Upanyasa - VNU542

ಶ್ರೀಮದ್ ಭಾಗವತಮ್ — 48 — ಪಿಬತ ಭಾಗವತಮ್

ಸ್ವಯಂ ಶ್ರೀ ವೇದವ್ಯಾಸದೇವರು ಶ್ರೀಮದ್ ಭಾಗವತದ ಮಾಹಾತ್ಮ್ಯವನ್ನು ತಿಳಿಸಿ ಹೇಳಿ, ಈ ಭಾಗವತದ ಫಲದ ರಸವನ್ನು ಮೋಕ್ಷವಾಗುವವರಿಗೆ ಆಸ್ವಾದಿಸಿ ಎಂದು ಆದೇಶ ಮಾಡುತ್ತಾರೆ. “ನಾವು ಮಾಡುವ ಭಾಗವತಾಧ್ಯಯನವನ್ನು ನೋಡುತ್ತ ಅನುಗ್ರಹ ಮಾಡುತ್ತಾರೆ” ಮುಂತಾದ ವಿಶೇಷಗಳನ್ನು ಶ್ರೀಮದಾಚಾರ್ಯರು ತಿಳಿಸಿ ಹೇಳುತ್ತಾರೆ. ವೇದವೃಕ್ಷದ ವರ್ಣನೆಯೊಂದಿಗೆ, ಭಗವಂತನ ಆದೇಶ, ಭಗವತ್ಪಾದರು ತಿಳಿಸಿದ ಮಹತ್ತರ ಪ್ರಮೇಯಗಳ ಚಿಂತನೆ ಇಲ್ಲಿದೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತ ಶ್ಲೋಕ — 

निगमकल्पतरोर्गलितं फलं शुकमुखादमृतद्रवसंयुतम् । 
पिबत भागवतं रसमालयं मुहुरहो रसिका भुवि भावुकाः ।

ಭಾಗವತತಾತ್ಪರ್ಯ —

ज्ञानफलस्यापि प्रशंसाविधिभ्यां क्षिप्रप्रवृत्तिर्भवतीति प्रशस्य विधत्ते । निगमकल्पतरोरिति । भगवता गलितम् । शुकेन द्रवीकृतम् । 

उक्तं च ब्रह्माण्डे —

धर्मपुष्पस्त्वर्थपत्रः कामपल्लवसंयुतः । महामोक्षफलो वृक्षो वेदोयं समुदीरितः ।।
शातितानि फलानीह कृष्णद्वैपायनेन तु । भारताख्यानि यानीह तथा भागवतं भुवि ।।
आद्रीकृतानि तानीह शुकप्रभृतिभिर्जनैः । ख्यापयद्भिर्गुरुप्रोक्तान् वेदार्थान् ग्रन्थनिष्ठितान् ।।
कानिचित् दर्शयामास वृक्षस्याग्रे फलानि तु । व्याचक्षमाणो वेदार्थं भगवांल्लोकपूजितः ।।
एतेषामथ तेषां वा रसान् पिबत सज्जनाः । आमोक्षान्महती तृप्तिरहो मे पश्यतो भवेत् ।। इति ।।3।।


Play Time: 53:24

Size: 7.60 MB


Download Upanyasa Share to facebook View Comments
6490 Views

Comments

(You can only view comments here. If you want to write a comment please download the app.)
 • Sowmya,Bangalore

  7:46 PM , 21/04/2022

  🙏🙏🙏
 • Mahadi Sethu Rao,Bengaluru

  3:15 PM , 19/06/2020

  HARE KRISHNA
 • Latha Ramesh,Coimbatore

  8:01 AM , 26/12/2017

  Anantha koti Namaskaragalu nanna Gurugalige
 • Jayashree Karunakar,Bangalore

  5:41 PM , 17/10/2017

  ಗುರುಗಳೆ
  
  ಇಲ್ಲಿ ಲಿಂಗದೇಹ ಭಂಗವಾಗುವವರೆಗೆ ಶ್ರೀಮದ್ಭಾಗವತವನ್ನು ಪಾನಮಾಡಬೇಕೆಂದು ತಾವು ಹೇಳಿದ್ದೀರಿ. ನಾವು ಪ್ರತೀ ಸಲ ಆ ರೀತಿಯ ಪಾನ ಮಾಡುವಾಗಲೂ, ಅಂದರೆ ಪ್ರತೀಜನ್ಮದಲ್ಲಿ ಪಾನ ಮಾಡುವಾಗಲೂ, ನಮಗೆ ಅದನ್ನು ಅಥ೯ಮಾಡಿಕೊಳ್ಳುವ ಸಾಮ೯ಥ್ಯವೂ ಮುಂದುವರೆಯುತ್ತದೆಯೆ? 
  
  ಕಡೆಯಲ್ಲಿ ಅಂದರೆ ಚರಮ ದೇಹದಲ್ಲಿ ಕುಳಿತು ಪಾನಮಾಡುವ ಯೋಗವು ಸಪ್ತಾಹ ವಾಗಿರುತ್ತದೆಯೇ ? ಅಂದರೆ ಆಗ ಅಷ್ಟು ವಿಸ್ತಾರವಾಗಿರುವ ಶ್ರೀಮದ್ಭಾಗವತವನ್ನು ಕಡಿಮೆ ಸಮಯದಲ್ಲಿ ಸಮಗ್ರವನ್ನೂ ಪಾನ ಮಾಡುವ ಯೋಗ್ಯತೆಯು ಬರುತ್ತದೆಯೆ?
  
  ನಂತರ ಲಿಂಗದೇಹದಲ್ಲಿ ಯಾವರೀತಿಯಲ್ಲಿ ಮುಂದುವರೆಯುತ್ತದೆ ಗುರುಗಳೆ ?

  Vishnudasa Nagendracharya

  ಪ್ರತೀಬಾರಿ ಕೇಳುವಾಗಲೂ ನಮ್ಮ ಜ್ಞಾನ ನಿಶ್ಚಿತವಾಗಿ ಬೆಳೆಯುತ್ತದೆ. ಸಂಶಯವೇ ಇಲ್ಲ. 
  
  ಈಗಲೇ ಒಮ್ಮೆ ಕೇಳಿದ ನಂತರ ಮತ್ತೆ ಕೇಳಿದಾಗಲೇ ನಮ್ಮ ಜ್ಞಾನ ಅಭಿವೃದ್ಧವಾದದ್ದು ಕಂಡಿರುತ್ತದೆ. ಅಂತಹುದರಲ್ಲಿ ಗುರ್ವನುಗ್ರಹಯುಕ್ತರಾಗಿ ಪೂರ್ಣ ಕೇಳಿದಾಗ ನಮ್ಮ ಜ್ಞಾನದಲ್ಲಿ ಸ್ಪಷ್ಟತೆ ಅಧಿಕವಾಗುತ್ತದೆ, ತಿಳಿಯದ್ದೂ ತಿಳಿಯಲು ಆರಂಭವಾಗುತ್ತದೆ. 
  
  ಚರಮದೇಹದಲ್ಲಿ ಕೇಳುವ ಭಾಗವತ ಸಪ್ತಾಹವೇ ಆಗಬೇಕೆಂದು ಎಲ್ಲಿಯೂ ಕಂಡಿಲ್ಲ. ಇದ್ದರೂ ಇರಬಹುದು. ಇಲ್ಲ ಎಂದೂ ಇಲ್ಲ. 
  
  ನಮ್ಮ ಯೋಗ್ಯತೆಯಂತೆ ನಾವು ಪರಿಪೂರ್ಣವಾಗಿ ಭಾಗವತಾದಿಶಾಸ್ತ್ರಗಳನ್ನು ಅರ್ಥ ಮಾಡಿಕೊಂಡಾಗಲೇ ನಮಗೆ ದೇವರ ಸಾಕ್ಷಾತ್ಕಾರವಾಗುವದು. ಇಲ್ಲದಿದ್ದರೆ ಆಗುವದೇ ಇಲ್ಲ. 
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:29 PM , 17/10/2017

  ಶ್ರೀ ಗುರುಭ್ಯೋನಮಃ ನಮ್ಮ ಈ ಜನ್ಮ ಸಾರ್ಥಕ ಮಾಡಿಕೊಳ್ಳುವ ಧಕ್ಕೆ ನಿಮ್ಮ ಪ್ರವಚನ ಗಳು ಬಹಳ ಉಪಕಾರಿ ಯಾಗಿದೆ. ನಿಮ್ಮ ಪಾದಾರವಿಂದಗಳಿಗೆ ಅನೇಕ ನಮಸ್ಕಾರಗಳು.
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:29 PM , 17/10/2017

  ಶ್ರೀ ಗುರುಭ್ಯೋನಮಃ ನಮ್ಮ ಈ ಜನ್ಮ ಸಾರ್ಥಕ ಮಾಡಿಕೊಳ್ಳುವ ಧಕ್ಕೆ ನಿಮ್ಮ ಪ್ರವಚನ ಗಳು ಬಹಳ ಉಪಕಾರಿ ಯಾಗಿದೆ. ನಿಮ್ಮ ಪಾದಾರವಿಂದಗಳಿಗೆ ಅನೇಕ ನಮಸ್ಕಾರಗಳು.
 • Jayashree Karunakar,Bangalore

  3:18 PM , 17/10/2017

  ಗುರುಗಳೆ
  
  ಶ್ರೀಮದ್ಭಾಗವತ ಶ್ರವಣದಿಂದ ನಮ್ಮಲ್ಲಿ ತುಂಬಾ ಬದಲಾವಣೆಗಳು ಆಗುತ್ತಿವೆ.
  
  ಮುಖ್ಯವಾಗಿ ಮನಸ್ಸಿಗೆ ತುಂಬಾ ಆನಂದವಾಗುತ್ತದೆ.
  ಬದುಕನ್ನು ಎದುರಿಸುವ ರೀತಿಯೂ ಬದಲಾಗಿದೆ.
  
  ನಮ್ಮಲ್ಲಾದ ಬದಲಾವಣೆಯನ್ನು ಗಮನಿಸಿ ಬೇರೆಯವರು ತಿಳಿಸುತಿದ್ದಾರೆ.
  
  ಇದೆಲ್ಲವೂ ತಮ್ಮ ಮಹಾಶ್ರಮದ ಫಲ 
  ನಮ್ಮಗೆ ನಿತ್ಯವೂ ಜ್ಞಾನ ಭಕ್ತಿ ವ್ಯೆರಾಗ್ಯ ಗಳನ್ನು ಕರುಣಿಸುವ ವಿಶ್ವನಂದಿನಿಗೂ ಮತ್ತು ನಿಮಗೂ ನಮ್ಮೆಲ್ಲರ ಪರವಾಗಿ ನಮಸ್ಕಾರಗಳು
 • Laxmirao,Bangalore

  2:15 PM , 17/10/2017

  vedavyasadevaru vedavrkshavannu mahamunigalaada shukacharyarige visheshavaada amruthadravavannuswadhisida puranaraja bhagavatavannu mane managalalli unabadisuttiruavaacharyarige anataanata namanagalu haagu deepavaliya shubhashayagalu
 • Laxmirao,Bangalore

  2:15 PM , 17/10/2017

  vedavyasadevaru vedavrkshavannu mahamunigalaada shukacharyarige visheshavaada amruthadravavannuswadhisida puranaraja bhagavatavannu mane managalalli unabadisuttiruavaacharyarige anataanata namanagalu haagu deepavaliya shubhashayagalu
 • Laxmirao,Bangalore

  2:15 PM , 17/10/2017

  vedavyasadevaru vedavrkshavannu mahamunigalaada shukacharyarige visheshavaada amruthadravavannuswadhisida puranaraja bhagavatavannu mane managalalli unabadisuttiruavaacharyarige anataanata namanagalu haagu deepavaliya shubhashayagalu
 • Mrs laxmi laxman padaki,Pune

  2:04 PM , 17/10/2017

  👏👏👏👏👏
 • Shantha.raghothamachar,Bangalore

  1:15 PM , 17/10/2017

  ನಮಸ್ಕಾರ ಗಳು.
 • prema raghavendra,coimbatore

  11:29 AM, 17/10/2017

  Anantha namaskara! Danyavada!
 • P N Deshpande,Bangalore

  10:38 AM, 17/10/2017

  S.Namaskaragalu.Ling deaha bhangwaaguwawareage SrimadBhagwatwannu aalisuwa punnyaweamb raashiyennu tumbarieandu prathisuttene anugrahavirali
 • H. Suvarna kulkarni,Bangalore

  9:58 AM , 17/10/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ವನ್ನು ಭಗವಂತ ನಿವಿ೯ಘ್ಜ್ಞವಾಗಿ ನಡೆಸಲಿ ನಮಗೂ ತಪ್ಪದೆ ಕೇಳುವಂಥ ಶ್ರಧ್ದೆ, ಭಕ್ತಿಯನ್ನು ಕರುಣಿಸಲಿ ಎಂದು ಪ್ರಾಥಿ೯ಸುವೆ ಧನ್ಯವಾದಗಳು
 • Niranjan Kamath,Koteshwar

  9:11 AM , 17/10/2017

  Dinadinda dina...nimminda estondu paripoorna vicharagalannu tilidukondevu... Shrimannarayana Anugraha nimma mele sada hige iddu...nimma Gurugala kripakataksha dinda nammnoo bhavabandha dinda moksha sadhanege prerepisuvanthe aagali. Saaaaaaaaaastaaanga pranmagalu.
 • Niranjan Kamath,Koteshwar

  9:06 AM , 17/10/2017

  Shri Narayana Akhila Guro Bhagavan Namasthe. Gurugala charanaravind galige namo namaha. Paramadbhutha paramadbhutha paramadbhutha. Eshtondu Aalavagide...sampadbharuthavagide...Kaaaaarunyapurna....pavithra...sihiyagide...amrithapana ...Shri Vedavyasa Devara...Shri Shukha muniya...kaaaaarunya dinda nimma mulaka Shrimannaraya Devaru...nammanella ... Amrithapana madisuthiddare. Maguvina todalu nudiyinda Amma khusipaduva hage...Paramatmanu nivu maduthiruva Shrimad Bhagavantha Arthanusandana dinda parama sukhadunda..nammannooo adarinda mukthanannagi madi...parama mangala madi...sada Shrimad Bhagavantha shravana da amrithapana maduvanthe anugrahisali endu Beduthene. Nimage Ayurararogya needi nimminda inthaha aneka karya galu nedeyisali endu beduthene. Innu neevu helida hage...khanditha vagi nammalli esto badalavaneyannu navu gamanisutiddeve. Tappu madalu , sullu helalu, sittu madalu, innitara buddhi dooravagatodagide.sajjana ragalu prerepisuttide....Dhanyosmi.