Upanyasa - VNU517

ಶ್ರೀಮದ್ ಭಾಗವತಮ್ — 24 — ಇತರತಃ ಎಂಬ ಶಬ್ದದ ಅರ್ಥ

ಸರಿಯಾಗಿ ನಿರ್ಣಯಿಸಲ್ಪಟ್ಟ ವೇದಾದಿಶಾಸ್ತ್ರಗಳಿಂದ ದೇವರನ್ನು ತಿಳಿಯಬೇಕು, ಆ ವೇದಶಾಸ್ತ್ರದ ಬೆಂಬಲವಿರುವ ಯುಕ್ತಿಯಿಂದಲೂ ದೇವರನ್ನು ತಿಳಿಯಬಹುದು ಎಂದು ಶ್ರೀ ವೇದವ್ಯಾಸದೇವರು ಅನ್ವಯಾತ್ ಇತರತಃ ಎಂಬ ಶಬ್ದಗಳಿಂದ ತಿಳಿಸುತ್ತಿದ್ದಾರೆ. ಇಲ್ಲಿ ಯುಕ್ತಿ ಎಂದು ಹೇಳಲು ಬಳಸಿದ ಶಬ್ದ ಇತರತಃ ಎಂದು. ಇತರ ಎಂದರೆ ಬೇರೆಯದು ಎಂದರ್ಥ. ಇಲ್ಲಿ ಯುಕ್ತಿಯೇ ಎಂದು ಆ ಶಬ್ದಕ್ಕೆ ಹೇಗೆ ಅರ್ಥವಾಗುತ್ತದೆ ಮತ್ತು ತರ್ಕವನ್ನು ಪ್ರಮಾಣ ಎಂದು ಹೇಗೆ ಒಪ್ಪುವದು ಎನ್ನುವ ಪ್ರಶ್ನೆಗಳಿಗೆ ಉತ್ತರವಿದೆ. 

ತರ್ಕದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಹೀಗಾಗಿ ತರ್ಕ ಪ್ರಮಾಣವಲ್ಲ ಎನ್ನುವದು ಕೆಲವರ ವಾದ. ಯುಕ್ತಿಯಿಂದಲೇ ಯುಕ್ತಿಯನ್ನು ನಿರಾಕರಣೆ ಮಾಡಹೊರಟ ಈ ಜನರ ಮಾತಿಗೆ ಆಚಾರ್ಯರು ನೀಡಿರುವ ದಿವ್ಯವಾದ ಉತ್ತರಗಳ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ. 


ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 


ಜನ್ಮಾದ್ಯಸ್ಯ ಯತೋsನ್ವಯಾತ್ “ಇತರತಃ” ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। 

ಭಾಗವತತಾತ್ಪರ್ಯ — 

ಇತರತಃ । ತರ್ಕತಃ । 

ಸೃಷ್ಟಿಸ್ಥಿತ್ಯಪ್ಯಯೇಹಾದೇಃ ಶ್ರುತಿಸ್ಮೃತಿಸಮನ್ವಯಾತ್। 
“ಯುಕ್ತಿತಶ್ಚೇತ್ತೃಪೂರ್ವಾದೇಃ” ಶ್ರೀಬ್ರಹ್ಮಭವಪೂರ್ವಿಣಃ।
ಸುರಗಂಧರ್ವಮನುಜಪಿತೃದೈತ್ಯಾತ್ಮನಃ ಪೃಥಕ್ ।
ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾನ್ನಚಾಪರಃ। 

Play Time: 40:16

Size: 7.36 MB


Download Upanyasa Share to facebook View Comments
7703 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:19 AM, 21/04/2022

  ಶ್ರೀ ಕೃಷ್ಣಾರ್ಪಣಮಸ್ತು 
   🙏🙏🙏
 • Sowmya,Bangalore

  7:57 PM , 22/02/2022

  🙏🙏🙏
 • Mahadi Sethu Rao,Bengaluru

  6:59 PM , 14/06/2020

  HARE KRISHNA.
 • Vijaya bharathi k b,Bangalore

  12:23 PM, 25/05/2018

  Anantanta vandanegalu
 • P.R.SUBBA RAO,BANGALORE

  4:22 AM , 12/10/2017

  ಶ್ರೀ ಗುರುಭ್ಯೋನಮಃ
  SB024-b: ಗುರುಗಳ ಪ್ರವಚನಗಳನ್ನು ಕೇಳು ತ್ತಿರುವುದರಿಂದ ಪರೋಕ್ಷವಾಗಿ ಮತ್ತೊಂದು ಮಹಾ ಪ್ರಯೋಜನವಾಗುತ್ತದೆ. ಈ ಮೊದಲು ನಾವು ರಾಯರ ಬೃಂದಾವನದ ಮುಂದೆ ಕೈ ಜೋಡಿಸಿ ನಿಂತಾಗ ರಾಯರ (ಅಥವಾ ಶ್ರಿಮಜ್ಜಯತೀರ್ಥಾದಿ ಸಮಸ್ತ ಗುರುಗಳ) ಕಾರುಣ್ಯ, ಅವರ ಗ್ರಂಥಗಳ ಬಗ್ಗೆ ಜ್ಞಾನ ಮುಂತಾದವುಗಳ ಅನುಸಂಧಾನ ಆಗುತ್ತಿರಲಿಲ್ಲ. ಆದರೆ ಈ ನಡುವೆ ಗುರುಗಳು ತಿಳಿಸುತ್ತಿರುವ ಆ ಎಲ್ಲ ವಿಷಯಗಳು ಮನಸ್ಸಿಗೆ ಜ್ಞಾಪಕ ಬಂದು ಜ್ಞಾನಪೂರ್ವಕವಾದ ಭಕ್ತಿ ಜಾಸ್ತಿ ಆಗುತ್ತಿದೆ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • P.R.SUBBA RAO,BANGALORE

  4:01 AM , 12/10/2017

  ಶ್ರೀ ಗುರುಭ್ಯೋನಮಃ
  SB024: ಭಾಗವತದ ಪ್ರತಿ ಅಕ್ಷರ, ಪ್ರತಿ ಪದ ಪ್ರತಿ ಶ್ಲೋಕ ಮುಂತಾದವು ಭಗವಂತನ ಪ್ರತಿಮಾ, ಮತ್ತು ಇವುಗಳ ಅರ್ಥ ತಿಳಿಯಿವುದೇ ಭಗವಂತನ ನಿಜವಾದ ಪೂಜೆ ಎಂಬ ಆಲೋಚನೆ, ಅನುಸಂಧಾನ ಪರಮಾದ್ಭುತವಾಗಿದೆ. ಈ ಮೊದಲು ಪರಮ ಮಂಗಳಕರವಾದ ಈ ಪ್ರಮೇಯ ಕೇಳಿರಲಿಲ್ಲ.
  ವೇದಗಳು ಆಗಮ ಯಾಕೆ, ವೇದಗಳು ಭಗವಂತನನ್ನು ತಿಳಿಯಲು ಹೇಗೆ ಸಹಾಯ ಮಾಡುತ್ತವೆ, ಭಗವಂತನಿಗೆ ಕಾರಣ ಇಲ್ಲ/ಬೇ ಕಿಲ್ಲ ಎಂಬುದನ್ನು ತಿಳಿದೆವು.
  ಯುಕ್ತಿ, ತರ್ಕ ಮುಂತಾದವುಗಳ ಬಗ್ಗೆ ಪಕ್ಷಿನೋಟ ದೊರೆಯಿತು. ಗುರುಗಳ ಪ್ರತಿ ಪದ, ವಾಕ್ಯ ಬಹಳ ಅರ್ಥಸಾಂದ್ರವಾಗಿದೆ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • ಭಾರದ್ವಾಜ,ಬೆಂಗಳೂರು

  11:39 AM, 07/10/2017

  ಶ್ರೀ ಗುರುಭ್ಯೋ ನಮಃ 
  
  ಕೇವಲ ಅನುಭವದ (ಅಂದರೆ ಆಗಮದ ಆಧಾರವಿಲ್ಲ) ಆಧಾರವಿರುವ ಯುಕ್ತಿ ಸದ್ಯುಕ್ತಿಯಾಗಲು ಸಾಧ್ಯವೇ? ದಯಮಾಡಿ ತಿಳಿಸಿ.

  Vishnudasa Nagendracharya

  ಅವಶ್ಯವಾಗಿ. 
  
  ತಾಯಿ ಮಗುವಿನ ಹಸಿವನ್ನು ತಿಳಿಯುವದು ತನ್ನ ಅನುಭವದ ಆಧಾರವಿರುವ ಯುಕ್ತಿಯಿಂದಲೇ. 
  
  ಎಲ್ಲಿಯೋ ಹೊಗೆ ಕಂಡಾಗ, ಬೆಂಕಿ ಬಿದ್ದಿದೆ ಎಂಬ ಜ್ಞಾನ ಬರುವದು ನಮ್ಮ ಪ್ರತ್ಯಕ್ಷದ ಆಧಾರವಿರುವ ಯುಕ್ತಿಯಿಂದಲೇ. 
 • ಗುರುರಾಜಾಚಾರ್ಯ ಕೃ. ಪುಣ್ಯವಂತ.,ಹುಬ್ಬಳ್ಳಿ

  6:38 PM , 23/09/2017

  ತಮಗೆ ದೇಹ ಸೌಖ್ಯವಿಲ್ಲವೆನ್ನುವದು ದ್ವನಿಯ ಮೂಲಕ ಗೊತ್ತಾಗುತ್ತದೆ. ಆದರೂ ನಮಗೋಸ್ಕರ ತಾವು ಲೆಕ್ಕಿಸದೇ ಕೊಡುತ್ತಿರುವ ಸೇವೆ ಎಣಿಸಲಸದಳ.

  Vishnudasa Nagendracharya

  ಶ್ರೀಹರಿ ಗುರುಗಳು ಅನುಗ್ರಹಿಸಿದ ದೇಹ ಭಾಗವತದ ಸೇವೆಗೆ ವಿನಿಯುಕ್ತವಾಗುತ್ತಿರುವದು ನನ್ನ ಸೌಭಾಗ್ಯ. ಒಂದು ದಿವಸವೂ ನಿಲ್ಲದಂತೆ ಆ ಸ್ವಾಮಿ ನಡೆಸಬೇಕು. 
 • Vidyadheesh,Bangalore

  8:57 AM , 23/09/2017

  Fantastic.
 • Raghoottam Rao,Bangalore

  8:02 PM , 22/09/2017

  I completely agree with the views of Narasimha Murthy sir. 
  
  These pravachanas are of incalculable value.
 • Narasimha Moorthy,Bangalore

  7:53 PM , 22/09/2017

  You know something Acharyare, the time I am spending to listen your upanyasas are THE BEST MOMENTS of my life. 
  
  Everyday you are making my day through these most valuable pravachanas. Every single discourse worth its weight in gold. 
  
  My day starts with your upanyasa runs with your upanyasa and ends with your upanyasa. You have just mesmerised me by the bhagavata discourses.
  
  My bhaktipurvaka namaskaras to you.

  Vishnudasa Nagendracharya

  ಶ್ರೀಮದ್ ಭಾಗವತದ ಮಾಹಾತ್ಮ್ಯವಿದು. ಅಂತಹ ಪರಮಾದ್ಭುತರಸ ಈ ಮಹಾಗ್ರಂಥದಲ್ಲಿ ಅಡಗಿದೆ.
  
  ಭಾವುಕರಿಗೆ, ಭಕ್ತರಿಗೆ ರಸದೌತಣ ಶ್ರೀಮದ್ ಭಾಗವತ. ಇದನ್ನು ಸಜ್ಜನರಿಗೆ ನೀಡಲು ಶ್ರೀಹರಿ ವಾಯು ದೇವತಾ ಗುರುಗಳು ನನ್ನನ್ನು ಆರಿಸಿಕೊಂಡಿರುವದು ನನ್ನ ಸೌಭಾಗ್ಯ. 
  
  ಶ್ರೀಮದ್ ಭಾಗವತಾಸಕ್ತಿ ನಿಮ್ಮೆಲ್ಲರಲ್ಲಿಯೂ ಹೀಗೇ ಬೆಳೆಯುತ್ತಿರಲಿ ಎಂದು ಗುರುಗಳನ್ನು ಪ್ರಾರ್ಥಿಸುತ್ತೇನೆ. 
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:19 PM , 22/09/2017

  ಗುರುಗಳಿಗೆ ನಮಸ್ಕಾರಗಳು. ಉಪನ್ಯಾಸ ಬಹಳ ಚೆನ್ನಾಗಿ ಮೂಡಿಬಂದಿದೆ. ಅನೇಕ ನಮಸ್ಕಾರಗಳು. ನಿಮ್ಮ ಉಪನ್ಯಾಸ ಕೇಳಿನಮ್ಮಜನ್ಮಸಾರ್ಥಕ ವಾಗುತ್ತಿದೆ ಎಂದು ನಂಬುತ್ತಿದ್ದೇನೆ.

  Vishnudasa Nagendracharya

  ಪ್ರವಚನದಿಂದ ನನ್ನ ಜನ್ಮವನ್ನು ಸಾರ್ಥಕಗೊಳಿಸುತ್ತಿರುವ, ಶ್ರವಣದಿಂದ ನಿಮ್ಮೆಲ್ಲರಿಗೂ ಸಂತೋಷವನ್ನು ನೀಡುತ್ತಿರುವ ಶ್ರೀಮದ್ ಭಾಗವತದಲ್ಲಿ ಸನ್ನಿಹಿತನಾದ ಶ್ರೀಕೃಷ್ಣನ ಮಹಾವ್ಯಾಪಾರವಿದು. ಅವನ ಚರಣಗಳಿಗೆ ಸಾಷ್ಟಾಂಗ ನಮಸ್ಕಾರಗಳು. 
 • Mrs laxmi laxman padaki,Pune

  12:24 PM, 22/09/2017

  Namo namaha
 • Niranjan Kamath,Koteshwar

  11:58 AM, 22/09/2017

  Guragala Charanarvind galige namo namaha. Ivattina arthanusandhanakke neevu needida kelavu udaharegalu taatparya vannu artha madikollalikke sulabhavayitu. Dhanyosmi.
 • P N Deshpande,Bangalore

  11:27 AM, 22/09/2017

  The real interest is being created by your great explanation to a lay man like me.Anugrhavirali
 • P N Deshpande,Bangalore

  11:24 AM, 22/09/2017

  S.Namaskargalu The art of teaching is a gift & which has been gifted to you by Almighty. Continued
 • prema raghavendra,coimbatore

  10:59 AM, 22/09/2017

  "Itharatha"roopadalliruva paramathmana pooje ivathu ayithu.acharyarige namaskara!
 • Shantha.raghothamachar,Bangalore

  9:14 AM , 22/09/2017

  ನಮಸ್ಕಾರ ಗಳು.ಪ್ರವಚನ ಸುಲಿದ ಬಾಳೆಹಣ್ಣಿನಂತಿತ್ತು.ಸತ್ತರ್ಕ ಕುತರಾಕದಬಗ್ಗೆ ತಿಳಿಯುವ ಕಾತರ ನಾಳಿನ ಪ್ರವಚನಕ್ಕೆ ಕಾಯುವಂತೆ ಮಾಡಿದೆ.ಧನ್ಯವಾದಗಳು
 • Jayateertha B,Davanagere

  8:33 AM , 22/09/2017

  Adbhuta. 
  
  40 nimisha kaledaddu gottagale illa. Atyuttama vivaranegalu.