Upanyasa - VNU539

ಶ್ರೀಮದ್ ಭಾಗವತಮ್ — 45 — ವಸ್ತು ಶಬ್ದದ ಅರ್ಥ

ಶ್ರೀಮದ್ ಭಾಗವತದಿಂದ ಪ್ರತಿಪಾದ್ಯವಾದದ್ದು “ವಾಸ್ತವ-ವಸ್ತು” ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ದೇವರನ್ನು ವಸ್ತು ಎನ್ನುವ ಶಬ್ದದಿಂದ ಕರೆಯಲು ಕಾರಣವೇನು, ಆ ಶಬ್ದದ ಅರ್ಥವೇನು ಎಂದು ತಿಳಿಸುತ್ತ ಭಗವತ್ಪಾದರು ಅಪೂರ್ವ ಪ್ರಮೇಯಗಳನ್ನು ನಮಗೆ ತಿಳಿಸುತ್ತಾರೆ. ಆ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ. ಶಿವದಮ್, ತಾಪತ್ರಯೋನ್ಮೂಲನಂ ಎಂಬ ಶಬ್ದಗಳ ವಿವರಣೆಯೊಂದಿಗೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

वेद्यं वास्तवमत्र वस्तु शिवदं तापत्रयोन्मूलनम् 

ಭಾಗವತತಾತ್ಪರ್ಯ —

वस्तु अप्रतिहतं नित्यम् च । 
स्कान्दे च —
“वसनाद् वासनाद् वस्तु नित्याप्रतिहतं यतः । वासनेदं यतस्तुन्नमतस्तद्ब्रह्म शब्द्यते” इति ।


Play Time: 39:25

Size: 6.77 MB


Download Upanyasa Share to facebook View Comments
5272 Views

Comments

(You can only view comments here. If you want to write a comment please download the app.)
 • Sowmya,Bangalore

  8:01 PM , 07/04/2022

  🙏🙏🙏
 • Mahadi Sethu Rao,Bengaluru

  3:15 PM , 19/06/2020

  HARE KRISHNA.
 • Jasyashree Karunakar,Bangalore

  10:26 AM, 26/09/2018

  ಹಲವು ಆಲಯಂಗಳ ನಾ ಸುತ್ತಿ ಬಂದೆ...
  
  ಬಡವರಿಗೆ ಉಣ್ಣಲಿಕ್ಕಿದೆ....
  
  ಆದರೆ ಗುರುವೆ ಅಲ್ಲಿರುವ ಹರಿಯ ನಾ ಅರಿಯದಾದೆ..
  
  ಕಾರಣ ನಾನು ನನ್ನದೆಂಬ ಭಾವದಲಿ ನಾನಿದ್ದೆ.....
  
  ಆದರಿಂದು ನೀವಿತ್ತ ಜ್ಞಾನದಲಿ.....
  
  ಎಲ್ಲದರೊಳಗಿರುವ ಹರಿಯ ಅರಿಯಲು ಪ್ರಯತ್ನಿಸುತಿದೆ ಮನ....
  
  ಹೃದಯ ಕಂಬನಿಯ ಮಿಡಿದಿದೆ....ರಕ್ಷಿಪ ದೖವ ಅವನೆಂದರಿತು...
  
  ವಿಶ್ವವ್ಯಾಪಕ"ನೆಂಬರಿವು" ನೀಡಿದ ಓ ಗುರುವೆ...
  ಶಿರಬಾಗಿ ನಮಿಪೆನು
  ಅವನಿರುವನೆಂಬ "ಅನುಭವ" ನೀಡಿ....
  
  ಅವನ ಮಹಿಮೆ ಪೇಳುವ ಗುರು ನೀವಲ್ಲವೆ......🙏🙏
  
  ನಿಮ್ಮಚರಣ
  ಬಿಟ್ಟಗಲಲಾರೆನು ಹರಿಯತೋರಿ ಗುರುವೆ....🙏
 • P.R.SUBBA RAO,BANGALORE

  5:29 PM , 28/10/2017

  ಶ್ರೀ ಗುರುಭ್ಯೋನಮಃ
  SB045 - ಶುದ್ಧವಾದ ತತ್ವಜ್ಞಾನ ಎಷ್ಟು ಆಳವಾಗಿ ವಿಚಾರವನ್ನು ವಿಮರ್ಶೆ ಮಾಡಿ ಅದಕ್ಕೆ ಉತ್ತರ ಕೊಡುವುದನ್ನು ನೋಡಿದರೆ ವಿಸ್ಮಯವಾಗುತ್ತದೆ. ಅದ್ಭುತವಾಗಿದೆ. ಇಂಥಾದ್ದನ್ನು ನಮಗೆ ನೀಡಿದ ಶ್ರಿವೇದವ್ಯಾಸ ದೇವರು, ಶ್ರಿಮದಾನಂದತೀರ್ಥ ಭಗವತ್ಪಾದಾಚಾರ್ಯರಿಂದ ಹಿಡಿದು ತಮ್ಮವರೆಗೂ ಸಮಸ್ತ ಗುರುಪರಂಪರೆಗೆ ಚರಋಣಿಗಳಾಗಿದ್ದೇವೆ ಮತ್ತು ಅನಂತಾನಂತ ವಂದನೆಗಳು. ಮತ್ತೂ ನಾವು ಇರುವ ಕಡೆಗೇ, ಇಷ್ಟು ಸುಲಭವಾಗಿ ಶ್ರವಣ ಮಾಡಲಿಕ್ಕೆ ಆಸ್ಪದ ಮಾಡಿಕೊಟ್ಟ ಸಮಸ್ತಕ್ಕೂ (ನಮ್ಮ ಮಾನವ ಜನ್ಮ, ಇವತ್ತಿನ technology, affordability, physical existence & capability, ವಿಶ್ವನಂದಿನಿ, ಗುರುಗಳು, ಸಮೀರ ಬದಾಮಿ ಒಟ್ಟಾರೆ ಇವೆಲ್ಲಕ್ಕೂ ಕಾರಣನಾದ, ಕರ್ಮಕಾರಕನಾದ, ನಿಯಾಮಕನಾದ ಶ್ರೀಹರಿ, ವಾಯು, ಗುರುಗಳಿಗೆ) ಮತ್ತೆ ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • S varadaraja,Bangalore

  11:50 AM, 20/10/2017

  👏👏👏👏👏👏👏👏👏👏
 • ಪ್ರಮೋದ,ಬೆಂಗಳೂರು

  12:54 AM, 16/10/2017

  ಆಚಾರ್ಯರೇ, ಲಕ್ಷ್ಮಿದೇವಿಯರು ಅಪರಿಪೂರ್ಣರು ಎಂದ ಮೇಲೆ ಅನಂತ ಹೇಗೆ ಆಗುತ್ತಾರೆ?

  Vishnudasa Nagendracharya

  ಕಾಲ ಅನಾದಿಯಾದದ್ದು, ಅನಂತವಾದದ್ದು. ಹಾಗಾದರೆ ಅದು ಪರಿಪೂರ್ಣವೋ. ಅಲ್ಲ. 
  
  ಅನಂತವಾದದ್ದೆಲ್ಲ ಪರಿಪೂರ್ಣವಾಗಿರಲೇಬೇಕು ಎಂಬ ನಿಯಮವಿಲ್ಲ. 
  
  
 • ಪ್ರಮೋದ,ಬೆಂಗಳೂರು

  12:49 AM, 16/10/2017

  ಆಚಾರ್ಯರೇ, ಹಾಗಾದರೆ ಪರಿಪೂರ್ಣತೆಗೂ,‌ ಅನಂತತೆಗೂ ಏನು ವ್ಯತ್ಯಾಸ?
 • Ashok Prabhanjana,Bangalore

  9:07 PM , 14/10/2017

  ಗುರುಗಳೇ, ಮಹಾಲಕ್ಷ್ಮಿಯು ಗುಣತಹ ಅನಂತಳೇ ಅಲ್ಲವೇ? ಹಾಗಾದರೆ ಶ್ರಿಹರಿಯ ಗುಣತಹ ಅನಂತತೆಗೂ ಲಕ್ಶ್ಮಿಯ ಗುಣತಹ ಅನಂತತೆಗೂ ಇರುವ ವ್ಯತ್ಯಾಸವೇನು? ದಯವಿಟ್ಟು ತಿಳಿಸಿ ಕೊಡಿ  -()

  Vishnudasa Nagendracharya

  ನೋಡಿ ಅನಂತತೆಯಲ್ಲಿಯೂ ವ್ಯತ್ಯಾಸವಿರುತ್ತದೆ. 
  
  ಅನಾದಿ ಕಾಲದಿಂದ ಇಲ್ಲಿಯವರೆಗೆ ಎಷ್ಟು ಗಂಟೆಗಳಾಗಿವೆ. 
  
  ಅನಂತ ಗಂಟೆಗಳು. 
  
  ಎಷ್ಟು ನಿಮಿಷಗಳಾಗಿವೆ. 
  
  ಅದರ 60 ಪಟ್ಟು ಹೆಚ್ಚು ಅನಂತ.
  
  ಅಂದರೆ ಗಂಟೆಗಳ ಅನಂತತ್ವಕ್ಕಿಂತ ನಿಮಿಷಗಳ ಅನಂತತ್ವ ಹೆಚ್ಚು. (ಗಾತ್ರದಲ್ಲಿ ಎರಡೂ ಒಂದೇ ಆದರೂ, ಸಂಖ್ಯೆಯಲ್ಲಿ ವಿಭಿನ್ನ. ನೂರು ರೂಪಾಯಿಯ ನೋಟಿನ ಬೆಲೆಯೂ ಒಂದೇ. ಒಂದು ರೂಪಾಯಿಗಳ ನೋಟು ನೂರಿದ್ದರೆ ಅದರ ಸಂಖ್ಯೆಯೂ ಒಂದೆ. ಆದರೆ ಒಂದು ರೂಪಾಯಿಗಳು ನೂರಿದ್ದಾಗ ನೋಟುಗಳ ಸಂಖ್ಯೆ ಅಧಿಕವಾಯಿತು.) 
  
  ಇದು ಕೇವಲ ಅನಂತತ್ವದಲ್ಲಿ ವ್ಯತ್ಯಾಸವಿದೆ ಎನ್ನುವದನ್ನು ತೋರಲು ದೃಷ್ಟಾಂತ. 
  
  ಹಾಗೆ ನೂರು ಬೆಳ್ಳಿಯ ನಾಣ್ಯಗಳಿಗೂ ನೂರು ಬಂಗಾರದ ನಾಣ್ಯಗಳಿಗೂ ಬೆಲೆಯಲ್ಲಿ ಅಜಗಜಾಂತರವ್ಯತ್ಯಾಸವಿದೆ. 
  
  ದೇವರ ಮತ್ತು ಲಕ್ಷ್ಮೀದೇವಿಯ ಗುಣಗಳ ಅನಂತತೆಯಲ್ಲಿ ಸಂಖ್ಯೆಯಲ್ಲಿಯೂ ವ್ಯತ್ಯಾಸವಿದೆ. ಲಕ್ಷ್ಮೀದೇವಿಯಲ್ಲಿರುವ ಗುಣಗಳ ಅನಂತತ್ವಕ್ಕಿಂತ ದೇವರಲ್ಲಿರುವ ಅನಂತತ್ವ ಮಿಗಿಲು. 
  
  ಅದೇ ರೀತಿ ಆ ಗುಣಗಳ ಪರಿಪೂರ್ಣತೆಯಲ್ಲಿಯೂ ವ್ಯತ್ಯಾಸವಿದೆ. ಲಕ್ಷ್ಮೀದೇವಿಯಲ್ಲಿರುವ ಗುಣಗಳನ್ನು ಅನಂತ ಬೆಳ್ಳಿಯ ನಾಣ್ಯಗಳು ಎಂದು ಭಾವಿಸಿ, ದೇವರಲ್ಲಿರುವ ಗುಣಗಳನ್ನು ಅನಂತ ಬಂಗಾರದ ನಾಣ್ಯಗಳು ಎಂದು ಭಾವಿಸಿ. ಆಗ ಅರ್ಥವಾಗುತ್ತದೆ. 
  
  
 • Ashok Prabhanjana,Bangalore

  9:07 PM , 14/10/2017

  ಗುರುಗಳೇ, ಮಹಾಲಕ್ಷ್ಮಿಯು ಗುಣತಹ ಅನಂತಳೇ ಅಲ್ಲವೇ? ಹಾಗಾದರೆ ಶ್ರಿಹರಿಯ ಗುಣತಹ ಅನಂತತೆಗೂ ಲಕ್ಶ್ಮಿಯ ಗುಣತಹ ಅನಂತತೆಗೂ ಇರುವ ವ್ಯತ್ಯಾಸವೇನು? ದಯವಿಟ್ಟು ತಿಳಿಸಿ ಕೊಡಿ  -()
 • Jayashree Karunakar,Bangalore

  3:26 PM , 14/10/2017

  ಗುರುಗಳೆ
  
  ೧.ಹಾಗಾದರೆ ಲೌಕಿಖವಾಗಿ ಉಪಯೋಗಿಸುವ ಶಬ್ದ "ವಸ್ತು" ಅನ್ನುವುದು ಎಲ್ಲಾರೀತಿಯಲ್ಲಿಯೂ ಅಪರಿಪೂಣ೯ವೆ ? ಅದು ಪೂಣ೯ವಾಗಿ ಅನ್ವಯವಾಗುವುದು ಭಗವಂತನಿಗೆ ಮಾತ್ರವೆ ?
  ೨. ವಸ್ತು = ವಸತಿ ಇತಿ ವಸ್ತು
     ವಾಸ್ತವ = ಅಸ್ತಿತ್ವದಲ್ಲಿರುವದು.
  
  ನಾವು ಸೂಕ್ಷವಾಗಿ ಗಮನಿಸಿದಾಗ, ಈ ಎರಡೂ ಶಬ್ದಗಳ 
  ಅಥ೯ವೂ ಒಂದರೊಳಗೊಂದು ಲಯ ಹೊಂದುತ್ತದೆ ಅಲ್ಲವೇ ?

  Vishnudasa Nagendracharya

  1. ದೇವರನ್ನು ಹೊರತು ಪಡಿಸಿದ ಸಮಸ್ತ ಚೇತನ ಅಚೇತನ ಪದಾರ್ಥಗಳೂ ಅಪರಿಪೂರ್ಣವೇ. ಒಂದಕ್ಕಿಂತ ಒಂದು ಹೆಚ್ಚಿರಬಹುದು ಆದರೆ ಅಪರಿಪೂರ್ಣ. ಒಂದು ದೃಷ್ಟಿಯಿಂದ ಪರಿಪೂರ್ಣ ಇರಬಹುದು. ಆದರೆ ಮತ್ತೊಂದು ದೃಷ್ಟಿಯಿಂದ ಅಪರಿಪೂರ್ಣವೇ. ಒಂದು ಲೋಟದಲ್ಲಿರುವ ನೀರು ಪರಿಪೂರ್ಣ ಇರಬಹುದು. ಗಾತ್ರದ ದೃಷ್ಟಿಯಿಂದ ಮಾತ್ರ. ಆದರೆ ಅಡಿಗೆ ಮಾಡಲು ಒಂದು ಲೋಟ ನೀರು ಸಾಕಾಗುವದಿಲ್ಲ. ಅಂದರೆ ಅದರಲ್ಲಿರುವ ನೀರು ಅಡಿಗೆ ಮಾಡುವಷ್ಟು ಪರಿಪೂರ್ಣವಲ್ಲ. ಮಹಾಲಕ್ಷ್ಮೀದೇವಿ ಎಲ್ಲರಿಗಿಂತ ಅತ್ಯಧಿಕಗುಣಯುಕ್ತರಾಗಿರಬಹುದು. ಅನಂತಗುಣಯಕ್ತರಾಗಿರಬಹುದು, ಆದರೆ ಅವರಲ್ಲಿ ಸ್ವಾತಂತ್ರ್ಯವಿಲ್ಲ, ಅವರು ದೇವರಿಲ್ಲದೇ ಜಗತ್ತಿನ ಸೃಷ್ಟ್ಯಾದಿಗಳನ್ನು ಮಾಡಲು ಸಾಧ್ಯವಿಲ್ಲ. ಅದು ಅಪರಿಪೂರ್ಣತೆಯೇ ಅಲ್ಲವೇ. ನಮ್ಮ ಸ್ವಾಮಿಯೊಬ್ಬನೇ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣನಾದವನು. 
  
  2. ಮೇಲ್ನೋಟದ ಅರ್ಥವನ್ನು ತೆಗೆದುಕೊಂಡಾಗ ಎರಡೂ ಶಬ್ದ ಪ್ರಾಯಃ ಒಂದೇ ಅರ್ಥ ಹೇಳುತ್ತದೆ. ಆದರೆ ಇಲ್ಲಿ ಮೇಲ್ನೋಟದ ಅರ್ಥವನ್ನು ಹೇಳುತ್ತಿಲ್ಲ. 
  
  ವಾಸ್ತವ - ನಿರ್ದೋಷನಾಗಿ ಗುಣಪೂರ್ಣನಾಗಿ ಇರುವವನು. 
  
  ವಸ್ತು- ಸಮಸ್ತ ದೇಶ-ಕಾಲಗಳಲ್ಲಿಯೂ ಇರುವವನು. 
  
  ಎರಡೂ ಶಬ್ದಗಳು ಹೇಳುವ ಅರ್ಥ - ಗುಣತಃ, ದೇಶತಃ, ಕಾಲತಃ ಅನಂತನಾಗಿ ಇರುವವನು ಎಂದು. 
  
  ಅರ್ಥಗಳು ಒಂದರೊಳಗೊಂದು ಲಯ ಹೊಂದುತ್ತದೆ ಎಂಬ ಪ್ರಯೋಗ ತಪ್ಪು. ಎರಡೂ ಅರ್ಥಗಳು ಒಂದೇ ಅಲ್ಲವೇ? ಎಂದಾಗಬೇಕು. ಅರ್ಥಗಳು ಲಯ ಹೊಂದುವದಿಲ್ಲ. 
 • prema raghavendra,coimbatore

  1:52 PM , 14/10/2017

  Anantha namaskara! Danyavada!
 • Shantha.raghothamachar,Bangalore

  11:59 AM, 14/10/2017

  ನಮಸ್ಕಾರ ಗಳು
 • P N Deshpande,Bangalore

  10:31 AM, 14/10/2017

  S.Namaskaragalu.Vaasttwada nantar vasttu both words are taking us to some special maha janana which produces mahadaanand. You are taking us to a such hight by that all are blessed
 • Niranjan Kamath,Koteshwar

  9:10 AM , 14/10/2017

  Shri Narayana Akhila Guro Bhagavan Namasthe. Gurugala charanaravind galige namo namaha. Estondu spasta mathu sarala vagi tilisikodutiddiri. Namo namaha.