Upanyasa - VNU521

ಶ್ರೀಮದ್ ಭಾಗವತ — 28 — ಸರ್ವಜ್ಞನಾದ್ದರಿಂದ ದೇವರು ಸರ್ವಕರ್ತಾ

ದೇವರು ಎಲ್ಲದರ ಸೃಷ್ಟ್ಯಾದಿಗಳನ್ನು ಮಾಡುತ್ತಾನೆಯಾದ್ದರಿಂದಲೇ ಅವನು ಸರ್ವಜ್ಞ ಎಂದು ಸಿದ್ಧವಾಗುತ್ತದೆ ಎಂದು ತಿಳಿದೆವು. ಸರ್ವಜ್ಞನಾದ್ದರಿಂದಲೂ ದೇವರನ್ನು ಸರ್ವಕರ್ತಾ ಎಂದು ಒಪ್ಪಬೇಕು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ಒಂದು ಕಾರ್ಯವನ್ನು ಮಾಡುವ ಜ್ಞಾನವಿದ್ದ ಮಾತ್ರಕ್ಕೆ ಜನರು ಆ ಕಾರ್ಯವನ್ನು ಮಾಡುವದಿಲ್ಲವಲ್ಲ, ದೇವರು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 


ಜನ್ಮಾದ್ಯಸ್ಯ ಯತೋsನ್ವಯಾದಿತರತಃ ಚ “ಅರ್ಥೇಷ್ವಭಿಜ್ಞಃ” ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। 

ಭಾಗವತತಾತ್ಪರ್ಯ — 

ಅಭಿಜ್ಞಃ ಸರ್ವಜ್ಞಃ । ಅತೋ ಯುಜ್ಯತೇ ।

“ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾತ್” 

Play Time: 34:59

Size: 6.45 MB


Download Upanyasa Share to facebook View Comments
7074 Views

Comments

(You can only view comments here. If you want to write a comment please download the app.)
 • Sowmya,Bangalore

  7:48 PM , 08/03/2022

  🙏🙏🙏
 • G. A. Nadiger,Navi Mumbai

  8:20 AM , 04/04/2018

  Namma melina karunyadindagi, Bhagavatada klishta prameyagaLannu sulubhavagi artha vaguva reetiyalli vivarsuva Tamage anantananta dhanyavadagaLu, praNamagaLu.
 • prema raghavendra,coimbatore

  6:47 PM , 27/09/2017

  Anantha namaskara! Danyavada!
 • PRATIMADHAV,Auckland, N.Z.

  4:33 AM , 27/09/2017

  Vishwanandini bandhavaru koti janmada punya phalavaagi aa SriHari nimminda ee gyana kaarya maadista iddane antha nanna dhruda nambike.
  
  There is always a very forceful, strong positive aura around us while listening to all the Upanyasagalu, especially in the current Srimad Bhagavata series. This impact delightfully stays forever....since it touches the soul!!
  
  Most of us are not fortunate enough to attend Gurukula since childhood and learn the intricacies of Srimadacharyara Siddhanta. Reasons could be many, and women cannot attend nor learn Vedagalu anyway. But I feel immensely happy that karunaasamudranaada Bhagavanta has graced and blessed me and everyone else who is enjoyi g such blessings via Vishwanandini and through nimma satsankalpa.
  
  Nimage manahpurvakada pranamagalu.
  
  Will definitely enquire about any doubts that might arise in the related topics.
  
  Namaskara.
 • Sandeep Kulkarni,Bangalore

  9:01 PM , 26/09/2017

  ಸರ್ವಜ್ಞ ಎಂದರೆ ಏನು ಎಂದು ಪೂರ್ಣವಾಗಿ ತಿಳಿಯದಿದ್ದಲ್ಲಿ ಜನ್ಮಾದಿ ಕಾರಣ ಹೇಗಾಗುತ್ತಾನೆ ಎಂಬ ಪ್ರಶ್ನೆ ಮೂಡುತ್ತದೆ , ಇಲ್ಲವಾದಲ್ಲಿ ಪ್ರಶ್ನೆ ಮೂಡುವದೇ ಇಲ್ಲ ಎಂಬುದು ನಿಮ್ಮ ಉಪನ್ಯಾಸದಿಂದ ತಿಳಿಯಿತು..
 • Jayashree Karunakar,Bangalore

  2:16 PM , 26/09/2017

  ಗುರುಗಳೆ
  ಈ ರೀತಿಯ ಚಿಂತನೆಗಳಿಂದ
  ನಮಗೆ ಭಗವಂತನ ಬಗ್ಗೆ ತಿಳುವಳಿಕೆ,ಭಕ್ತಿ ಧೃಡವಾಗುತ್ತಾ ಹೋಗುತ್ತದೆ.ಆದರೆ ಒಂದು ಸಂದೇಹ
   ತಕ೯ಗಳಿಂದ, ಯುಕ್ತಿಗಳಿಂದ ಭಗವಂತನ ಸವ೯ಜ್ಞತ್ವ, ಮುಂತಾದ ಗುಣಗಳನ್ನು ಕಂಡುಕೊಳ್ಳುವದು ಅವನಿಗೆ ನಾವು ಅಪಚಾರ ಮಾಡಿದಂತಾಗುವುದಿಲ್ಲವೆ.
  
  ಸಾಮಾನ್ಯವಾಗಿ ಲೋಕದಲ್ಲಿಯೆ ಕೆಲವು ಗಣ್ಯವ್ಯಕ್ತಿಗಳ ಸಾಮಥ್ಯ೯ವನ್ನು ಅದರ ಅರಿವಿದ್ದಾಗಲೂ 
  ಅನುಮಾನಹೊಂದಿ ವಿಮ೯ಶೆ ಮಾಡುವದು ಅಗೌರವ ತೋರಿಸಿದಂತಲ್ಲವೆ

  Vishnudasa Nagendracharya

  ಇದು ಕೇವಲ ಸಂಶಯ ಪಡುವದಲ್ಲ. ತಿಳಿದ ತತ್ವವನ್ನು ದೃಢೀಕರಣ ಮಾಡಿಕೊಳ್ಳುವದು. 
  
  ದೇವರು ಗುರುಗಳು ನಮ್ಮ ರಕ್ಷಕರು ಎಂಬ ಅರಿವಿದ್ದಾಗಲೂ, ನಮ್ಮ ಅನುಭವಕ್ಕೇ ಅದು ಬಂದಾಗ ಅವರಲ್ಲಿ ಇನ್ನೂ ಹೆಚ್ಚಿನ ಭಕ್ತಿಯನ್ನು ಮಾಡುವಂತೆ, ವೇದಗಳಿಂದ ತಿಳಿದ ತತ್ವಗಳನ್ನು ನಮ್ಮ ಅನುಭವ ಯುಕ್ತಿಗಳಿಂದ ದೃಢ ಮಾಡಿಕೊಳ್ಳಬೇಕು. ಅದು ಭಗವಂತನಿಗೆ ಅತ್ಯಂತ ಪ್ರಿಯ. 
  
  
 • Jayashree Karunakar,Bangalore

  3:33 PM , 26/09/2017

  ಗುರುಗಳೆ
  
  ಭಗವಂತನನ್ನು ತಿಳಿಯಲು ಸಾಧ್ಯವಾಗುವುದೆ ವೇದಗಳಿಂದ
  
  ಮತ್ತು ವೇದವ್ಯಾಸ ದೇವರೇ ಹೇಳಿದರು ವೇದಗಳು ಹೇಳಿವೆಯಾದ್ದರಿಂದ "ಭಗವಂತ ಸವ೯ಕತಾ೯ " ಎಂದು
  
  ಹಾಗಾದರೆ ನಮಗೆ ತಿಳಿಯಿತು ವೇದಗಳು ಬಹಳ ಮಹತ್ತ್ವದ್ದು ಮತ್ತು ವೇದಕಾರಣನೂ ಅವನೇ ಎಂದು.
  
  ಹಾಗಾಗಿ ಶಾಂಕರರು ಹೇಳುವ ಹಾಗೆ ಭಗವಂತ ವೇದಕಾರಣ (ವೇದವ್ಯಾಸ ದೇವರೂ ವೇದಕ್ಕೆ ಮಹತ್ವವನ್ನು ಕೊಟ್ಟಿದ್ದಾರೆ) ಅದಕ್ಗ್ಕಾಗಿ,ಭಗವಂತ ಸವ೯ಕತ೯ ಎಂದೇಕೆ ಒಪ್ಪಬಾರದು.
  
  ಮನೆಯ ಚಿತ್ರವನ್ನು ಬರೆದವನಿಗೆ, ಮನೆ ನಿಮಿ೯ಸುವ ಕುಶಲತೆ ಇರದಿರಲೂ ಬಹುದು ಅದಕ್ಕಾಗಿ ಎಂದಿರಿ.
  
  ಆದರೆ ಇಲ್ಲಿ ಮನೆಯ ಚಿತ್ರವು ಮನೆಯನ್ನು ಬಿಟ್ಟು ಬೇರೆ ಎನನ್ನೂ ಹೇಳುವುದಿಲ್ಲ, ಅದೂ ಪೂಣ೯ವಾಗಿ ಹೇಳುವದಿಲ್ಲ.
  
  ಆದರೆ ವೇದಗಳು ಹಾಗಿಲ್ಲವಲ್ಲ, ವೇದಗಳು ಭಗವಂತನನ್ನು ಮತ್ತು ಅವನ ಸವ೯ಕತ್ತ್ವವನ್ನಲ್ಲವೆ..ಹೇಳುವುದು.
  ಹಾಗಾಗಿ ಇಂತಹ ವೇದಕ್ಕೆ ಅವನು ಕಾರಣನಾಗಿದ್ದಾನೆ ಅದಕ್ಕಾಗಿ ಅವನ ಸವ೯ಕತ್ತ್ವವನ್ನು ಒಪ್ಪುವದೂ ಕೊಡಾ ಯಾಕಾಗಬಾರದು?

  Vishnudasa Nagendracharya

  ನಮ್ಮ ಎಲ್ಲ ಸಿದ್ಧಾಂತಗಳ ಮೂಲ ವೇದಗಳೇ. ಸಂಶಯವಿಲ್ಲ. 
  
  ಆದರೆ ದೇವರು ವೇದಕಾರಣನಲ್ಲ. ಅಂದರೆ ವೇದಗಳನ್ನು ಭಗವಂತ ಬರೆದದ್ದಲ್ಲ. ಅವು ಅಪೌರುಷೇಯ. 
  
  ವೇದಗಳನ್ನು ಮೊಟ್ಟ ಮೊದಲ ಬಾರಿಗೆ ಬ್ರಹ್ಮದೇವರಿಗೆ ಉಪದೇಶ ಮಾಡಿದ ಗುರು ಭಗವಂತ. ಅಷ್ಟೆ ಹೊರತು, ವೇದಗಳ ನಿರ್ಮಾತೃವಲ್ಲ. 
  
  VNA237 ನೇ ಉಪನ್ಯಾಸವನ್ನು ಮತ್ತೊಮ್ಮೆ ಕೇಳಿ. ಪೂರ್ಣವಾಗಿ ಅರ್ಥವಾಗುತ್ತದೆ. 
 • Shantha.raghothamachar,Bangalore

  11:36 AM, 26/09/2017

  ನಮಸ್ಕಾರಗಳು.ಜ್ಞಾನಪ್ರದವಾದ ಪ್ರವಚನ. ನಮೋನಮಃ
 • P N Deshpande,Bangalore

  10:29 AM, 26/09/2017

  S.Namaskargalu.Taawu tilsida tilisttirwa vishaygalu Namma yeathashakkti purnawwagi mananawaaguwante anugrhisabeaku
 • Raghoottam Rao,Bangalore

  9:47 AM , 26/09/2017

  No parallel to our Madhwa Shastra. Jai Madhwaraya.
 • Mrs laxmi laxman padaki,Pune

  9:21 AM , 26/09/2017

  Koti koti namaskaragalu Gurujiyavarige.
 • Vidyadheesh,Bangalore

  8:57 AM , 26/09/2017

  What a discourse!
  
  This is called real amrita paana.
 • Niranjan Kamath,Koteshwar

  7:54 AM , 26/09/2017

  Shri Narayana Akhila Guro Bhagavan Namaste.Shrimad Achryara hagu Shrimad Teekakatpadacharyara taatparya vannu kelisuva bhagyavannu nimminda namage Karunisida Bhagavanthanige hagu nimma charanarvind galige namo namaha.