Upanyasa - VNU527

ಶ್ರೀಮದ್ ಭಾಗವತಮ್ — 34 — ದೇವರ ಪ್ರಾದುರ್ಭಾವದ ಕ್ರಮ

ಮೂಲರೂಪದ ಪರಮಾತ್ಮ ಏನು ಅನಂತ ರೂಪಗಳನ್ನು ಸ್ವೀಕರಿಸುತ್ತಾನೆ ಅದನ್ನು ಶುದ್ಧಸೃಷ್ಟಿ ಎನ್ನುತ್ತಾರೆ. ನಾವು ಹಿಂದೆ ತಿಳಿದ ನಾಲ್ಕು ವಿಧವಾದ ಸೃಷ್ಟಿಯೂ ದೇವರಲ್ಲಿಲ್ಲ, ಅವನದು ಕೇವಲ ಪ್ರಾದುರ್ಭಾವ. ಆ ಪ್ರಾದುರ್ಭಾವದ ಬಗೆಯನ್ನು ಆಚಾರ್ಯರು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಅದರ ವಿವರಣೆ ಇಲ್ಲಿದೆ. 

ಒಂದು ದೀಪದಿಂದ ಮತ್ತೊಂದು ದೀಪ ಬೆಳಗುವಂತೆ ಪರಮಾತ್ಮ ಪ್ರಾದುರ್ಭೂತನಾಗುತ್ತಾನೆ ಎನ್ನುತ್ತಾರೆ ವೇದವ್ಯಾಸದೇವರು ಮತ್ತು ಶ್ರೀಮದಾಚಾರ್ಯರು. ಶ್ರೀವಿಜಯಧ್ವಜತೀರ್ಥಶ್ರೀಪಾದಂಗಳವರು ಈ ತತ್ವವನ್ನು ನಿರೂಪಣೆ ಮಾಡುತ್ತ, ಕಟ್ಟಿಗೆಯಲ್ಲಿ ಬೆಂಕಿ ಇರುವಂತೆ ಒಬ್ಬನೇ ಪರಮಾತ್ಮ ಸಕಲ ಪದಾರ್ಥಗಳಲ್ಲಿ ಇದ್ದಾನೆ ಮತ್ತು ಯಾವುದೇ ಬೆಂಕಿಯಲ್ಲಾದರೂ ಹೇಗೆ ಶಕ್ತಿ ಪರಿಪೂರ್ಣವೋ ಹಾಗೆ ಮೂಲರೂಪ ಮತ್ತು ಅವತಾರರೂಪಗಳಲ್ಲಿ ಪರಮಾತ್ಮನ ಶಕ್ತಿ ಪರಿಪೂರ್ಣ ಎನ್ನುವದನ್ನು ತಿಳಿಸುತ್ತಾರೆ. ದೀಪದಿಂದ ದೀಪ ಹುಟ್ಟಿದಾಗ, ಮೊದಲನೆಯ ದೀಪ ಬೇರೆ ಎರಡನೆಯ ದೀಪ ಬೇರೆ, ಭೇದವಿದೆಯಲ್ಲ, ಹಾಗೆ ದೇವರ ರೂಪಗಳಲ್ಲಿಯೂ ಭೇದವಿದೆಯೇ ಎಂಬ ಮುಂದಿನ ಪ್ರಶ್ನೆಗೆ ಶ್ರೀ ಯಾದವಾರ್ಯರು ಉತ್ತರ ನೀಡಿದ್ದಾರೆ. ಆ ಪೂರ್ವಾಚಾರ್ಯರ ಪ್ರತಿಪಾದನೆಗಳ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ. 


Play Time: 45:14

Size: 6.50 MB


Download Upanyasa Share to facebook View Comments
5815 Views

Comments

(You can only view comments here. If you want to write a comment please download the app.)
 • Sowmya,Bangalore

  7:58 PM , 15/03/2022

  🙏🙏🙏
 • Suhas karthik,Banglore

  12:50 PM, 01/10/2020

  ಅಚಾರ್ಯರೇ , ನಿಮಗೆ ಕೋಟಿ ಕೋಟಿ ವಂದನೆಗಳು. ನನಗೆ ಒಂದು ಪ್ರಶ್ನೆ ಮೂಡಿದೆ , ಅದು ತಪ್ಪ? , ಸರಿಯ ? ಎಂದು ಗೊತ್ತಿಲ್ಲ , ದಯವಿಟ್ಟು ಉತ್ತರ ನೀಡಿ . " ಭಗವಂತ ದೇವತೆಗಳನ್ನು ಏಕೆ ಸೃಷ್ಟಿ ಮಾಡುತ್ತೇನೆ" 
  ಜೈ ವಿಜಯರಾಯ
  ಹರೇ ಶ್ರೀನಿವಾಸ
 • Narayanaswamy,chamarajanagara

  5:16 PM , 02/10/2017

  ಎಲ್ಲಾ ಭಗವತ್ ಸಜ್ಜೀವರಿಗೂ ವಿಷ್ಣುದಾಸನಾಗೇಂದ್ರ ಆಚಾರ್ಯರು ಅಂದ್ರೆ ದೇವರು ನಮಗೆ ಕೊಟ್ಟ ಬೆಲೆಕಟ್ಟಲಾಗದ ರತ್ನ.ಅವರು ಮಾಡುವ ಜ್ಞಾನ ಕಾರ್ಯಕ್ಕೆ ನಾವೆಲ್ಲ ಬೆಂಬಲವಾಗಿ ನಿಲ್ಲೋಣ.

  Vishnudasa Nagendracharya

  ನಿನ್ನ ಒಲುಮೆಯಿಂದ ನಿಖಿಲ ಜನರು ಬಂದು ಮನ್ನಿಸುವರೋ ಮಹರಾಯ. ಶ್ರೀಹರಿ ವಾಯು ದೇವತಾ ಗುರುಗಳ ಅನುಗ್ರಹ. 
 • ಭಾರದ್ವಾಜ,ಬೆಂಗಳೂರು

  6:50 PM , 05/10/2017

  ಶ್ರೀ ಗುರುಭ್ಯೋ ನಮಃ 
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏
  
  ಅನೇಕ ದೀಪಗಳಲ್ಲಿ ಇರುವ ಅಗ್ನಿ ದೇವರು ಒಂದೆ ಅದರೆ ಅಧಿಷ್ಠಾನಗಳು ಬೇರೆ ಬೇರೆ ಎಂದು ಅರ್ಥವಾಯಿತು. ಆದರೆ, ಈಶ್ವರ ಸೃಷ್ಟಿಯಲ್ಲಿ ದೇವರಿಗೆ ಏನು ಅಧಿಷ್ಠಾನ ? ದಯಮಾಡಿ ತಿಳಿಸಿ 
  
  ಪ್ರಶ್ನೆಯಲ್ಲಿ ತಪ್ಪಿದ್ದರೆ ದಯಮಾಡಿ ಕ್ಷಮಿಸಿ.

  Vishnudasa Nagendracharya

  ಈಶ್ವರಸೃಷ್ಟಿಯಲ್ಲಿ ದೇವರಿಗೆ ಅಧಿಷ್ಠಾನ ಬೇಕಿಲ್ಲ. 
  
  ದೇವರೇ ಸಚ್ಚಿದಾನಂದಶರೀರದಿಂದ ಪ್ರಕಟಗೊಳ್ಳುತ್ತಾನೆ. 
  
  ಪ್ರಶ್ನೆಯಲ್ಲಿ ಖಂಡಿತ ತಪ್ಪಿಲ್ಲ. ಸೂಕ್ಷ್ಮ ವಿಷಯದ ಈ ಪ್ರಶ್ನೆ ಕೇಳಿದ್ದಕ್ಕಾಗಿ ತುಂಬ ಸಂತೋಷವಾಗಿದೆ. 
 • prema raghavendra,coimbatore

  2:10 PM , 04/10/2017

  Anantha namaskara! Danyavada!
 • PVSR MANOHAR,Hyderabad

  6:51 PM , 02/10/2017

  Thank you, Sir!
 • Mrs laxmi laxman padaki,Pune

  10:53 AM, 02/10/2017

  Sri Gurujiyavarige Koti Koti namaskaragalu.
 • Shantha.raghothamachar,Bangalore

  9:11 AM , 02/10/2017

  ನಮಸ್ಕಾರ ಗಳು
 • P N Deshpande,Bangalore

  8:59 AM , 02/10/2017

  S.Namaskaragalu atee sulbhwaagi saralwada neerupanea tamma janana bhanarkke dhanywaadagalu
 • Srikanth Bhat,Honnavara

  8:18 AM , 02/10/2017

  ಪ್ರತಿದಿನವೂ ಹೊಸ ವಿಷಯಗಳನ್ನು ಕಲಿುತ್ತಿದ್ದೇವೆ. ಬದುಕು ಸಾರ್ಥಕವಾಗುತ್ತಿದೆ.
 • Niranjan Kamath,Koteshwar

  7:50 AM , 02/10/2017

  *Benki.
 • Niranjan Kamath,Koteshwar

  7:49 AM , 02/10/2017

  Shri Narayana Akhila Guro Bhagavan Namaste. Gurugala charanarvind galige namo namaha. Devara Swaroop hagu Paripoornathe yannu , Benji hagu neerina udaharane yondige needida arthanusandana bahala spashtavagittu. Dhanyosmi.