Upanyasa - VNU499

ಶ್ರೀಮದ್ ಭಾಗವತಮ್ — 7 — ಆತ್ಮದೇವನ ಉದ್ಧಾರ

ಯತಿವರೇಣ್ಯರು ನೀಡಿದ ಫಲವನ್ನು ಹಸು ತಿನ್ನುತ್ತದೆ. ಗೋಕರ್ಣ ಎಂಬ ಸಜ್ಜೀವ ಅವತರಿಸಿ ಬರುತ್ತಾನೆ. ಆತ್ಮದೇವನ ಹೆಂಡತಿ ಧುಂಧುಲೀ ತನ್ನ ತಂಗಿಯ ಮಗುವನ್ನು ಕೊಂಡುಕೊಂಡು ತನ್ನ ಮಗ ಎಂದು ಸುಳ್ಳು ಹೇಳುತ್ತಾಳೆ. ಅವನೇ ಪಾಪಕರ್ಮರತನಾದ ಧುಂಧುಕಾರಿ. ದುಷ್ಟಕಾರ್ಯಗಳನ್ನು ಮಾಡುತ್ತಲೇ ಬೆಳೆದು ಬಲಿಷ್ಠನಾಗುವ ಅವನು ತನ್ನ ತಂದೆಯನ್ನೇ ಹೊಡೆದು ಹಣ ಕಸಿದುಕೊಂಡು ಹೋಗುತ್ತಾನೆ. ಗೋಕರ್ಣನಿಂದ ತತ್ವದ ಉಪದೇಶ ಪಡೆದ ಆತ್ಮದೇವ ಭಾಗವತದ ದಶಮಸ್ಕಂಧದಲ್ಲಿ ಆಸಕ್ತನಾಗಿ ಉದ್ಧೃತಿಯನ್ನು ಕಂಡುಕೊಳ್ಳುವ ಭಾಗದ ವಿವರಣೆ ಈ ಉಪನ್ಯಾಸದಲ್ಲಿದೆ. 

Play Time: 32:30

Size: 7.72 MB


Download Upanyasa Share to facebook View Comments
9718 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:04 AM, 13/03/2022

  ಶ್ರೀ ಶ್ರೀ ಕೃಷ್ಣಾರ್ಪಣಮಸ್ತು 🙏🙏🙏
 • Sowmya,Bangalore

  7:47 PM , 27/01/2022

  🙏🙏🙏
 • Mahadi Sethu Rao,Bengaluru

  3:40 PM , 10/06/2020

  HARE KRISHNA.
 • Mrs laxmi padaki,Pune

  7:21 PM , 09/04/2018

  👏👏👏👏👏
 • prema raghavendra,coimbatore

  10:38 AM, 20/10/2017

  Anantha namaskara! Danyavada!
 • H. Suvarna kulkarni,Bangalore

  10:58 AM, 13/09/2017

  ಗುರುಗಳಿಗೆ ಪ್ರಣಾಮಗಳು ಈ ಭಾಗದಲ್ಲಿ ಬಂದ ಪಾತ್ರಗಳು ಇಂತಹ ವಿಚಾರ ಮಾಡುವ ಜನ ಆಗಲೇ ಆಗಿಹೋಗಿರುವುದನ್ನು ನೋಡಿದರೆ ಕಲಿಯ ಪ್ರಾಬಲ್ಯ ಎಂಥ ಘೋರವಾದದ್ದು ಎನಿಸುತ್ತದೆ
 • P.R.SUBBA RAO,BANGALORE

  11:46 AM, 05/09/2017

  ಶ್ರೀ ಗುರುಭ್ಯೋನಮಃ
  1. ಆತ್ಮದೇವನ ಹೆಸರು & ಕಥೆ ಎರಡೂ ನಮಗೇ ಅನ್ವರ್ಥವಾಗುವಂತೆ ಇದೆ.
  2. ಸಂಸಾರದ ವ್ಯಾಮೋಹ ಮತ್ತು ಲೌಕಿಕ ನಮ್ಮನ್ನೂ ಬಲವಾಗಿ ಆವರಿಸಿದೆ.
  3. ಶ್ರಿಹರಿವಾಯುಗುರುಗಳ ಅನುಗ್ರಹದಿಂದ ತಮ್ಮಿಂದ ಭಾಗವತ ಶ್ರವಣ ಮಾಡುತ್ತಾ ಇದ್ದೇವೆ.
  4. ಶ್ರೀ ರಾಘವೇಂದ್ರರಾಯರು ಹಿಂದಿನ comment (part-6) ನಲ್ಲಿ ಹೇಳಿದಂತೆ ವಾಗ್ದೇವಿಯೇ ತಮ್ಮಲ್ಲಿ ನಿಂತು ನಮ್ಮ ಉದ್ಧಾರಕ್ಕಾಗಿ ನುಡಿಸುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
  5. ಇವತ್ತಿನ ಈ ಭಾಗ ಕೇಳುತ್ತಿದ್ದರೆ ಶ್ರೀ ಗೋಪಾಲದಾಸಾರ್ಯಾರ "ಏಕೆ ಮಮತೆ ಕೊಟ್ಟು ದಣಿಸುವೆ ರಂಗ" ಎಂಬ ದೇವರ ನಾಮ ನೆನಪಾಗುತ್ತಿದೆ.
  6. ಎಷ್ಟೇ ಆದರೂ ವ್ಯಾಮೋಹ ಬಿಡುವುದು ಬಹಳ ಕಷ್ಟ ಮತ್ತು ಗುರುಹಿರಿಯರ ಅನುಗ್ರಹದಿಂದ ಮಾತ್ರ ಸಾಧ್ಯ ಅಂದುಕೊಂಡಿದ್ದೇನೆ, ಅಲ್ಲವಾ ಗುರುಗಳೇ?
  7. ಕಡೆಯದಾಗಿ ಒಂದು ಪ್ರಶ್ನೆ: ಪಿಬತ ಶಬ್ದದ ಸರಿಯಾದ ಅರ್ಥ ಏನು? ಕುಡಿಯುವುದು Or ಆಸಕ್ತರಾಗಿರುವುದು or ಸಂದರ್ಭೋಚಿತವಾಗಿ ಏನೆಂದು ತಿಳಿಯಬಹುದು? ದಯವಿಟ್ಟು ತಿಳಿಸಿ.
  ಇಂತಿ ತಮ್ಮ ವಿಧೇಯ
  ಸುಬ್ಬರಾವ್

  Vishnudasa Nagendracharya

  ಪಿಬತ ಎಂದರೆ ಪಾನ ಮಾಡಿರಿ, ಕುಡಿಯಿರಿ ಎಂದರ್ಥ. 
  
  ಪಿಬತ ಭಾಗವತಂ ರಸಮಾಲಯಮ್ ಎಂದರೆ ಪ್ರಳಯವಾಗುವವರೆಗೆ (ಲಿಂಗದೇಹದ ಭಂಗವಾಗುವವರೆಗೆ) ಭಾಗವತರಸವನ್ನು ಪಾನ ಮಾಡಿರಿ ಎಂದಿರಿ ಎಂದರ್ಥ. 
 • Jayashree Karunakar,Bangalore

  11:46 AM, 05/09/2017

  ಗುರುಗಳೆ 
  ಧುಂಧುಕಾರಿಯ ಹೆಸರಿನಲ್ಲಿಯೆ ಅವನ ದುಷ್ಟ ಗುಣಗಳ ಪರಿಚಯವಾಗುತ್ತದೆ. ಮತ್ತು ಅವನ ತಾಯಿಯೂ ಅದೇ ಸ್ವಭಾವದವಳು.
  
  ಆದರೆ ಶ್ರಿಬಲರಾಮದೇವರ ಮಗನ ಹೆಸರು ಯಾಕೆ ಶಠ ಅಂತ .
  
  ತಂದೆಯದು ದೇವತಾ ಸ್ವರೂಪವಲ್ಲವೆ.
  
  ಶಠನ ಸ್ವಭಾವ ಎಂತಹದು

  Vishnudasa Nagendracharya

  ಶಠನೂ ದೇವತಾಸ್ವರೂಪ. ಸಂಶಯವಿಲ್ಲ. 
  
  ಅದರ ಕುರಿತು ಮುಂದೆ ತಿಳಿಸುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. 
  
  ಧುಂಧುಕಾರಿ ದುಷ್ಟಕರ್ಮ ಮಾಡಿದ್ದವನಷ್ಟೇ.. ಸ್ವಭಾವತಃ ದುಷ್ಟನಲ್ಲ. ಸ್ವಭಾವತಃ ದುಷ್ಟನಾಗಿದ್ದರೆ ಅವನು ಭಾಗವತದಿಂದ ಉದ್ಧಾರವಾಗುತ್ತಿರಲಿಲ್ಲ. ಉದ್ದಾರವಾಗಿದ್ದಾನೆಯಾದ್ದರಿಂದಲೇ ಅವನು ಸಜ್ಜೀವ. 
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  6:37 PM , 05/09/2017

  ಓಂಶ್ರೀಗುರುಭ್ಯೊನಮಃ
 • SATISH S PUROHIT,BANGALUR

  4:18 PM , 05/09/2017

  ಧನ್ಯವಾದಗಳು ಆಚಾಯ೯ರೇ,
 • P N Deshpande,Bangalore

  11:36 AM, 05/09/2017

  Worth listening & to accept all the Patras of storey as said in the last by you
 • Shantha.raghothamachar,Bangalore

  10:12 AM, 05/09/2017

  ನಮಸ್ಕಾರ ಶ್ರವಣ ಮನಕಾನಂದಯಿವುದು ಭವಜನಿತ ದುಃಖ ಕಳೆವುದು---------- ನಮಸ್ಕಾರ ಗಳು.
 • Sangeetha Prasanna,Bangalore

  8:43 AM , 05/09/2017

  ಧನ್ಯರಾದೆವು 🙏🙏
 • Sangeetha Prasanna,Bangalore

  8:42 AM , 05/09/2017

  ಶ್ರೀ ಕೃಷ್ಣಾರ್ಪಣಮಸ್ತು 🙏🙏