Upanyasa - VNU540

ಶ್ರೀಮದ್ ಭಾಗವತಮ್ — 46 — ಪುರುಷಾರ್ಥವಿಚಾರ

ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಎರಡು ವಿಧ. ಒಂದು ಗ್ರಾಹ್ಯ ಮತ್ತೊಂದು ಅಗ್ರಾಹ್ಯ. ಆ ಎರಡು ರೀತಿಯ ಪುರುಷಾರ್ಥಗಳ ಕುರಿತ ವಿವರಣೆ ಇಲ್ಲಿದೆ. ಗ್ರಾಹ್ಯವಾದ ಧರ್ಮ-ಮೋಕ್ಷಗಳಿಗಾಗಿ ಪ್ರವೃತ್ತವಾದ ಭಾಗವತ ಸಾಧನೋಪಯೋಗಿಯಾದ ಸಂಪತ್ತನ್ನು, ಹಾಗೂ ವಿಹಿತವಾದ ಅಪೇಕ್ಷೆಗಳನ್ನೂ ಪೂರೈಸುತ್ತದೆ ಎಂಬ ತತ್ವದ ನಿರೂಪಣೆಯೊಂದಿಗೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಶಬ್ದಗಳು — 

किं वाsपरैः ।

ಭಾಗವತತಾತ್ಪರ್ಯ —

किं वाsपरैः अर्थकामादिकथनैः । 

गारुडे च — 

“धर्मार्थकाममोक्षाणामेकमेव पदं यतः । 
अवरोधो हृदीशस्य पृथग्वक्ष्ये न तानहम्” इति ।Play Time: 32:44

Size: 6.06 MB


Download Upanyasa Share to facebook View Comments
6228 Views

Comments

(You can only view comments here. If you want to write a comment please download the app.)
 • Sowmya,Bangalore

  7:50 PM , 12/04/2022

  🙏🙏🙏
 • Mahadi Sethu Rao,Bengaluru

  3:15 PM , 19/06/2020

  HARE KRISHNA
 • Ananda Teertha,Bangalore

  7:40 AM , 10/09/2018

  ಆಚಾರ್ಯರ ಪಾದಾರವಿಂದಗಳಿಗೆ ಅನಂತ ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು. 🙏🙏
 • Srinidhi Govind Joshi,Hyderabad

  9:53 PM , 17/10/2017

  Gurugalige namaskaragalu. Punya emba vastuvannu sampadisuvudu nishkama karmavaguttadeye. Dayavittu tilisikodi
 • Jayashree Karunakar,Bangalore

  9:08 PM , 15/10/2017

  ಗುರುಗಳೆ
  
  ಪಾಪ ಪರಿಹರಕ್ಕಾಗಿ ಪೂಜೆ, ಆರೋಗ್ಯಕ್ಕಾಗಿ ಕೆಲವು ಶಾಂತಿಗಳು, ಇದೆಲ್ಲವೂ ಐಹಿಕ ಫಲದ ಇಚ್ಚೆಯಿಂದ ಮಾಡಿದರೂ, ಇದರಿಂದ ಪಾಪಗಳು ಕಳೆದು,ಸಾಧನೆಗೆ ಪೂರಕವಾದ ಆರೋಗ್ಯ ದೊರೆತು, ಮತ್ತಷ್ಟು ಸಾಧನೆಯಾಗುತ್ತದೆ.
  ಆಗ ಈ ಐಹಿಕ ಧಮಾ೯ಚರಣೆಯು ತ್ಯಾಜ್ಯ ಮೋಕ್ಷ ಹೇಗಾಗುತ್ತದೆ ?

  Vishnudasa Nagendracharya

  ಸಾಧನೆಗೆ ಸಹಕಾರಿಯಾದದ್ದು ತ್ಯಾಜ್ಯವಾಗುವದಿಲ್ಲ. 
  
  ಆದರೆ ಅದನ್ನು ಪಡೆಯುವ ಕ್ರಮವೂ ಧರ್ಮದ್ದೇ ಆಗಿರಬೇಕು. 
  
  ಉದಾಹರಣೆಯ ಮುಖಾಂತರ ತಿಳಿಸುತ್ತೇನೆ. 
  
  ತುಂಬ ಸಾಲವಾಗಿದೆ ಎಂದು ಆ ಸಾಲದ ಪರಿಹಾರಕ್ಕಾಗಿ, ದಾರಿದ್ರ್ಯದ ಪರಿಹಾರಕ್ಕಾಗಿ ಸಕಾಮ ಕರ್ಮವನ್ನು ಮಾಡಿದರೆ, ಆ ಸಕಾಮ ಕರ್ಮವೇ ಮತ್ತೊಂದು ಬಂಧಕವಾಗುತ್ತದೆ. 
  
  ಸಕಾಮಕರ್ಮದಿಂದ ಪಾಪಮುಕ್ತಿ, ದಾರಿದ್ರ್ಯಮುಕ್ತಿ ಉಂಟಾಗುತ್ತದೆ ನಿಜ. ಆದರೆ ಆ ಸಕಾಮಕರ್ಮವೇ ಮತ್ತೊಂದು ಬಂಧಕವಾಯಿತು. ಹೀಗಾಗಿ ಆ ರೀತಿಯಾದ ಮುಕ್ತಿಯನ್ನೂ ನಾವು ಬಯಸಬಾರದು. 
  
  ಪಾಪಮುಕ್ತಿಗಾಗಿ ಸಕಾಮಕರ್ಮವನ್ನು ಒಂದು ಹಂತಕ್ಕೆ ಅನಿವಾರ್ಯ ಎಂದು ಒಪ್ಪಬಹುದಾದರೂ, ಮತ್ತಷ್ಟು ರೀತಿಯ ದಾರಿಗಳಿವೆ ಅವನ್ನು ಒಪ್ಪಲು ಸಾಧ್ಯವಿಲ್ಲ. 
  
  ದಾರಿದ್ರ್ಯದ ಪರಿಹಾರಕ್ಕಾಗಿ ವಾಮಾಚಾರ ಮಾಡುವದು, ಅಥವಾ ಕಳ್ಳತನ ಮುಂತಾದ ನೀಚ ಮಾರ್ಗಗಳನ್ನು ಅನುಸರಿಸುವದು. ಅವುಗಳಿಂದ ದೊರೆಯುವ ಹಣದಿಂದ ದಾರಿದ್ರ್ಯದಿಂದ ಮುಕ್ತಿ ದೊರೆಯುತ್ತದೆ ನಿಜ. ಆದರೆ ವಾಮಾಚಾರ, ಕಳ್ಳತನಗಳೇ, ಅದರಿಂದ ದೊರೆತ ಹಣವೇ ಮತ್ತೆ ನಮ್ಮನ್ನು ಪರಮ ಅನರ್ಥಕ್ಕೆ ದೂಡುತ್ತದೆ. ಹೀಗಾಗಿ ಪಾಪದಿಂದ ಮುಕ್ತಿ ಅಪೇಕ್ಷಿತವಾದರೂ, ಅದನ್ನು ಪಡೆಯುವ ದಾರಿ ಸರಿಯಾಗಿರಬೇಕು. ತಪ್ಪುದಾರಿಯಿಂದ ಪಡೆಯುವ ಪಾಪಮುಕ್ತಿ ತ್ಯಾಜ್ಯವಾದದ್ದು. 
  
 • Mrs laxmi laxman padaki,Pune

  2:09 PM , 15/10/2017

  Ananthakoti namaskaragalu, Sri Gurujiyavarige.
 • P N Deshpande,Bangalore

  10:46 AM, 15/10/2017

  S.Namaskargalu, One step ahead towards aprokkhash janana we are proceeding practically may be difficult but the ways are being taught for great achievement. Dhanywaadagalu
 • prema raghavendra,coimbatore

  10:40 AM, 15/10/2017

  Anantha namaskara! Danyavada!
 • Shantha.raghothamachar,Bangalore

  10:23 AM, 15/10/2017

  ನಮಸ್ಕಾರ ಗಳು
 • Niranjan Kamath,Koteshwar

  7:13 AM , 15/10/2017

  Shri Narayana Akhila Guro Bhagavan Namasthe. Gurugala charanaravind galige namo namaha. Parama pavana..... Shrimannarayana hagu Shrimad Vedavyasa Badarayana Devara smaraneyinda hagu nimma yee Shimad Bhagvahamritha Shravanadinda namage sadbudhi baruva hage Bhagavantha karunisali endu prarthisuthene.
 • H. Suvarna kulkarni,Bangalore

  7:00 AM , 15/10/2017

  ಗುರುಗಳಿಗೆ ಪ್ರಣಾಮಗಳು ಧಮ೯,ಅಥ೯,ಕಾಮ,ಮೋಕ್ಷ ಗಳ ಪಾಲನೆಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಸರಳವಾಗಿ ಅಥೈ೯ಸಿದ್ದೀರಿ ದಿನದಿಂದ ದಿನಕ್ಕೆ ಭಾಗವತ ಕೇಳುವ ಉತ್ಸಾಹ ಹೆಚ್ಚುತ್ತಿದೆ ಇಷ್ಟು ದಿನ  ಬೆಳಗಿನ ಜಾವ ಕುಳಿತು ಕೇಳಬೇಕು ಎಂಬ ಪ್ರಯತ್ನದಲ್ಲಿದ್ದೆ. ಈ ದಿನ ಅದನ್ನು ಸಾಧಿಸಿಬಿಟ್ಟೆ. ಭಾಗವತದ ಸೆಳತ ಹಾಗಿದೆ. ಧನ್ಯವಾದಗಳು