Upanyasa - VNU509

ಶ್ರೀಮದ್ ಭಾಗವತಮ್ — 16 — ಮಹಾಲಕ್ಷ್ಮಿಗೂ ಜನ್ಮಾದಿಪ್ರದ

ಜನ್ಮಮರಣಗಳಿಲ್ಲದ, ಬಂಧ, ಅಜ್ಞಾನಗಳಿಲ್ಲದ ನಿತ್ಯಮುಕ್ತರಾದ ಮಹಾಲಕ್ಷ್ಮಿಗೆ ಯಾವಕ್ರಮದಲ್ಲಿ ಭಗವಂತ ಜನ್ಮ-ಸ್ಥಿತಿ-ಲಯ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳನ್ನು ನೀಡುತ್ತಾನೆ ಎನ್ನುವ ವಿಷಯವನ್ನು ನಾವಿಲ್ಲಿ ಕೇಳುತ್ತೇವೆ. 

ಆಚಾರ್ಯರು ತಮ್ಮ ಮಂಗಳಪದ್ಯದಲ್ಲಿ, ಹಾಗೂ ಶ್ರೀ ವೇದವ್ಯಾಸದೇವರು ತಂತ್ರಭಾಗವತದಲ್ಲಿ ಲಕ್ಷ್ಮಾದಿ ಸಮಸ್ತಚೇತನರಿಗೂ ಜನ್ಮಾದಿಗಳನ್ನು ಭಗವಂತ ನೀಡುತ್ತಾನೆ ಎಂದು ತಿಳಿಸುತ್ತಾರೆ. ಲಕ್ಷ್ಮೀದೇವಿಗೆ ಜನ್ಮ-ಮರಣಗಳಿಲ್ಲ. ಬಂಧವಿಲ್ಲ, ಅಜ್ಞಾನವಿಲ್ಲ. ಆದರೆ ಲಕ್ಷ್ಮೀದೇವಿಯರಿಗೂ ವಿಶೇಷವಾದ ರೀತಿಯಲ್ಲಿ ಜನ್ಮಾದಿಗಳುಂಟು ಎಂದು ಬ್ರಹ್ಮಸೂತ್ರಗಳು ಪ್ರತಿಪಾದಿಸಿದ ವಿಷಯಗಳನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಮತ್ತು ಶ್ರೀಯಾದವಾರ್ಯರು ಬಹಳ ಸುಂದರವಾಗಿ ಸಂಗ್ರಹ ಮಾಡಿದ್ದಾರೆ. ಆ ವಿಷಯಗಳ ನಿರೂಪಣೆ ಇಲ್ಲಿದೆ. 

Play Time: 45:26

Size: 6.50 MB


Download Upanyasa Share to facebook View Comments
8170 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  11:40 AM, 24/03/2022

  ಶ್ರೀ ಕೃಷ್ಣಾರ್ಪಣಮಸ್ತು 
  🙏🙏🙏
 • Sowmya,Bangalore

  8:01 PM , 14/02/2022

  🙏🙏🙏
 • Jayashree Karunakar,Bangalore

  2:06 PM , 27/01/2020

  Hhh
 • Murali A,Bangalore

  12:52 PM, 26/01/2020

  Thumba chennagide. Acharyarige Namma namanagalu. Prathi dina thamma pravachana keli mundina karyagalu. Dhanyavadagalu.
 • Divya,Bangalore

  2:16 PM , 05/10/2018

  Sashtanga praNamagaLu gurugalige
 • Mrs laxmi padaki,Pune

  11:07 AM, 25/04/2018

  👏👏👏👏👏
 • H. Suvarna kulkarni,Bangalore

  10:53 PM, 16/09/2017

  ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಉಪನ್ಯಾಸವನ್ನು ಮೂರು ನಾಲ್ಕು ಬಾರಿ ಕೇಳಿದೆ. ಅಥ೯ ಮಾಡಿಕೊಳ್ಳುವ ಯೋಗ್ಯತೆ ಗಳಿಸಿಕೊಳ್ಳಬೇಕು ಅದಕ್ಕೆ ಗುರುಗಳಾದ ನಿಮ್ಮ ಕೃಪೆ ಇರಬೇಕು ಧನ್ಯವಾದಗಳು ಗುರುಗಳೆ.
 • ಭಾರದ್ವಾಜ,ಬೆಂಗಳೂರು

  6:04 PM , 16/09/2017

  ಶ್ರೀ ಗುರುಭ್ಯೋ ನಮಃ
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏
  
  ಆಚಾರ್ಯರು ಪ್ರಭೃತಸುರ ಎಂದು ಹಾಗು ದ್ವೀಶ ಎಂದು ಎರಡು ಬಾರಿ ದೇವತೆಗಳ ಉಲ್ಲೇಕವನ್ನು ಯಾಕೆ ಮಾಡಿದ್ದಾರೆ? ದಯವಿಟ್ಟು ತಿಳಿಸಿ

  Vishnudasa Nagendracharya

  ಶ್ರೀಬ್ರಹ್ಮಪ್ರಭೃತಿಸುರ- ಲಕ್ಷ್ಮೀಬ್ರಹ್ಮಾದಿಗಳೇ ಮೊದಲಾದ ದೇವತೆಗಳಿಂದ
  ನರ-ಮನುಷ್ಯರಿಂದ
  ದ್ವ್ಯೀಶಶತ್ರ್ವಾತ್ಮಕಸ್ಯ- ದೈತ್ಯರಿಂದ ಕೂಡಿದ [ ದ್ಯು ಎಂದರೆ ಸ್ವರ್ಗ, ದ್ವ್ರ್ಯೀಶ ಎಂದರೆ ಸ್ವರ್ಗಾಧಿಪತಿಗಳಾದ ಸುರರು, ಅವರ ಶತ್ರುಗಳು ದೈತ್ಯರು] ಜಗತ್ತಿಗೆ ಸೃಷ್ಟ್ಯಾದಿಗಳನ್ನು ನೀಡುವವನು ಭಗವಂತ ಎಂದು ಅಲ್ಲಿನ ಅರ್ಥ. 
  
  ದೈತ್ಯರನ್ನು ದ್ವ್ರೀಶಶತ್ರುಗಳು, ದೇವಶತ್ರುಗಳು ಎಂದು ಕರೆಯುತ್ತಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ದ್ವ್ರೀಶ ಎಂದು ಶಬ್ದದ ಬಳಕೆಯಾಗಿದೆಯೇ ಹೊರತು, ದೇವತೆಗಳನ್ನು ಮತ್ತೊಮ್ಮೆ ಉಲ್ಲೇಖಿಸುತ್ತಿಲ್ಲ. 
 • Jayashree Karunakar,Bangalore

  9:18 PM , 15/09/2017

  ಗುರುಗಳೆ
  ಜೀವ್ಚಾಧಿಕಾ ಅನ್ನುವುದು ಭಗವಂತನ ಇಚ್ಚೆಗೆ ಒಳಪಟ್ಟಿರುವುದಲ್ಲವೆ ,ಮನುಷ್ಯನ ಆಳ್ವಿಕೆ ಗೆ ಒಳಪಟ್ಟಿರುವುದು ಹೇಗಾಗುತ್ತದೆ ?
  
  ದುಷ್ಟಗುಣಗಳಿಗೆ ಅಭಿಮಾನಿಯಾಗಿರುವುದು ದೇವತೆಗಳೇ ಅಲ್ಲವೇ 
  ಅದು ದ್ಯತ್ಯರ ಆಳ್ವಿಕೆಗೆ ಒಳಪಟ್ಟದ್ದೇ ?

  Vishnudasa Nagendracharya

  ಮತ್ತೊಮ್ಮೆ ಉಪನ್ಯಾಸವನ್ನು ಕೇಳಿ. 
  
  ದೇವರ ಇಚ್ಛೆಯ ಅಧೀನವಾಗದ ಯಾವ ಪದಾರ್ಥವೂ ಜಗತ್ತಿನಲ್ಲಿಲ್ಲ. ಜೀವಾಚ್ಛಾದಿಕಾ ಮನುಷ್ಯರ ಆಳ್ವಿಕೆಯಲ್ಲಿದೆ ಎಂದು ಹೇಳಿಲ್ಲ. ಮನುಷ್ಯಜೀವರಿಗಿದೆ, ಬ್ರಹ್ಮಾದಿ ದೇವತೋತ್ತಮರಿಗೆ ಆ ಆವರಣ ಇಲ್ಲ ಎಂದು ತಿಳಿಸಲಾಗಿದೆ. 
  
  ನಮ್ಮ ಸಕಲ ದುಷ್ಟಗುಣಗಳಿಗೂ ದೈತ್ಯರೇ ನಿಯಾಮಕರು ಮತ್ತು ಪ್ರೇರಕರು. ಅವರಿಂದ ಆ ಕಾರ್ಯವನ್ನು ಮಾಡಿಸುವವರು ತತ್ವಾಭಿಮಾನಿ ದೇವತೆಗಳು ಮತ್ತು ಶ್ರೀಹರಿ. 
 • Jayashree Karunakar,Bangalore

  9:42 PM , 15/09/2017

  ಗುರುಗಳೇ
  ಭಗವಂತ ಮಹಾಲಕ್ಷ್ಮೀದೇವಿಗೆ 6ರನ್ನು ಮಾತ್ರ ನೀಡುತ್ತಾನೆ, ಬಂಧ ಮತ್ತು ಮೋಕ್ಷಗಳನ್ನು ನೀಡುವುದಿಲ್ಲ, ಅವಳು ನಿತ್ಯಮುಕ್ತಳು ಎಂದಿರಿ.
  
  ಆದರೆ ಮಹಾಲಕ್ಷ್ಮೀದೇವಿಯವರನ್ನೂ ನಿಯಮನ ಮಾಡುವುದು ಭಗವಂತನಲ್ಲವೇ, ಹಾಗಾಗಿ ಆ ನಿತ್ಯಮುಕ್ತತ್ವ ಅನ್ನುವದನ್ನು ಅವನೇ ಕೊಡಬೇಕಲ್ಲವೇ..
 • R P Mutalik,Dharwad

  9:06 AM , 14/09/2017

  ಭೋರ್ಗರೆಯುವ ಜಲಪಾತದ ಕೆಳಗೆ ನಿಂತ ಅನುಭವವಾಯಿತು ತಮ್ಮ ಈ ಪ್ರವಚನ ಕೇಳಿ. 
  
  ತಮ್ಮ ವಾಕ್ ಶಕ್ತಿಗೆ ನಮೋ ನಮಃ.

  Vishnudasa Nagendracharya

  ಹರಿ- ವಾಯು - ದೇವತಾ - ಗುರುಗಳ ಪ್ರಸಾದದಿಂದ ದೊರೆತಿರುವ ಶಕ್ತಿ. ಅವರ ಸೇವೆಗೇ ಉಪಯೋಗವಾಗಿತ್ತಿರುವದು ನನ್ನ ಸೌಭಾಗ್ಯ. 
 • Shridhar Patil,Bangalore

  12:09 PM, 14/09/2017

  ನಮಸ್ಕಾರಗಳು, ಜಗಡೊಡತಿಯ ಪರಿಚಯವಾದರೆ ಜಗಡೊಡೆಯನ ಪರಿಚಯವಾದಂತೆ, ಜಗನ್ಮಾತೆಯ ಅರಿವಾದರೆ ಜಗನ್ನಾಥನ ಅರಿವಾದಂತೆ, ನಿಗಮವೇದ್ಯಳ ಕಾರುಣ್ಯ ಪಡೆದು ನಿಗಮಕೆ ಸಿಲುಕದ ಮಹಾಮಹಿಮನ ಪಾದ ಭಜಿಸಿ, ಆ ದಿವ್ಯ ಪಾದ ಸೇರುವುದೇ ಶ್ರೀಮದ್ಭಾಗವತ ಶ್ರವಣದ ಫಲ.ಧನ್ಯವಾದಗಳು.
 • Shridhar Patil,Bangalore

  12:09 PM, 14/09/2017

  ನಮಸ್ಕಾರಗಳು, ಜಗಡೊಡತಿಯ ಪರಿಚಯವಾದರೆ ಜಗಡೊಡೆಯನ ಪರಿಚಯವಾದಂತೆ, ಜಗನ್ಮಾತೆಯ ಅರಿವಾದರೆ ಜಗನ್ನಾಥನ ಅರಿವಾದಂತೆ, ನಿಗಮವೇದ್ಯಳ ಕಾರುಣ್ಯ ಪಡೆದು ನಿಗಮಕೆ ಸಿಲುಕದ ಮಹಾಮಹಿಮನ ಪಾದ ಭಜಿಸಿ, ಆ ದಿವ್ಯ ಪಾದ ಸೇರುವುದೇ ಶ್ರೀಮದ್ಭಾಗವತ ಶ್ರವಣದ ಫಲ.ಧನ್ಯವಾದಗಳು.
 • Shantha.raghothamachar,Bangalore

  11:23 AM, 14/09/2017

  ಮಹಾಲಕ್ಷ್ಮಿ ದೇವಿಯರ ಅನುಸಂಧಾನದ ವಿಶೇಷ ಜ್ಞಾನ ವಾಯಿತು ನಮಸ್ಕಾರ ಗಳು
 • P N Deshpande,Bangalore

  10:21 AM, 14/09/2017

  She.Namaskargalu. Indu nanu dhynanade.SriLaxmi SrimanNarayanra anugrahwu tamage purnwaadantea namma mealu anugrhisbeakendu savinyad prathne
 • Niranjan Kamath,Koteshwar

  9:38 AM , 14/09/2017

  Dhanyosmi.... Bhagavathamritha paavavayitu. Nimma charanarvind galige namo namaha.
 • Narasimha Moorthy,Bangalore

  9:13 AM , 14/09/2017

  You are taking us to a different world acharyare. Our days are becoming meaningful with your discourses.
  
  I am 65 year old now and never heard Bhagavat like this.
 • Abhiram Udupa,Bangalore

  8:58 AM , 14/09/2017

  Mesmerizing and wonderful narration
 • Rangaswamy,Bengalore

  8:27 AM , 14/09/2017

  Dhanyavadagalu Acharyarige