Upanyasa - VNU537

ಶ್ರೀ ರಾಘವೇಂದ್ರಸ್ತೋತ್ರ — ಶ್ಲೋಕ — 5A

11/10/2017

ದೇವಸ್ವಭಾವಃ. ಭವ್ಯಸ್ವರೂಪಃ ಎಂಬ ಶಬ್ದಗಳ ಅರ್ಥಾನುಸಂಧಾನ. 


Play Time: 38:04

Size: 7.00 MB


Download Upanyasa Share to facebook View Comments
8394 Views

Comments

(You can only view comments here. If you want to write a comment please download the app.)
 • Vishwanandini User,Bengaluru

  10:35 PM, 03/01/2019

  Namaskara gurugale, ee upanyasada continuation andare SriRaghavendra stotra sloka 5B ya upanyasa sigutilla.upload agilava atava nanna phone alli barutilavo gotagtilla dhayavittu tilisi.
 • Abhilash,Benglore

  9:07 PM , 03/09/2018

  ಭವ್ಯಸ್ವರೂಪ ಬಗ್ಗೆ ಸಂಪೂರ್ಣವಾಗಿ ಮನ 
   ಮುಟ್ಟುವಂತೆ ಹೇಳಿದಿರಿ ಗುರುಗಳೇ ಆದರೆ
  ಇದರ ಮುಂದಿನ ಸ್ತೋತ್ರದ ಮುಂದಿನ ಸಾಲುಗಳ ಅರ್ಥವನ್ನು ಹೇಳಲಿಲ್ಲವಲ್ಲ ಗುರುಗಳೇ
  ಭವದುಖಃ ತುಲ ಸಂಗಾಗ್ನಿ ಚರ್ಯ ಸುಖ ಧೈರ್ಯಶಾಲಿ
  ಸಮಸ್ತ ದುಷ್ಟ ಗ್ರಹ ನಿಗ್ರಹೆ ಶೋ ದು ರತ್ಯ ಯೋಪ ಪ್ಲವಸಿಂಧು ಸೇ ತುಹು" ಈ ಸಾಲುಗಳ ಅರ್ಥ ವನ್ನು ದಯವಿಟ್ಟು ತಿಳಿಸಿ ಗುರುಗಳೇ
 • Abhilash,Benglore

  8:45 PM , 03/09/2018

  bhavya Swarupo edara artha Sampoornavagi
  heliddira but adar mundin stotrada artha poornavagi helillavalla Gurugale..
  "bhavadukhatoola Sangagnicharya Sukha Dhairyashali,samasta Dusta graha nigrahesho duratyayopaplava sindhu setuhu...
 • Abhilash Kamble,Benglore

  6:49 PM , 30/03/2018

  Gurugalige NAMASKARGALU
  "SRI RAGHAVENDRA SWAMY stotra Poorna shlokavannu Arthanusandhan maadi,
  Edarind rayaru santruptaraguttare
 • Aniridh R,Bangalore

  10:43 AM, 09/11/2017

  Mundina upanyasakkagi hambalisutteddeve 🙏🙏🙏🙏🙏.  Aniruddha
 • mangala gowri,Bangalore

  7:04 AM , 21/10/2017

  Acharyaryare, thamma padharavindagalige bakthinda sirabagi namaskarisuve namma Rayara bage thavu heluthidare navu namane marethubidutheve thamma upanyasa galu ha mattadaliruthave thamma dwaniyanu keluthidare bakthinda kannali niru baruthadhe prahaladaru hege samsara Dali bidu tholaladuva janaranu bagavanthana Bali kondoyuva hage thavu namage bakthi yanu mudisi dhynavanu kotu pavanamaduthidiri
 • P.R.SUBBA RAO,BANGALORE

  7:42 PM , 19/10/2017

  ಶ್ರೀ ಗುರುಭ್ಯೋನಮಃ
  ಶ್ರೀ ಬಾಹ್ಲೀಕ ರಾಜರ ಬಗ್ಗೆ ಅಪರೂಪದ ವಿಚಾರಗಳನ್ನು ತಿಳಿದೆವು. ರಾಯರ ಮಹಾ ವೈಷ್ಣವತ್ವದ ಬಗ್ಗೆ ತಿಳಿದೆವು. ರಾಯರ ಅವತಾರಗಳ, ಭಗವಂತನ ಸೇವಾಪೂರ್ವಕವಾದ ಕಾರ್ಯಗಳ ಸ್ಮರಣೆ ಬಹಳ ಪುಣ್ಯದಾಯಕವಾಗಿತ್ತು.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • Ashok Prabhanjana,Bangalore

  9:42 PM , 16/10/2017

  ಬನ್ನಂಜೆ ಗೋವಿಂದಾಚಾರ್ಯರು ರಾಯರು ಪ್ರಹ್ಲಾದನ ಅವತಾರರಲ್ಲವೆಂದೂ ರಾಯರು ಒಬ್ಬ ಮಹಾ ಯತಿ ಅಷ್ಟೆ ಎಂದು ಸಾವಿರಾರು ಜನರ ದಾರಿ ತಪ್ಪಿಸುತಿದ್ದಾರೆ. ಈ ಹಿಂದೆ ನಾನು ಕೂಡ ಅವರ ಅಭಿಮಾನಿ ಶಿಷ್ಯ ರಲ್ಲಿ  ಒಬ್ಬನಾಗಿದ್ದೆ, ನನ್ನನ್ನು ISKON ಇಂದ ಹೊರಗೆ ಕರೆದುಕೊಂಡು ಬಂದು ಮಧ್ವ ಶಾಸ್ತ್ರದ ಪ್ರಪಂಚಕ್ಕೆ ಮೊದಲು ಕರೆತಂದವರು ಅವರೇ, ಯಾವಗ ಅವರು ರಾಯರ ಬಗ್ಗೆ ಹೇಗೆ ದಾರಿ ತಪ್ಪಿಸಲು ಶುರು ಮಾಡಿದರೋ ಅಂದಿನಿಂದ ನಾನು ಅವರ ಮೇಲಿನ ಅಭಿಮಾನ ತೊರೆದು ಬಹಳ ದೂರ ಬಂದು ಬಿಟ್ಟೆ. ಇಂದಿಗೂ ನಾನು ಅವರು ನನ್ನನು ಇಸ್ಕಾನ್ ಇಂದ ಆಚೆ ಕರೆ ತಂದಿದಕ್ಕೆ ಚಿರಋಣಿ. ಅದರೆ ನನ್ನ ಉಸಿರು ಉಸಿರಿನಲ್ಲಿ ನಾನು ರಾಯರು ಪ್ರಹ್ಲಾದರೇ ಎಂದು ಉಪಾಸನೆ ಮಾಡುತೇನೆ. ಸಾವಿರಾರು ಜನರು ರಾಯರು ಪ್ರಹ್ಲಾದನಲ್ಲ ಎಂದು ಮಿತ್ಯೋಪಾಸನೆಯ ದಾರಿಯಲ್ಲಿ ಮುಂದುವರಿಯಬಾರದು ಎಂದು ನನ್ನ ಪ್ರಾಥನೆ ()
 • Jayashree Karunakar,Bangalore

  12:50 PM, 14/10/2017

  ಗುರುಗಳೆ ಭಗವಂತನ ಇರುವುದು ಇವರನ್ನು ದುಷ್ಟರ ಪಕ್ಷದಲ್ಲಿರಿಸಿ ತನ್ನ ಸೇವಾ ಭಾಗ್ಯವನ್ನು ಕರುಣಿಸುವದು.
  
  ಹಾಗಾದರೆ ಮುಂದೆ ಅಜ್ಞಾನವನ್ನು ಕೊಟ್ಟು ಅಧ೯ಮಕ್ಕೆ ಯಾಕೆ ಪ್ರೋತ್ಸಾಹ ಮಾಡುವಂತೆ ಪ್ರೇರಣೆ ನೀಡುವುದು ಗುರುಗಳೆ ?

  Vishnudasa Nagendracharya

  ಸರಕಾರ ಒಬ್ಬ ವ್ಯಕ್ತಿಯನ್ನು ತನ್ನ ಪ್ರತಿನಿಧಿಯನ್ನಾಗಿ ಹೊರದೇಶಕ್ಕೆ ಕಳುಹಿಸುತ್ತದೆ. ದೇಶದ ಕಾರ್ಯ ಮಾಡಲು. ಅಲ್ಲಿ ಆ ವ್ಯಕ್ತಿ ತಪ್ಪು ಮಾಡಿದಲ್ಲಿ ಕೆಲಸ ನೀಡಿದ ಸರಕಾರವೇ ಶಿಕ್ಷೆ ನೀಡುತ್ತದೆ. ಕಳುಹಿಸಿದ್ದು ದೇಶಸೇವೆ ಮಾಡಲು, ದೇಶದ್ರೋಹವನ್ನು ಮಾಡಲಲ್ಲ ಎಂದು.
  
  ದುರ್ಯೋಧನನ ಪಕ್ಷದಲ್ಲಿದ್ದು ಪಾಂಡವರ ಪಕ್ಷದ ವೀರರನ್ನು ಕೊಲ್ಲುವದು ಇವರ ಕಾರ್ಯವಾಗಿತ್ತು. ಆದರೆ ದ್ರೌಪದಿಗೆ ಅವಮಾನವಾದಾಗ, ಪಾಂಡವರನ್ನು ವಂಚಿಸಿದಾಗ ಸುಮ್ಮನೆ ಕೂಡುವದು ಕಾರ್ಯವಾಗಿರಲಿಲ್ಲ. ವಿದುರನಂತೆ ಪ್ರತಿಭಟಿಸಲೇ ಬೇಕಿತ್ತು. ಅದನ್ನು ಮಾಡಲಿಲ್ಲ. 
  
  ಇನ್ನು ಮುಂದಿನ ಪ್ರಶ್ನೆ, ಇಲ್ಲಿ ತಪ್ಪು ಮಾಡಿಸುವದೂ ದೇವರೇ ಅಲ್ಲವೇ ಎಂದು. 
  
  ಇದು ಜೀವಕರ್ತೃತ್ವದ ಚರ್ಚೆಯ ವ್ಯಾಪ್ತಿಗೆ ಬರುವ ಪ್ರಶ್ನೆ. 
  
  ದೇವರು ನಮ್ಮ ಸ್ವಭಾವ, ಕರ್ಮ, ಪ್ರಯತ್ನಗಳ ಅನುಸಾರಿಯಾಗಿ ಫಲ ನೀಡುತ್ತಾನೆ. ಇವುಗಳಲ್ಲಿ ದೋಷವಿದ್ದಾಗ ಭಗವಂತ ನಮ್ಮಿಂದ ತಪ್ಪು ಮಾಡಿಸುತ್ತಾನೆ. 
  
  ತಪ್ಪು ಮಾಡಿ ಶಿಕ್ಷೆ ಪಡೆದು ಆ ನಂತರ ತಿದ್ದುಕೊಂಡು ಸರಿಯಾದ ದಾರಿಯಲ್ಲಿ ನಡೆಯುವದೇ ಸಜ್ಜನರ ಸ್ವಭಾವದಲ್ಲಿದೆ. ಹೀಗಾಗಿ ದೇವರು ಹೀಗೆ ಮಾಡಿಸುತ್ತಾನೆ. 
  
  
  
 • Jayashree Karunakar,Bangalore

  12:41 PM, 14/10/2017

  ಗುರುಗಳೆ
  ಭಗವಂತನ ಆಜ್ಞಾನುಸಾರವಾಗಿ ಅವನ ಸೇವೆಗಾಗಿಯೇ ವಿರೋಧ ಪಕ್ಷದಲ್ಲಿದೇವೆ ಎನ್ನುವ ಜ್ಞಾನವಿರುವಾಗ,  ಅವನ ಸೇವೆ ಮಾಡುತ್ತೀವೆ ಆದ್ದರಿಂದ ಅಧ೯ಮಕ್ಕೆ ಪ್ರೋತ್ಸಾಹ ಮಾಡಬಾರದು ಎನ್ನುವ ಜ್ಞಾನವು ಅಂತಹ ಸಾಧನೆ ಮಾಡಿದ
   ಮಹಾನುಭಾವರಿಗೂ ಇರಲಿಲ್ಲವೆ ? ಹಾಗಾದರೆ ನಮ್ಮಂತಹ ಅತೀಸಾಮಾನ್ಯ ಮನುಷ್ಯರ ಗತಿ ಏನು ?

  Vishnudasa Nagendracharya

  ದುಷ್ಟರ ಅನ್ನವನ್ನು ತಿಂದಾಗ ಎಂತಹವರ ಜ್ಞಾನವೂ ತಿರೋಹಿತವಾಗುತ್ತದೆ, ಅವರಿಂದಲೂ ಅಧರ್ಮ ನಡೆಯುತ್ತದೆ ಎನ್ನುವದಕ್ಕೆ ದೃಷ್ಟಾಂತವಿದು. 
  
  ಹೀಗಾಗಿ ದುಷ್ಟರ ಸಂಪರ್ಕದಿಂದ ದೂರವಿರಬೇಕು. ಏಕಾಂತದಲ್ಲಿ ಸಾಧನೆಯನ್ನು ಮಾಡಬೇಕು. 
 • Jayashree Karunakar,Bangalore

  3:04 PM , 12/10/2017

  ಗುರುಗಳೆ
  ಬಾಹ್ಲೀಕ ಮಹಾರಾಜರು,ಅಶ್ವತ್ಥಾಮಾಚಾಯ೯ರು,ದ್ರೋಣಾಚಾಯ೯ರು ಮುಂತಾದರೆಲ್ಲರೂ ಪಾಂಡವರ ವಿರೋಧವಾಗಿ ನಿಂತು ಯುದ್ಧ ಮಾಡಿದರೂ, ಇದು ಭಗವಂತನ ಆಜ್ಞೆಗಾಗಿಯೇ ಮಾಡುತ್ತಿರುವುದು, ಮತ್ತು ಇದು ಅವನ ಸೇವೆ ಎಂಬ ಅನುಸಂಧಾನವಿದ್ದುಕೊಂಡೇ ಮಾಡಿದರೆ ?
  
  ಹಾಗಾದರೆ ಅವರಿಗೆ ಅದರಿಂದಾಗಿ ಯಾವುದೇ ರೀತಿಯ ಕಮ೯ಫಲವನ್ನು ಅನುಭವಿಸಲಿಲ್ಲವೆ ? ಅವರಿಗೆಲ್ಲಾ ಶ್ರೀಕೃಷ್ಣ ಪರಮಾತ್ಮ ಎನ್ನುವ ಜ್ಞಾನವಿತ್ತೆ ?

  Vishnudasa Nagendracharya

  ಅಶ್ವತ್ಥಾಮಾದಿಗಳು ಭಗವಂತನ ಇಚ್ಛೆಯ ಅನುಸಾರವಾಗಿಯೇ, ಭಗವಂತನ ಸೇವೆಯನ್ನು ಮಾಡಲಿಕ್ಕಾಗಿಯೇ ಪರಪಕ್ಷದಲ್ಲಿದ್ದದ್ದು.
  
  ಆದರೆ ದುಷ್ಟರ ಸಂಪರ್ಕದಲ್ಲಿದ್ದ ಕಾರಣಕ್ಕೆ ಕೆಲವು ಬಾರಿ ಅವರಿಂದಲೂ ಅಧರ್ಮದ ಆಚರಣೆ ಮತ್ತು ಅಧರ್ಮದ ಪ್ರೋತ್ಸಾಹ ನಡೆದಿದೆ. ಉದಾಹರಣೆ ದ್ಯೂತ. 
  
  ದೇವರ ಆಜ್ಞಾರೂಪವಾಗಿ, ದೇವರ ಸೇವೆಯನ್ನು ಮಾಡಿದ್ದಕ್ಕಾಗಿ ಮಹಾಫಲವನ್ನೂ ಪಡೆದರು. ಯಾವ ಕರ್ಮಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿದರೋ ಅದರಲ್ಲಿ ಕೆಲವನ್ನು ಪ್ರಾಯಶ್ಟಿತ್ತದಿಂದ ಕಳೆದುಕೊಂಡರು, ಕೆಲವದರ ಫಲವನ್ನು ಅನುಭವಿಸಿದರು. ಅಶ್ವತ್ಥಾಮಾಚಾರ್ಯರು ಒಂದು ಸಾವಿರ ವರ್ಷ ದುಃಖವನ್ನು ಅನುಭವಿಸಿದಂತೆ. 
  
  ಶ್ರೀಕೃಷ್ಣನೇ ಪರಮಾತ್ಮ ಎನ್ನುವ ಜ್ಞಾನವೂ ಬಹುತೇಕ ಸಂದರ್ಭದಲ್ಲಿ ಇವರಿಗಿತ್ತು. ಕೆಲವು ಬಾರಿ ಮರೆತುಹೋದ ಪ್ರಸಂಗಗಳೂ ಇವೆ. 
 • Parimala Rao,Mysore

  9:26 AM , 14/10/2017

  Namaskara Gurugale, We are blessed to have Vishwanandini in our lives and always Thank Sri Hari for your divine pravachanas. Bhavya Swarooparada Guru Sarvabhowmarada Sri Raghavendra Tirtharu namma paapa gallanella kalledu udhara madali endu beduthene. Hare Srinivasa.
 • Laxmirao,Bangalore

  8:10 AM , 12/10/2017

  ಭೂ ಯತಿ ವರದೇಂದ್ರ ಶ್ರೀ ಗುರುರಾಯ ರಾಘವೇಂದ್ರ
 • P.R.SUBBA RAO,BANGALORE

  8:07 AM , 12/10/2017

  ಶ್ರೀ ಗುರುಭ್ಯೋನಮಃ
  ಬಹಳ ದಿನಗಳಿಂದ ಕಾಯುತ್ತ ಇದ್ದೆ. 
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • Aniridh R,Bangalore

  7:00 AM , 12/10/2017

  Bahala dinadinda upanyasakkagi hambalisuttedduvu.dhanyavadagal🙏🙏🙏🙏