Upanyasa - VNU525

ಶ್ರೀಮದ್ ಭಾಗವತಮ್ — 32 — ಜನ್ಮಾದಿಗಳನ್ನು ನೀಡುವದು ದೇವರ ಸ್ವಭಾವ

ದೇವರು ತನಗಾಗಿ ಸೃಷ್ಟಿ ಮಾಡಿದರೆ ಅಪರಿಪೂರ್ಣನಾಗುತ್ತಾನೆ, ಮತ್ತೊಬ್ಬರಿಗಾಗಿ ಸೃಷ್ಟಿ ಮಾಡುತ್ತಾನೆ ಎಂದಾದರೆ, ಮತ್ತೊಬ್ಬರಿಗೆ ಸುಲಭವಾಗಿ ಫಲವನ್ನು ನೀಡಲಿಕ್ಕಾಗದೆ ಇಷ್ಟೆಲ್ಲ ಮಹಾಪ್ರಯತ್ನದ ಸೃಷ್ಟ್ಯಾದಿಗಳನ್ನು ಮಾಡುತ್ತಾನೆ ಎಂದಾಗುತ್ತದೆ. ಎರಡೂ ಪಕ್ಷದಲ್ಲಿಯೂ ಅವನು ಅಪರಿಪೂರ್ಣ, ಅಸ್ವತಂತ್ರ, ಅಸರ್ವಜ್ಞ ಎಂದೇ ಸಿದ್ಧವಾಗುತ್ತದೆ ಎಂಬ ಪ್ರಶ್ನೆಗಳಿಗೆ ಭಾಗವತ ನೀಡಿರುವ ದಿವ್ಯ ಉತ್ತರಗಳ ಸಂಗ್ರಹ ಇಲ್ಲಿದೆ. 

ಪ್ರಯೋಜನವಿಲ್ಲದೇ ಯಾರೂ ಯಾವ ಕಾರ್ಯವನ್ನೂ ಮಾಡುವದಿಲ್ಲ. ಮನುಷ್ಯ ಕುಳಿತಲ್ಲಿಂದ ಅಲ್ಲಾಡಬೇಕಾದರೂ ಅವನಿಗೊಂದು ಪ್ರಯೋಜನ ಬೇಕು. ಹೀಗಾಗಿ ದೇವರು ಮಾಡುವ ಈ ಸೃಷ್ಟ್ಯಾದಿಗಳಿಂದ ಅವನಿಗೇನಾದರೂ ಪ್ರಯೋಜನವಿರಲೇಬೇಕು. ಇರದೇ ಇರಲು ಸಾಧ್ಯವೇ ಇಲ್ಲ. ಪ್ರಯೋಜನವಿದೆ ಎಂದಾದರೆ ಆ ಫಲವನ್ನು ಅವನು ಪಡೆದಿಲ್ಲ, ಪಡೆಯುವದಕ್ಕಾಗಿ ಸೃಷ್ಟಿ ಮಾಡುತ್ತಿದ್ದಾನೆ ಎಂತಾಗುತ್ತದೆ. ಆ ಫಲ ಅವನ ಬಳಿ ಮೊದಲೇ ಇಲ್ಲ ಎಂದಾದರೆ ಅವನು ಅಪರಿಪೂರ್ಣ ಎಂದಾಯಿತು. ಆ ಫಲವನ್ನು ಪಡೆಯುವ ಜ್ಞಾನ ಮತ್ತು ಶಕ್ತಿ ಎರಡೂ ಅವನ ಬಳಿ ಇಲ್ಲ ಎಂದಾಯಿತು. ಅಂದ ಮೇಲೆ ಅವನು ಸರ್ವಜ್ಞನೂ ಅಲ್ಲ, ಸ್ವತಂತ್ರನೂ ಅಲ್ಲ ಎಂದಾಯಿತು. ಸರ್ವಜ್ಞನಾಗದೇ ಇದ್ದರೆ ಸ್ವತಂತ್ರನಾಗದೇ ಇದ್ದರೆ ಸೃಷ್ಟ್ಯಾದಿಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನೀವೇ ಒಪ್ಪಿರುವ ಕಾರಣ ದೇವರು ಜಗಜ್ಜನ್ಮಾದಿ ಕಾರಣನಲ್ಲ ಎಂದೇ ನಿರ್ಣಯವಾಗುತ್ತದೆ ಎಂಬ ಪ್ರಶ್ನೆಗೆ, 

ಹಾಗೂ 

ದೇವರು ತನಗಾಗೇನೂ ಸೃಷ್ಟಿ ಮಾಡುವದಿಲ್ಲ, ಮತ್ತೊಬ್ಬರಿಗಾಗಿ ಸೃಷ್ಟಿ ಮಾಡುತ್ತಾನೆ ಎಂದಾದಲ್ಲಿ, ಅವರು ಬಯಸುವ ಫಲವನ್ನು ಸುಲಭವಾಗಿ ನೀಡುವ ಸಾಮರ್ಥ್ಯವಿಲ್ಲದೆ ಇಷ್ಟೆಲ್ಲ ಮಹಾಪ್ರಯತ್ನ ಮಾಡಿ ಸೃಷ್ಟ್ಯಾದಿಗಳನ್ನು ಮಾಡಿರುವದರಿಂದಲೂ ಅವನು ಸರ್ವಜ್ಞನಲ್ಲ, ಸ್ವತಂತ್ರನಲ್ಲ ಎಂದೇ ಸಿದ್ಧವಾಗುತ್ತದೆ, ಎಂಬ ಆಕ್ಷೇಪಕ್ಕೆ 

ಶ್ರೀ ವೇದವ್ಯಾಸದೇವರು ನೀಡಿರುವ ಮತ್ತು ಶ್ರೀಮದಾಚಾರ್ಯರು ಸಮರ್ಥಿಸಿರುವ ದಿವ್ಯ ಉತ್ತರಗಳ ನಿರೂಪಣೆ ಇಲ್ಲಿದೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

जन्माद्यस्य यतोन्वयादितरतश्चार्थेष्वभिज्ञः स्वराट्
तेने ब्रह्म हृदा य आदिकवये मुह्यन्ति यं सूरयः।
“तेजोवारिमृदां यथा विनिमयो यत्र त्रिसर्गो मृषा” 
धाम्ना स्वेन सदा निरस्तकुहकं सत्यं परं धीमहि ।।1।।

ಭಾಗವತತಾತ್ಪರ್ಯ — 

न चातृप्तः प्रवर्तते । किन्तु मृषा वृथैव । “भित्वा मृषाश्रुः” इतिवत् । “देवस्यैष स्वभावोयम्” इति च । यत्रेतिविशेषणान्नान्यत्र । स्वविषय एव वृथा । जीवेश्वरजडानां सर्गस्त्रिसर्गः । एकस्य तेजसो बहुत्ववदीश्वरसर्गः । वारिनिमित्तप्रतिबिम्बवज्जीवसर्गः । मृदो घटादिवदव्यक्ताज्जडसर्गः । 

तेजसो रूपवद्रूपं बहुधा कुरुते हरिः । वारिस्थतेजःप्रतिमा जीवास्तस्माद् विनिर्गताः ।।
कुलालेन मृदा यद्वन्निर्मीयन्ते घटादयः । विष्णुनैवं प्रकृत्यैव निर्म्यते जगदीदृशम् ।।
एष त्रिसर्गो विष्णोस्तु वृथा लोकस्य चावृथा ।

Play Time: 50:09

Size: 1.88 MB


Download Upanyasa Share to facebook View Comments
5575 Views

Comments

(You can only view comments here. If you want to write a comment please download the app.)
 • Sowmya,Bangalore

  6:58 PM , 13/03/2022

  🙏🙏🙏
 • Saritha,MANGALORE

  8:50 AM , 22/01/2021

  Gurugalige Anantha pranamagalu nammannu Ajnanadinda jnanadedege kodoyyuva nimagido Namma namana
 • Chethanaraj Rao M,Udupi

  8:21 PM , 09/02/2018

  ಗುರುಗಳಿಗೆ ನಮನಗಳು.
  
  ಇಲ್ಲಿ ಮಹಾಲಕ್ಷ್ಮೀಯರು ಮಾಡಿದ ಪ್ರಾರ್ಥನೆಯ ಮೇರೆಗೆ ಭಗವಂತ srishthi ಮಾಡಿದ ಎಂಬುದನ್ನು ಒಪ್ಪಬಹುದು, ಆದರೆ ಪ್ರಾರ್ಥನೆ ಮಾಡುವ ಮನಸ್ಸನ್ನು ಕೊಟ್ಟದ್ದು ಆ ಭಗವಂತನೇ ಅಲ್ಲವೇ.
  ಹಾಗಿರುವಾಗ srishthi ತನಗೇ ಮಾಡಿಕೊಂಡ ಹಾಗೆ ಆಗಲಿಲ್ಲವೇ?

  Vishnudasa Nagendracharya

  ಭಗವಂತನೇ ಎಲ್ಲರಲ್ಲಿ ನಿಂತು ಎಲ್ಲ ಕಾರ್ಯಗಳನ್ನು ಮಾಡಿಸುವದು. ಆದರೆ ಆ ಕಾರ್ಯಗಳ ಪ್ರಯೋಜನ ದೇವರಿಗೆ ಆವಶ್ಯಕತೆಯಿಲ್ಲ. 
  
  ಸೃಷ್ಟಿಯ ಆವಶ್ಯಕತೆಯಿರುವದು ಮಹಾಲಕ್ಷ್ಮ್ಯಾದಿ ಚೇತನರಿಗೆ. 
  
  ಹೇಗೆ, ನಮ್ಮೊಳಗೆ ನಿಂತು ಸಾಧನೆ ಮಾಡಿಸುವದು ದೇವರೇ ಆದರೂ, ಸಾಧನೆಯ ಫಲವಾದ ಆನಂದ, ಮುಕ್ತಿಗಳು ದೇವರಿಗೆ ಬೇಕಾಗಿಲ್ಲವೋ, ಕಾರಣ ದೇವರು ಸ್ವಯಂ ನಿತ್ಯಮುಕ್ತನಾಗಿ ಅನಂತ ಆನಂದದಿಂದ ಪೂರ್ಣನಾಗಿದ್ದಾನೆ, ಹಾಗೆ, ಮಹಾಲಕ್ಷ್ಮಿಯಲ್ಲಿ ನಿಂತು ಸೃಷ್ಟಿಗಾಗಿ ಪ್ರಾರ್ಥಿಸುವವನು ದೇವರೇ ಆದರೆ ಸೃಷ್ಟಿಯ ಪ್ರಯೋಜನ ದೇವರಿಗೆ ಬೇಕಾಗಿಲ್ಲ. 
  
  ಹಾಗಾದರೆ, ಏಕೆ ಮಾಡುತ್ತಾನೆ ಎಂದರೆ ಮೂರು ಉತ್ತರಗಳಿವೆ. 
  
  1. ಲಕ್ಷ್ಮ್ಯಾದಿಗಳ ಮೇಲೆ ಅನುಗ್ರಹ ಮಾಡುವದಕ್ಕಾಗಿ. 
  2. ತನ್ನ ಕ್ರೀಡಾರೂಪವಾಗಿ ಈ ರೀತಿ ಎಲ್ಲರಲ್ಲಿ ನಿಂತು ಪ್ರೇರಿಸುತ್ತಾನೆ. ಕ್ರೀಡೆಗಾಗಿ ಅಲ್ಲ, ಕ್ರೀಡೆಯಿಂದ. 
  3. ಹೇಗೆ ತನ್ನೊಳಗೆ ಬಂದ ಎಲ್ಲವನ್ನೂ ಸುಡುವದು ಬೆಂಕಿಯ ಸ್ವಭಾವವೋ, ಹಾಗೆ ತನ್ನ ಅಧೀನರಾದ ಎಲ್ಲರನ್ನೂ ಪ್ರೇರಿಸುವದು ನಮ್ಮ ಸ್ವಾಮಿಯ ಸ್ವಭಾವ. 
 • Latha Ramesh,Coimbatore

  7:28 AM , 11/12/2017

  Anantha koti Namaskaragalu nanna Gurugalige
 • P.R.SUBBA RAO,BANGALORE

  7:56 PM , 25/10/2017

  ಶ್ರೀ ಗುರುಭ್ಯೋನಮಃ
  SB032 - ಸೃಷ್ಟ್ಯಾದಿಗಳು ದೇವರ ಸ್ವಭಾವ ಎಂದೂ, ದೇವರ ಕಾರುಣ್ಯವನ್ನೂ, ಜೀವರು ಪ್ರಯತ್ನ ಪಡದೆ ಅವರಿಗೆ ಮೋಕ್ಷವನ್ನು ನೀಡುವ ದೇವರ ಸಾಮರ್ಥ್ಯ & ಸ್ವಾತಂತ್ರ್ಯವನ್ನೂ ಒಪ್ಪಿದೆವು. ಆದರೆ ಹೀಗೆ ಮಾಡಿದರೆ ಯಾರಾದರೂ ಆಕ್ಷೇಪ/ಪ್ರಶ್ನೆ ಮಾಡಿಯಾರು ಎಂದು ದೇವರು ಸೃಷ್ಟಿಯಲ್ಲಿ ಜೀವರನ್ನು ತಂದು (ಧರ್ಮರಾಜ, ಧುರ್ಯೋಧನರ ಉದಾಹರಣೆ, ನ್ಯಾಯಾಧೀಶರ ಉದಾಹರಣೆ ಮತ್ತೂ ಅವರ limitation ದೇವರಿಗೆ ಇಲ್ಲವಲ್ಲ- 37.30 ನಿಮಿಷದ ಸುಮಾರಿನ ಪ್ರವಚನದ ಭಾಗ), ಅವರಿಂದ ಅವರ ಸ್ವಭಾವಕ್ಕನುಸಾರವಾಗಿ ಸಾಧನೆಯನ್ನು ಮಾಡಿಸಿ, ಆ ನಂತರ ಅವರಿಗೆ ಮೋಕ್ಷವನ್ನು ಕೊಡುತ್ತಾನೆ ಎಂದರೆ ಅದು ದೇವರ ಸ್ವಾತಂತ್ರ್ಯತ್ವಕ್ಕೆ ವಿರುದ್ಧವಾಗಲಿಲ್ಲವಾ ಗುರುಗಳೇ? ಇದರ ಸಮನ್ವಯ ಹೇಗೆ? ಪ್ರಶ್ನೆಯಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ಅತ್ಯುತ್ತಮ ಪ್ರಶ್ನೆ. 
  
  ಈ ಪ್ರಶ್ನೆಗೆ ಆಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಉತ್ತರ ನೀಡಿದ್ದಾರೆ. 
  
  ಏತಾನ್ಯಪೇಕ್ಷ್ಯೈವ ಫಲಂ ದದಾನಿ ಇತ್ಯಸ್ಯ ಸಂಕಲ್ಪ ಇತಿ ಸ್ವತಂತ್ರತಾ ಎಂದು. 
  
  ನಿಜ. ದೇವರು ಜೀವರನ್ನು ಸಂಸಾರಕ್ಕೆ ತಾರದೆಯೇ ಮೋಕ್ಷ ನೀಡಬಲ್ಲ, ಫಲ ನೀಡಬಲ್ಲ. 
  
  ಆದರೆ, ಸ್ವಭಾವ, ಕರ್ಮ ಮತ್ತು ಪ್ರಯತ್ನಗಳಿಗೆ ಅನುಸಾರಿಯಾಗಿಯೇ ಫಲ ನೀಡುತ್ತೇನೆ, ಮೋಕ್ಷಾದಿಗಳನ್ನು ನೀಡುತ್ತೇನೆ ಎನ್ನುವದು ಸತ್ಯಸಂಕಲ್ಪನಾದ ಭಗವಂತನ ಸಂಕಲ್ಪ. ಶ್ರೀಹರಿ ಹಾಗೆಯೇ ಸಂಕಲ್ಪ ಮಾಡಿದ್ದಾನೆ. 
  
  ಒಮ್ಮೆ ಸಂಸಾರಕ್ಕೆ ಬಂದು ಮುಕ್ತರಾಗುತ್ತಾರೆ ಎನ್ನುವದೇ ಸಜ್ಜನರ ಸ್ವಭಾವದಲ್ಲಿದೆಯಾದ್ದರಿಂದ ಭಗವಂತ ಅವರ ಸ್ವಭಾವಕ್ಕನುಸಾರಿಯಾಗಿ ಸಂಸಾರ ನೀಡಿ, ಆ ನಂತರ ಮೋಕ್ಷ ನೀಡುತ್ತಾನೆ. 
  
  ಈ ಸಂಕಲ್ಪವನ್ನು ಯಾರೋ ಹೇಳಿದರೆಂದು ಭಗವಂತ ಮಾಡಿಲ್ಲ. ತಾನಾಗಿಯೇ ಮಾಡಿದ್ದಾನೆ. ತಾನಾಗಿಯೇ ಸ್ವೇಚ್ಛೆಯಿಂದ ಮಾಡಿದ ಸಂಕಲ್ಪವಾದ ಕಾರಣಕ್ಕೆ ಅವನ ಸ್ವಾತಂತ್ರ್ಯಕ್ಕೆ ವಿರೋಧವಿಲ್ಲ. 
  
  ಗೀತಾಭಾಷ್ಯದಲ್ಲಿ ಆಚಾರ್ಯರು ಉದಾಹರಣೆಯನ್ನೂ ನೀಡುತ್ತಾರೆ - ಚನ್ನಾಗಿ ನಡೆಯಬಲ್ಲ ವ್ಯಕ್ತಿ ಕೋಲು ಹಿಡಿದು ನಡೆದು ನಟಿಸುವಂತೆ ಭಗವಂತ ಇವುಗಳನ್ನು ಅವಲಂಬಿಸಿದವನಂತೆ ಕಾರ್ಯ ಮಾಡುತ್ತಾನೆ ಎಂದು. 
 • Sudhakar rao,Padubidri

  2:15 PM , 20/10/2017

  P so no
 • ಭಾರದ್ವಾಜ,ಬೆಂಗಳೂರು

  7:45 PM , 19/10/2017

  ಶ್ರೀ ಗುರುಭ್ಯೋ ನಮಃ
  
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  
  ಶ್ರೀ ಲಕ್ಷ್ಮೀದೇವಿಯರು ಅನಾದಿ ಮುಕ್ತರು ಹಾಗು ಆಪ್ತಕಾಮರು, ಆದರೆ ಅವರಿಗೆ ಭಗವಂತನ ಅನಂತ ರೂಪಗಳನ್ನು ಕಾಣುವ ಅಪೇಕ್ಷೆ ಇದೆ, ಅದು ಹೇಗೆ? ಅವರಿಗು ಭಗವಂತನ ಹಾಗೆ ಯಾವ ಪ್ರಯೋಜನವು ಇರಬಾರದಲ್ಲವೇ? ದಯವಿಟ್ಟು ಗೊಂದಲವನ್ನು ಪರಿಹರಿಸಿ

  Vishnudasa Nagendracharya

  ಮಹಾಲಕ್ಷ್ಮೀದೇವಿಯರು ಮತ್ತು ಮುಕ್ತರು ಆಪ್ತಕಾಮರಲ್ಲ. 
  
  ಆಪ್ತಕಾಮ ಎಂದರೆ ಎಲ್ಲವನ್ನೂ ಈಗಾಗಲೇ ಪಡೆದವನು ಎಂದರ್ಥ. ಆಪ್ತಕಾಮತ್ವ ಎನ್ನುನದು, ಸ್ವರತತ್ವ ಎನ್ನುವದು ಶ್ರೀಹರಿಯಲ್ಲಿ ಮಾತ್ರ ಇರುವ ಗುಣ. ಲಕ್ಷ್ಮೀ ಮೊದಲಾದ ಯಾರಲ್ಲಿಯೂ ಇಲ್ಲ. 
  
  ಲಕ್ಷ್ಮೀದೇವಿಯರು ಮತ್ತು ಮುಕ್ತರು ಏನನ್ನು ಅಪೇಕ್ಷೆ ಪಡುತ್ತಾರೆಯೋ ಅದನ್ನು ಪಡೆಯುತ್ತಾರೆ. ಅವರ ಕಾರ್ಯಗಳಿಗೆ ಪ್ರಯೋಜನವಿದೆ. ಸುಖಕ್ಕಾಗಿ ಅವರು ಕಾರ್ಯಗಳನ್ನು ಮಾಡುತ್ತಾರೆ. ಮತ್ತು ಪಡೆಯುತ್ತಾರೆ. 
  
  ಹಾಗಾದರೆ ಅವರಿಗೂ ಸಂಸಾರಿಗಳಿಗೂ ಏನು ವ್ಯತ್ಯಾಸ ಎಂದು ನೀವು ಕೇಳಬಹುದು. 
  
  ಸಂಸಾರಿಗಳು ಭಗವಂತನಿಗೆ ವಿರುದ್ಧವಾದುದನ್ನೂ ಅಪೇಕ್ಷಿಸುತ್ತಾರೆ, ತಮಗೆ ಅಯೋಗ್ಯವಾದುದನ್ನೂ ಅಪೇಕ್ಷಿಸುತ್ತಾರೆ ಮತ್ತು ಅಪೇಕ್ಷಿಸಿದ ಎಲ್ಲವನ್ನೂ ಪಡೆಯುವದಿಲ್ಲ, ಪಡೆದ ಎಲ್ಲವನ್ನೂ ಪೂರ್ಣವಾಗಿ ಅನುಭವಿಸುವದಿಲ್ಲ, ಅನುಭವಿಸುವದನ್ನೂ ದುಃಖಯುಕ್ತರಾಗಿಯೇ ಅನುಭವಿಸುತ್ತಾರೆ. 
  
  ಆದರೆ ಲಕ್ಷ್ಮೀದೇವಿ ಮತ್ತು ಮುಕ್ತರು ಎಂದಿಗೂ ದೇವರಿಗೆ ವಿರುದ್ಧವಾದುದನ್ನು ಅಪೇಕ್ಷಿಸುವದಿಲ್ಲ, ತಮ್ಮ ಯೋಗ್ಯತೆಗೆ ಮೀರಿದ್ದನ್ನು ಅಪೇಕ್ಷಿಸುವದಿಲ್ಲ, ಅಪೇಕ್ಷಿಸದ್ದನ್ನು ಪಡೆಯುತ್ತಾರೆ, ಪಡೆದದ್ದನ್ನು ಪೂರ್ಣವಾಗಿ ಅನುಭವಿಸುತ್ತಾರೆ, ದುಃಖದ ಲೇಶವೂ ಇರುವದಿಲ್ಲ. 
 • Srikanth Bhat,Honnavara

  8:31 AM , 02/10/2017

  Bhaktipurvak sashtanga namaskaras for your kind words. 
  
  My father is feeling elated after speaking to you.
 • Srikanth Bhat,Honnavara

  8:50 AM , 30/09/2017

  Gurugale, I want to share my experience with you. 
  
  I am listening bhagavata upanyasa every morning with my family at 6 in the morning in the living room having bhagavata on a peetha with deepas. 
  
  My father is suffering from some bone ailment and he cannot walk at all. Today after listening to bhagavatam he asked me to help him do pradakshina to bhagavata book but my mother protested fearing it may harm him. 
  
  But he forced me to help and finally he did three full pradakshine namaskaras and told me that this is the biggest seva you have done to me, Srikanth. 
  
  Not only him all of us had ananda bashpa gurugale. We have just witnessed a miracle in our own house. 
  
  And Gurugale you are giving jnana bhakti vairagyas to us at a time. 
  
  Have sent a small Tulasidala and request you to accept. 
  
  Nothing can be matched to the work you are doing. As rightly said by someone you are changing our lives by your yeoman service. 
  
  Sashtanga pranamagalu. 
  
  Please forgive me if have spoken anything wrong.

  Vishnudasa Nagendracharya

  ಶ್ರೀಮದ್ ಭಾಗವತ ಮತ್ತು ಶ್ರೀ ಭಾಗವತತಾತ್ಪರ್ಯಗಳ ಮಾಹಾತ್ಮ್ಯವಿದು. ಭವವನ್ನೇ ಕಳೆಯುವ ಆ ಮಹಾಗ್ರಂಥಗಳು ಈ ರೀತಿಯಾದ ಅದ್ಭುತಗಳನ್ನು ಜಿಜ್ಞಾಸುಗಳಿಗೆ ನಿರಂತರವಾಗಿ ತೋರಿಸುತ್ತವೆ.
  
  ನೀವು ನೀಡಿರುವ ಹಣವನ್ನು ಶ್ರೀಮದಾಚಾರ್ಯರ ಅಂತರ್ಯಾಮಿಯಾದ ವೇದವ್ಯಾಸದೇವರಿಗೆ ಸಮರ್ಪಿಸಿ ಶ್ರೀಮದ್ ಭಾಗವತದ ಜ್ಞಾನಕಾರ್ಯಕ್ಕೆ ಬಳಸುತ್ತೇನೆ. ಆಚಾರ್ಯರು ನಿಮ್ಮೆಲ್ಲರಿಗೂ ಪರಿಶುದ್ಧ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಿ ಸದಾ ಭಾಗವತಾಸಕ್ತರಾಗಿರುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. 
  
  ಶುಭವಾಗಲಿ. 
 • P N Deshpande,Bangalore

  1:13 PM , 30/09/2017

  S.Namaskargalu. I am confident that by the time SrimadBhagwat is completed. All the listeners will definitely achieve some thing extraordinary benefit by Almighty
 • Mrs laxmi laxman padaki,Pune

  11:29 AM, 30/09/2017

  Sri Gurujiyavarige koti koti namaskaragalu.
 • Shantha.raghothamachar,Bangalore

  11:13 AM, 30/09/2017

  ನಮೋನಮಃ ನಮೋನಮಃ ನಮೋನಮಃ
 • Niranjan Kamath,Koteshwar

  7:47 AM , 30/09/2017

  Shri Narayana Akhila Guro Bhagavan Namaste. Gurugala charanarvind galige namo namaha. Nishkamanada Pripoornatvada Devara Kaarunyavannu , Kannu Kivigala udaharane samethanagi atyanta spashtavagi tilisiddiri. Namo namaha. Devaru Nimage ayurrarogya needi nimminda innu mahathara sadhane madikoduvanthe agali endu Devaralli prarthisuthene.