Upanyasa - VNU498

ಶ್ರೀಮದ್ ಭಾಗವತಮ್ — 6 — ಆತ್ಮದೇವನ ಕಥೆ

ದೇವ-ಋಷಿ ಮೊದಲಾದ ಸಮಸ್ತ ಸಜ್ಜನ ಸಮೂಹದ ಸಭೆಯ ಮಧ್ಯದಲ್ಲಿ ಭಾಗವತದ ಮಾಹಾತ್ಮ್ಯವನ್ನು ಸನಕಾದಿಗಳು ಹೇಳಲು ಆರಂಭಿಸಿದಾಗ ಭಕ್ತಿ-ಜ್ಞಾನ-ವೈರಾಗ್ಯಗಳು ಅಲ್ಲಿಗೆ ಬರುತ್ತಾರೆ. ಸ್ವಯಂ ಭಗವಂತ ತಾನು ಎಲ್ಲ ಶ್ರೋತೃಗಳ ಮನಸ್ಸಿನಲ್ಲಿ ಕುಳಿತು ಭಾಗವತವನ್ನು ಆಸ್ವಾದಿಸಲು ಬರುತ್ತಾನೆ. ಭಾಗವತದ ಶ್ರವಣದಿಂದ ಎಂತಹ ಪಾಪಗಳು ನಾಶವಾಗುತ್ತವೆ ಎಂದು ಶ್ರೀ ನಾರದರು ಸನಕಾದಿಯೋಗಿವರ್ಯರನ್ನು ಪ್ರಶ್ನೆ ಮಾಡಿದಾಗ ಅವರು ಆತ್ಮದೇವ ಎನ್ನುವ ಬ್ರಾಹ್ಮಣನ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಆ ಕಥೆಯ ನಿರೂಪಣೆ ಈ ಭಾಗದಲ್ಲಿದೆ. 

ಮನುಷ್ಯನ ಮೋಹ ಅದೆಷ್ಟು ಗಟ್ಟಿಯಾಗಿರುತ್ತದೆ ಮತ್ತು ಆ ಮೋಹದಿಂದ ಎಂತಹ ಅನರ್ಥ ಉಂಟಾಗುತ್ತದೆ ಎಂಬ ತತ್ವವನ್ನು ಪ್ರತಿಪಾದಿಸುವ ಭಾಗ. 

Play Time: 51:51

Size: 7.72 MB


Download Upanyasa Share to facebook View Comments
10001 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:30 AM , 13/03/2022

  🙏🙏🙏
 • Sowmya,Bangalore

  7:57 PM , 26/01/2022

  🙏🙏🙏
 • Mahadi Sethu Rao,Bengaluru

  1:17 AM , 09/06/2020

  HARE KRISHNA
 • Vijaya bharathi k b,Bangalore

  7:04 PM , 10/04/2018

  Dhanyavada galu gurugale.. kelta idre kelta irbeku ansutte... 👌👌🙏🙏
 • Mrs laxmi padaki,Pune

  10:53 AM, 09/04/2018

  👏👏👏👏👏
 • Bheemachar,Mulbagal

  6:28 PM , 08/12/2017

  The
 • prema raghavendra,coimbatore

  10:21 AM, 05/10/2017

  Ananthanatha namaskara! Danyavada!
 • H. Suvarna kulkarni,Bangalore

  10:10 AM, 13/09/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ಮನಕಾನಂದವೀಯುತ್ತಿದೆ ಧನ್ಯವಾದಗಳು
 • Laxmi rao,Bangalore

  9:40 AM , 09/09/2017

  Acharyare nimma mulaka vishwanandi yalli banda mele namma kutumba bahala kshemadinda iddeve nammannu bhagavantana smarane nirantara maadisuttiddiri tamage anataanta pranamagalu

  Vishnudasa Nagendracharya

  ವಿಶ್ವನಂದಿನಿಯ ಕಾರ್ಯ ಸಾರ್ಥಕವಾಗುತ್ತಿದೆ. ನನ್ನ ಗುರುಗಳ, ಸಮಸ್ತ ಗುರುಪರಂಪರೆಯ, ಶ್ರೀಮದಾಚಾರ್ಯರ ಮತ್ತು ಅಂತರ್ಯಾಮಿಯ ಪರಮಾನುಗ್ರಹ. 
 • Laxmi rao,Bangalore

  9:31 AM , 09/09/2017

  Bhagavantana samparka anugaalavu iralendu aashirvadisi gurugale
 • Anusha Achyut Mirji,Bangalore

  8:13 PM , 08/09/2017

  Gurugalige Anant Janmada Anant namaskaragalu
 • Satya Pramoda,Raichur

  6:51 AM , 04/09/2017

  What a rendition, Gurugale.
  
  ಎಲ್ಲ ಕಥೆಯೂ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ

  Vishnudasa Nagendracharya

  ಗುರ್ವನುಗ್ರಹ. 
 • Kirana N A,Bengaluru

  8:28 AM , 05/09/2017

  Where do we get Bhagavata book to purchase? Please guide us.

  Vishnudasa Nagendracharya

  Srimad Bhagavatam (Moola Matram) edited by Sri Shehsgiri Acharya, published by Poornaprajna Vidyapeetha. 
  
  Bhagvata with the commentary of Sri Vijayadhwaja Teertha Gururajaru is published by Bagalingampalli Rayara Matha. (I think these books are out of print) 
  
  Bhagvata and Bhagavata Tatparya is published by Dwaita vedanta foundation with many commentaries. 
 • Shantha.raghothamachar,Bangalore

  12:41 PM, 04/09/2017

  ನಮಸ್ಕಾರ ಗಳು.ನಮಸ್ಕಾರ ಗಳು
 • Ananda Teertha,Chitradurga

  10:11 AM, 04/09/2017

  Acharyara paadagalige bhaktipoorvaka namaskaragalu. 
  
  Namma baduku saarthakavaguttide swamy. Tamminda bhagavata kelabeku ennuvadu aneka varshagala bayakeyagittu. Madhwarayara anugrahadinda poornavaaguttide.
 • Raghavendra Rao,Mysuru

  8:14 AM , 04/09/2017

  ಪೂಜ್ಯ ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  
  ಗುರುಗಳೇ, ನಮ್ಮ ಕುಟುಂಬದವರೆಲ್ಲ ನಿಮ್ಮ ಮಧ್ವವಿಜಯದ ಪ್ರವಚನಗಳನ್ನು ಕೇಳಿ ಕೃತಾರ್ಥರಾಗಿದ್ದೆವು. ಇದಕ್ಕಿಂತ ಚನ್ನಾಗಿ ಆಚಾರ್ಯರೂ ಸಹ ಬೇರೆ ಪ್ರವಚನ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇವು. ಆದರೆ ತಮ್ಮ ಈ ಭಾಗವತದ ಪ್ರವಚನಗಳು ಮಧ್ವವಿಜಯದ ಪ್ರವಚನಗಳನ್ನೂ ಮೀರಿಸುತ್ತವೆ. 
  
  ಹೊಗಳುವದಕ್ಕಾಗಿ ಹೇಳುತ್ತಿಲ್ಲ ಗುರುಗಳೇ. ನಿಮ್ಮ ನಾಲಿಗೆಯಲ್ಲಿ ಭಾರತೀದೇವಿ ಸರಸ್ವತಿದೇವಿಯರು ಕುಳಿತಿದ್ದಾರೆ. ಎಂತಹ ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ನಿಮ್ಮ ಪ್ರಚಂಡ ಧ್ವನಿಗಿದೆ. ದಿವಸಕ್ಕೆ ಎರಡು ಮೂರು ಬಾರಿ ನಿಮ್ಮ ಭಾಗವತದ ಪ್ರವಚನ ಕೇಳುತ್ತಿದ್ದೇವೆ. ನಮ್ಮಲ್ಲಿ ಭಕ್ತಿಯನ್ನು ಹುಟ್ಟಿಸುತ್ತಿರುವ ನಿಮಗೆ ಎಷ್ಟು ನಮಸ್ಕಾರಗಳನ್ನು ಸಲ್ಲಿಸಿದರೂ ಕಡಿಮೆಯೇ. ನಿಮ್ಮಂತಹ ಮಗನನ್ನು ಪಡೆದ ತಂದೆತಾಯಿಯರೇ ಧನ್ಯರು. 
  
  ನಮ್ಮ ತಂದೆಯವರಿಗೆ ಈಗ 86 ವರ್ಷ. ತಮ್ಮ ಹರಿಭಕ್ತಿಸಾರದ ಪ್ರವಚನಗಳನ್ನು ಕೇಳದೇ ಊಟ ಮಾಡುವದಿಲ್ಲ ಅವರು. ನಮ್ಮ ಇಡಿಯ ಕುಟುಂಬ ತಮ್ಮಿಂದ ಬಹಳ ಜ್ಞಾನವನ್ನು ಪಡೆದಿದ್ದೇವೆ. ತಂದೆಯವರೂ ಸಹ ನಿಮಗೆ ನಮಸ್ಕಾರಗಳನ್ನು ತಿಳಿಸಲು ಹೇಳಿದ್ದಾರೆ. ನಿಮ್ಮ ಅನುಗ್ರಹ ಸದಾ ನಮ್ಮ ಕುಟುಂಬದ ಮೇಲಿರಲಿ. 
  
  ರಾಘವೇಂದ್ರರಾವ್ ಮತ್ತು ಕುಟುಂಬದವರು.

  Vishnudasa Nagendracharya

  ಆತ್ಮೀಯರಾದ ಶ್ರೀ ರಾಘವೇಂದ್ರರಾವ್ ರವರಿಗೆ, 
  
  ನಿಮ್ಮ ತಂದೆಯವರಿಗೂ ಸಹ ನನ್ನ ನಮಸ್ಕಾರಗಳನ್ನು ತಿಳಿಸುವದು. ನಾನು ನೋಡಿದ ಅತ್ಯಂತ ಪರಿಶುದ್ಧಮನಸ್ಸಿನ ಜನರಲ್ಲಿ ನಿಮ್ಮ ತಂದೆಯವರಾದ ಗುರುರಾಜರಾಯರೂ ಒಬ್ಬರು. ನಿಮ್ಮ ಮನೆಯಲ್ಲಿ ನಾನು ಕಳೆದ ಎರಡು ದಿವಸಗಳನ್ನು ಎಂದಿಗೂ ಮರೆಯುವದಿಲ್ಲ. 
  
  ವಿಶ್ವನಂದಿನಿಯ ಈ ಜ್ಞಾನಕಾರ್ಯ ಜಗತ್ತಿನ ಎಲ್ಲೆಡೆ ಇರುವ ಸಜ್ಜನರನ್ನು ತಲುಪಿತ್ತಿರುವದು ನನಗೆ ಅತ್ಯಂತ ಆನಂದವನ್ನು ನೀಡಿದೆ. ಎಲ್ಲ ಸಜ್ಜನರೂ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸುತ್ತಿರುವದನ್ನು ನೋಡಿದಾಗ ಮತ್ತಷ್ಟು ಅಧ್ಯಯನ ಮಾಡಿ, ಇನ್ನೂ ಹೆಚ್ಚಿಗೆ ನೀಡುವ ಹುಮ್ಮಸ್ಸನ್ನು ನೀಡುತ್ತದೆ. 
  
  ಹರಿ-ವಾಯು-ದೇವತೆಗೆಳು, ನನ್ನ ಗುರುಗಳು ಮಾಡಿಸುತ್ತಿರುವ ಸತ್ಕರ್ಮವಿದು. 
  
  ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸಾನಾಧೀಶ್ವರರಾದ ಶ್ರೀ ವಿದ್ಯಾವಾರಿಧಿತೀರ್ಥಗುರುಸಾರ್ವಭೌಮರು ಪ್ರೀತರಾಗಲಿ, ಪ್ರೀತರಾಗಿ ಮುನಿತ್ರಯರ ಅನುಗ್ರಹ ನಮ್ಮೆಲ್ಲರ ಮೇಲಾಗುವಂತೆ ಅವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 
  
  
 • P N Deshpande,Bangalore

  8:10 AM , 04/09/2017

  S.Namaskargalu. Tamma Anugraha sadaa Namma mele irili
 • Poornima Venkatesh,Mysore

  7:51 AM , 04/09/2017

  Acharyare, we have listened to Bhagavatha in the past for one hour a day for 7 days. But somehow we were not able to catch it. ಯಾವ ಜನ್ಮದ ಸೌಭಾಗ್ಯವೋ ಈಗ ಸವಿಸ್ತಾರವಾಗಿ ತಮ್ಮಿಂದ ಕೇಳುವ ಆವಕಾಶ ಒದಗಿ ಬಂದಿದೆ . ಪ್ರತಿ ಘಟನೆಯು ಕಣ್ಮುಂದೆ ನಿಂತ ಅನುಭವ . ಈಗ ನಾವು ಭಾಗವತ ಕೇಳುತ್ತಿದ್ದೇವೆ ಎಂಬ ಹೆಮ್ಮ ಉಂಟಾಗುತ್ತಿದೆ . ಭಕ್ತಿ ಉಕ್ಕಿ ಹರಿಯುತ್ತಿದೆ . ತಮಗೆ ಪ್ರಣಾಮಗಳು . ಈ ದಿನದ ಉಪನ್ಯಾಸ ಸೊಗಸಾಗಿತ್ತು .
 • Madhvwshachar,Bangalore

  7:38 AM , 04/09/2017

  Excellent acharyare .
 • Satya Pramoda,Raichur

  6:55 AM , 04/09/2017

  ಅದೆಷ್ಟು ಜನ್ಮಗಳ ಪುಣ್ಯವೋ, ತಮ್ಮ ಮುಖದಿಂದ ಭಾಗವತ ಕೇಳುತ್ತಿರುವದು.
  
  ಭಕ್ತಿ ಜಾಗೃತವಾಗುತ್ತಿದೆ, ಸ್ವಾಮಿ.
 • Lakshmi Acharya,Bangalore

  6:46 AM , 04/09/2017

  Janma saarthakavaguttide.
 • SATISH S PUROHIT,BANGALUR

  6:35 AM , 04/09/2017

  ಗುರುಗಳಿಗೆ. 
  ಸಾ. ನಮಸ್ಕಾರಗಳು.