Upanyasa - VNU513

ಶ್ರೀಮದ್ ಭಾಗವತಮ್ — 20 — ಈಹಾ ಶಬ್ದದ ಅರ್ಥ

ಜನ್ಮಾದಿ ಎಂಬ ಶಬ್ದದಿಂದ ಸೃಷ್ಟಿ ಮೊದಲಾದ ಎಂಟನ್ನೇ ಗ್ರಹಿಸಬೇಕು ಎನ್ನುವದನ್ನು, ಚಂದ್ರಿಕಾಚಾರ್ಯರ ಪ್ರತಿಪಾದನೆಯ ವಿವರಣೆಯೊಂದಿಗೆ ಹಿಂದಿನ ಉಪನ್ಯಾಸಗಳಲ್ಲಿ ವಿಸ್ತೃತವಾಗಿ ತಿಳಿದೆವು. ಆದರೆ ತಂತ್ರಭಾಗವತದಲ್ಲಿ ವೇದವ್ಯಾಸದೇವರು ಮತ್ತು ಭಾಗವತತಾತ್ಪರ್ಯದಲ್ಲಿ ಶ್ರೀಮದಾಚಾರ್ಯರು ಈ ಎಂಟರ ಜೊತೆಗೆ ಈಹಾ ಎನ್ನುವದನ್ನೂ ತಿಳಿಸುತ್ತಾರೆ. 

ಈಹಾ ಎಂದರೇನು? ಭಾಗವತಕ್ಕೆ ಸಂಬಂಧಪಟ್ಟ ಗ್ರಂಥಗಳಲ್ಲಿ ಮಾತ್ರ ಏಕೆ ಸೃಷ್ಟ್ಯಾದಿಗಳ ಜೊತೆಯಲ್ಲಿ ಅದರ ಉಲ್ಲೇಖವಿದೆ? ಮಂತ್ರಾಲಯಪ್ರಭುಗಳೇ ಮೊದಲಾದ ಮಹಾನುಭಾವರು ಆ ಶಬ್ದಕ್ಕೆ ಏನು ಅರ್ಥವನ್ನು ಹೇಳಿದ್ದಾರೆ? ಪ್ರಾಚೀನಗ್ರಂಥಗಳಲ್ಲಿ ಯಾವ ಅರ್ಥಗಳಲ್ಲಿ ಆ ಶಬ್ದದ ಪ್ರಯೋಗವಾಗಿದೆ? ಆ ಅರ್ಥವನ್ನು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡುವದು ಹೇಗೆ? ಇತ್ಯಾದಿಗಳ ಕುರಿತ ವಿವರಣೆಯೊಂದಿಗೆ ಶ್ರೀಮದ್ ಭಾಗವತ ಅದೆಷ್ಟು ದುರ್ಲಭ ಎನ್ನುವದನ್ನು, ಸಮಗ್ರ ಭಾಗವತಮಾಹಾತ್ಮ್ಯದ ಕಥಾಭಾಗದ ತಾತ್ಪರ್ಯವನ್ನು ಭಗವತ್ಪಾದರು ಸಂಗ್ರಹ ಮಾಡಿರುವ ಅತ್ಯದ್ಭುತ ರೀತಿಯ ಚಿತ್ರಣ ಇಲ್ಲಿದೆ. 

ಮೊದಲನೆಯ ಪದ್ಯದ ಕುರಿತ ಎಂಟನೆಯ ಉಪನ್ಯಾಸ

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಪದ್ಯ — 

ವೇದವ್ಯಾಸದೇವರ ಜನ್ಮಾದಿ ಎಂಬ ಶಬ್ದದ ವ್ಯಾಖ್ಯಾನರೂಪವಾಗಿ ಆಚಾರ್ಯರ ಮಂಗಳಪದ್ಯದಲ್ಲಿ ಪ್ರಯೋಗ ಮಾಡಿರುವ ಮತ್ತು ಆಚಾರ್ಯರು ಉದಾಹರಿಸಿರುವ ತಂತ್ರಭಾಗವತದಲ್ಲಿನ “ಈಹಾ” ಎಂಬ ಶಬ್ದ. 

Play Time: 41:03

Size: 6.50 MB


Download Upanyasa Share to facebook View Comments
8051 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:50 AM , 30/03/2022

  ಶ್ರೀ ಕೃಷ್ಣಾರ್ಪಣಮಸ್ತು 
   🙏🙏🙏
 • Sowmya,Bangalore

  7:49 PM , 18/02/2022

  🙏🙏🙏
 • Saritha,MANGALORE

  7:01 AM , 20/11/2020

  Gurugalige koti pranamagalu yenu thiliyada mandhamathigali vivaravagi thilisiddiri vandanegalu
 • Mahadi Sethu Rao,Bengaluru

  6:58 PM , 14/06/2020

  HARE KRISHNA.
 • Mrs laxmi padaki,Pune

  6:56 PM , 03/05/2018

  👏👏👏👏👏
 • Mrs laxmi padaki,Pune

  11:45 AM, 03/05/2018

  👏👏👏👏👏
 • Mrs laxmi padaki,Pune

  11:35 AM, 01/05/2018

  👏👏👏👏👏
 • P.R.SUBBA RAO,BANGALORE

  11:30 PM, 07/10/2017

  ಶ್ರೀ ಗುರುಭ್ಯೋನಮಃ
  SB020: ಭಾಗವತವು ಮಹಾಪ್ರಯತ್ನದಿಂದ ದೊರಕುತ್ತದೆ. ಆದರೆ ತಮ್ಮ ಅನುಗ್ರಹದಿಂದ ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಸಿಗುತ್ತಿದೆ (ಪ್ರಾಚೀನಾಚೀರ್ಣ ಪುಣ್ಯೋ?). Technology ಯಿಂದ ನಾವಿರುವ ಕಡೆಯೇ ಪಡೆಯುತ್ತಿದ್ದೆವೆ. ನಾವೇ ಧನ್ಯರು. ಸಮಸ್ತ ದೇವತಾ ಗುರುಗಳ ಅನುಗ್ರಹದಿಂದ ಇದು ನಿರ್ವಿಘ್ನವಾಗಿ ನಡೆಯಲಿ ಅಂತ ಬೇಡಿಕೊಳ್ಳುತ್ತೆನೆ. ಗುರುಗಳ ಆಶೀರ್ವಾದ ಇರಲಿ
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • H. Suvarna kulkarni,Bangalore

  11:50 PM, 20/09/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ನಿಜ ನಿಮ್ಮ ಮಾತು ಪುಣ್ಯವಿದ್ದರೆ ಭಾಗವತ ಪ್ರವಚನ ಕೇಳಲು ಸಿಗುತ್ತದೆ ಇಲ್ಲವಾದಲ್ಲಿ ಇಲ್ಲ ನಮ್ಮ ಮನೆಯಲ್ಲಿ ಪುಸ್ತಕ ಗಳಿವೆ ಆ ಪುಸ್ತಕ ಮುಟ್ಟಿ ತೆಗೆದು ಓದಲು ನಮಗೊಂದು ಅಹ೯ತೆ ಬರಬೇಕು ಇದು ಸತ್ಯ ಧನ್ಯವಾದಗಳು
 • Shantha.raghothamachar,Bangalore

  11:30 AM, 18/09/2017

  ನಮಸ್ಕಾರಗಳು. ಭಾಗವತದ ಪ್ರತಿ ಸ್ಲೋಕ ಕೇಳಬೇಕೆಂಬ ಅಪೇಕ್ಷೆ ನಾಲ್ಕಾರುವರ್ಷದ್ದು ಹರಿವಾಯುಗುರುಗಳ ಅನುಗ್ರಹ ವಾಗಿದೆ. ಧನ್ಯೆ ಅನಂತ ವಂದನೆಗಳು, ಧನ್ಯವಾದಗಳು. "ಈಹಾ"ದಬಗ್ಗೆ ಇವತ್ತು ತಿಳಿಯಿತು.
 • Raghoottam Rao,Bangalore

  10:45 AM, 18/09/2017

  ಪೂಜ್ಯ ಗುರುಗಳಿಗೆ ಅನೇಕ ನಮಸ್ಕಾರಗಳು. 
  
  ಭಾಗವತದ ಪ್ರವಚನಗಳು ನಮ್ಮನ್ನು ಧನ್ಯರನ್ನಾಗಿ ಮಾಡುತ್ತಿವೆ. ಯಾವುದೇ ಭಾವನೆಯನ್ನು ಸಹಜವಾಗಿ ಅಭಿವ್ಯಕ್ತಿಗೊಳಿಸುವಂತಹ ನಿಮ್ಮ ಅಮೋಘಧ್ವನಿಯಲ್ಲಿ ಭಾಗವತವನ್ನು ಕೇಳುತ್ತಿರುವ ನಾವೇ ಧನ್ಯರು. ಗೋಕರ್ಣ ಧುಂಧುಕಾರಿಯ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ ತಾವು ತತ್ವಗಳನ್ನೂ ತಕ್ಷಣಕ್ಕೆ ಅರ್ಥವಾಗುವಂತೆ ವಿವರಿಸುತ್ತಿದ್ದೀರಿ. ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳನ್ನು ಮರುಕ್ಷಣಕ್ಕೆ ನೀವೇ ಮಾಡಿಕೊಂಡು ಉತ್ತರಿಸುವ ನಿಮ್ಮ ಕೌಶಲಕ್ಕೆ ಏನು ಹೇಳೋಣ. 
  
  ಆಚಾರ್ಯರೇ, ಇಂದಿನ ಉಪನ್ಯಾಸ ಮಾತ್ರ ನಮಗೆ ಹೊಚ್ಚಹೊಸ ವಿಷಯ. ಕೇಳಿಯೇ ಇರಲಿಲ್ಲ. ಹಾಗೂ ಈ ರೀತಿಯಾಗಿರುವ ಅದ್ಭುತವಿಚಾರ ಮೊದಲ ಶ್ಲೋಕದಲ್ಲಿಯೇ ಇದೆ ಎಂದು ಯಾವತ್ತಿಗೂ ತಿಳಿದಿರಲಿಲ್ಲ. ಇದೇ ರೀತಿಯಾಗಿ ಭಾಗವತದ ಎಲ್ಲ ಶಬ್ದಗಳ, ಪ್ರತಿಯೊಂದು ವಿಷಯದ ಕುರಿತು ನಮಗೆ ವಿಸ್ತಾರವಾಗಿಯೇ ತಿಳಿಸಿ. ಅದನ್ನು ಕೇಳುವಷ್ಟು ಆಯುಷ್ಯ ಮತ್ತು ಬುದ್ಧಿ ನಮಗೆ ದೊರೆಯಲಿ ಎಂದು ಆಶೀರ್ವದಿಸಿ. ಆದಷ್ಟು ಬೇಗ ತಮ್ಮನ್ನು ಬಂದು ಕಾಣುವ ತವಕ ಹೆಚ್ಚಾಗುತ್ತಿದೆ. ನಿಮ್ಮಂತಹವರನ್ನು ನಾನೆಲ್ಲಿಯೂ ಕಂಡಿಲ್ಲ. ನಿಮ್ಮ ಪಾದಗಳಿಗೆ ಮತ್ತೊಮ್ಮೆ ಸಾಷ್ಟಾಂಗ ನಮಸ್ಕಾರಗಳು. 
  
  ರಘೂತ್ತಮರಾವ್, ಬೆಂಗಳೂರು.

  Vishnudasa Nagendracharya

  ಗುರುಗಳ ಅನುಗ್ರಹದಿಂದ ಹರಿವಾಯುದೇವತೆಗಳು ನಿಂತು ಮಾಡಿಸುತ್ತಿದ್ದಾರೆ. 
  
  ಆಚಾರ್ಯರ ಶಾಸ್ತ್ರ ಅಮೋಘ ಅಗಾಧ. ಹೀಗಾಗಿ ಅದರ ಕುರಿತು ಯಾರೇ ಮಾತನಾಡಿದರೂ ಅದು ಅದ್ಭುತವಾಗಿರುತ್ತದೆ. ಆದು ಆಚಾರ್ಯರ ಶಾಸ್ತ್ರದ ವೈಭವ. ನಮ್ಮ ಶಕ್ತಿಯಲ್ಲ. ಇಂತಹ ಶಾಸ್ತ್ರವನ್ನು ಕರುಣಿಸಿದ ಆ ಭಗವತ್ಪಾದರಿಗೆ ಅದನ್ನು ನಮ್ಮವರೆಗೆ ತಂದು ನೀಡಿದ ಸಮಸ್ತ ಗುರುಪರಂಪರೆಗೆ ಭಕ್ತಿಯಿಂದ ಶರಣಾಗೋಣ. 
  
  ಶ್ರೀಮದ್ ಭಾಗವತದ ಸಮಗ್ರ ಶ್ರವಣ ಸಮಸ್ತ ಸಜ್ಜನರಿಗೂ ನಿರ್ವಿಘ್ನವಾಗಿ ಆಗಲಿ ಎಂದು ನಿತ್ಯವೂ ಪೂಜಾಕಾಲದಲ್ಲಿ ಶ್ರೀಲಕ್ಷ್ಮೀನರಸಿಂಹದೇವರನ್ನು ಪ್ರಾರ್ಥಿಸುತ್ತಿರುತ್ತೇನೆ. 
 • P N Deshpande,Bangalore

  10:43 AM, 18/09/2017

  This is another great feather in our chintana.You are making all listeners more & more stronger step by step.Anuhrhvirali

  Vishnudasa Nagendracharya

  ವಿಶ್ವನಂದಿನಿಯ ಉದ್ದೇಶವೇ ಅದು. ಅದು ಕಣ್ಣಮುಂದೆಯೇ ಸಾಕಾರವಾಗುತ್ತಿರುವದನ್ನು ಕಂಡು ತುಂಬ ಸಂತೋಷವಾಗುತ್ತಿದೆ. ಶ್ರೀಹರಿ-ವಾಯು-ದೇವತಾ-ಗುರುಗಳ ಕೃಪೆ. 
 • Harikrishna B L,Haveri

  10:30 AM, 18/09/2017

  This is the first time I am listening to the meaning of the word iha. 
  
  Wonderful. 
  
  Wonderful. Blessed are we to listen to Bhagavatam in such detail.
 • Meera jayasimha,Bengaluru

  10:11 AM, 18/09/2017

  ಗುರು ಗಳಿಗೆ ನಮಸ್ಕಾರ. ನಿಮ್ಮ ಈ ಪ್ರವಚನಗಳು ನಮ್ಮ ಜೀವನ ಪಾವನ ಮಾಡಿ ಸುತಿದೆ.
 • Sangeetha prasanna,Bangalore

  9:54 AM , 18/09/2017

  ಹರೇ ಶ್ರೀನಿವಾಸ .ಗುರುಗಳಿಗೆ ಕೋಟಿ ಕೋಟಿ ನಮನಗಳು .ಎಷ್ಟೋ ವರ್ಷಗಳು ಅಜ್ಞಾನದ ಅಂಧಕಾರದಲ್ಲಿ ಕಳೆದೆವು ಎಂಬ ಪಶ್ಚಾತ್ತಾಪವಿದೆ .ಆದರೆ ನೀವು ಹಚ್ಚಿದ ಜ್ಞಾನದ ದೀವಿಗೆಯಿಂದ ಅಜ್ಞಾನದ ಕತ್ತಲೆ ಕರಗುತ್ತಿದೆ ಎಂಬ ಸಂತೋಷದ ಅನುಭೂತಿ ಉಂಟಾಗುತ್ತಿದೆ .ಮನಹಪೂರ್ವಕ ವಾದ ನಮಸ್ಕಾರಗಳು .🙏🙏🙏🙏
 • mangala gowri,Bangalore

  7:03 AM , 18/09/2017

  Acharyara padhagalige nanna namaskaragalu bhagavatha da 20 ne upanyasa adhbutha vagi thilisidiri thaminda namma papakarmagalu kadimeyaguthive koneyali guruvarenyarige bagavantha nige samarpane maduva rithi amogavadadu