Upanyasa - VNU502

ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 4B

07/09/2017

ಶ್ರೀರಾಘವೇಂದ್ರೋ ಹರಿಪಾದಕಂಜ-
ನಿಷೇವಣಾಲ್ಲಬ್ಧಸಮಸ್ತಸಂಪತ್ । 
ದೇವಸ್ವಭಾವೋ ದಿವಿಜದ್ರುಮೋಯಂ
ಇಷ್ಟಪ್ರದೋ ಮೇ ಸತತಂ ಸ ಭೂಯಾತ್ ।। 

ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಅನಭೀಷ್ಟಪುಣ್ಯದ ಕುರಿತು ಹಿಂದಿನ ಉಪನ್ಯಾಸದಲ್ಲಿ ತಿಳಿದೆವು. ಶ್ರೀಗುರುಗಳು ಅದೆಷ್ಟು ಅದ್ಭುತವಾದ ಕ್ರಮದಲ್ಲಿ ಶ್ರೀಹರಿ ವಾಯು ದೇವತೆಗಳನ್ನು ಮೆಚ್ಚಿಸಿ ಅವರ ಅನುಗ್ರಹವನ್ನು ಪಡೆದಿದ್ದಾರೆ, ಎಂತ ದಿವ್ಯ ಸಾಧನೆಯನ್ನು ಮಾಡಿದ್ದಾರೆ ಎನ್ನುವದರ ಕುರಿತು ಇಲ್ಲಿ ತಿಳಿಯುತ್ತೇವೆ. 

Play Time: 41:24

Size: 7.57 MB


Download Upanyasa Share to facebook View Comments
6747 Views

Comments

(You can only view comments here. If you want to write a comment please download the app.)
 • Parimala Rao,Mysore

  9:00 PM , 05/10/2017

  Namaskara Gurugale,
  We all know that during Sri Raghavendra Tirthara poorvashrama days, him & family were very poor and had lot of hardships. Is this what Rayaru opted for or was bestowed by Lord Sri Hari to have poverty? I ask this because during his previous birth as Sri Vyasarajaru he had collected so much Punya, (to try and describe his  work in one line by me is foolishness) in spite of this, why these past Karmas did not give him comfortable life as Sri Venkatanatha? He would have given up lavish lifestyle if he had one just like Sri Purandara Dasaru, no doubt about it. You have explained that every condition or state you are experiencing currently is due to some karma in the past. Why did Sri Rayaru experience it? Of course it did not affect him in anyway but the poverty was real and existed. Please let me know. Hare Srinivasa. Namaskara.
 • Aniridh R,Bangalore

  11:55 AM, 05/10/2017

  Mundina upanyasakkagi kataradinda nirekshesuttedev🙏🙏🙏
 • Jayashree Karunakar,Bangalore

  9:51 AM , 12/09/2017

  ಗುರುಗಳೆ ಸ್ವರೂಪದಲ್ಲಿ ನಾವು ಎನಾಗಿರುತ್ತೇವೆಂದು ಗೊತ್ತ್ತಾಗುವುದಿಲ್ಲವಲ್ಲ, ನೀವೇ ತಿಳಿಸಿದಂತೆ ಅದು ಭಗವದಿಚ್ಚೆಯಲ್ಲವೇ ?
  
  ಹಾಗಾದರೆ ತಾವು ಹರಿಶ್ಚಂದ್ರ ಚಕ್ರವತಿ೯ಯು ಸೂಯ೯ವಂಶದಲ್ಲಿ ಹುಟ್ಟಿ ಬಂದು ಸಮಗ್ರ ಭೂಮಿಯ ಅಧಿಪತ್ಯಯ ಪಡೆಯಲು ಅದಕ್ಕಾಗಿ ಸಾಧನೆ ಮಾಡಲೇಬೇಕು ಎಂದಿರಿ, ಆದರೆ ಅವರಿಗೆ ತಮ್ಮ ಸ್ವರೂಪದ ಬಗ್ಗೆ ಅರಿವೇ ಇಲ್ಲದಿರುವಾಗ, ತಾವು ಯಾವುದಕ್ಕೆ ಸಾಧನೆ ಮಾಡಬೇಕು ಎನ್ನುವುದಾದರೂ ಹೇಗೆ ತಿಳಿಯುತ್ತದೆ

  Vishnudasa Nagendracharya

  ಸಾಧನೆಯ ಹಂತದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಿದ್ದಂತೆ, ನಾವು ಯಾರು, ನಮ್ಮ ಸ್ವರೂಪವೇನು, ನಾನು ಮಾಡಬೇಕಾದ ಸಾಧನೆಯೇನು ಇತ್ಯಾದಿ ಎಲ್ಲವೂ ಗುರ್ವನುಗ್ರಹದಿಂದ ತಿಳಿಯುತ್ತವೆ. ಕೆಲವು ಬಾರಿ ಸಾಕ್ಷಾತ್ತಾಗಿ ಗುರುಗಳೇ ತಿಳಿಸುತ್ತಾರೆ. 
  
  ಹರಿಶ್ಚಂದ್ರಮಹಾರಾಜರಾಗಿ ಹುಟ್ಟಿಬರಲು ಅವರು ಸಾವಿರಾರು ಜನ್ಮಗಳ ಸಾಧನೆಯನ್ನು ಮಾಡಿರುತ್ತಾನೆ. ಸುಮ್ಮನೇ ಯಾದೃಚ್ಛಿಕವಾಗಿ (co-incidence) ಆಗಿ ಹುಟ್ಟಿ ಬಂದಿರುವದಿಲ್ಲ. ಅಥವಾ ಸೃಷ್ಟಿಗೆ ಬರುತ್ತಲೇ ಹರಿಶ್ಚಂದ್ರಮಹಾರಾಜರಾಗಿ ಹುಟ್ಟಿ ಬರಲಿಲ್ಲ. ಅನೇಕ ಜನ್ಮಗಳ ಸಾಧನೆಯನ್ನು ಮಾಡಿ ಹರಿಶ್ಚಂದ್ರರಾಗಿ ಹುಟ್ಟಿಬಂದು, ಚಕ್ರವರ್ತಿಗಳಾಗಿ ಮಹಾಸಾಧನೆಯನ್ನು ಮಾಡಿದರು. 
  
  ಶ್ರೀಮಧ್ವವಿಜಯದಲ್ಲಿ VNU226 ನೇ (ಶ್ರೀ ವಿಷ್ಣುತೀರ್ಥರ ಜನನ) ಪ್ರವಚನವನ್ನು ಕೇಳಿ. ಒಂದು ಸಾಧಕ ಜನ್ಮವನ್ನು ಪಡೆಯಲು ಜೀವನಿಂದ ಅದೆಂತಹ ಸಾಧನೆಯನ್ನು ಶ್ರೀಹರಿ ಮಾಡಿಸುತ್ತಾನೆ ಎನ್ನುವದರ ಕುರಿತ ವಿವರಣೆ ಅಲ್ಲಿದೆ. 
 • Jayashree Karunakar,Bangalore

  4:20 PM , 11/09/2017

  ಗುರುಗಳೆ ಇಲ್ಲಿ , ತಾವು ಕಮ೯ಜ ದೇವತೆಗಳು ತಮ್ಮ ಕಮ೯ದಿಂದಲೇ ದೇವತಸಮಾನವಾದ ಸ್ಥಾನ ಪಡೆದವರು, ಮತ್ತು ತಮ್ಮ ಸ್ವಭಾವದಿಂದಲೇ ದೇವತೆಗಳಾದವರು ಎಂದಿರಿ. ಅಂದರೇ ದೇವತೆಗಳು ಅದಕ್ಕೆ ಬೇಕಾದಂತಹ ಸಾಧನೆಯನ್ನು ಮಾಡದೆಯೇ, ಆ ಸ್ಥಾನವನ್ನು ಪಡೆದುಕೊಂಡದ್ದೆ ?

  Vishnudasa Nagendracharya

  ಜೀವರಲ್ಲಿ ಐದು ವಿಧ - ದೇವತೆಗಳು, ಋಷಿಗಳು, ಪಿತೃಗಳು, ಚಕ್ರವರ್ತಿಗಳು ಮತ್ತು ಮನುಷ್ಯರು ಎಂದು. 
  
  ಈ ಐದೂ ತರಹದ ಜೀವರಿಗೂ ಅದು ಅವರವರ ಸ್ವಭಾವ. ಅದನ್ನು ಪಡೆಯಲು ಅವರು ಏನೂ ಮಾಡಬೇಕಾಗಿಲ್ಲ. 
  
  ಆದರೆ ದೇವತೆಗಳು ತಮ್ಮ ಪದವಿಯನ್ನು ಪಡೆಯಲು ಸಾಧನೆ ಮಾಡಬೇಕು. ಅಂದರೆ ಬ್ರಹ್ಮ-ಇಂದ್ರ-ಕುಬೇರ ಮುಂತಾದ ಎಲ್ಲ ದೇವತೆಗಳೂ ಆಯಾಯ ಪದವಿಯನ್ನು ಪಡೆಯಲು ಸಾಧನೆ ಮಾಡಲೇಬೇಕು. 
  
  ಹಾಗೆ ಎಲ್ಲ ಜೀವರಿಗೂ ಅವರದೇ ಆದ ಸ್ಥಾನವಿರುತ್ತದೆ, ಅದನ್ನು ಪಡೆಯಲು ಅವರು ಸಾಧನೆ ಮಾಡಲೇಬೇಕು. 
  
  ಅಂದರೆ ಹರಿಶ್ಚಂದ್ರ ಎನ್ನುವ ಜೀವ ಸ್ವರೂಪದಲ್ಲಿಯೂ ಚಕ್ರವರ್ತಿಯೇ. ಆದರೆ ಸೂರ್ಯವಂಶದಲ್ಲಿ ಹುಟ್ಟಿ ಸಮಗ್ರ ಭೂಮಿಯ ಆಧಿಪತ್ಯವನ್ನು ಪಡೆದು ಚಕ್ರವರ್ತಿಯಾಗಲು ಆ ಜೀವ ಸಾಧನೆಯನ್ನು ಮಾಡಲೇಬೇಕು. ಬ್ರಹ್ಮದೇವರು ಸ್ವರೂಪದಲ್ಲಿಯೂ ಬ್ರಹ್ಮದೇವರೇ. ಇಂದ್ರದೇವರು ಸ್ವರೂಪದಲ್ಲಿಯೂ ಇಂದ್ರದೇವರೇ. ಆದರೆ ಆ ಸಂಸಾರದಲ್ಲಿ ಆ ಪದವಿಯನ್ನು ಪಡೆಯಲು ಸಾಧನೆ ಮಾಡಬೇಕು. 
  
  ಹಾಗೆ ಪ್ರಹ್ಲಾದರಾಜರು ಸ್ವರೂಪದಲ್ಲಿಯೂ ಕರ್ಮಜದೇವತೆಗಳೇ. ಆದರೆ ಅವರು ಹುಟ್ಟಿಬಂದು ಸಾಧನೆಯನ್ನು ಮಾಡಿ ಆ ಪದವಿಯನ್ನು ಪಡೆಯುತ್ತಾರೆ. 
  
  ಪ್ರಯತ್ನವಿಲ್ಲದೇ ಯಾವುದೂ ದೊರೆಯುವದಿಲ್ಲ. ಎಲ್ಲದಕ್ಕೂ ಪ್ರಯತ್ನ, ಸಾಧನೆಗಳು ಅತ್ಯಾವಶ್ಯಕ. 
  
  ಜೀವನ ಪ್ರಯತ್ನ ಸಾಧನೆ ಪ್ರಯತ್ನವಿಲ್ಲದೇ ದೊರೆಯುವದು ಅವನ ಸ್ವರೂಪ ಮತ್ತು ಆವರಣಗಳು ಮಾತ್ರ. ಆ ನಂತರದ ಎಲ್ಲದಕ್ಕೂ ಅವನು ಪ್ರಯತ್ನ ಪಡಲೇಬೇಕು. 
 • P N Deshpande,Bangalore

  1:37 PM , 08/09/2017

  SriRaghvendrara wykkittwa asaadharnawadaddu tamma nirupaneau adakke takkadaagiruwadu
 • SRINIDHI,Bengaluru

  9:39 AM , 08/09/2017

  ಇಷ್ಟು ವರ್ಷ ಗುರುಸಾರ್ವಭೌಮರ ವ್ಯಕ್ತಿತ್ವದ ಪರಿಚಯವೇ ಇಲ್ಲದೆ ರಾಯರ ಸ್ತೋತ್ರ ಬರುತ್ತದೆ ಎಂದು ಹೇಳಿಕೊಳ್ಳುತ್ಇದ್ದೆ.. ಏನು ತಿಳಿದಿಲ್ಲ ನನಗೆ ಎಂದು ಅರಿವಾಯಿತು. ಅವರ ಬಗ್ಗೆ ಅವರೇ ಅನುಗ್ರಹಮಾಡಿ ತಿಳಿಸಬೇಕು...