ ಮತ್ತು Whatsapp ಗಳಲ್ಲಿ ಬಂದಿವೆ. ಕೆಲವಂತೂ ಅತೀ ಜ್ವಲಂತ ಸಮಸ್ಯೆಗಳ ಕುರಿತ ಪ್ರಶ್ನೆಗಳು. ಹೀಗಾಗಿ ಅವುಗಳಿಗೂ ಸಮಯ ನೀಡಲೇಬೇಕು. 
  
  ಭಾಗವತದ ಉಪನ್ಯಾಸ, ಉಳಿದ ವಿಷಯಗಳ ಕುರಿತ ಲೇಖನ ಎರಡೂ ಇದ್ದಲ್ಲಿ ನಿಮಗೆ ಹೆಚ್ಚಿನದನ್ನು ನೀಡಿದಂತಾಗುತ್ತದೆ ಎನ್ನುವದು ನನ್ನ ಅಭಿಪ್ರಾಯ. ಒಂದೇ ವಿಷಯದ ಕುರಿತು ಉಪನ್ಯಾಸ ಲೇಖನಗಳನ್ನು ನೀಡುವದಕ್ಕಿಂತ (ಎಲ್ಲಿ ಅತ್ಯಾವಶ್ಯಕವೋ ಅಲ್ಲಿ ನೀಡಿಯೇ ನೀಡುತ್ತೇನೆ) ಬೇರೆಬೇರೆ ವಿಷಯಗಳ ಕುರಿತ ಲೇಖನ ಉಪನ್ಯಾಸಗಳನ್ನು ನೀಡುವದು ಉತ್ತಮವಲ್ಲವೇ. 
  
  ಇನ್ನೂ ಒಂದು ಭಯವಿದೆ. ದೇವರೀಗ ಗಂಟಲಿಗೆ ಶಕ್ತಿಯನ್ನು ನೀಡಿದ್ದಾನೆ. ಹೀಗಾಗಿ ಮೊದಲು ಉಪನ್ಯಾಸಗಳನ್ನು ಮುಗಿಸಿಬಿಡುತ್ತೇನೆ. ವಯಸ್ಸಾಗುತ್ತಿದ್ದಂತೆ ಲೇಖನಗಳನ್ನು ಬರೆಯಬಹುದು. ನಾನು ಹೇಳುತ್ತ ಹೋದರೆ ಮತ್ತೊಬ್ಬರೂ ಬರೆದುಕೊಳ್ಳಬಹುದು. ಹೀಗಾಗಿ ಉಪನ್ಯಾಸಗಳಿಗೆ ಆದ್ಯತೆ ನೀಡಿದ್ದೇನೆ. 
  
  ನಿಮ್ಮ ಅಧ್ಯಯನದ ಹಸಿವು ಖಂಡಿತ ಅರ್ಥವಾಗುತ್ತದೆ. ನನ್ನ ಮೇಲಿರುವ ಪ್ರೀತಿಗಂತೂ ನಾನು ಅತ್ಯಂತ ಕೃತಜ್ಞ. ಆದರೆ ಹೆಚ್ಚೆಚ್ಚು ನೀಡುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದೇನೆ. ಏನನ್ನುತ್ತೀರಿ. 
 • Shantha.raghothamachar,Bangalore

  1:01 PM , 01/09/2017

  ನಮಸ್ಕಾರ ಗಳು. ಜ್ಞಾನ, ಭಕ್ತಿ, ವೈರಾಗ್ಯ ವೋ? ಭಕ್ತಿ, ಜ್ಞಾನ, ವೈರಾಗ್ಯ ವೋ ತಿಳಿಸಿ ಆಚಾರ್ಯ ರೆ.

  Vishnudasa Nagendracharya

  ಭಕ್ತಿ ಜ್ಞಾನ ವೈರಾಗ್ಯಗಳು ಪರಸ್ಪರ ಪೂರಕ. ಬೀಜವೃಕ್ಷನ್ಯಾಯದಂತೆ. 
  
   ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವೈರಾಗ್ಯ, ವೈರಾಗ್ಯದಿಂದ ದೃಢಭಕ್ತಿ, ಮತ್ತೆ ಈ ಭಕ್ತಿಯಿಂದ ಮತ್ತಷ್ಟು ಜ್ಞಾನ, ಆ ಜ್ಞಾನದಿಂದ ಮಹಾವೈರಾಗ್ಯ, ಆ ವೈರಾಗ್ಯದಿಂದ ಮತ್ತಷ್ಟು ಭಕ್ತಿಯ ದಾರ್ಢ್ಯ. ಹೀಗೆ ಭಕ್ತಿಯ ಹಿಂದಿ ಜ್ಞಾನ ವೈರಾಗ್ಯಗಳು, ಜ್ಞಾನ ವೈರಾಗ್ಯಗಳ ಹಿಂದೆ ಭಕ್ತಿ ಇದ್ದೇ ಇರುತ್ತದೆ. 
 • Padmini Acharya,Hemmige village

  7:50 PM , 01/09/2017

  Vayudevaru naradarige satkarmada acharaNe inda gnana mattu vairagyagaLu pushTaraguthare enudu tiLisuttare
  
  Adare yaava satkarma mattu yaara baLige naradaru hogabeku mattu elli aa satkarmada acharaNe maaDabeku endu yaake tiLisuvadilla
  
  Dayavittu uttarisabekagi vinati🙏🏼🙏🏼🙏🏼🙏🏼

  Vishnudasa Nagendracharya

  ಭಗವಂತನ ಕಾರ್ಯದ ವೈಖರಿಯನ್ನು ನಾವು ಅರಿಯಬೇಕಾದ್ದೇ ಇಲ್ಲಿ. 
  
  ನಮ್ಮ ಜೀವನದಲ್ಲಿ ನಾವು ಕಂಗೆಟ್ಟು ನಿಂತು, ಪರಿಹಾರಕ್ಕಾಗಿ ದೇವರ ಮುಂದೆ ನಿಂತಾಗ ದೇವರು ನೇರ ಪರಿಹಾರವನ್ನು ಸೂಚಿಸುವದಿಲ್ಲ. ಹೀಗೆ ಮಾಡು ಎಂಬ ಸೂಚನೆಯನ್ನು ನೀಡುತ್ತಾನೆ. ಬಹುತೇಕ ಸೂಚನೆಗಳು ಶಾಸ್ತ್ರದ ಮುಖಾಂತರ, ಕೆಲವು ದೊಡ್ಡವರ ಮಾತಿನ ಮುಖಾಂತರ, ಕೆಲವನ್ನು ಸ್ವಪ್ನದ ಮುಖಾಂತರ ಹಾಗೂ ಕೆಲವನ್ನು ಹೀಗೆ ಅಶರೀರವಾಣಿ ಮುಂತಾದವುಗಳ ಮುಖಾಂತರ. (ನಮ್ಮನಮ್ಮ ಯೋಗ್ಯತೆ, ಭಕ್ತಿ ಮುಂತಾದವುಗಳಿಗೆ ಅನುಗುಣವಾಗಿ ಸೂಚನೆಗಳು ದೊರಯುತ್ತವೆ) 
  
  ಆ ಸೂಚನೆಗೆ ಅನುಸಾರಿಯಾಗಿ ನಾವು ಮಹಾಪ್ರಯತ್ನವನ್ನು ಮಾಡಬೇಕು. 
  
  ಭಗವಂತನ ಈ ಕ್ರಮವನ್ನರಿತ ವಾಯುದೇವರು ನೇರವಾಗಿ ಭಾಗವತದ ಸಪ್ತಾಹ ಮಾಡಿಸು ಎಂದು ಹೇಳಿದ್ದರೆ ಅದರ ಮಹತ್ತ್ವ ನಮಗೆ ಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ನಾರದರಂತಹ ಮಹಾತ್ಮರು, ನೂರಾರು ಆಶ್ರಮಗಳಲ್ಲಿನ ಋಷಿಗಳನ್ನು ಕೇಳಿದಾಗಲೂ ಪರಿಹಾರ ದೊರೆಯುವದಿಲ್ಲ. ಹೀಗಾಗಿ ಅದರ ಬಗ್ಗೆ ಕುತೂಹಲ, ಗೌರವ ಇಮ್ಮಡಿಸುತ್ತದೆ. ಆ ನಂತರ ಇದರ ಕುರಿತ ತಪಸ್ಸಿಗಾಗಿಯೇ ನಾರದರು ಸಿದ್ದರಾದಾಗ, ಆ ಸಂಕಲ್ಪದಿಂದ ತುಷ್ಟನಾದ ಭಗವಂತ ಸನಕಾದಿಗಳ ಮುಖಾಂತರ ಪರಿಹಾರವನ್ನು ಸೂಚಿಸುತ್ತಾನೆ. . ಅದರಂತೆ ಸಪ್ತಾಹವನ್ನು ಮಾಡಿಸಿ ಭಕ್ತಿ-ಜ್ಞಾನ-ವೈರಾಗ್ಯಗಳನ್ನು ಪುಷ್ಟಗೊಳಿಸುತ್ತಾರೆ. 
  
  ಹೀಗೆ ಪ್ರಯತ್ನ ಪಟ್ಟು ತತ್ವವನ್ನು ತಿಳಿಯಬೇಕು, ಫಲವನ್ನು ಪಡೆಯಬೇಕು ಎನ್ನುವದನ್ನು ನಾವಿದರಿಂದ ಅರಿಯುತ್ತೇವೆ. 
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:29 PM , 01/09/2017

  ಗುರುಗಳಿಗೆ ನಮಸ್ಕಾರಗಳು.ನಿಮ್ಮ ಈದಿನದ ಉಪನ್ಯಾಸ ಕೇಳಿ ಭಕ್ತಿಯ ಬಗ್ಗೆ ತಿಳಿಯಿತು. ಧನ್ಯವಾದಗಳು.
 • Laxmi rao,Bangalore

  10:34 AM, 01/09/2017

  Shravana manakaanada vivudu bhavajanitha dhukhagal kalevudu
  Bhuvanapavananenipalaxmidhavana mangala katheya paramostsavadhi kivigottalipudu bhusuraru dinadinadhi hare srinivaasa
 • Parashurama bhat,Mysyru

  8:39 AM , 01/09/2017

  Srimadbhagavatham Elli Sigutthe, yaru baredaddu odabeku
 • PRATIMADHAV,Auckland, N.Z.

  8:25 AM , 01/09/2017

  Namaskara.
  
  SrimadBhagavathada upanyasagalu bahusundaravagive. Nimma bhakti shraddha purita sramakke satah namanagalu.
  
  Many previous doubts regarding Kaliyuga have been cleared and a sense of relief restored - Dhanyavadagalu nimage.
  
  Have been listening to many Bhagavatada pravachane since childhood but nimma upanyasa kelidare....it brings out the most prominent essence and the exact message which SriVedavyasa devuru had conveyed. 
  When understanding is made so easy, it is really helpful to pass on to the next generation/our children. Feeling elated at this.
 • Varum M Deshpande,Bangalore

  8:04 AM , 01/09/2017

  Thank you very much for your great efforts. We are blessed to benefit from your learning.
 • Anjana,Bangalore

  5:26 AM , 01/09/2017

  Thank you so much for all the effort you are taking to reach this to a fallen soul like me. Thanks a lot.
 • Ramamurthy N S,Bangalore

  4:34 AM , 01/09/2017

  ಶ್ರೀ ಗುರುಭ್ಯೋ ನಮಃ  ಹರಿಃ ಓಂ