Upanyasa - VNU528

ಶ್ರೀಮದ್ ಭಾಗವತಮ್ — 35 — ಜೀವರ ದೇಹದ ಸೃಷ್ಟಿ ಕ್ರಮ

ಶ್ರೀಮದ್ ಭಾಗವತಮ್ — 35 — ಜೀವರ ದೇಹದ ಸೃಷ್ಟಿ ಕ್ರಮ


ಜೀವರ ದೇಹದ ಸೃಷ್ಟಿಯ ಕ್ರಮದ ಕುರಿತು ಅಪೂರ್ವವಾದ ವಿಷಯಗಳನ್ನು ಶ್ರೀಮದಾಚಾರ್ಯರು ಈ ಸಂದರ್ಭದಲ್ಲಿ ತಿಳಿಸುತ್ತಾರೆ. ಕಾಠಕ, ಬೃಹದಾರಣ್ಯ, ಬ್ರಹ್ಮಸೂತ್ರಗಳ ಭಾಷ್ಯಗಳಲ್ಲಿ ಶ್ರೀಮದಾಚಾರ್ಯರು, ನ್ಯಾಯಸುಧಾದಿಗಳಲ್ಲಿ ಟೀಕಾಕೃತ್ಪಾದರು ತಿಳಿಸಿರುವ ಅಪೂರ್ವವಿಷಯಗಳ ನಿರೂಪಣೆ ಇಲ್ಲಿದೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

जन्माद्यस्य यतोन्वयादितरतश्चार्थेष्वभिज्ञः स्वराट्
तेने ब्रह्म हृदा य आदिकवये मुह्यन्ति यं सूरयः।
“तेजोवारिमृदां यथा विनिमयो” यत्र त्रिसर्गो मृषा 
धाम्ना स्वेन सदा निरस्तकुहकं सत्यं परं धीमहि ।।1।।

ಭಾಗವತತಾತ್ಪರ್ಯ — 

वारिनिमित्तप्रतिबिम्बवज्जीवसर्गः । मृदो घटादिवदव्यक्ताज्जडसर्गः । 

वारिस्थतेजःप्रतिमा जीवास्तस्माद् विनिर्गताः ।
कुलालेन मृदा यद्वन्निर्मीयन्ते घटादयः । 
विष्णुनैवं प्रकृत्यैव निर्म्यते जगदीदृशम् ।।

Play Time: 41:23

Size: 7.10 MB


Download Upanyasa Share to facebook View Comments
5959 Views

Comments

(You can only view comments here. If you want to write a comment please download the app.)
 • Sowmya,Bangalore

  7:36 PM , 16/03/2022

  🙏🙏🙏
 • Chethanaraj Rao M,Udupi

  9:09 AM , 23/02/2018

  ಆಚಾರ್ಯರಿಗೆ ನಮನಗಳು.
  
  ಇಲ್ಲಿ ಜೀವದ ಆನಂದಾದಿ ಗುಣಗಳು ಭಗವಂತನ ಪ್ರತಿಬಿಂಬಗಳೇ ಎಂದಿರಿ, ಆದರೆ ದುಃಖವೇ ಇಲ್ಲದ ಆ ಬಿಂಬದಿಂದ ಜೀವನಿಗೆ ಹೇಗೆ ದುಃಖ ಪ್ರಾಪ್ತವಿಗಲು ಸಾಧ್ಯ? ದಯವಿಟ್ಟು ತಿಳಿಸುವಿರಾ?

  Vishnudasa Nagendracharya

  ಉಪನ್ಯಾಸದಲ್ಲಿಯೇ ವಿವರಿಸಿದ್ದೇನೆ. 
  
  ದೇವರಲ್ಲಿ ಗುಣಗಳು ಮಾತ್ರ ಇವೆಯಾದ್ದರಿಂದ, ದೇವರ ಗುಣಗಳು ಮಾತ್ರ ಜೀವನಲ್ಲಿ ಪ್ರತಿಫಲನಗೊಳ್ಳುತ್ತವೆ. ದೇವರಲ್ಲಿ ದೋಷವೇ ಇಲ್ಲವಾದ್ದರಿಂದ ದೋಷ ಪ್ರತಿಫಲನ ಗೊಳ್ಳುವ ಪ್ರಸಕ್ತಿಯೇ ಇಲ್ಲ. 
  
  ಹಾಗಾದರೆ ಜೀವನಲ್ಲಿ ಪಾರತಂತ್ರ್ಯ, ದುಃಖ ಮುಂತಾದ ದೋಷಗಳು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. 
  
  ಎರಡು ರೀತಿಯ ದೋಷಗಳಿರುವದರಿಂದ ಎರಡು ಉತ್ತರಗಳಿವೆ. 
  
  ಮೊದಲನೆಯದು ಜೀವನ ಸ್ವಭಾವದಲ್ಲಿಯೇ ಇರುವ ದೋಷಗಳು. ಉತ್ತಮ ಜೀವರಲ್ಲಿರುವ ಪಾರತಂತ್ರ್ಯ ಮುಂತಾದವು. ಮಧ್ಯಮರಲ್ಲಿ ಮತ್ತು ಅಧಮರಲ್ಲಿ ದುಃಖ ಮುಂತಾದವು. 
  
  ಈ ದೋಷಗಳು ಜೀವನ ಸ್ವರೂಪದಲ್ಲಿಯೇ ಇದೆ. ಅಂದರೆ, ಯಾವ ಉಪಾಧಿಯಲ್ಲಿ ದೇವರ ಗುಣಗಳು ಪ್ರತಿಫಲನಗೊಳ್ಳುತ್ತವೆಯೋ ಆ ಜೀವನೆಂಬ ಉಪಾಧಿಯಲ್ಲಿಯೇ ದೋಷಗಳಿವೆ. ಹೀಗಾಗಿ ಅವು ಜೀವನೊಟ್ಟಿಗೆ ಶಾಶ್ವತವಾಗಿ ಇರುತ್ತವೆ. 
  
  ಉತ್ತಮ ಜೀವರ ಸ್ವರೂಪದಲ್ಲಿ ದುಃಖವಿಲ್ಲ. ಆದರೆ ಒಮ್ಮೆಯಾದರೂ ದುಃಖವನ್ನನುಭವಿಸಬೇಕೆಂಬ ದೋಷವಿದೆ. ಹೀಗಾಗಿ ಅವರೂ ಸಂಸಾರವನ್ನು ಪಡೆಯುತ್ತಾರೆ. 
  
  ಸಂಸಾರದಲ್ಲಿರುವ ಅವಿವೇಕ, ಕುರೂಪ, ದೌರ್ಜನ್ಯ, ಕಾಮ-ಕ್ರೋಧಾದಿ ಕೋಟಿ ಕೋಟಿ ದೋಷಗಳು ಸ್ವಭಾವದಿಂದ ಬಂದದ್ದಲ್ಲ. ಅದು ನಮ್ಮಮೇಲಿರುವ ಪ್ರಕೃತಿ ಲಿಂಗದೇಹ ಅವಿದ್ಯಾ ಮುಂತಾದ ಆವರಣಗಳಿಂದ ಬಂದದ್ದು. 
  
  
 • Praveen Patil,Bangalore

  12:27 PM, 05/11/2017

  ಗುರುಗಳಗೆ ನಮಸ್ಕಾರ, ಗುರುಗಳೆ ಈ ಸಮಸ್ತ ಜೀವರಾಶಿಗಳಲ್ಲೂ ಅಂದರೆ ಮೂಲತಃ ಸೂಕ್ಷ್ಮದೇಹದಲ್ಲಿ ಗಂಡು ಜೀವ ಮತ್ತು ಹೆಣ್ಣು ಜೀವವೆಂದು ಭೇದ ಇರುತ್ತದೆಯೋ ಅಥವಾ ಭಗವಂತನೆ ಆಯಾ ಜೀವರಾಶಿಗಳಲ್ಲಿ ತಾನೆ ಬಿಂಬನಾಗಿ ನಿಂತು ಇವರು ಗಂಡು ಜೀವ, ಇವರು ಹೆಣ್ಣು ಜೀವವೆಂದು ತೀರ್ಮಾನ ಮಾಡುತ್ತಾನೊ... ದಯಮಾಡಿ ತಿಳಿಸಿರಿ.
 • Arjun Bangle Sridhar,Mysore

  3:34 AM , 01/11/2017

  Gurugalige sasthanga pranamagalu! . 
  
  Gurugale jeevi galige moola roopa athwa swasharira ideyo. ..adu idhare namma moola sharira padiyuvudhe moksha na. ... jeevi gala nijawada lakshsna gallannu innu swalpa vistara vaagi helabekanta nimmalli kalakaliya prarthane! ! 
  
  
   sasthanga pranamagalu! ! ! Gurugalige
 • ಸುದರ್ಶನ ಶ್ರೀ. ಲ.,ಬೆಂಗಳೂರು

  6:54 PM , 29/10/2017

  ದೇವರ ಆಕಾರದ ಇರುವಿಕೆಯ ಚರ್ಚೆ ಯಾವಾಗ ಬರುತ್ತದೆ ಗುರುಗಳೆ🙏
  ಹೇಗೆ ಶ್ರೀಮದಾನಂದತೀರ್ಥಭಗವದ್ಪಾದಾಚಾರ್ಯರು ಸಮರ್ಥಿಸಿದ್ದಾರೆ ಎಂದು ತಿಳಿಯುವ ಆಸೆ 🙏😊
 • ಸುದರ್ಶನ ಶ್ರೀ. ಲ.,ಬೆಂಗಳೂರು

  4:09 PM , 29/10/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏😊
  
  ಹೇಗೆ ಗಾಳಿ, ಶಬ್ದ, ರುಚಿ, ಗಂಧ ಇತ್ಯಾದಿ ಜಡವಸ್ತುಗಳಲ್ಲಿ ಬಿಂಬ ಪ್ರತಿಬಿಂಬ ತತ್ವ ಕೂಡುತ್ತದೆ? ಕಣ್ಣಿಗೆ ಕಾಣದ ವಸ್ತುಗಳಲ್ಲಿ ಬಿಂಬ ಪ್ರತಿಬಿಂಬ ತತ್ವವನ್ನು ತಿಳಿಸಿ ಎಂದು ಪ್ರಾರ್ಥನೆ.
  
  ಪ್ರಕೃತಿಯು ಭಗವಂತನ ಪ್ರತಿಬಿಂಬವೇ, ಜಡ ವಸ್ತುಗಳಲ್ಲಿ ಜಡ ಪದಾರ್ಥದ ಬಿಂಬರಾಗಿ ಅವಾಂತರಾಭಿಮಾನಿ, ಮುಖ್ಯಾಭಿಮಾನಿ ದೇವತೆಗಳಿದ್ದಾರೆ, ಅವರ ಬಿಂಬನಾಗಿ ಭಗವಂತನಾಗಿದ್ದಾನೆ ಎಂಬ ಎರಡು ಮಾತುಗಳ ಅರ್ಥ ಇನ್ನಷ್ಟು ಆಗಬೇಕಾಗಿದೆ ಗುರುಗಳೆ🙏.

  Vishnudasa Nagendracharya

  ತುಂಬ ಸರಳ. 
  
  ದೇವರಲ್ಲಿರುವ ಚೇತನತ್ವವು ಪ್ರತಿಫಲನಗೊಂಡಿದ್ದರಿಂದ ಪ್ರತಿಬಿಂಬ ಜೀವನಾಗುತ್ತಾನೆ.
  
  ಚೇತನತ್ವವು ಪ್ರತಿಫಲನಗೊಳ್ಳದೇ ಇದ್ದಲ್ಲಿ ಪ್ರತಿಬಿಂಬ ಜಡವಾಗುತ್ತದೆ. 
  
  ಹಾಗೆ, ದೇವರಲ್ಲಿರುವ ಅವ್ಯಕ್ತತ್ವ (ಕಾಣಿಸದಿರುವಿಕೆ) ಪ್ರತಿಫಲನಗೊಂಡಾಗ ಪ್ರತಿಬಿಂಬವೂ ಕಣ್ಣಿಗೆ ಕಾಣಿಸದ ಪದಾರ್ಥವಾಗುತ್ತದೆ. 
  
  
 • P.R.SUBBA RAO,BANGALORE

  3:27 AM , 26/10/2017

  ಶ್ರೀ ಗುರುಭ್ಯೋನಮಃ
  SB035 - ಈ ಭಾಗದ ಉಪನ್ಯಾಸ ಅದ್ಭುತವಾಗಿದೆ, ಮಿಕ್ಕವೂ ಸಹ. ಅನೇಕ ಅಪೂರ್ವವಾದ ವಿಚಾರಗಳನ್ನು ತಿಳಿದುಕೊಂಡೆವು. ಬಹಳ ಅರ್ಥಸಾಂದ್ರತೆಯಿಂದ ಕೂಡಿದೆ. ಪ್ರತಿಯೊಂದು ಉಪನ್ಯಾಸವೂ ಶ್ರಿಮನ್ಮಧ್ವಶಾಸ್ತ್ರದಲ್ಲಿ ನಮ್ಮ ನಿಷ್ಠೆ ಮತ್ತು ಆಸಕ್ತಿಯನ್ನು ಹೆಚ್ಚಿಸುತ್ತಿದೆ
  ಧನ್ಯೋಸ್ಮಿ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • H. Suvarna kulkarni,Bangalore

  12:23 AM, 05/10/2017

  ಗುರುಗಳಿಗೆ ಪ್ರಣಾಮಗಳು ಬಿಂಬ ಪ್ರತಿಬಿಂಬ ದ ವಿವರಣೆ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದೀರಿ ನಮೋ ನಮಃ
 • prema raghavendra,coimbatore

  2:44 PM , 03/10/2017

  Ananthanantha namaskara! Danyavada!
 • Shantha.raghothamachar,Bangalore

  11:28 AM, 03/10/2017

  ನಮಸ್ಕಾರ ಗಳು
 • Mrs laxmi laxman padaki,Pune

  10:17 AM, 03/10/2017

  Sri Gurujiyavarige Koti Koti namaskaragalu.
 • Niranjan Kamath,Koteshwar

  8:44 AM , 03/10/2017

  Shri Narayana Akhila Guro Bhagavan Namaste. Gurugala charanarvind galige namo namaha. Bimba pratibimba haagu Devaru madida Jeeva shrishti kuritha vivarane bahala sundaravagi tilisiddiri. Namo namah.
 • P N Deshpande,Bangalore

  8:31 AM , 03/10/2017

  S.Namaskargalu.Prtibimba Sampurna yyakkhana roopa pravchanwu attyanta shreasthamattaddu.Dhanywaadagalu