Upanyasa - VNU523

ಶ್ರೀಮದ್ ಭಾಗವತಮ್ — 30 — ಬ್ರಹ್ಮದೇವರಿಗೂ ಉಪದೇಶಕ

ಮೊದಲ ಪದ್ಯದಲ್ಲಿನ “ತೇನೇ ಬ್ರಹ್ಮ ಹೃದಾ ಯ ಆದಿಕವಯೇ” ಎಂಬ ಶಬ್ದಗಳ ಅರ್ಥಾನುಸಂಧಾನ. 

ಬ್ರಹ್ಮದೇವರಿಗೆ ಜ್ಞಾನ ಪಡೆಯುವದಕ್ಕಾಗಿ ಅಧ್ಯಯನದ ಆವಶ್ಯಕತೆಯೂ ಇಲ್ಲ. ಶಾಸ್ತ್ರಗಳು ತಿಳಿಸುವ ಸಕಲ ತತ್ವಗಳನ್ನೂ ಅವರು ಅಧ್ಯಯನ ಮಾಡದೆಯೇ ತಿಳಿದಿದ್ದಾರೆ. ಅಂತಹ ಆದಿಸರ್ವಜ್ಞರಾದ, ಸಕಲಸುರರಿಗೂ ಗುರುಗಳಾದ ಬ್ರಹ್ಮದೇವರಿಗೆ ಅಧ್ಯಯನದ ಆವಶ್ಯಕತೆಯೇ ಇಲ್ಲ ಎಂದು ಶಾಸ್ತ್ರಗಳು ಸಾರುತ್ತವೆ. ಹಾಗಾದರೆ ದೇವರಿಂದ ಉಪದೇಶ ಪಡೆಯುವ ಆವಶ್ಯಕತೆಯೇನು ಎನ್ನುವದರ ನಿರೂಪಣೆ ಇಲ್ಲಿದೆ. ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ತಿಳಿಸಿದ ತತ್ವರತ್ನಗಳ ಚಿಂತನೆಯೊಂದಿಗೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

जन्माद्यस्य यतोन्वयादितरतश्चार्थेष्वभिज्ञः स्वराट्
“तेने ब्रह्म हृदा य आदिकवये” मुह्यन्ति यं सूरयः ।
तेजोवारिमृदां यथा विनिमयो यत्र त्रिसर्गो मृषा 
धाम्ना स्वेन सदा निरस्तकुहकं सत्यं परं धीमहि ।।1।।

ಭಾಗವತತಾತ್ಪರ್ಯ — 

तेने ब्रह्म हृदा य आदिकवये । स हि “विश्वा जातानि परिता बभूव” नान्यः । हृदा स्नेहात् ।


Play Time: 40:40

Size: 7.42 MB


Download Upanyasa Share to facebook View Comments
6931 Views

Comments

(You can only view comments here. If you want to write a comment please download the app.)
 • Sowmya,Bangalore

  8:03 PM , 10/03/2022

  🙏🙏🙏
 • Jyothi Gayathri,Harihar

  8:35 PM , 30/10/2020

  Sri gurubhyo namaha 🙏🙏🙏🙏
 • Jayashree karunakar,Bangalore

  12:42 PM, 22/09/2020

  ಗುರುಗಳೇ ಕೆಳಗಿನ ಉತ್ತರದಲ್ಲಿ ನೀವು  "ಪರಮಾತ್ಮ ಯಾರಿಂದಲೂ ತಿಳಿಯಲಾಗದ ತನ್ನನ್ನೂ ಪರಿಪೂರ್ಣ ವಾಗಿ ತಿಳಿದಿದ್ದಾನೆ" ಅಂದರೆ, ಬ್ರಹ್ಮ ದೇವರಿಗೂ ತಿಳಿಯದ ತನ್ನಲ್ಲಿರುವ ಗುಣಗಳನ್ನು ತಾನು ತಿಳಿದಿದ್ದಾನೆ ಅಂತಾಯಿತು... 
  ಅಂದರೆ ಅವನಿಗೂ ತಿಳಿಯದ ಇನ್ನಷ್ಟು ಗುಣಗಳು ಇದೆ ಅoತಾಗುವದಿಲ್ಲವೇ? 
  
  ಹಾಗೆ ತಿಳಿಯದೇ ಇದ್ದರೆ ಸರ್ವಜ್ಞ ಅಂತ ಹೇಗೆ ತಿಳಿಯುವದು ?

  Vishnudasa Nagendracharya

  “ತನ್ನನ್ನು ತಾನು ಪರಿಪೂರ್ಣವಾಗಿ ತಿಳಿದಿದ್ದಾನೆ” ಎಂದ ಬಳಿಕ ಅವನಿಗೆ ತಿಳಿಯದೇ ಇರುವ ಅಂಶ ಎಲ್ಲಿಂದ ಬರಲಿಕ್ಕೆ ಸಾಧ್ಯ?
  
  “ಬ್ರಹ್ಮದೇವರು ಜಗತ್ತಿನ ಕುರಿತು ಪರಿಪೂರ್ಣವಾಗಿ ತಿಳಿದಿದ್ದಾರೆ” ಎಂದರೆ ಅವರಿಗೆ ಜಗತ್ತಿನಲ್ಲಿ ತಿಳಿಯದೇ ಇರುವ ಅಂಶ ಎಲ್ಲಿಂದ ಬರಲಿಕ್ಕೆ ಸಾಧ್ಯ. 
  
  ಪರಿಪೂರ್ಣವಾಗಿ ತಿಳಿದಿದ್ದಾರೆ ಎಂದರೆ ತಿಳಿಯಬೇಕಾದ ಅಂಶ ಉಳಿದಿಲ್ಲ ಎಂದು ತಾನೇ ಅರ್ಥ. 
 • Soundarya,Bangalore

  11:44 PM, 13/09/2020

  ಆಚಾರ್ಯರಿಗೆ ನಮಸ್ಕಾರಗಳು.ದೇವರ ಜ್ಞಾಕ್ಕೂ ಬ್ರಹ್ಮದೇವರ ಜ್ಞಾನಕ್ಕೂ ವ್ಯತ್ಯಾಸವಿದೆಯಲ್ಲವ ಹಾಗಿದ್ದರೆ ಇಬ್ಬರನ್ನು ಸರ್ವಜ್ಞರು ಎಂದು ಕರೆಯಲು ಹೇಗೆ ಸಾಧ್ಯ ಆಚಾರ್ಯರೆ.
  ಧನ್ಯವಾದಗಳು.

  Vishnudasa Nagendracharya

  ಬ್ರಹ್ಮದೇವರನ್ನು ಸರ್ವಜ್ಞರು ಎಂದಾಗ ಜೀವ-ಮತ್ತು ಜಡಗಳ ಕುರಿತಾದ ಪೂರ್ಣ ಜ್ಞಾನವುಳ್ಳವರು, ಆದ್ದರಿಂದ ಸರ್ವಜ್ಞರು ಎಂದರ್ಥ. ಮತ್ತು ಅವರ ಸರ್ವಜ್ಞತ್ವವೂ ದೇವರ ಲಕ್ಷ್ಮೀದೇವಿಯರ ಅಧೀನ ಎಂದರ್ಥ. 
  
  ದೇವರು ಸರ್ವಜ್ಞ ಎಂದಾಗ ದೇವರ ಸರ್ವಜ್ಞತ್ವದಲ್ಲಿ ಯಾವುದೇ ನ್ಯೂನತೆಯಿಲ್ಲ, ಯಾರಿಂದಲೂ ಪೂರ್ಣವಾಗಿ ತಿಳಿಯಲಾಗದ ತನ್ನನ್ನೂ ತಾನು ಸ್ವಾಮಿ ಪರಿಪೂರ್ಣವಾಗಿ ತಿಳಿದಿದ್ದಾನೆ ಮತ್ತು ಅವನ ಸರ್ವಜ್ಞತ್ವ ಸ್ವತಂತ್ರವಾದದ್ದು ಎಂದರ್ಥ. 
  
  ದೀಪವೂ ಬೆಳಕನ್ನು ನೀಡುತ್ತದೆ. ಚಂದ್ರ ಸೂರ್ಯರೂ ಬೆಳಕನ್ನು ನೀಡುತ್ತಾರೆ. ಅಗ್ನಿ, ಚಂದ್ರ, ಸೂರ್ಯ ಮೂರರಲ್ಲಿಯೂ ಪ್ರಕಾಶವಿದೆ. ಆದರೆ ತಾರತಮ್ಯದೊಂದಿಗೆ. ಹಾಗೆ ಸರ್ವಜ್ಞತ್ವವೂ ಸಹಿತ. 
 • Mahadi Sethu Rao,Bengaluru

  7:00 PM , 14/06/2020

  HARE KRISHNA.
 • ಸುದರ್ಶನ ಶ್ರೀ. ಲ.,ಬೆಂಗಳೂರು

  7:26 AM , 04/10/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  
  ದೇವರ ಅನುಗ್ರಹದಿಂದ ಪ್ರಸಾದ ಅದರಿಂದ ಫಲ ದೊರೆಯುತ್ತದೆ ಎಂದಿರಿ ಗುರುಗಳೆ🙏 ಪ್ರಸಾದಕ್ಕೂ ಫಲಕ್ಕೂ ಏನು ವ್ಯತ್ಯಾಸ? ಭಗವಂತನ ಅನುಗ್ರಹವಾಯಿತು, ಭಗವಂತನ ಪ್ರಸಾದವಾಯಿತು, ಭಗವಂತ ಫಲ ಕೊಟ್ಟನು ಎಲ್ಲವೂ ಒಂದೇ ಅರ್ಥವನ್ನು ತೋರಿಸುತ್ತದೆಯಲ್ಲ 🙏
  
  ಬ್ರಹ್ಮ‌ ಸರಸ್ವತಿ ದೇವತೆಗಳು ಮುಕ್ತರಾದಮೇಲೆ ೧೦೦ ನೇಯ ಋಜು ದಂಪತಿಗಳಾಗಿ ಬರುವವರು ಆ ಋಜು ಪದವಿಗೆ ಬರುವ ಮುಂಚೆ ಭಗವಂತನ ಧ್ಯಾನಾಸಕ್ತರಾಗಿ ಇರುತ್ತಾರೆಯೆ ಗುರುಗಳೆ🙏?

  Vishnudasa Nagendracharya

  ಜ್ಞಾನ, ಮೋಕ್ಷ ಮುಂತಾದವು ಫಲ. ಅದು ದೊರೆಯುವದು ದೇವರ ಅನುಗ್ರಹದಿಂದ. ದೇವರ ಪ್ರಸಾದವೇ ದೇವರ ಅನುಗ್ರಹ. 
  
  ಬ್ರಹ್ಮಪದವಿಗೆ ಬರುವ ದೇವತೆ ವಾಯುದೇವರಾಗಿರುತ್ತಾರೆ. ವಾಯು ಪದವಿಗೆ ಬರುವವರು ಲಾತವ್ಯ ಎನ್ನುವ ಹೆಸರಿನಿಂದ ಸಾಧನೆ ಮಾಡುತ್ತಿರುತ್ತಾರೆ. 
  
  
 • prema raghavendra,coimbatore

  11:23 AM, 01/10/2017

  Anantha namaskara! Danyavada!
 • prema raghavendra,coimbatore

  11:23 AM, 01/10/2017

  Anantha namaskara! Danyavada!
 • prema raghavendra,coimbatore

  6:24 PM , 30/09/2017

  Anantha namaskara! Danyavada!
 • H. Suvarna kulkarni,Bangalore

  11:40 PM, 29/09/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ಕೇಳುತ್ತಾ ಕೇಳುತ್ತಾ ಸತತ ಭಗವಂತನ ಚಿಂತನೆ ಮಾಡಬೇಕು ಎಂಬ ಅರಿವು ಮೂಡುತ್ತಿದೆ
 • Shridhar Patil,Bangalore

  12:29 PM, 28/09/2017

  ಶ್ರೀಹರಿಯ ಸರ್ವಜ್ಞತ್ವದ ಜೊತೆಗೆ ವಾಯುದೇವರ ಸರ್ವಜ್ಞತ್ವದ ಹಾಗೂ ಜೀವೊತ್ತಮತ್ವವನ್ನು ಧ್ರಢಪಡಿಸುವುದರೊಂದಿಗೆ ಯಾಕೆ ನಾವು ಆಚಾರ್ಯ ಮಧ್ವರ ಮಾತುಗಳನ್ನು ಎಳ್ಳಷ್ಟೂ ಸಂಶಯ ಪಡದೆ ನಂಬಬೇಕು ಎಂಬ ವಿಚಾರ ಸುಂದರವಾಗಿ ನಿರೂಪಿತವಾಗಿದೆ. ಧನ್ಯವಾದಗಳು. ಹರಿಃ ಓಂ .

  Vishnudasa Nagendracharya

  ವಿಶ್ವನಂದಿನಿಯ ಬಾಂಧವರಲ್ಲಿ ವಿನಂತಿ. 
  
  ಆಚಾರ್ಯ ಮಧ್ವ ಎನ್ನುವದು ಅಗೌರವಯುಕ್ತವಾದ ಪ್ರಯೋಗ. ದಯವಿಟ್ಟು ಆ ರೀತಿಯ ಶಬ್ದವನ್ನು ಯಾರೂ ಸಹ ವಿಶ್ವನಂದಿನಿಯಲ್ಲಿ ಯಾವುದೇ ಸಂದರ್ಭದಲ್ಲಿಯೂ ಪ್ರಯೋಗಿಸಕೂಡದು. 
  
  ಶ್ರೀಮದಾಚಾರ್ಯರು, ಭಗವತ್ಪಾದಾಚಾರ್ಯರು ಅಥವಾ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮುಂತಾದ ಶಬ್ದಗಳನ್ನು ಬಳಸಬೇಕು.. 
  
  ನಿಮ್ಮ ಮಾತಿನಲ್ಲಿ ಆಚಾರ್ಯರ ಶಾಸ್ತ್ರದ ಕುರಿತ ಸ್ಪಷ್ಟವಾದ ಗೌರವ ಕಾಣುತ್ತಿರುವದರಿಂದ ಈ ಕಾಮೆಂಟನ್ನು ಹಾಗೆಯೇ ಉಳಿಸುತ್ತಿದ್ದೇನೆ. ಮತ್ತು ನಮ್ಮ ಆದಿಗುರುಗಳಿಗೆ ಅಗೌರವ ಮಾಡುವ ಉದ್ದೇಶ ನಿಮಗಿಲ್ಲ ಎಂದು ಸ್ಪಷ್ಟವಾಗಿ ನನಗೆ ತಿಳಿದಿದೆ. ಆದರೆ ಮುಂದೆ ಈ ರೀತಿಯಾಗಿ ನಡೆಯಬಾರದೆಂದು ವಿನಂತಿಸುತ್ತೇನೆ. 
 • Prasanna Kumar N S,Bangalore

  3:37 PM , 28/09/2017

  ನಿಮ್ಮ ಪ್ರವಚನ ನಮಗೆ ಲಭ್ಯ ವಾಗಿರುವುದು 
  
  ನಮ್ಮ ಎಷ್ಟೋ ಜನುಮಗಳ ಪುಣ್ಯದ ಫಲ 
  
  ಅನಿಸುತ್ತೆ. ನಾಸ್ತಿಕರನ್ನು ಸಹ ಆಸ್ತಿ ಕರನ್ನಾಗಿಸುವ 
  
  ಶಕ್ತಿ , ಶ್ರದ್ಧೆ ನಿಮ್ಮ ವಾಕ್ ನಲ್ಲಿದೆ
 • Shantha.raghothamachar,Bangalore

  1:41 PM , 28/09/2017

  ನಮಸ್ಕಾರ ಗಳು.ಪ್ರತಿ ಕರ್ಮಗಳನ್ನು ವಿಷ್ಣು ಪ್ರೇರಣೇಯ ವಿಷ್ಣು ಪ್ರೀತ್ಯರ್ಥಂ ಅಂತ ಲೇ ಮಾಡುತ್ತೇನೆ.ಈಪ್ರವಚನ ದ ಶ್ರವಣದಿಂದ ವಿಶೇಷ ಧೃಡತೆ ಬಂತು ನಿಮ್ಮ ವಾಗ್ಝರಿಯ ಪ್ರಭಾವವೆಂದು ತಿಳಿದಿದ್ದೇನೆ.ನಮೋನಮಃ.
 • P N Deshpande,Bangalore

  11:00 AM, 28/09/2017

  Nammellar mealu Preeti dhaareayennu eariyeli endu nammellrgoskar tawu prathisbeaku endu vinyapurwak kelikolluttene
 • P N Deshpande,Bangalore

  10:56 AM, 28/09/2017

  S.Namaskargalu. Sulida baleahanninatea jananawannu needuttddiri idara prayojanwannu swratnaada aa Bhagwanatana contunied
 • Mrs laxmi laxman padaki,Pune

  8:17 AM , 28/09/2017

  Sri Gurujiyavarige koti koti namaskargalu.