Upanyasa - VNU497

ಶ್ರೀಮದ್ ಭಾಗವತಮ್ — 5 — ಸನಕಾದಿಗಳು ತಿಳಿಸಿದ ಭಾಗವತದ ಮಾಹಾತ್ಮ್ಯ

ನಾರದರು ಏರ್ಪಡಿಸಿದ ಸಪ್ತಾಹ ಭಾಗವತಯಜ್ಞದಲ್ಲಿ ಮೊದಲಿಗೆ ಸನಕಾದಿಗಳು ಶ್ರೀಮದ್ ಭಾಗವತದ ಮಹಾಮಾಹಾತ್ಮ್ಯವನ್ನು ತಿಳಿಸಿ ಹೇಳುತ್ತಾರೆ. ಭಾಗವತವನ್ನು ಕೇಳಲು ಏಳು, ಒಂಭತ್ತು ಮಂತಾದ ದಿವಸಗಳ ನಿಯಮವಿಲ್ಲ, ಅದು ಅಶಕ್ತರಿಗೆ ಮಾತ್ರ. ಪ್ರತೀನಿತ್ಯ ಭಾಗವತವನ್ನು ಕೇಳಬೇಕು ಎನ್ನುವ ಮಹತ್ತ್ವದ ವಿಷಯದೊಂದಿಗೆ ಲಕ್ಷ್ಮೀ, ಬ್ರಹ್ಮ, ರುದ್ರಾದಿಗಳು ಮಾಡಿದ ಭಾಗವತ ಶ್ರವಣದ ಕುರಿತು ನಾವಿಲ್ಲಿ ಕೇಳುತ್ತೇವೆ. ಭಾಗವತ ಸ್ವಯಂ ಭಗವಂತನ ಸನ್ನಿಧಾನಪಾತ್ರವಾದ ಗ್ರಂಥ ಎಂಬ ಮಾತಿನ ಚಿಂತನೆಯೊಂದಿಗೆ. 

ಭಾಗವತದ ಮಾಹಾತ್ಮ್ಯವನ್ನು ಸನಕಾದಿಗಳು ಹೇಳುತ್ತಿದ್ದಂತೆಯೇ ಭಕ್ತಿದೇವತೆ ತನ್ನಿಬ್ಬರು ಮಕ್ಕಳೊಂದಿಗೆ ಬರುವ ರೋಮಾಂಚಕಾರಿ ಘಟನೆಯ ಚಿತ್ರಣ ಇಲ್ಲಿದೆ. Play Time: 47:16

Size: 7.72 MB


Download Upanyasa Share to facebook View Comments
8742 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  7:25 PM , 11/03/2022

  ಶ್ರೀ ಕೃಷ್ಣಾರ್ಪಣಮಸ್ತು 
  🙏🙏🙏
 • Sowmya,Bangalore

  8:08 PM , 25/01/2022

  🙏🙏🙏
 • Mahadi Sethu Rao,Bengaluru

  3:42 PM , 10/06/2020

  HARE KRISHNA.
 • ವಿಶ್ವ ನಾ ಥ ಏಂ ಜೋಶಿ,ಬೆಂಗಳೂರು

  8:54 PM , 10/05/2018

  ಆಚಾರ್ಯ ರೆ ನಿಮ್ಮ ವಿದ್ವತ್ ಗೆ ನಮಸ್ಕಾರ
 • Mrs laxmi padaki,Pune

  9:30 AM , 09/04/2018

  👏👏👏👏👏
 • Mrs laxmi padaki,Pune

  11:18 AM, 07/04/2018

  👏👏👏👏👏
 • R v nadig,Bangalore

  2:36 PM , 30/11/2017

  Hari om nimma visva nandini appnnalli poojeyannu hege madabeku endu savistravagi tilisiddiri nima padaravindagalige Nana namaskaragalu jotege bhagavatavannu kelta nanna jeevana sartakavaytu anstaide nimige dhnyavadagalu
 • prema raghavendra,coimbatore

  10:15 AM, 05/10/2017

  Ananthanantha namaskara! Danyavada..a
 • Jayashree Karunakar,Bangalore

  1:45 PM , 06/09/2017

  ಗುರುಗಳೆ ಆ ಸಪ್ತಾವರಣಗಳನ್ನು ವಿಸ್ತಾರವಾಗಿ ತಿಳಿಸಿ.ಅವುಗಳು ಯಾವರೀತಿಯಾಗಿ ನಮ್ಮ ಸಾಧನೆಗಳಿಗೆ ಪ್ರತಿಬಂಧಕವಾಗಿ ನಿಲ್ಲುತ್ತದೆ ?

  Vishnudasa Nagendracharya

  ಇದೇ ಭಾಗವತಮಾಲಿಕೆಯಲ್ಲಿ ಹದಿನೇಳನೇ ಮತ್ತು ಹದಿನೆಂಟನೇ ಉಪನ್ಯಾಸಗಳಲ್ಲಿ ಸಪ್ತಾವರಣಗಳು ಯಾವ ರೀತಿ ಬಂಧಕವಾಗುತ್ತವೆ, ಅವನ್ನು ಕಳೆದುಕೊಳ್ಳುವ ರೀತಿಗಳನ್ನು ವಿಸ್ತೃತವಾಗಿ ನಿರೂಪಿಸಲಾಗಿದೆ. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  12:19 PM, 05/09/2017

  ಗುರುಗಳೆ🙏
  ಸಪ್ತಾವರಣಗಳು ದೇವತೆಗಳಿಗೆ ಇರುವುದಿಲ್ಲವೆ ?

  Vishnudasa Nagendracharya

  ದೇವತೆಗಳಿಗೆ ಸ್ವರೂಪಾಚ್ಛಾದಿಕಾ ಮತ್ತು ಜೀವಾಚ್ಛಾದಿಕಾ ಎನ್ನುವ ಎರಡೂ ಆವರಣಗಳು ಇರುವದಿಲ್ಲ. 
 • P N Deshpande,Bangalore

  9:32 AM , 03/09/2017

  S.Namaskargalu.Tamma anugrhadind eegge nityawu SrinadBhagwat Shravan nadeauttade. Neewu tilisidante Namma aaushya iruwavarge nityawu Bhagwat shravanwagali endu tamma gurugalalli prathneyennu maadbeakendu savinaywagi prathisuttene.

  Vishnudasa Nagendracharya

  ಪ್ರತೀನಿತ್ಯದ ದೇವರ ಪೂಜೆಯ ಸಂದರ್ಭದಲ್ಲಿ ಸಮಗ್ರ ವಿಶ್ವನಂದಿನಿಯ ಬಾಂಧವರಿಗೆ ನಿರಂತರ ಶಾಸ್ತ್ರಶ್ರವಣ ನಡೆಯಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತಿದ್ದೇನೆ. 
 • Sangeetha Prasanna,Bangalore

  9:57 AM , 03/09/2017

  ಹರೇ ಶ್ರೀನಿವಾಸ .ನಾವು ನಿತ್ಯವೂ ಪಠಿಸಲು ಭಾಗವತದ ಒಂದು ಶ್ಲೋಕವನ್ನು ಅನುಗ್ರಹಿಸಿ ಎಂದು ಗುರುಗಳಲ್ಲಿ ವಿನಮ್ರ ಪ್ರಾರ್ಥನೆ .🙏🙏

  Vishnudasa Nagendracharya

  ಖಂಡಿತ. 
  
  ಸದ್ಯಕ್ಕೆ ನಾರಾಯಣಾಖಿಲಗುರೋ ಭಗವನ್ ನಮಸ್ತೇ ಎಂಬ ಶ್ಲೋಕವನ್ನು ಪಠಿಸಬೇಕು ಎಂದು ಪ್ರವಚನದಲ್ಲಿ ತಿಳಿಸಿದ್ದೇನೆ. 
  
  ಮುಂದಿನ ದಿವಸಗಳಲ್ಲಿ ಒಂದೊಂದಾಗಿ ತಿಳಿಸುತ್ತೇನೆ. 
 • Vyasasharma,Kolar

  10:06 PM, 03/09/2017

  Na.askra acharyarige Oom sri krushnaarpanamastu Omm 
  Yendu aadi anthyagalli oom karahakabeku yendu sri Bannanje Govindacharyaru heluthaare davavittu adara vivarane kodabekendu prathane.

  Vishnudasa Nagendracharya

  ಹಾಗೇನೂ ನಿಯಮವಿಲ್ಲ. 
  
  ಬನ್ನಂಜೆ ತಿಳಿದುಕೊಂಡಿರುವಂತೆ ಓಂಕಾರ ಒಂದು ಅಕ್ಷರ/alphabet ಅಲ್ಲ. ಅನಂತವೇದಗಳಿಗಿಂತಲೂ, ಗಾಯತ್ರಿಗಿಂತಲೂ ಪವಿತ್ರವಾದ ಸಮಸ್ತ ಮಂತ್ರಗಳಿಂಗಿಂತಲೂ ಉತ್ತಮವಾದ, ಸರ್ವಸರ್ವೋತ್ತಮವಾದ ಮಂತ್ರ, ಪ್ರಣವ ಮಂತ್ರ. ಅದನ್ನು ಕಂಡಕಂಡಲ್ಲಿ ಕಂಡಕಂಡಂತೆ ಉಚ್ಚರಿಸುವಂತಿಲ್ಲ. 
  
  ಪ್ರಣವವನ್ನು ಉಚ್ಚರಿಸುವಷ್ಟು ಶುದ್ಧಿ ದೇಹದಲ್ಲಿದ್ದಾಗ ಅದನ್ನು ಉಚ್ಚರಿಸಿ, ಶ್ರೀಕೃಷ್ಣಾರ್ಪಣಮಸ್ತು ಎಂದು ಹೇಳಬಹುದು. ಎಷ್ಟೋ ಬಾರಿ ನಾವು ಮೈಲಿಗೆಯಲ್ಲದ್ದಾಗಲೂ ಮಾಡಿದ ಕರ್ಮಗಳನ್ನು ಹರಿಗೆ ಸಮರ್ಪಿಸುತ್ತಿರುತ್ತೇವೆ. ಆಗ ಪ್ರಣವವನ್ನು ಉಚ್ಚರಿಸಬಾರದು. ಉದಾಹರಣೆಗೆ ದಾರಿಯಲ್ಲಿ ನಡೆದು ಹೋಗುತ್ತಿದ್ದೇವೆ. ಮೈಲಿಗೆಯ ಬಟ್ಟೆಯಿದೆ. ಚಪ್ಪಲಿ ಹಾಕಿಕೊಂಡಿದ್ದೇವೆ. ದಾರಿಯಲ್ಲಿ ಯಾವುದೋ ವೃದ್ಧರಿಗೆ ಸಹಾಯ ಮಾಡಿದೆವು. ಯಾವುದೋ ಪ್ರಾಣಿಗೆ ಒಳಿತನ್ನು ಮಾಡಿದವು. ಯಾವುದೋ ಬಡವನಿಗೆ ಹಣ್ಣನ್ನೋ ತಿಂಡಿಯನ್ನೋ ತೆಗೆದು ಕೊಟ್ಟೆವು. ಆ ಸತ್ಕರ್ಮವನ್ನು ಅಲ್ಲಿಯೇ ದೇವರಿಗೆ ಸಮರ್ಪಿಸುತ್ತೇವೆ. ಆಗೆಲ್ಲ ಪ್ರಣವವನ್ನು ಉಚ್ಚರಿಸಬಾರದು. 
  
  ಮತ್ತು, ಮಂತ್ರಗಳಿಗೆ ಆದಿಯಲ್ಲಿ ಪ್ರಣವವನ್ನು ಹೇಳುವಂತೆ. ಕೃಷ್ಣಾರ್ಪಣಮಸ್ತು ಎನ್ನುವದಕ್ಕೆ ಆದಿಯಲ್ಲಿ ಪ್ರಣವವನ್ನು ಹೇಳುವದಲ್ಲ. ಕೃಷ್ಣಾರ್ಪಣೆ ಮಾಡುವಾಗ ಪ್ರಣವವವನ್ನು ಮತ್ತು ತತ್ ಸತ್ ಎಂಬ ಭಗವಂತನ ನಾಮಗಳನ್ನು ನೆನೆದು ಸಮರ್ಪಿಸಬೇಕು. 
  
  
  
 • Haritha,Dharapuram

  7:09 AM , 06/09/2017

  Gurugalige namaskara 
  Sthreeyarige bhagavatavannu oduva yogyate ideya dayavittu tilisi

  Vishnudasa Nagendracharya

  ಅವಶ್ಯವಾಗಿ. 
  
  ಶ್ರೀಮದ್ ಭಾಗವತದ ಸ್ತೋತ್ರಗಳನ್ನು ಅವಶ್ಯವಾಗಿ ಕಲಿತು ಹೆಣ್ಣುಮಕ್ಕಳು ಪಠಿಸಬಹುದು. 
 • P.R.SUBBA RAO,BANGALORE

  2:33 PM , 03/09/2017

  1. ಈ ಕಲಿಯುಗದಲ್ಲಿ ಊಟವಾಗುವ ವರೆಗೆ ತಪಸ್ಸು ಮಾಡಲೇ ಬೇಕು ಮತ್ತು ಏಕೆ/ಹೇಗೆ ಎಂದು ತಿಳಿದೆವು
  2. ಭಾಗವತದ ಅಧ್ಯಯನ ಮತ್ತು ಪಾರಾಯಣ, ಶಾಸ್ತ್ರ ಮತ್ತು ಪುರಾಣಗಳ ಅಧ್ಯಯನಕ್ಕೆ ಅಡಿಪಾಯ
  3. ಭಾಗವತ ದುರ್ಲಭ; BTS; ಕೇಳುತ್ತಾ ಕೇಳುತ್ತಾ ಕಣ್ಣಿನಲ್ಲಿ ನೀರು ಬರುತ್ತಾ ಇದೆ.
  4. ಸರ್ವಮೂಲ ಗ್ರಂಥಗಳು ಶ್ರಿಮದಾಚಾರ್ಯರ ಪ್ರತಿಮೆ ಹೇಗೋ ಹಾಗೆ ಭಾಗವತ ಭಗವಂತನ ಪ್ರತಿಮೆ
  5. ಇನ್ನೂ ಅನೇಕ & ಇದುವರೆಗೆ ಎಲ್ಲೂ ಕೇಳದ ಪ್ರಮೆಯಗಳನ್ನು ತಿಳಿದೆವು. ಒಟ್ಟಾರೆ ಈ 40 ನಿಮಿಷಗಳ ಅತ್ಯಂತ ಸಾರ್ಥಕ ಉಪಯೋಗವಾಯಿತು. ಅನುಪಯುಕ್ತವಾದ ಒಂದೇ ಒಂದು ಶಬ್ದ/ಸ್ವರ ಸಹಿತ ಕೇಳಲಿಲ್ಲ.
  6. ಇದುವರೆಗೆ ಬೇರೆ ಬೇರೆ ಆಚಾರ್ಯರಿಂದ & ಸ್ವಾಮಿಗಳಿಂದ (with full respect) ಭಾಗವತ ಪ್ರವಚನ ಕೇಳಿದ್ದರೂ, ತಮ್ಮಿಂದ ಕೇಳುವಾಗ ಮನಸ್ಸಿನ ಮಧ್ಯದಲ್ಲಿ ನೇರವಾಗಿ ನಾಟುತ್ತಾ ಇದೆ
  .....
  ಮತ್ತೂ ಗುರುಗಳ ಆದೇಶದಂತೆ ಸ್ನೇಹಿತರು & ಬಂಧುಗಳಿಗೆ ಈ ಪ್ರವಚನ ಮಾಲಿಕೆಯ ಬಗ್ಗೆ ತಿಳಿಸುತ್ತಾ ಇದ್ದೇನೆ.

  Vishnudasa Nagendracharya

  ಪ್ರವಚನದಲ್ಲಿನ ವಿಷಯಗಳ ಈ ರೀತಿಯ ಅನುವಾದ ಮನಸ್ಸಿಗೆ ತುಂಬ ಸಂತೋಷವನ್ನು ನೀಡುತ್ತದೆ. 
  
 • Adiyendayaramanujadasan,Bangalore

  10:48 PM, 03/09/2017

  Santhosham janapragyam krishna poojjanam thadheva krishna poojjanam swamy janagalannu nagisutha hari Smaran madtha adharajothe yalle paramathmana vijara thilisutha keltha kala kaithivalla ha kaledhasto kala  amruthamayavada kala karana anandavagi santhoshavagi nammannu Srushti madidha paramathmana nannu nenikoltha kaithivalla yavodho avahelana athava hengasaranna dhurbhashe indha mathanadohudhu kelidhare adharindha papalepana vidhe adhre Srimad Bhagavatam antha sundara Amruthavadha upanyasa kelidhare ha ha yavapapa karmagalu jagathinalli illa venisuthadhe antha sudhavadha manasige Tirupati yannu kodthidhe Swami nim ma e madhura kantadha Bhagavatam  dhanyosmi nim ma padhagalige dasanu 🌹🌹🌹
 • P.R.SUBBA RAO,BANGALORE

  2:46 PM , 03/09/2017

  ಇಂತಿ ನಮಸ್ಕಾರಗಳು
  ತಮ್ಮ ವಿಧೇಯ
  ಪಾ ರಾ ಸು
 • Ajit,Dombivli

  9:48 AM , 03/09/2017

  Very good help to people like us. Pl keep it up. I have no words say thanks to you Avharyare.
 • Shantha.raghothamachar,Bangalore

  9:19 AM , 03/09/2017

  ನಮಸ್ಕಾರ ಗಳು. ಬೆಂಗಳೂರಿನಲ್ಲಿ ತಮ್ಮ ದರ್ಶನ ವನ್ನು ಯಾವತ್ತು ಎಲ್ಲಿ ಮಾಡುವ ಅವಕಾಶವಿದೆ?
 • Naveen,Bangalore

  8:00 AM , 03/09/2017

  ಅದ್ಭುತ ಪರಮಾ ಅದ್ಭುತ...ಆಚಾರ್ಯರೇ.
 • Naveen,Bangalore

  8:00 AM , 03/09/2017

  ಅದ್ಭುತ ಪರಮಾ ಅದ್ಭುತ...ಆಚಾರ್ಯರೇ.