Upanyasa - VNU500

ಶ್ರೀಮದ್ ಭಾಗವತಮ್ — 8 — ಧುಂಧುಕಾರಿಯ ಉದ್ಧಾರ

ಧುಂಧುಕಾರಿ ಐದು ಜನ ವೇಶ್ಯೆಯರನ್ನು ಮನೆಯಲ್ಲಿ ತಂದಿಟ್ಟುಕೊಂಡು ಪರಮಪಾಪಿಷ್ಠನಾಗಿ ಬದುಕುತ್ತಿರುತ್ತಾನೆ. ಅವನು ಮಾಡುತ್ತಿದ್ದ ಕಳ್ಳತನ ಕೊಲೆಗಳು ರಾಜನಿಗೆ ತಿಳಿದರೆ ಇವನ ಜೊತೆಯಲ್ಲಿ ತಮ್ಮನ್ನೂ ರಾಜ ಕೊಲ್ಲುತ್ತಾನೆ ಎಂದು ಆಲೋಚನೆ ಮಾಡಿದ ವೇಶ್ಯೆಯರು ರಾತ್ರಿಯಲ್ಲಿ ಧುಂಧುಕಾರಿಯನ್ನು ಕೊಂದು ಹಾಕುತ್ತಾರೆ. ತನ್ನ ಮಹತ್ತರ ಪಾಪಕರ್ಮಗಳಿಂದ ಪಿಶಾಚಜನ್ಮವನ್ನು ಪಡೆದ ಧುಂಧುಕಾರಿಯನ್ನು ಗೋಕರ್ಣ ಭಾಗವತಸಪ್ತಾಹದಿಂದ ಉದ್ಧಾರ ಮಾಡುವ ದಿವ್ಯ ಘಟನೆ ಮತ್ತು ಗೋಕರ್ಣ ಹಾಗೂ ಎಲ್ಲ ಶ್ರೋತೃಗಳ ಉದ್ಧಾರವಾಗುವ ಘಟನೆಗಳ ಚಿತ್ರಣ ಇಲ್ಲಿದೆ. ಆಚಾರ್ಯರ ವಾಕ್ಯಗಳ ಆಧಾರದ ಮೇಲೆ ಭಾಗವತಶ್ರವಣದಿಂದ ಮುಕ್ತಿಯಾಗುವದು ಎಂದರೇನು ಎನ್ನುವ ತತ್ವದ ವಿವರಣೆಯೂ ಇಲ್ಲಿದೆ. Play Time: 61:04

Size: 7.72 MB


Download Upanyasa Share to facebook View Comments
9059 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  11:14 AM, 14/03/2022

  ಶ್ರೀ ಕೃಷ್ಣಾರ್ಪಣಮಸ್ತು 🙏🙏
 • Sowmya,Bangalore

  8:21 PM , 03/02/2022

  🙏🙏🙏
 • Lakshmi,Pune

  4:48 PM , 15/01/2022

  Gurugalige namaskargalu , namage bhagvat d amrut unisuttiruv tamage anant koti namaskargalu.
 • Mahadi Sethu Rao,Bengaluru

  3:40 PM , 10/06/2020

  HARE KRISHNA.
 • Mahadi Sethu Rao,Bengaluru

  9:07 PM , 09/06/2020

  HARE KRISHNA.
 • Mrs laxmi padaki,Pune

  9:58 AM , 10/04/2018

  👏👏👏👏👏
 • K S Gayathri,Bengaluru

  4:44 PM , 09/04/2018

  Namaskara Gurugalige. Bahala sogasagittu. Dhanyavadagalu. Innu bahalastu pravachanagalannu keluva sowbhagya nammadhagali. With great regards, Gayathri Dwarakanath
 • G.v.pujar,Vijayapur

  9:52 PM , 03/03/2018

  100% down load
 • H. Suvarna kulkarni,Bangalore

  7:20 AM , 14/09/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ನಿಮ್ಮಿಂದ ಕೇಳಲುಲಭ್ಯವಾಗಿರುವುದು ನಮ್ಮಕೋಟಿಜನ್ಮಗಳ ಫಲವೇನೊ ಧನ್ಯವಾದಗಳು
 • P.R.SUBBA RAO,BANGALORE

  7:54 AM , 09/09/2017

  ಶ್ರೀ ಗುರುಭ್ಯೋನಮಃ
  ಭಾಗವತ ಶ್ರವಣಕ್ಕೆ ಎದುರಿಗೆ ಕೂರಿಸುವ ಸದ್ಬ್ರಾಹ್ಮಣರು ಏಳೂ ದಿನಗಳು ಪೂರ್ತಿ ಉಪವಾಸವಿರಬೆಏಕು ಎಂದು ಕೇಳಿದ್ದೇನೆ. ಈ ರೀತಿ ನಿಯಮ ಇದೆಯೇ?
  ಇಂತಿ ತಮ್ಮ ವಿಧೇಯ

  Vishnudasa Nagendracharya

  ಈ ಪ್ರಶ್ನೆಗೆ ಉತ್ತರವನ್ನು SB009 ಶ್ರೀ ಭಾಗವತದ 9ನೆಯ ಉಪನ್ಯಾಸದಲ್ಲಿ ನೀಡಲಾಗಿದೆ. 
  
  ಉಪವಾಸದಿಂದ ಶ್ರವಣಕ್ಕೆ ತೊಂದರೆಯಾಗುವದಿದ್ದರೆ ಲಘುಭೋಜನವೇ ಶ್ರೇಷ್ಠ ಎಂದು ಶ್ರೀ ಸನಕಾದಿಯೋಗಿವರ್ಯರೇ ನಿರ್ಣಯ ನೀಡಿದ್ದಾರೆ. 
 • Madhushree M,Bangalore

  1:00 PM , 08/09/2017

  Amazing narration. We will run short of words if we start speaking about the narration. Truely blessed. Thank you 🙏
 • Jayashree Karunakar,Bangalore

  3:34 PM , 06/09/2017

  ಗುರುಗಳೆ 
  
  ಧುಂಧುಕಾರಿಗೆ ಪ್ರೇತಯೋನಿಯಲ್ಲಿ ಭಾಗವತ ಶ್ರವಣ ಸಿಕ್ಕಿದ್ದು ಅವನ ಹಿಂದಿನ ಅಂದರೆ ಧುಂಧುಕಾರಿಯಾಗಿ ಹುಟ್ಟುವುದಕ್ಕಿಂತಮುಂಚೆ ಮಾಡಿದ ಸಾಧನೆಯ ಫಲವೆ ?
  
  ದುಷ್ಟಜನ್ಮವಾದ ಧುಂಧುಕಾರಿಯ ಜನ್ಮವು, ಪಿಶಾಚಿ ಜನ್ಮಕ್ಕಿಂತ ಉತ್ತಮವಲ್ಲವೆ.
  
  ಭಗವಂತ ಸಾಧನೆಯ ಮಾಗ೯ವನ್ನು ಧುಂಧುಕಾರಿಯಾಗಿದ್ದಾಗಲೇ ಅನುಗ್ರಹಿಸಬಹುದಿತ್ತಲ್ಲವೆ ?
  ಪಿಶಾಚ ಜನ್ಮದಲ್ಲಿ ಅನುಗ್ರಹ ಮಾಡುವ ಉದ್ದೇಶವೇನು ?

  Vishnudasa Nagendracharya

  ಈ ರೀತಿಯ ಪ್ರಶ್ನೆಗಳಿಗೆ ಶ್ರೀಕೃಷ್ಣದೇವರು ಭಗವದ್ಗೀತೆಯಲ್ಲಿ ಉತ್ತರ ನೀಡಿದ್ದಾರೆ — 
  
  ಯೇಷಾಂ ತ್ವಂತಗತಂ ಪಾಪಂ 
  ಜನಾನಾಂ ಪುಣ್ಯಕರ್ಮಣಾಮ್ ।
  ತೇ ದ್ವಂದ್ವಮೋಹನಿರ್ಮುಕ್ತಾಃ
  ಭಜಂತೇ ಮಾಂ ದೃಢವ್ರತಾಃ ।।
  
  ಎಂದು. ನನ್ನ ಉಪನ್ಯಾಸಗಳಲ್ಲಿ ಅನೇಕ ಬಾರಿ ವಿವರಿಸಿದ್ದೇನೆ. 
  
  ಎಲ್ಲಿಯವರೆಗೆ ನಮ್ಮಲ್ಲಿ ಪಾಪ ನಾಶವಾಗುವದಿಲ್ಲ, ಅಲ್ಲಿಯವರೆಗೆ ನಾವು ದೇವರನ್ನು ಭಜಿಸಲು ಸಾಧ್ಯವಿಲ್ಲ. 
  
  ಈಗ ನೀವು ಪ್ರಶ್ನೆ ಕೇಳಬಹುದು, ದುಂಧುಕಾರಿಗೆ ಪಾಪನಾಶವಾದದ್ದು ಭಾಗವತಶ್ರವಣದ ನಂತರ. ನಾವು ಪ್ರಶ್ನೆ ಕೇಳುತ್ತಿರುವದು ಆ ಭಾಗವತಶ್ರವಣವನ್ನೇ ಭಗವಂತ ಅವನಿಗೆ ಮನುಷ್ಯಜನ್ಮದಲ್ಲಿಯೇ ಅನುಗ್ರಹಿಸಬಹುದಿತ್ತಲ್ಲವೇ ಎಂದು. 
  
  ಉತ್ತರ ಹೀಗಿದೆ — 
  
  ಭಾಗವತ ಶ್ರವಣದಿಂದ ಸಕಲ ಪಾಪಗಳೂ ಭಸ್ಮವಾಗಿ ಅವನು ಉತ್ತಮಲೋಕಗಳನ್ನು ಪಡೆದುಕೊಂಡದ್ದು ಸತ್ಯ. ಆದರೆ ಭಾಗವತಶ್ರವಣಕ್ಕೂ ಅವನಿಗೆ ಪುಣ್ಯದ ಆವಶ್ಯಕತೆಯಿದೆ. ಪುಣ್ಯವಿಲ್ಲದೇ ಭಾಗವತಶ್ರವಣ ಮಾಡಲು ಸಾಧ್ಯವಿಲ್ಲ. ಸ್ಕಂದ ಪುರಾಣ ತಿಳಿಸುವಂತೆ ಅನಂತಜನ್ಮಗಳ ಪುಣ್ಯದಿಂದ ಭಾಗವತಶ್ರವಣದ ಯೋಗ ಲಭಿಸುತ್ತದೆ. 
  
  ಧುಂಧುಕಾರಿ ಮನುಷ್ಯನಾಗಿದ್ದಾಗ ಅತ್ಯಂತ ನೀಚಕರ್ಮಗಳಲ್ಲಿಯೇ ಆಸಕ್ತನಾಗಿದ್ದ. ಅವನಿಗೆ ಮಾಡುತ್ತಿರುವ ಪಾಪದ ಬಗ್ಗೆ ನಾಚಿಕೆ ಸಹಿತ ಇರಲಿಲ್ಲ. ಅದಕ್ಕಾಗಿಯೇ ಹೀನಾಯವಾದ ಸಾವನ್ನು ಅನುಭವಿಸಿದ. 
  
  ಅವನ ಸಾವಿನ ಸುದ್ಧಿಯನ್ನು ಕೇಳಿದ ಗೋಕರ್ಣ ಗಯಾಕ್ಷೇತ್ರದಲ್ಲಿ ಶ್ರಾದ್ಧವನ್ನು ಮಾಡಿದ್ದ. ಮಹಾಭಾಗವತೋತ್ತಮನಾದ ಮತ್ತು ಭಗವತ್ಸಾಕ್ಷಾತ್ಕಾರವನ್ನು ಪಡೆದ ಗೋಕರ್ಣ ಗಯಾದಲ್ಲಿ ಮಾಡಿದ ಶ್ರಾದ್ಧ ವ್ಯರ್ಥವಾಗಲಿಲ್ಲ. ಪಿಶಾಚಯೋನಿಯಲ್ಲಿದ್ದ ಧುಂಧುಕಾರಿಗೆ ಪಶ್ಚಾತ್ತಾಪವನ್ನು ನೀಡಿತು. ಭಾಗವತಶ್ರವಣವನ್ನು ಮಾಡುವ ಯೋಗ್ಯತೆಯನ್ನು ದಯಪಾಲಿಸಿತು. ಇದರಿಂದ ಗಯಾಶ್ರಾದ್ಧದ ಮಹತ್ತ್ವವು ನಮಗರಿವಾಗುತ್ತದೆ. 
  
  ಆದರೆ ಗಯಾಶ್ರಾದ್ಧ ಎಷ್ಟು ಪಾಪಗಳನ್ನು ಪರಿಹರಿಸುತ್ತದೆಯೋ ಅದಕ್ಕಿಂತ ಮಿಗಿಲಾದ ಪಾಪಗಳನ್ನು ಮಾಡಿದ್ದ (ತಂದೆ ತಾಯಿಗಳನ್ನು ಹಿಂಸಿಸಿದ್ದು. ಈ ಪಾಪ ಅತ್ಯಂತ ಘೋರ. ತಂದೆತಾಯಿಗಳ ಭಕ್ತರನ್ನು ಗಯೆ ಉದ್ಧರಿಸುತ್ತದೆ. ತಂದೆ ತಾಯಿಗಳನ್ನೇ ಹಿಂಸಿಸುವ ಪಾಪವನ್ನು ಗಯೆ ಕಡಿಮೆ ಮಾಡುವದಿಲ್ಲ) ಹೀಗಾಗಿ ಗಯಾಶ್ರಾದ್ಧಕ್ಕಿಂತಲೂ ಮಿಗಿಲಾದದ್ದನ್ನು ಆಚರಿಸಬೇಕಾಗಿತ್ತು. 
  
  ಅದಕ್ಕಾಗಿ ಗೋಕರ್ಣ ತಪಸ್ಸು ಮಾಡಿ ಸೂರ್ಯದೇವರಿಂದ ಅನುಮತಿ ಪಡೆದು ಭಾಗವತಸಪ್ತಾಹವನ್ನು ಮಾಡಿದ. 
  
  ಗಯಾಶ್ರಾದ್ಧದ ಫಲವಾಗಿ ತಾನು ಮಾಡಿದ ಪಾಪಕರ್ಮಗಳ ಕುರಿತು ಎಚ್ಚರಕ್ಕೆ ಬಂದು ಪಶ್ಚಾತ್ತಾಪಗೊಂಡಿದ್ದ ಧುಂಧುಕಾರಿ, ಹಸಿವು ನೀರಡಿಕೆಗಳೇ ಮೈವೆತ್ತ ಪಿಶಾಚಜನ್ಮದಲ್ಲಿ ಏಳು ದಿವಸಗಳ ವರೆಗೆ ನಿಷ್ಠೆಯಿಂದ ಉಪವಾಸ ಮಾಡಿ ಮಹಾಭಾಗವತೋತ್ತಮರ ಬಾಯಿಂದ ಭಾಗವತವನ್ನು ಕೇಳಿದ. ಭಾಗವತದ ಮಾಹಾತ್ಮ್ಯ, ಗೋಕರ್ಣನ ಅನುಗ್ರಹ ಹಾಗೂ ತನ್ನ ನಿಷ್ಠೆಯಿಂದ ಆ ಎಲ್ಲ ಪಾಪಗಳನ್ನು ಕಳೆದುಕೊಂಡು ತಾನು ಉತ್ತಮಲೋಕಗಳನ್ನು ಪಡೆದ. 
  
  ಅಲ್ಲಿ ಸುಖವನ್ನನುಭವಿಸಿದ ನಂತರ ಅವನು ಮತ್ತೆ ಹುಟ್ಟಿಬಂದು ಸಾಧನೆ ಮಾಡಿ ಭಗವದನುಗ್ರಹವನ್ನು ಪಡೆದು ಮುಕ್ತನಾಗುತ್ತಾನೆ. ಈ ಭಾಗವನ್ನು ಈಗಾಗಲೇ ವಿವರಿಸದ್ದೇನೆ. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:04 PM , 06/09/2017

  VNP010 ಪಿಶಾಚಿಗಳ ಬಗ್ಗೆ ವಿವರಣೆಯಿದೆ
 • Anilkumar B Rao,Bangalore

  8:31 PM , 06/09/2017

  This is My view from the bottom of my heart after listening to today"s episode of Shreemadbhagavatha.
 • P N Deshpande,Bangalore

  8:25 PM , 06/09/2017

  S.Namaskargalu.katheya nirupanea attyant sunder. Manssige naatuwantha shaili. Ellar udhaarwagali tamminda.
 • Anilkumar B Rao,Bangalore

  8:23 PM , 06/09/2017

  ನಮ್ಮ ಪಾಲಿಗೆ ಪರಮ ಪೂಜ್ಯ ಆಚಾರ್ಯರೆ ಗೋಕರ್ಣ. ಆಚಾರ್ಯರ ಮುಖ ಕಮಲದಿಂದಲೆ ನಮಗೆ ಭಾಗವತ ಸಪ್ತಾಹ ನಮಗೆ ಇದೇ ಜನ್ಮದಲ್ಲಿ ಸಿಗಲಿ ಅಂತ ಆಚಾರ್ಯರಲ್ಲಿ ಮತ್ತು ಅವರ ಅಂತರ್ಯಾಮಿಯಲ್ಲಿ ನನ್ನ ಜೀವದ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತೇನೆ.
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:24 PM , 06/09/2017

  ಉಪನ್ಯಾಸ ಕೇಳಿ ಮನಸ್ಸಿಗೆ ಬಹಳ ಸಂತೋಷ ವಾಗಿದೆ. ಧನ್ಯವಾದಗಳು
 • Shantha.raghothamachar,Bangalore

  11:03 AM, 06/09/2017

  ನಮಸ್ಕಾರ ಗಳು. ವಿಶೇಷ ವಿಷಯ ಜ್ಞಾನ ವಾಯಿತು ನಮಸ್ಕಾರ ಗಳು
 • Sangeetha Prasanna,Bangalore

  10:09 AM, 06/09/2017

  ಹರೇ ಶ್ರೀನಿವಾಸ .ಭಾಗವತ ಕಥಾಮೃತಸಾರ ಪಾನ ಮಾಡಿಸಿದ ಗುರುಗಳ ಪಾದಾರವಿಂದಗಳಲ್ಲಿ ನಮ್ಮ ಅನಂತಾನಂತ ನಮಸ್ಕಾರಗಳು 🙏🙏
 • Ananda Teertha,Chitradurga

  6:57 AM , 06/09/2017

  ಒಂದು ಗಂಟೆಯ ಸಮಯ ಕಳೆದದ್ದೇ ತಿಳಿಯಲಿಲ್ಲ.
  
  ಇಂದಿನ ದಿನವೇ ಸುದಿನವು.