Upanyasa - VNU508

ಶ್ರೀಮದ್ ಭಾಗವತಮ್ — 15 — ಜನ್ಮಾದಿ ಎಂಬ ಶಬ್ದದ ಅರ್ಥ

ಜನ್ಮಾದ್ಯಸ್ಯ ಎಂಬ ಶಬ್ದಗಳ ಅರ್ಥ ಮತ್ತು ನಿತ್ಯಜೀವನದಲ್ಲಿ ಅದರ ಅನುಸಂಧಾನ ಹೇಗಿರಬೇಕು ಎನ್ನುವದನ್ನು ವಿವರಿಸುವ ಉಪನ್ಯಾಸ. 

ಶ್ರೀ ವೇದವ್ಯಾಸದೇವರ ಮಂಗಲಾಚರಣ ಪದ್ಯಕ್ಕೆ ಅರ್ಥವನ್ನು ಹೇಳುತ್ತ ಶ್ರೀಮದಾಚಾರ್ಯರು ಮೊದಲಿಗೆ “ತಂ ಪರಂ ಧೀಮಹಿ” ಎಂದು ಅನ್ವಯವನ್ನು ತೋರಿಸಿದ್ದಾರೆ. ಕ್ಲಿಷ್ಟವಿಷಯಗಳನ್ನು ಮಾತ್ರ ನಿರ್ಣಯ ಮಾಡಲು ಹೊರಟಿರುವ ಆಚಾರ್ಯರು ಸರಳವಾದ ಈ ವಿಷಯವನ್ನು ತಿಳಿಸಲು ಕಾರಣವೇನು ಎಂಬ ಪ್ರಶ್ನೆಗೆ ಶ್ರೀಮಟ್ಟೀಕಾಕಾೃತ್ಪಾದರು ನೀಡಿದ ಉತ್ತರದ ಅನುಸಂಧಾನ ಇಲ್ಲಿದೆ. 

ಜನ್ಮಾದ್ಯಸ್ಯ ಯತಃ ಎನ್ನುವಲ್ಲಿ ಇರುವ ಜನ್ಮಾದಿ ಎಂಬ ಶಬ್ದದ ಕುರಿತು ದರ್ಶನಪ್ರಪಂಚದಲ್ಲಿ ವಿಸ್ತೃತವಾದ ಚರ್ಚೆಯಿದೆ. ಜನ್ಮಾದಿ ಎಂದರೆ ಸೃಷ್ಟಿ ಸ್ಥಿತಿ ಲಯಗಳು ಎಂದು ಅನೇಕರ ವಾದ. ಆದರೆ ಶ್ರೀಮದಾಚಾರ್ಯರು ಜನ್ಮಾದಿ ಎಂದರೆ ಕೇವಲ ಮೂರಲ್ಲ, ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಅಜ್ಞಾನ, ಜ್ಞಾನ, ಬಂಧ, ಮೋಕ್ಷ ಎಂಬ ಎಂಟು ಪದಾರ್ಥಗಳು ಎಂದು ಅರ್ಥ ಮಾಡುತ್ತಾರೆ. ಈ ಎಂಟನ್ನು ಒಪ್ಪಬೇಕಾದ ಅನಿವಾರ್ಯತೆಯೇನು ಎನ್ನುವದಕ್ಕೆ ಶ್ರೀಮಚ್ಚಂದ್ರಿಕಾಚಾರ್ಯರು ತಾತ್ಪರ್ಯಚಂದ್ರಿಕಾಗ್ರಂಥದಲ್ಲಿ ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ಆ ಉತ್ತರಗಳ ಸಂಗ್ರಹ ಇಲ್ಲಿದೆ. 

ಮೊದಲ ಶ್ಲೋಕದ ಕುರಿತ ಮೂರನೆಯ ಉಪನ್ಯಾಸ. 

ಜನ್ಮಾದ್ಯಸ್ಯ ಯತೋsನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।।

Play Time: 48:31

Size: 6.50 MB


Download Upanyasa Share to facebook View Comments
8470 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:13 AM , 21/03/2022

  ಶ್ರೀ ಕೃಷ್ಣಾರ್ಪಣಮಸ್ತು 
  🙏🙏🙏
 • Sowmya,Bangalore

  8:18 PM , 11/02/2022

  🙏🙏🙏
 • Saritha,MANGALORE

  4:17 PM , 16/11/2020

  Gurugalige sashtanga namaskaragalu. Shastravannu nimmantha gurugalinda kelabeku illavadare artha agalla nav dhanyaru.
 • Raman.R,Tirukkoyilur

  7:26 PM , 13/07/2020

  Gurugale, nimma mele iruva bhagavanthane kaarunya, nimma bhava, saasthra gnana, vaak sakthi, upanyasa shylee, sangeetha gnana, guru bakthi, maththu sishya vaathsalya mudalaadha nimma ashta karthruthvadindha, bhagavanthana ashta karthrutva bagge neevu needidha upanyasakke saashtaaga namakaragalu
 • Mahadi Sethu Rao,Bengaluru

  2:13 AM , 11/06/2020

  HARE KRISHNA.
 • Roopa,Bengaluru

  5:10 PM , 17/12/2018

  ಅರ್ಥ ಆಯಿತು. ಧನ್ಯವಾದಗಳು ಗುರುಗಳೇ 🙏
 • Vishwanandini User,Bengaluru

  8:17 AM , 15/12/2018

  ಶ್ರೀ ಗುರುಭ್ಯೋ ನಮಃ
  ಗುರುಗಳೇ, ಲಕ್ಷಣಗಳಿಗೂ ಗುಣಗಳಿಗೂ ಏನು ವ್ಯತ್ಯಾಸ ? ಭಾಗವತದ ಮೊದಲನೇ ಶ್ಲೋಕದಲ್ಲಿ ಭಗವಂತನ ಅಷ್ಟಕ ಕರ್ತೃತ್ವದ ಬಗ್ಗೆ ಹೇಳುವಾಗ ಅವುಗಳನ್ನು ಲಕ್ಷಣಗಳು ಅಂತ ಹೇಳಿದಿರಿ. ಆದರೆ ಇವೆಲ್ಲ ಭಗವಂತನ ಗುಣಗಳೇ ಅಲ್ಲವೇ? 
  ಯಕೆ ಇಲ್ಲಿ ಕೇವಲ 8ನ್ನು ಮಾತ್ರ ಹೇಳಿದ್ದಾರೆ?

  Vishnudasa Nagendracharya

  ಗುಣ ಎಂದರೆ ಒಂದು ವಸ್ತುವಿನಲ್ಲಿರುವ ಧರ್ಮ. (Property) ಲಕ್ಷಣ ಎನ್ನುವದು ಆ ವಸ್ತುವಿನಲ್ಲಿ ಮಾತ್ರ ಇರುವ ಗುಣ. ಅಂದರೆ ಗುಣವೇ ಲಕ್ಷಣವಾಗುವದು. ಎಲ್ಲ ಲಕ್ಷಣಗಳೂ ಗುಣಗಳೇ. 
  
  ಸೃಷ್ಟಿಕರ್ತೃತ್ವ ಎಂದರೆ ಸೃಷ್ಟಿ ಮಾಡುವ ಗುಣ. ಈ ಗುಣ ಜಗತ್ತಿನ ಎಲ್ಲ ತಂದೆಯರಲ್ಲಿಯೂ ಇದೆ. ಲೋಕಗಳ ಸೃಷ್ಟಿಕರ್ತೃತ್ವ ಎನ್ನುವ ಗುಣ ಬ್ರಹ್ಮದೇವರಲ್ಲಿ ಮಾತ್ರ. ಹೀಗಾಗಿ ಲೋಕಕರ್ತೃತ್ವ ಎನ್ನುವದು ಬ್ರಹ್ಮದೇವರ ಗುಣ. ಸಕಲ ಪದಾರ್ಥಗಳನ್ನು ಸೃಷ್ಟಿ ಮಾಡುವ ಗುಣ ಪರಮಾತ್ಮನಲ್ಲಿ ಮಾತ್ರ ಇದೆ. ಜಗತ್ ಎನ್ನುವ ಶಬ್ದದಿಂದ ಸಕಲ ಚರಾಚರ ವಸ್ತುಗಳನ್ನು ತೆಗೆದುಕೊಂಡಾಗ ಆ ಚರಾಚರವಸ್ತುಗಳನ್ನು ಸೃಷ್ಟಿ ಮಾಡುವ ಗುಣ ಪರಮಾತ್ಮನಲ್ಲಿ ಮಾತ್ರ ಇದೆಯಾದ್ದರಿಂದ ಆ ಜಗತ್-ಕರ್ತೃತ್ವ ಎನ್ನುವದು ಶ್ರೀಹರಿಯ ಲಕ್ಷಣ. 
  
  ಮತ್ತೂ ಒಂದು ಸುಲಭದ ಉದಾಹರಣೆ ನೀಡುತ್ತೇನೆ. 
  
  ಪತಿತ್ವ, ಗಂಡನಾಗಿರುವಿಕೆ ಎನ್ನುವದು ಒಂದು ಗುಣ. ಜಗತ್ತಿನ ಎಲ್ಲ ಗಂಡಂದರಿಲ್ಲಿಯೂ ಇದೆ. ಪಾರ್ವತೀಪತಿತ್ವ ಎನ್ನುವ ಗುಣ ರುದ್ರದೇವರಲ್ಲಿ ಮಾತ್ರ ಇದೆ. ಅದು ಲಕ್ಷಣವಾಯಿತು. ಹಾಗೆಯೇ ಸರಸ್ವತೀಪತಿತ್ವ ಎನ್ನುವದು ಕೇವಲ ಬ್ರಹ್ಮದೇವರ ಲಕ್ಷಣ. ಲಕ್ಷ್ಮೀಪತಿತ್ವ ಎನ್ನುವದು ಕೇವಲ ಶ್ರೀಹರಿಯ ಲಕ್ಷಣ. 
 • Mrs laxmi padaki,Pune

  11:29 AM, 24/04/2018

  👏👏👏👏👏
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:08 PM , 05/01/2018

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು😊🙏
  
  ದಯಮಾಡಿ
  ಭಾವರೂಪದ ಅಜ್ಞಾನ
  ಅಜ್ಞಾನ
  ವಿಪರೀತ ಜ್ಞಾನ
  ಜ್ಞಾನದ ಅಭಾವ
  ಇವೆಲ್ಲದರ ನಡುವೆ ಇರುವ ವ್ಯತ್ಯಾಸವನ್ನು ತಿಳಿಸುವಿರಾ?🙏😊

  Vishnudasa Nagendracharya

  ಇವೆಲ್ಲವನ್ನೂ ಪಾಠದ ರೂಪದಲ್ಲಿ ಹೇಳಬೇಕಾಗುತ್ತದೆ. 
  
  ಮುಂದೊಂದು ದಿವಸ ಇಂತಹ ವಿಷಯಗಳನ್ನೂ ಕೈಗೆತ್ತಿಕೊಳ್ಳುತ್ತೇನೆ. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:27 AM , 02/10/2017

  ನೀರಿನ ಸೃಷ್ಟಿ ನೀರಿನ ಸ್ವಭಾವದ ಜೊತೆ ಸೃಷ್ಟಿಯಾಗಬೇಕಲ್ಲವೆ ಗುರುಗಳೆ🙏 ಈ ಬ್ರಹ್ಮಾಂಡದ ಸ್ವಭಾವ ಎನ್ನುವ ವಸ್ತು ಎಲ್ಲಿ ಇರುತ್ತದೆ ?

  Vishnudasa Nagendracharya

  ಅತ್ಯುತ್ತಮವಾದ ಪ್ರಶ್ನೆ. 
  
  ಸತ್ವಗುಣದಿಂದ ಪಂಚಭೂತಗಳವರೆಗಿನ ತತ್ವಗಳು ಪ್ರಳಯಕಾಲದಲ್ಲಿಯೂ ಸೂಕ್ಷ್ಮರೂಪದಲ್ಲಿ ಇದ್ದೇ ಇರುತ್ತವೆ. ಸೃಷ್ಟಿಕಾಲದಲ್ಲಿ ಅವನ್ನು ಮತ್ತೆ ಸ್ಥೂಲಪದಾರ್ಥಗಳನ್ನಾಗಿ (ಸ್ಥೂಲವಾದರೂ ನಮ್ಮ ಕಣ್ಣಿಗೆ ಅವು ಸೂಕ್ಷ್ಮವೇ) ಭಗವಂತ ಸೃಷ್ಟಿಸುತ್ತಾನೆ. ಹೀಗಾಗಿ ಅವುಗಳ ಸ್ವಭಾವ ನಿತ್ಯವಾಯಿತು. 
  
  ಇನ್ನು ಬ್ರಹ್ಮಾಂಡ ಮತ್ತು ಅದರೊಳಗಿನ ಪದಾರ್ಥಗಳು ಪ್ರತೀಸೃಷ್ಟಿಯಲ್ಲಿ ಹೊಸದಾಗಿ ಸೃಷ್ಟಿಯಾಗುತ್ತವೆ. ಆದರೆ "ಧಾತಾ ಯಥಾ ಪೂರ್ವಮಕಲ್ಪಯತ್" ಅಂದರೆ ಹಿಂದಿನ ಸೃಷ್ಟಿಯಲ್ಲಿ ಹೇಗಿದ್ದವೋ ಹಾಗೆಯೇ ಈಗಲೂ ಸೃಷ್ಟಿಯಾಗುತ್ತದೆ. ಅಂದರೆ ಈ ಪದಾರ್ಥ ಹೀಗೇ ಇರಬೇಕು ಎನ್ನುವದು ಪೂರ್ವನಿರ್ಧಾರಿತ. ಆ ಸ್ವಭಾವದೊಂದಿಗೇ ಅದನ್ನು ಭಗವಂತ ಸೃಷ್ಟಿ ಮಾಡುತ್ತಾನೆ. 
  
  ಅನಾದ್ಯನಂತಕಾಲದಲ್ಲಿಯೂ ಬ್ರಹ್ಮಾಂಡವಾಗಲೀ ಘಟಪಟಗಳಾಗಲೀ ಒಂದೇ ರೀತಿಯಾಗಿರುತ್ತದೆ. ಒಂದೇ ಅಲ್ಲ, ಒಂದೇ ರೀತಿ. ಆ ಒಂದೇ ರೀತಿಯಾಗಿರುವಿಕೆ ಮುಂತಾದ ಅದರ ಗುಣಗಳೇ ಅದರ ಸ್ವಭಾವ. ಅದನ್ನು ಭಗವಂತ ನಿಯಮಿಸುತ್ತಾನೆ. ಅಂದರೆ ಅನಾದ್ಯನಂತಕಾಲದಲ್ಲಿಯೂ ಹಾಗೆಯೇ ಇರುವಂತೆ ನೋಡಿಕೊಳ್ಳುತ್ತಾನೆ. 
 • P.R.SUBBA RAO,BANGALORE

  10:46 PM, 28/09/2017

  ಶ್ರೀ ಗುರುಭ್ಯೋನಮಃ
  ಸ್ಥಿತಿ ಮತ್ತು ನಿಯಮನ ಎರಡೂ ಒಂದೇ ಆಗಿ ತೋರುತ್ತಿದೆ. ದಯವಿಟ್ಟು ವ್ಯತ್ಯಾಸ ತಿಳಿಸಿ ಕೊಡುತ್ತೀರಾ?
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ

  Vishnudasa Nagendracharya

  ಶ್ರೀ ಮಂತ್ರಾಲಯಪ್ರಭುಗಳು ಸುಲಭವಾಗಿ ಅರ್ಥ ಮಾಡಿಸಿದ್ದಾರೆ. 
  
  ಸೃಷ್ಟಿಯಾದ ಪದಾರ್ಥಗಳನ್ನು ನಿಯಮಿಸುವದು ಸ್ಥಿತಿ. 
  
  ಸೃಷ್ಟಿಯಾಗದ ಪದಾರ್ಥಗಳನ್ನು ನಿಯಮಿಸುವದು ನಿಯಮನ. 
  
  ಜೀವರ ದೇಹ ಸೃಷ್ಟಿಯಾಗುತ್ತದೆ. ಜೀವರು ಸೃಷ್ಟಿಯಾಗುವದಿಲ್ಲ. ದೇಹವನ್ನು ನಿಯಮಿಸುವದು ಸ್ಥಿತಿಪ್ರದತ್ವ. ಜೀವನ ಸ್ವಭಾವವನ್ನು ನಿಯಮಿಸುವದು ನಿಯಮನಪ್ರದತ್ವ. 
  
  ನೀರನ್ನು ದೇವರು ಸೃಷ್ಟಿ ಮಾಡಿ ಸ್ಥಿತಿಯನ್ನು ನೀಡುತ್ತಾನೆ. ಆ ನೀರಿನ ಸ್ವಭಾವವನ್ನು ನಿಯಮಿಸುತ್ತಾನೆ. 
  
  ಪ್ರಕೃತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿ ಸ್ಥಿತಿ ನೀಡುತ್ತಾನೆ. ಆ ಬ್ರಹ್ಮಾಂಡದ ಸ್ವಭಾವವನ್ನು ದೇವರು ನಿಯಮಿಸುತ್ತಾನೆ. 
  
 • H. Suvarna kulkarni,Bangalore

  12:10 PM, 16/09/2017

  ಈ ಭಾಗವನ್ನು ಅರಿತುಕೊಳ್ಳಲು ಭಗವಂತ ಜ್ಞಾನ ಭಕ್ತಿ ವೈರಾಗ್ಯ ಗಳನ್ನು ಅನುಗ್ರಹಿಸಬೇಕು ಗುರುಗಳಿಗೆ ಪ್ರಣಾಮಗಳು
 • Lakshmeesh Shanbhag,Kumta

  7:39 PM , 13/09/2017

  ಸ್ಥಿತಿ ಮತ್ತು ನಿಯಮನ ಎರಡು ಸಮನಾರ್ಥಕ ಶಬ್ದವಲ್ಲವೆ?
  ಭಗವಂತ ಸ್ಥಿತಿ ಮಾಡುತ್ತಿದ್ದಾನೆ ಮತ್ತು ಭಗವಂತ ನಿಯಮನ ಮಾಡುತ್ತಿದ್ದಾನೆ. ಈ ಎರಡು ವಾಕ್ಯಗಳ ವ್ಯತ್ಯಾಸ ತಿಳಿಸುವಿರಾ?
 • Shridhar Patil,Bangalore

  6:14 PM , 13/09/2017

  🙏🏻ಶ್ರೀಮದ್ಭಾಗವತದ ಜ್ಞಾನಾಮೃತಧಾರೆ ಹೀಗೇ ನಿರಂತರ ಹರಿದು ನಮ್ಮ ಅಜ್ಞಾನ, ಮಿಥ್ಯಾಜ್ಞಾನ ಮತ್ತು ವಿಪರೀತಜ್ಞಾನ ಎಲ್ಲವೂ ಕೊಚ್ಚಿ ಹೋಗಿ ನಿರ್ಮಲವಾದ ಮತ್ತು ನಿಶ್ಚಲವಾದ ಭಗವದ್ಭಕ್ತಿ, ಭಗವಜ್ಞಾನ ದೊರಕಲಿ ಎಂದು ಶ್ರೀ ಹರಿವಾಯುಗುರುಗಳಲ್ಲಿ ಪ್ರಾರ್ಥಿಸುತ್ತೇನೆ. ಇದು ಕೇವಲ ಪ್ರವಚನವಲ್ಲ ಶ್ರೀಮದ್ಭಾಗವತದ ಪಾಠ.
 • Gururaj,MYSURU

  12:48 PM, 13/09/2017

  Pujya Acharyare, taavu halavu bhaari stree shudraru bhagavatavannu samagra adhyayana maada bahudu endu heliddiri. Haagadare Sutra bhashyadalli stree shudraru pancharatra muntaada tantra galannu ಏಕದೇಶೇ ಪರೋಕ್ತೇ ತು ನ ತು ಗ್ರಂಥ ಪುರಸ್ಸರೇ endu helida taatparyavenu? Dayavittu tilisi.
 • Niranjan Kamath,Koteshwar

  11:07 AM, 13/09/2017

  [13/09, 11:01 AM] Ninjaa...Niranjan Kamath: Varnidalasadhya nimma pravachana....Gurugale nimage Satang sharanu.
  [13/09, 11:06 AM] Ninjaa...Niranjan Kamath: Shri Chandrikacharyara Padaravindagalige Anant pranamagalu. Enondu adhutha jnanadheeshvararu. 🙏🙏🙏🙏🙏🙏🙏🙏
 • Shantha.raghothamachar,Bangalore

  10:46 AM, 13/09/2017

  ಸಮಸ್ಕಾರಗಳು. ಅಷ್ಟಕರತೃತ್ವದ ವಿವರಣಿ ಮನಮುಟ್ಟುವಂತೆ ಹೇಳಿ ಉಫಕರಿಸಿದ್ದೀರಿ ನಮೋನಮಃ.
 • P N Deshpande,Bangalore

  10:29 AM, 13/09/2017

  S.Namaskargalu.Astha kartattwada nirupanea adaralli Sri.Chandrikachryrarinda tilsida upayagalu atee Shrestha Tama wadaddu. Manssige heeduwa vishaygalu. Tumba Sundar
 • K vasudevarao,Hindupur

  8:08 AM , 13/09/2017

  Aacharyare,nimma upanyasada vykhari atyanta adbhuta.upanyasa keltaiddare hege samaya kaliyatto gottagtailla.innu kelabeku emba tavaka huttutaide.Mundina upanyasakkagi kaaytaiddeni.
 • mudigal sreenath,bangalore

  8:04 AM , 13/09/2017

  haresreenivasa samagra vyakhyanadinda namage gnavannu prasara maduthiruva nimage vandanegalu