Upanyasa - VNU501

ಶ್ರೀಮದ್ ಭಾಗವತಮ್ — 9 — ಸಪ್ತಾಹದ ಪರಿಶುದ್ಧಕ್ರಮ

ಸಪ್ತಾಹ ಎಂದರೆ ಸುಮ್ಮನೆ ಆಚಾರ್ಯರೊಬ್ಬರನ್ನು ಕರೆಸಿ ಏಳು ದಿವಸ ಏಳು ಗಂಟೆಗಳ ಕಾಲ ಉಪನ್ಯಾಸ ಮಾಡಿಸುವದಲ್ಲ. ಅದಕ್ಕೊಂದು ಪರಿಶುದ್ಧವಾದ ವಿಧಿಯಿದೆ. ಮೋಕ್ಷಪ್ರದವಾದ ಮಹಾಸತ್ಕರ್ಮವದು. ವಿವಾಹ ಉಪನಯನಗಳಿಗೆ ಎಷ್ಟು ಆದರ ಶ್ರದ್ಧೆಗಳಿಂದ ಮುಹೂರ್ತ ನೋಡುತ್ತೇವೆಯೋ ಅದಕ್ಕಿಂತಲೂ ಮಿಗಿಲಾದ ಶ್ರದ್ಧೆಯಿಂದ ಮುಹೂರ್ತವನ್ನು ನೋಡಬೇಕು ಎಂದು ಸ್ವಯಂ ಸನಕಾದಿಗಳು ಹೇಳುತ್ತಾರೆ. ಹಾಗೆಯೇ ಯಾವ ಮಾಸಗಳಲ್ಲಿ ಸಪ್ತಾಹವನ್ನು ಮಾಡುವದರಿಂದ ಮೋಕ್ಷ ದೊರೆಯುತ್ತದೆಯೋ ಆ ಮಾಸಗಳನ್ನು ತಿಳಿಸಿ, ಸಪ್ತಾಹಕ್ಕೆ ಯಾರನ್ನು ಕರೆಯಬೇಕು, ಯಾವ ರೀತಿ ಕರೆಯಬೇಕು, ಎಲ್ಲಿ ಸಪ್ತಾಹ ಮಾಡಬೇಕು, ವೇದಿಕೆ ಹೇಗಿರಬೇಕು, ಮಂಟಪ ಹೇಗಿರಬೇಕು, ಭಾಗವತ ಹೇಳುವವರಲ್ಲಿ ಯಾವ ಲಕ್ಷಣಗಳಿರಬೇಕು, ಕೇಳುವವರ ನಿಯಮವೇನು, ಸಪ್ತಾಹವನ್ನು ಯಾರುಯಾರು ಕೇಳುವದರಿಂದ ಯಾವಯಾವ ಫಲವನ್ನು ಪಡೆಯುತ್ತಾರೆ, ಸಪ್ತಾಹದ ಅಂತ್ಯದಲ್ಲಿ ಏನೆಲ್ಲ ಸತ್ಕರ್ಮಗಳನ್ನು ಆಚರಿಸಬೇಕು, ಎನ್ನುವದನ್ನೂ ತಿಳಿಸುತ್ತಾರೆ. 

ಎಲ್ಲದಕ್ಕಿಂತ ಮುಖ್ಯವಾಗಿ ಹೇಳುವದಕ್ಕೂ, ಕೇಳುವದಕ್ಕೂ ಉಪವಾಸದಿಂದ ವಿಘ್ನ ಉಂಟಾಗುವದಾದರೆ ಭೋಜನವೇ ಶ್ರೇಷ್ಠ ಎಂಬ ಮಾತಿನ ಪ್ರತಿಪಾದನೆಯನ್ನು ಆ ವೇದಾಂತಪೀಠಾಧಿಪತಿಗಳಾದ ಶ್ರೀ ಸನಕಾದಿಯೋಗಿವರ್ಯರು ಮಾಡುತ್ತಾರೆ. ಆ ಮಾತುಗಳ ವಿವರಣೆ ಇಲ್ಲಿದೆ. 

Play Time: 01:00

Size: 11 MB


Download Upanyasa Share to facebook View Comments
10469 Views

Comments

(You can only view comments here. If you want to write a comment please download the app.)
 • Nalini Premkumar,Mysore

  2:45 PM , 29/04/2022

  ಭಕ್ತಿ ಪೂರ್ವಕ ಪ್ರಣಾಮಗಳು ಅಧ್ಭುತ ಗುರುಗಳೇ ಧನ್ಯವಾದಗಳು ಗುರುಗಳೇ 🙏🙏🙏
 • N.H. Kulkarni,Bangalore

  1:16 PM , 29/04/2022

  ಸೂಕ್ಷ್ಮ ವಿವೇಚನೆಯನ್ನು ಮಾಡಿ ಉತ್ತರಿಸಿದ ತಮಗೆ ಅನೇಕ ಅಭಿವಂದನೆಗಳು.
 • N.H. Kulkarni,Bangalore

  12:22 AM, 29/04/2022

  ಭಾಗವತ ಪ್ರವಚನ ಹೇಳುವವರಲ್ಲಿ ಇರಬೇಕಾದ ಗುಣಗಳನ್ನು ಹೇಳುವಾಗ "viraktaha ಅಂತ ಹೇಳಿ ಮತ್ತೆ nispruhaha ಅಂತ ಹೇಳಿದರೆ ಪುನರುಕ್ತಿ ಆಗಲಿಲ್ಲವೇ? 
  
  ದಯವಿಟ್ಟು ವಿಶದೀಕರಿಸಿ

  Vishnudasa Nagendracharya

  ಈ ವಿರಕ್ತಿ ಮತ್ತು ನಿಸ್ಪೃಹತೆ ಶಬ್ದಗಳಿಗೆ ಒಂದೇ ಅರ್ಥವಿದೆ, ನಿಜ. ರಾಗವಿಲ್ಲದಿರುವಿಕೆ, ಆಸೆಯಿಲ್ಲದಿರುವಿಕೆ ಎಂದು. ಆದರೆ ಒಂದಷ್ಟು ವ್ಯತ್ಯಾಸವೂ ಇದೆ. 
  
  ವಸ್ತು ದೊರೆಯಲು ಸಾಧ್ಯವಿದ್ದರೂ ಅದರ ಸಂಪರ್ಕಕ್ಕೆ ಒಳಗಾಗದವನು ವಿರಕ್ತ. ರಕ್ತ ಎಂದರೆ ಅಂಟಿಕೊಂಡವನು, ಆಸಕ್ತನಾದವನು. ವಿರಕ್ತ ಎಂದರೆ ಲೋಕದ ವಿಷಯಗಳಲ್ಲಿ ಆಸಕ್ತನಲ್ಲದವನು. 
  
  ನಿಸ್ಪೃಹ ಎಂದರೆ ಅದರ ಬಗ್ಗೆ ಆಸೆಯೇ ಇಲ್ಲದವನು.
  
  ಉದಾಹರಣೆಯ ಮುಖಾಂತರ ತಿಳಿಯುವದಾದರೆ
  
  ಅಂದರೆ ಏಕಾದಶಿಯ ದಿವಸ ತಿನ್ನಲು ಪದಾರ್ಥಗಳಿದ್ದರೂ ಸಹ ಅದನ್ನು ತಿನ್ನದಿರುವದು ವಿರಕ್ತಿ. ಆ ಪದಾರ್ಥಗಳನ್ನು ತಿನ್ನಬಾರದು ಎಂದು ಅಪೇಕ್ಷೆ ಇಲ್ಲ ಎಂದಿಲ್ಲ. ಇಂದು ತಿನ್ನುವದಿಲ್ಲ ಎಂಬ ನಿರ್ಧಾರ. ಇದು ವೈರಾಗ್ಯ. 
  
  ಈರುಳ್ಳಿ ಮುಂತಾದ ಪದಾರ್ಥಗಳನ್ನು ತಿನ್ನುವ ಅಪೇಕ್ಷೆಯೇ ಇಲ್ಲದವನು ನಿಸ್ಪೃಹ. 
  
  ವಿರಕ್ತಿಯಲ್ಲಿಯೂ ನಿಸ್ಪೃಹತೆಯಿದೆ, ನಿಸ್ಪೃಹತೆಯಲ್ಲಿಯೂ ವೈರಾಗ್ಯವಿದೆ. ಸತ್ಯ. ಆದರೆ ಸೂಕ್ಷ್ಮವಾದ ವ್ಯತ್ಯಾಸವಿದೆ. 
  
  
  
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:36 PM, 15/03/2022

  ಶ್ರೀ ಕೃಷ್ಣಾರ್ಪಣಮಸ್ತು 🙏🙏🙏
 • Sowmya,Bangalore

  8:12 PM , 04/02/2022

  🙏🙏🙏
 • Lakshmi,Pune

  11:23 AM, 16/01/2022

  Gurugalige anant koti namaskargalu
 • Saritha,MANGALORE

  8:14 AM , 13/11/2020

  Anantha Namaskara gurugalige  Bhagavatha Katha Shravanadinda nav dhanyaradevu Nimmantha gurugalu sikkiddu namma punya.
 • Mahadi Sethu Rao,Bengaluru

  3:39 PM , 10/06/2020

  HARE KRISHNA.
 • Mrs laxmi padaki,Pune

  7:16 PM , 10/04/2018

  👏👏👏👏👏
 • Varuni Bemmatti,Bangalore

  8:49 PM , 05/10/2017

  ಅರ್ಥ ಆಯಿತು ಆಚಾರ್ಯರೆ.ದಯವಿಟ್ಟು ಉದ್ಧಟತವೆಂದು ತಿಳಿಯಬಾರದು.ಅನಂತ ವಂದನೆಗಳು.
 • Varuni bemmatti,Bangalore

  4:23 PM , 05/10/2017

  Gurugale, Sri Vidyavaridhi Theerthara bagge heluvaga Sarvatantra svatantraru endu helabahude?

  Vishnudasa Nagendracharya

  ತಂತ್ರ ಎನ್ನುವ ಶಬ್ದಕ್ಕೆ ಶಾಸ್ತ್ರ ಎಂದರ್ಥ. ಸರ್ವತಂತ್ರ ಎಂದರೆ ಸರ್ವಶಾಸ್ತ್ರಗಳು. 
  
  ಯಾವ ಮಹಾಜ್ಞಾನಿಗಳು ಎಲ್ಲ ಶಾಸ್ತ್ರಗಳ ಮೂಲಗ್ರಂಥಗಳ ರಹಸ್ಯತತ್ವಗಳನ್ನು ತಿಳಿದು ಶಿಷ್ಯರಿಗೆ ಉಪದೇಶ ಮಾಡಬಲ್ಲರೋ ಅವರನ್ನು ಸರ್ವತಂತ್ರಸ್ವತಂತ್ರರು ಎನ್ನುತ್ತಾರೆ. 
  
  ಸರ್ವತಂತ್ರಸ್ವತಂತ್ರೋಸೌ ಎಂದು ಶ್ರೀ ಮಂತ್ರಾಲಯಪ್ರಭುಗಳನ್ನು ಶ್ರೀಮದಪ್ಪಣಾಚಾರ್ಯರು ಕರೆದಿದ್ದಾರೆ. ಶ್ರೀ ವಿಜಯೀಂದ್ರತೀರ್ಥರಾದಿಯಾದ ಮಹಾನುಭಾವರಿಗೆ ಈ ಅನೇಕ ಬಾರಿ ಈ ವಿಶೇಷಣ ಪ್ರಯೋಗಗೊಂಡಿದೆ. 
  
  ಅಂತಹ ಮಹತ್ತ್ವದ ಗುಣವನ್ನು ಶ್ರೀ ವಿದ್ಯಾವಾರಿಧಿತೀರ್ಥಗುರುಸಾರ್ವಭೌಮರಲ್ಲಿ ಕಂಡು ಶ್ರೀ ಗೌಡಗೆರೆ ವೆಂಕಟರಮಣಾಚಾರ್ಯರು (ಚಂದ್ರಿಕಾಖಂಡನವನ್ನು ತಕ್ಷಣದಲ್ಲಿ ಖಂಡಿಸಿ ಗ್ರಂಥ ಬರೆದ ಜ್ಞಾನಿಗಳು, ಜೀವಕರ್ತೃತ್ವದ ವಿಷಯವಾಗಿ ಅದ್ಭುತ ನಿರ್ಣಯಗಳನ್ನು ಗ್ರಂಥದಲ್ಲಿ ದಾಖಲಿಸಿದ ಕಳೆದ ಶತಮಾನದ ವಿದ್ವನ್ಮೂರ್ಧನ್ಯರು) ಅವರನ್ನು ಸರ್ವತಂತ್ರಸ್ವತಂತ್ರರು ಎಂದೇ ಬಣ್ಣಿಸುತ್ತಾರೆ. 
  
  
 • Kowstubha murali,Bangalore

  7:31 AM , 08/09/2017

  Namaskara Bhagavatha Sravana Madura sadbhakyhrege. Sri nagendracharya is giving the Bhagavatha Amrutha pana to all of us. To get the mahaphala all are requested to listen daily as told by achar in the Bhagavatha sravana process. A request to all. Kindly keep some amount as guru Kanike before start listening. Once some good amount is accumulated you can transfer to VISHWANANDINI ac. It is a suggestion from me. Namaskara. Murali bangalore
 • Sudhindra,Bangalore

  1:20 PM , 07/09/2017

  Our lives are becoming more meaningful and sacred with your upanyasas, Acharyare. 
  
  Our sincere sashtanga namaskaras to you.
 • Shantha.raghothamachar,Bangalore

  12:21 PM, 07/09/2017

  ನಮಸ್ಕಾರಗಳು. ಧನ್ಯವಾದಗಳು
 • Gururaj,MYSURU

  10:26 AM, 07/09/2017

  ಪೂಜ್ಯ ಆಚಾರ್ಯರೇ, ಸನಕಾದಿಗಳು ೩೦ ವರ್ಷಗಳ ಹಿಂದೆ ನಡೆದ ಘಟನೆಯನ್ನು ಹೇಳುತ್ತಿರುವುದು ಪದ್ಮಪುರಾಣದಲ್ಲಿ. ಆದರೆ ಪದ್ಮ ಪುರಾಣ ರಚನೆಯಾಗಿದ್ದು ಭಾಗವತಕ್ಕಿಂತಲೂ ಮುಂಚೆ.ಹಾಗಾದರೆ ಪಾದ್ಮದಲ್ಲಿ ಮೊದಲೇ ದಾಖಲಾದ ಕಥೆಯನ್ನು ಸನಕಾದಿಗಳು ಮತ್ತೆ ಹೇಳುತ್ತಿದ್ದಾರೆಯೇ? ದಯವಿಟ್ಟು ತಿಳಿಸಿ.

  Vishnudasa Nagendracharya

  ಮಹಾಭಾರತ ನಡೆಯುವದಕ್ಕಿಂತ ಸುಮಾರು 600 ವರ್ಷಗಳ ಮುಂಚೆಯೇ ಶ್ರೀ ವೇದವ್ಯಾಸದೇವರು ಮಹಾಭಾರತವನ್ನು ರಚಿಸಿದ್ದರು. 
  
  ಹಾಗೆ ಪುರಾಣಗಳಲ್ಲಿ ಮುಂದಾಗುವ ಘಟನೆಗಳನ್ನು ಮೊದಲೇ ದಾಖಲಿಸಿದ್ದಾರೆ. ಹೀಗಾಗಿ ಕಲಿಯುಗದ ಆರಂಭದಲ್ಲಿ ನಡೆದ ಘಟನೆಯನ್ನು ಪದ್ಮಪುರಾಣ ಮೊದಲೇ ತಿಳಿಸಿದೆ. 
 • P N Deshpande,Bangalore

  7:37 AM , 07/09/2017

  S.Namaskargalu.Ee maha prvachanwu Maha ganandind kudeedea keluwa naavea dhaynnaru. Anugrahavirali
 • SATISH S PUROHIT,BANGALUR

  5:33 AM , 07/09/2017

  ಆಚಾಯ೯ರಿಗೆ, 
  
  ಸಾ. ನಮಸ್ಕಾರಗಳು.