Upanyasa - VNU515

ಶ್ರೀಮದ್ ಭಾಗವತಮ್ — 22 — ಜನ್ಮ ಆದ್ಯಸ್ಯ ಎಂಬ ವಿಭಾಗ ತಪ್ಪು

“ಜನ್ಮಾದ್ಯಸ್ಯ” ಎನ್ನುವದನ್ನು ಕೆಲವು ಮಾಯಾವಾದಿಗಳು “ಜನ್ಮ ಆದ್ಯಸ್ಯ” ಎಂದು ವಿಭಾಗ ಮಾಡುತ್ತಾರೆ. ಟೀಕಾಕೃತ್ಪಾದರು ಅದನ್ನು ಖಂಡಿಸಿ “ಜನ್ಮಾದಿ ಅಸ್ಯ” ಎಂಬ ವಿಭಾಗವೇ ವೇದವ್ಯಾಸದೇವರಿಗೆ ಸಮ್ಮತವಾದದ್ದು ಎಂದು ಪ್ರತಿಪಾದಿಸುತ್ತಾರೆ. ಅದರ ವಿವರಣೆ ಇಲ್ಲಿದೆ. ಟೀಕಾಕೃತ್ಪಾದರ ವ್ಯಾಖ್ಯಾನ ಏಕೆ ತಪ್ಪಾಗಿರಬಾರದು ಎಂಬ ಆಧುನಿಕರ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಅವರ ಮಾತಿನ ಪರಿಶುದ್ಧಿಯ ಸಮರ್ಥನೆಯೊಂದಿಗೆ. 

ಶಾಸ್ತ್ರಗಳ ಸರಿಯಾದ ಅರ್ಥವನ್ನು ತಿಳಿದರೆ ಸಾಕು, ತಪ್ಪಾದದ್ದನ್ನು ಏಕೆ ಖಂಡಿಸಬೇಕು ಎನ್ನುವದಕ್ಕೆ ಉಪನಿಷತ್ತು ಮತ್ತು ಶ್ರೀಮದಾಚಾರ್ಯರು ನೀಡಿದ “ಭಯಂಕರ” ಉತ್ತರದ ವಿವರಣೆಯೂ ಈ ಉಪನ್ಯಾಸದಲ್ಲಿ ಉಪಲಬ್ಧವಿದೆ. ತಪ್ಪನ್ನು ಖಂಡಿಸಬಾರದು ಎಂದು ತಿಳಿದಿರುವ ಜನ ಕೇಳಲೇಬೇಕಾದ ಪರಮತತ್ವವನ್ನು ಆಚಾರ್ಯರು ಪ್ರತಿಪಾದಿಸಿದ್ದಾರೆ. ತಪ್ಪದೇ ಕೇಳಿ. 

Play Time: 45:21

Size: 6.50 MB


Download Upanyasa Share to facebook View Comments
7420 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:08 AM, 03/04/2022

  ಶ್ರೀ ಕೃಷ್ಣಾರ್ಪಣಮಸ್ತು 
   🙏🙏🙏
 • Sowmya,Bangalore

  8:00 PM , 20/02/2022

  🙏🙏🙏
 • Mahadi Sethu Rao,Bengaluru

  6:58 PM , 14/06/2020

  HARE KRISHNA.
 • Jasyashree Karunakar,Bangalore

  10:06 AM, 30/09/2019

  ಗುರುಗಳೆ ಅನಿಷ್ಟ ನಿವೃತ್ತಿ ಮತ್ತು ಇಷ್ಟ ಪ್ರಾಪ್ತಿಯನ್ನು ನೀಡುವಂತಹ "ಜನ್ಮಾದ್ಯಸ್ಯ" ಅನ್ನುವದನ್ನು ಯಥಾಥ೯ವಾಗಿ ಪದಛೇದವನ್ನು ಮಾಡಿ ತಿಳಿಯುವದರ ಜೊತೆಗೆ.....
  
  ಮಾಯಾವಾದಿಗಳು ತಿಳಿದಂತೆ "ಜನ್ಮ ಆದ್ಯಸ್ಯ ಯತಹ" ಅಂತ ಪದಛೇದವನ್ನು ಯಾಕಾಗಿ ಗ್ರಹಣಮಾಡಬಾರದು....
  ಅನ್ನುವದನ್ನು ತಾವು prove  ಮಾಡಿದ ರೀತಿ ತುಂಬಾ ಸ್ವಾರಸ್ಯಕರವಾಗಿದೆ....
  
  "VERY INTRESTING"
  
  ಹೀಗೆ ತಿಳಿದಾಗ
  ಮೊದಲಿಗನಾದ ಹಿರಣ್ಯಗಭ೯ನಿ ಮಾತ್ರ ಜನ್ಮ ನೀಡಿದ ಅಂತಾಗಿಬಿಡುತ್ತದೆ....
  
  ಪರಂಪರಾ ಜನಕತ್ವವನ್ನು ನಿರೂಪಿಸಿದಂತಾಗುತ್ತದೆ....
  
  ಸವ೯ ಜನಕನಲ್ಲಾಂತಾಗಿ
  ಬಿಡುತ್ತದೆ..
  
  ಸೃಷ್ಟ್ಯಾದಿ ಅಷ್ಟಕಗಳೇ ಇಲ್ಲವಾಗಿಬಿಡುತ್ತದೆ ...
  ಎಂತಹ ಅದ್ಭುತವಾದ ಚಿಂತನೆ.....
  
  ಹಾಗಾದರೆ ಬ್ರಹ್ಮದೇವರಿಗೆ ಸ್ಥಿತಿ ಲಯ ನಿಯಮನ ಜ್ಞಾನ ಅಜ್ಞಾನ ಬಂಧನ ಮೋಕ್ಷಾದಿಗಳನ್ನು ಕೊಡುವವರು ಯಾರು ಅನ್ನುವ ಪ್ರಶ್ನೆ ಬರುತ್ತದೆ.....
  
  ಸೃಷ್ಟ್ಯಾದಿಗಳನ್ನು ಹೇಳುವ ಭಗವಂತನ ವೈಭವದ ಚಿಂತನೆಯೇ ಇಲ್ಲವಾಗಿಬಿಡುತ್ತದೆ....
  
  
  ವೇದವ್ಯಾಸದೇವರಿಗೆ ಸಮ್ಮತವಲ್ಲದ ತತ್ವಗಳು...
  
  ಯಾವುದೇ ಪುರಾಣವನ್ನು ತಿಳಿಯಬೇಕಾದರೂ ಬ್ರಹ್ಮಸೂತ್ರದ ಅನುಸಾರಿಯಾಗಿಯೇ ತಿಳಿಯಬೇಕು ಅನ್ನುವದು ವೇದವ್ಯಾಸದೇವರಿಗೆ ಅಭಿಪ್ರೇತ....
  
  ವೇದಾಥ೯ನಿಣಾ೯ಯಕವಾದ ಬ್ರಹ್ಮಸೂತ್ರದಲ್ಲಿ "ಎಲ್ಲಾ ಪದಾಥ೯ಗಳಿಗೂ ಭಗವಂತನೇ ಸೃಷ್ಟಿಕತ೯" ಅಂತ ಹೇಳಿದೆ...
  
  ಸಮಸ್ತ ಜಗತ್ತನ್ನು ಹಡೆಯುವ ಮಹಾಲಕ್ಷ್ಮೀದೇವಿಗೂ ಭಗವಂತನೇ ಜನಕ ಅಂತ ಹೇಳಿದೆ....
  
  ಲಕ್ಷ್ಮ್ಯಾದಿ ಸಮಸ್ತ ಚೇತನ ಪ್ರಪಂಚಕ್ಕೂ ಮತ್ತು ಸಕಲ ತತ್ವಗಳಿಗೂ ಭಗವಂತನೇ ಜನಕ ಅಂತ ಹೇಳಿದೆ....
  
  ಮಾಯಾವಾದದ ಪ್ರಶ್ನೆಗಳಿಗೆ ಮಧ್ವಮತ ಸಿಧ್ದಾಂತ ಕೊಡುವ ಉತ್ತರಗಳು ತುಂಬಾ ಸ್ವಾರಸ್ಯಕರವಾಗಿದೆ.....
  
  ನಿಮ್ಮ ನಿರೂಪಣೆಯ ಶೖೆಲಿಯೇ ಪರಮಾದ್ಭುತ....
  
  ನೀವಂದ ವಾಕ್ಯಗಳನ್ನು ಪುನರುಚ್ಚಾರಣೆ ಮಾಡಿಕೊಂಡು ತಿಳಿದಾಗ ಮತ್ತಷ್ಟು ಆನಂದ ನಮ್ಮಂತಹ ಮಂದಮತಿಗಳಿಗೆ🙏🙏
 • Mrs laxmi padaki,Pune

  11:21 AM, 06/05/2018

  👏👏👏👏👏
 • G. A. Nadiger,Navi Mumbai

  11:01 AM, 28/03/2018

  Buddhi manassugaLannu sere hidiyuva adbhutavaada vivarane.
  Anantananta vandanegaLu.
 • P.R.SUBBA RAO,BANGALORE

  11:11 PM, 09/10/2017

  ಶ್ರೀ ಗುರುಭ್ಯೋನಮಃ
  SB022-b: ಗುರುಗಳ ಮಂಗಳಾಚಾರಣ ಶ್ಲೋಕಗಳನ್ನು ಒಂದು ಚಿಕ್ಕ .pdf ನಲ್ಲಿ ಕೊಡಬೇಕಾಗಿ ಪ್ರಾರ್ಥನೆ. ಇದರಿಂದ ನಮಗೆ ಪ್ರತಿದಿನ ಹೇಳಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • P.R.SUBBA RAO,BANGALORE

  11:06 PM, 09/10/2017

  ಶ್ರೀ ಗುರುಭ್ಯೋನಮಃ
  SB022-a: ಶಾಸ್ತ್ರಾರ್ಥದ ತಪ್ಪು ಅರ್ಥವನ್ನು ಯಾಕೆ ಖಂಡಿಸಬೇಕು ಎಂದು ತಿಳಿದೆವು. ಜೊತೆಗೆ ಶ್ರಿವ್ಯಾಸರಾಯರು ಎಷ್ಟೋ ಅದ್ವೈತ ಗ್ರಂಥಗಳನ್ನು ಹುಡುಕಿ ಹುಡುಕಿ ಖಂಡಿಸಿದ್ದಕ್ಕೆ ಕಾರಣ ಈಗ ತಿಳಿಯಿತು.
  ಈ ಕಾಲದಲ್ಲಿ ಎಷ್ಟೋ ದೈತ್ಯರು, ವೈಷ್ಣವರ ಸೋಗಿನಲ್ಲಿ ಬಂದು ನಮ್ಮ ಜೊತೆಯಲ್ಲಿಯೇ ಇದ್ದು ನಮಗೆ ದಾರಿ ತಪ್ಪಿಸುತ್ತಿದ್ದಾರೆ. ಗುರುಗಳು ಉದಾಹರಿಸಿದ ಎಲ್ಲರೂ ಅದೇ ಬಳಗಕ್ಕೆ ಸೇರಿದವರಾಗಿರುತ್ತಾರೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • H. Suvarna kulkarni,Bangalore

  4:27 AM , 22/09/2017

  ಗುರುಗಳಿಗೆ ಪ್ರಣಾಮಗಳು ಮತ್ತೆ ಮತ್ತೆ ಕೇಳಲೇಬೇಕಾದ ಉಪನ್ಯಾಸವಿದು. ಜಿಜ್ಞಾಸುಗಳಿಗೆ ರಸದೌತಣ ಧನ್ಯವಾದಗಳು
 • H. Suvarna kulkarni,Bangalore

  4:26 AM , 22/09/2017

  ಗುರುಗಳಿಗೆ ಪ್ರಣಾಮಗಳು ಮತ್ತೆ ಮತ್ತೆ ಕೇಳಲೇಬೇಕಾದ ಉಪನ್ಯಾಸವಿದು. ಜಿಜ್ಞಾಸುಗಳಿಗೆ ರಸದೌತಣ ಧನ್ಯವಾದಗಳು
 • H. Suvarna kulkarni,Bangalore

  4:26 AM , 22/09/2017

  ಗುರುಗಳಿಗೆ ಪ್ರಣಾಮಗಳು ಮತ್ತೆ ಮತ್ತೆ ಕೇಳಲೇಬೇಕಾದ ಉಪನ್ಯಾಸವಿದು. ಜಿಜ್ಞಾಸುಗಳಿಗೆ ರಸದೌತಣ ಧನ್ಯವಾದಗಳು
 • prema raghavendra,coimbatore

  3:27 PM , 21/09/2017

  Namaskara! Danyavada!
 • Jayashree Karunakar,Bangalore

  10:55 PM, 20/09/2017

  ಗುರುಗಳೆ
  
  ತತ್ವ ಜಿಜ್ಞಾಸುಗಳಿಗೆ ಸರಿಯಾಗಿರುವದನ್ನು ತಿಳಿಸುವುದು ಸರಿ.
   ಆದರೆ ದುವಾ೯ದಿಗಳು ತಮ್ಮ ಪಾಖಂಡತನದಿಂದ ಅಲ್ಲವೆ ಅವರು ವಾದಿಸುವುದು.ಅಂದರೆ ಅವರು ಅಯೋಗ್ಯರಲ್ಲವೆ?
  
  ಶ್ರೀಕೃಷ್ಣ ಭಗವದ್ಗೀತೆಯಲ್ಲಿ "ಅಯೋಗ್ಯರಿಗೆ ತತ್ವವನ್ನು ಹೇಳಬಾರದು ಎಂದಿದ್ದಾರಲ್ಲವೆ

  Vishnudasa Nagendracharya

  ಅಯೋಗ್ಯರಿಗೆ ತತ್ವವನ್ನು ಹೇಳಬೇಕು ಎಂದು ಹೇಳುತ್ತಿಲ್ಲ. 
  
  ಅಯೋಗ್ಯರು ಹೇಳುವ ತತ್ವವನ್ನು ಖಂಡಿಸಬೇಕು ಎಂದು ಹೇಳುತ್ತಿರುವದು. 
  
  ಮತ್ತು, ಅಯೋಗ್ಯರಿಗೆ ತತ್ವವನ್ನು ಹೇಳಿದರೂ ಅವರು ಕೇಳುವದಿಲ್ಲ. ಕೇಳಿದರೆ ಅವರು ಅಯೋಗ್ಯರು ಹೇಗಾಗುತ್ತಾರೆ?
  
  
 • Shantha.raghothamachar,Bangalore

  12:36 PM, 20/09/2017

  ನಮಸ್ಕಾರಗಳು.ಶ್ರವಣೇಂದ್ರಿಯ,ಮನಸ್ಸು, ಬುದ್ಧಿ, ಚಿತ್ತಕೊಟ್ಟು ಏಕಾಗ್ರತೆ ಯಿಂದ ಶ್ರವಣಮಾಡುತ್ತಿದ್ದೇನೆ.ಗ್ರಹಿಸಲು ತ್ತತ್ವಜ್ಞಾನಮಾಡಿಕೊಳ್ಳಲು ಹರಿವಾಯುಗುರುಗಳ ಅನುಗ್ರಹ ಇನ್ನೂ ಆಗಬೇಕು.ವಿಶೇಷವಾದ ಪ್ರವಚನ ಭಾಗ್ಯ ವನ್ನು ಭಗವಂತ ಕರುಣಿಸಿದ್ದಾನೆ.ನಮೋನಮಃ
 • Narasimha Moorthy,Bangalore

  11:27 AM, 20/09/2017

  You have the greatest sense of humour, Acharyre. I couldnt stop laugh loud at times. 
  
  You are a living wonder to me!
 • P N Deshpande,Bangalore

  10:20 AM, 20/09/2017

  As explained by you khandana is a must,to know the Yetarha.It is really a pity as said by you that our own learner ones misguiding.Unfortunate
 • Sangeetha prasanna,Bangalore

  9:58 AM , 20/09/2017

  ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರ ಗಳು .🙏🙏🙏🙏🙏
 • Vidyadheesh,Bangalore

  9:38 AM , 20/09/2017

  convincing and exhaustive. You are teaching us to find pramana before accepting anybodys views. Great service to jijnasu community.
 • Raghoottam Rao,Bangalore

  9:22 AM , 20/09/2017

  ಜ್ಞಾನದ ಬೆಳಕನ್ನು ನೀಡಿ ಕಣ್ ತೆರೆಸುತ್ತಿರುವ ಗುರುಗಳ ಚರಣಕ್ಕೆ ಶರಣು.
 • Niranjan Kamath,Koteshwar

  8:41 AM , 20/09/2017

  Parama mangalavada tatva vannu...atyanta spashtavagi tilisiddiri Gurugale.Namo Namaha.