Upanyasa - VNU510

ಶ್ರೀಮದ್ ಭಾಗವತಮ್ — 17 — ಸಮಸ್ತರಿಗೂ ಜನ್ಮಾದಿಪ್ರದ

ಭಗವಂತನೇ ಸರ್ವಪ್ರದ ಎನ್ನುವ ತತ್ವವನ್ನು ಭಾಗವತೋತ್ತಮರಾದ ಶ್ರೀ ವಸುದೇವ ದೇವಕಿಯರು ಯಾವ ರೀತಿ ಅನುಷ್ಠಾನ ಮಾಡುತ್ತಿದ್ದರು ಎಂಬ ಮಾತಿನ ನಿರೂಪಣೆಯೊಂದಿಗೆ “ಜನ್ಮಾದ್ಯಸ್ಯ ಯತಃ” ಎಂಬ ವಾಕ್ಯ ಹೇಳುವ ತತ್ವವನ್ನು ಯಾವ ರೀತಿ ಅನುಸಂಧಾನಕ್ಕೆ ತರಬೇಕು ಎನ್ನುವದರ ಕುರಿತ ಚಿಂತನೆ ಇಲ್ಲಿದೆ. 

ಬ್ರಹ್ಮದೇವರಿಂದ ಆರಂಭಿಸಿ ದೇವ, ಋಷಿ, ಪಿತೃ, ಮನುಷ್ಯರು, ಪ್ರಾಣಿ, ಪಕ್ಷಿಗಳು, ರಾಜಸರು, ತಾಮಸರೆಂಬ ಎಲ್ಲ ಚೇತನರಿಗೂ, ಅವ್ಯಾಕೃತ ಆಕಾಶ, ಪ್ರಕೃತಿ, ವೇದಗಳು, ಬ್ರಹ್ಮಾಂಡದಿಂದ ಅರಂಭಿಸಿ ನಾವು ಉಪಯೋಗಿಸುವ ಸಕಲ ಪದಾರ್ಥಗಳ ವರೆಗೆ ಪರಮಾತ್ಮನೇ ಸೃಷ್ಟ್ಯಾದಿಪ್ರದ ಎಂಬ ತತ್ವದ ನಿರೂಪಣೆ ಇಲ್ಲಿದೆ. ಶ್ರೀಮಂತ್ರಾಲಯಪ್ರಭುಗಳು ತಿಳಿಸಿದ ಒಂದು ಅದ್ಭುತವಾದ ಸಾಂಪ್ರದಾಯಿಕ ಅರ್ಥದ ವಿವರಣೆಯೊಂದಿಗೆ. 

ಮೊದಲನೆಯ ಶ್ಲೋಕದ ಕುರಿತ ಐದನೆಯ ಉಪನ್ಯಾಸ

Play Time: 39:28

Size: 6.50 MB


Download Upanyasa Share to facebook View Comments
7770 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:07 AM , 25/03/2022

  ಶ್ರೀ ಕೃಷ್ಣಾರ್ಪಣಮಸ್ತು 
   🙏🙏🙏
 • Sowmya,Bangalore

  7:52 PM , 15/02/2022

  🙏🙏🙏
 • Saritha,MANGALORE

  5:03 PM , 16/11/2020

  Gurugalige Anantha koti pranamagalu. Upanyasa chennagittu Nimminda bagavatha keltha iddivalla nav dhanyaru
 • Mahadi Sethu Rao,Bengaluru

  6:57 PM , 14/06/2020

  HARE KRISHNA.
 • Madhusudan Gururajarao Chandragutti,Belagavi

  4:18 PM , 11/07/2019

  ಹೃತ್ಪೂರ್ವಕ ಪ್ರಣಾಮಗಳು ಪೂಜ್ಯ ಆಚಾರ್ಯರಿಗೆ. ತಾವು ಈ ಉಪನ್ಯಾಸದಲ್ಲಿ ಉಲ್ಲೇಖಿಸಿದ ಯಾತುಧಾನರೆಂದರೆ ಯಾರು ಮತ್ತು ಅವರ ಕಾರ್ಯವೇನು? ದಯವಿಟ್ಟು ತಿಳಿಸಿ.
 • Praveen Patil,Bangalore

  7:57 AM , 01/03/2018

  ಗುರುಗಳಿಗೆ ನಮಸ್ಕಾರಗಳು, ಗುರುಗಳೆ ಏಕೆ ಬ್ರಹ್ಮ ದೇವರಿಗೆ ಮತ್ತು ಗರುಡ ದೇವರಿಗೆ ಅವತಾರ ಇಲ್ಲ ಈ ಭೂಮಿಯ ಮೇಲೆ. ದಯಮಾಡಿ ತಿಳಿಸಿಕೊಡಿ...
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:05 PM , 05/01/2018

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  
  ಜ್ಞಾನದ ಸ್ವಭಾವ
  ಕರ್ಮದ ಸ್ವಭಾವ
  
  ಇವೆರಡರ ಬಗ್ಗೆ ದಯಮಾಡಿ ತಿಳಿಸುವಿರಾ 🙏
 • ಭಾರದ್ವಾಜ,ಬೆಂಗಳೂರು

  1:29 PM , 17/09/2017

  ಶ್ರೀಗುರುಭ್ಯೋ ನಮಃ
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಬ್ರಹ್ಮದೇವರಿಗೆ ಹಾಗು ಗರುಡ ದೇವರಿಗೆ ಯಾವ ಕಾರಣಕ್ಕಾಗಿ ಅವತಾರಗಳಿಲ್ಲ? ದಯಮಾಡಿ ತಿಳಿಸಿ

  Vishnudasa Nagendracharya

  ಆ ರೀತಿಯಾಗಿ ಭಗವಂತನ ಆಜ್ಞೆಯಿರುವದರಿಂದ ಅವರು ಅವತಾರ ಮಾಡುವದಿಲ್ಲ. 
  
  ಪರಮಾತ್ಮನ ಆಜ್ಞೆಗೂ ವಿಶೇಷಕಾರಣಗಳಿದ್ದೇ ಇರುತ್ತವೆ. ಪುರಾಣಗಳನ್ನು ಸಂಶೋಧನೆ ಮಾಡಿ ತಿಳಿಯಬೇಕು. ನನಗೆ ತಿಳಿದುಬಂದಲ್ಲಿ ಅವಶ್ಯವಾಗಿ ತಿಳಿಸುತ್ತೇನೆ. 
 • H. Suvarna kulkarni,Bangalore

  6:06 AM , 17/09/2017

  ಪೂಜ್ಯಗುರುಗಳೇ ಉಪನ್ಯಾಸ ಕೇಳುತ್ತಾ ಕೇಳುತ್ತಾ ತನ್ಮಯರಾಗಿ ಯಾವುದೋ ಲೋಕಕ್ಕೆ ಹೋಗಿರುತ್ತೇವೆ ಮುಗಿದಕ್ಷಣ ಎಚ್ಚರವಾಗಿ ಲೌಕಿಕಕ್ಕೆ ಬರುತ್ತೇವೆ ನಾವು ಅಸ್ವತಂತ್ರರು ಎಲ್ಲವೂ ಭಗವಂತನಅಧೀನ ಎನ್ನುವದನ್ನು ಅಥ೯ ಮಾಡಿಸಿದಿರಿ ನಾವು ಅದೆಷ್ಟು ಪುಣ್ಯಮಾಡಿದ್ದೇವೊ ನಿಮ್ಮಿಂದ ಭಾಗವತ ಕೇಳಲು. ಧನ್ಯರು ನಾವು.
 • Jayashree Karunakar,Bangalore

  7:25 PM , 15/09/2017

  ಗುರುಗಳೆ ಬ್ರಹ್ಮಾಂಡದ ಆಚೆ ಹುಟ್ಟಿದ ತತ್ವಾಭಿಮಾನಿ ದೇವತೆಗಳು ಮತ್ತು ಬ್ರಹ್ಮ ದೇವರು ಲಯವಾದ ನಂತರ ಮತ್ತೆ ಬ್ರಹ್ಮಾಂಡದ ಒಳಗೆ ಹುಟ್ಟಿ ಬರುತ್ತಾರೆಯೇ

  Vishnudasa Nagendracharya

  ಒಮ್ಮೆ ಲಿಂಗಭಂಗವನ್ನು ಮಾಡಿಕೊಂಡು ಯಾವುದೇ ಜೀವ ಮತ್ತೆ ಸಂಸಾರದಲ್ಲಿ ಹುಟ್ಟಿಬರುವದಿಲ್ಲ. 
  
  ಎಲ್ಲ ತತ್ವಾಭಿಮಾನಿಗಳಿಗೂ ಒಂದೇ ಬ್ರಹ್ಮಕಲ್ಪದಲ್ಲಿ ಲಿಂಗಭಂಗವುಂಟಾಗುವದಿಲ್ಲ. ಉದಾಹರಣೆಗೆ ಶೇಷದೇವರಿಗೆ ಲಿಂಗಭಂಗವುಂಟಾಗುತ್ತದೆ. ರುದ್ರದೇವರಿಗೆ ಉಂಟಾಗುವದಿಲ್ಲ. ರುದ್ರದೇವರು ಮತ್ತೆ ಮುಂದಿನ ಸೃಷ್ಟಿಯಲ್ಲಿ ಶೇಷದೇವರಾಗಿ ಹುಟ್ಟಿಬಂದು ಆ ಸೃಷ್ಟಿಯ ಕಡೆಯ ಪ್ರಳಯಕಾಲದಲ್ಲಿ ಲಿಂಗಭಂಗವನ್ನು ಪಡೆದು ಮುಕ್ತರಾಗುತ್ತಾರೆ. 
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  10:42 PM, 15/09/2017

  ಗುರುಗಳೆ ನಿಮ್ಮ ಉಪನ್ಯಾಸ ಬಹಳ ಚೆನ್ನಾಗಿ ವಿವರಿಸಿದ್ದೀರಿ. ಮತ್ತೆ ಮತ್ತೆ ಕೇಳಬೇಕು ಅನ್ನಿಸಿತ್ತದೆ. ಧನ್ಯವಾದಗಳು.
 • Shantha.raghothamachar,Bangalore

  11:11 AM, 15/09/2017

  ನಮಸ್ಕಾರ ಗಳು ಭಗವಂತನ ಅಷ್ಟಕರತೃತ್ವಗಳು ಒಂದು ಕಾಲಕ್ಕೆ ಮಾತ್ರ ಸೀಮಿತ ವಲ್ಲ ನಿರಂತರವಾಗಿ ನಡಯುತ್ತಿರುತ್ತದೆಂದು ಅನುಸಂಧಾನ ಮಾಡಬೇಕು. ಸರಿಯೇ ಆಚಾರ್ಯ ರೇ.
 • Niranjan Kamath,Koteshwar

  10:02 AM, 15/09/2017

  Shri Narayana Akhila Guro Bhagavan Namasthe. Gurugale ... Kritharthanade...puneethnade...dhanyanade...eshtondu pavanavada vishayagalu....eshtondu dainyatabhava dinda varsisiddiri...Janmadyasya emba arthanusandhana...Bhagavanthana moola swaroopada vykhyana...aa Shri Mahalaxmi Deviya mahatme....samooorna vagi sharanagathanade....Dhanyosmi....Bhagavath prerithavagi nimminda navu keli dhanyaradevu. Dhanyosmi.
 • P N Deshpande,Bangalore

  9:06 AM , 15/09/2017

  Attyanta upkariyaada maha ganandind kuudida srestha upnyasa.Anusandhana hoandidare geddantea. A great food for worthy thinkers with facts & reality ie Yetarha gananwannu honduwa avakash. S.Namaskaragalu