Upanyasa - VNU546

ಶ್ರೀಮದ್ ಭಾಗವತಮ್ — 50 — ಶೌನಕರ ಜ್ಞಾನಸತ್ರ

ಇವತ್ತಿಗೆ ನಮಗೆ ಭಾರತ-ಭಾಗವತ-ಪುರಾಣಾದಿಗಳು ದೊರೆತಿರುವದೇ ಶ್ರೀ ಶೌನಕಮಹರ್ಷಿಗಳು ಮಾಡಿದ ಮಹಾಜ್ಞಾನಸತ್ರದಿಂದ. ಕಲಿಯುಗ ಆರಂಭವಾಗುತ್ತಿದ್ದಂತೆಯೇ ಒಂದು ಸಾವಿರ ವರ್ಷಗಳ ದೀರ್ಘಕಾಲದ ಸತ್ರವನ್ನು ಆರಂಭಿಸುವ ಶೌನಕಾದಿ ಹತ್ತು ಸಾವಿರ ಋಷಿಗಳು ಸೂತಾಚಾರ್ಯರಿಂದ ಸಕಲ ಪುರಾಣವಾಙ್ಮಯವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಶ್ರೀಮದಾಚಾರ್ಯರು ಮತ್ತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅತ್ಯಪೂರ್ವವಾದ ವಿಷಯಗಳ ನಿರೂಪಣೆ ಇಲ್ಲಿದೆ. ನಮಗೆ ಅಪಾರ ಜ್ಞಾನಸಂಪತ್ತನ್ನು ನೀಡಿದ ಶೌನಕರಿಗೆ ಯಾವ ರೀತಿ ಗೌರವ ಭಕ್ತಿಗಳನ್ನು ಸಲ್ಲಿಸಬೇಕು ಎನ್ನುವದರ ನಿರೂಪಣೆಯೊಂದಿಗೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು. 

श्रीमद्भागवते प्रथमस्कन्धे प्रथमाध्यायः।

नैमिषेनिमिषक्षेत्रे ऋषयः शौनकादयः । 
सत्रं स्वर्गाय लोकाय सहस्रसममासत ।। ४ ।।

भागवततात्पर्यम् — 

प्रकारान्तरेण पुरुषार्थशङ्कानिवृत्त्यर्थमाख्यायिका । पाद्मे च — 

“आख्यायिकाः प्रदर्श्यन्ते सर्ववेदेषु सर्वशः । 
द्योतयन्त्यस्तु महतां तात्पर्यं तत्रतत्र ह ।।
अलाभः पुरुषार्थस्य प्रोक्तमर्थमृते त्विति । 
द्योतनाय महाराज श्रद्धावृद्ध्यर्थमेव च” इति ।।

Play Time: 51:56

Size: 7.60 MB


Download Upanyasa Share to facebook View Comments
4716 Views

Comments

(You can only view comments here. If you want to write a comment please download the app.)
 • Mahadi Sethu Rao,Bengaluru

  3:18 PM , 19/06/2020

  HARE KRISHNA.
 • Jayashree Karunakar,Bangalore

  10:52 AM, 03/11/2017

  ಗುರುಗಳೆ
  
  ಇಲ್ಲಿ ಭಗವಂತನಿಗೆ "ಬ್ರಾಹ್ಮಣರಿಗೆ ಮಾತ್ರವಲ್ಲ ಶೂದ್ರರಿಗೂ ಜ್ಞಾನವನ್ನು ನೀಡುತ್ತೇನೆ " ಅನ್ನುವುದನ್ನು ತೋರಿಸಬೇಕಾಗಿತ್ತು ಅದಕ್ಕಾಗಿ ಸೂತಾಚಾಯ೯ರಿಗೆ ಜನ್ಮ ನೀಡಿ ಅವರಿಂದ ಶೌನಕಾದಿಗಳಿಗೆ ಜ್ಞಾನ ನೀಡಿಸಿದ.
  
  ಆದರೆ ಅದರ ಮಧ್ಯದಲ್ಲಿ "ಬಲರಾಮದೇವರ ಆಗಮನ, ಅವರಿಂದಲೇ ಹತ್ಯೆಮಾಡಿಸುವುದು, ನಂತರ ಮತ್ತೆ ಬದುಕಿಸುವುದು, ಪರಿಹಾರಕ್ಕಾಗಿ ತೀಥ೯ಯಾತ್ರೆ" ಇಷ್ಟೆಲ್ಲ ಕಾಯ೯ದ ಉದ್ದೇಶವೇನು, ಇಲ್ಲಿ ವೇದವ್ಯಾಸ ದೇವರು ನಮಗೆ ಎನು ತಿಳಿಸುತಿದ್ದಾರೆ ?

  Vishnudasa Nagendracharya

  ಇದೇ ಕಾಮೆಂಟುಗಳ ಮಧ್ಯದಲ್ಲಿ ಕೆಳಗೆ ನೀವು ಮಾಡಿರುವ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ಆ ಉತ್ತರವೇ ಇದಕ್ಕೂ ಉತ್ತರ. 
  
  ಕರ್ಮಗಳ ಅನುಸಾರವಾಗಿ ಹಾಗೂ ದೇವರ ಪ್ರೇರಣೆಯಿಂದಲೇ ಎಲ್ಲವೂ ನಡೆಯುವದು. ಎಂತಹ ಮಹಾತ್ಮರಾದರೂ ಧರ್ಮಶಾಸ್ತ್ರದ ಆದೇಶಗಳಿಗೆ ಗೌರವವನ್ನು ನೀಡಲೇಬೇಕು, ಎನ್ನುವದನ್ನು ತಿಳಿಸುತ್ತಿದ್ದಾರೆ. 
 • Mrs laxmi laxman padaki,Pune

  10:44 AM, 03/11/2017

  👏👏👏👏👏
 • Jayashree Karunakar,Bangalore

  9:35 PM , 01/11/2017

  ಗುರುಗಳೆ
  
  ಯೋಗ್ಯತೆಯಲ್ಲಿ ಬಲರಾಮದೇವರಿಗಿಂತ ಸಣ್ಣವರಾದ ಶೌನಕರಿಗೇ, ಸೂತಾಚಾಯ೯ರು ಶೂದ್ರರಾದರೂ, ಅವರು ಮಹಾಜ್ಞಾನಿಗಳು ಮತ್ತು ಶ್ರೀಮದ್ಭಾಗವತವನ್ನು ಮುಂದೆ ಹೇಳುವವರಿದ್ದಾರೆ ಎನ್ನುವ ವಿಚಾರ ಗೊತ್ತಿರುವಾಗ, ಸಾಕ್ಷಾತ್ ಶೇಷದೇವರಾದ ಬಲರಾಮ ದೇವರಿಗೆ ಸೂತಾಚಾಯ೯ರ ಯೋಗ್ಯತೆಯ ಅರಿವಿರುವುದಿಲ್ಲವೆ ?
  ಅದೂ ಕೂಡ ಬಲರಾಮದೇವರು ತೀಥ೯ಯಾತ್ರೆಯ ಸಂದಭ೯ದಲ್ಲಿದ್ದಾಗ ಅಲ್ಲಿಗೆ ಬಂದದ್ದು, ಹಾಗಾಗಿ ಆಗ ಅವರಲ್ಲಿ ಭಗವಂತನ ಚಿಂತನೆಯೆ ಇರುತ್ತದೆ, ಅವರಲ್ಲಿ ಅಸುರಾವೇಶ ಇರಲು ಸಾಧ್ಯವಿಲ್ಲ ಅಲ್ಲವೆ ? ಸೂತಾಚಾಯ೯ಯರನ್ನು ಕೊಲ್ಲುವ ದುಷ್ಟವಾದ ಗುಣ ಯಾಕಾಗಿ ಬಂತು ಗುರುಗಳೆ ?

  Vishnudasa Nagendracharya

  ಶ್ರೀಮದ್ ಭಾಗವತ ಈ ಪ್ರಶ್ನೆಗೆ, ಭಾವಿತ್ವಾತ್ ಎಂಬ ಮಾತಿನಿಂದ ಉತ್ತರ ನೀಡುತ್ತದೆ. 
  
  ಇಷ್ಟು ಕಾರ್ಯ ನಡೆಯಬೇಕಾಗಿತ್ತು. ಹೀಗಾಗಿ ಬಲರಾಮದೇವರಿಗೆ ಆ ಸಂದರ್ಭದಲ್ಲಿ ಅಷ್ಟು ಜ್ಞಾನವನ್ನು ದೇವರು ನೀಡಲಿಲ್ಲ. ಗೀತೆ ಹೇಳುತ್ತದೆ - ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ ಎಂದು. ದೇವರಿಂದಲೇ ಜ್ಞಾನ, ದೇವರಿಂದಲೇ ಸ್ಮರಣೆ, ದೇವರಿಂದಲೇ ಮರೆವು. ಯಾವ ಕಾರ್ಯ ಯಾವ ರೀತಿ ಆಗಬೇಕಾಗಿದೆಯೋ ಆ ಕ್ರಮದಲ್ಲಿ ದೇವರು ಎಲ್ಲರನ್ನೂ ಪ್ರೇರಿಸುತ್ತಾನೆ. 
  
  ಬ್ರಹ್ಮಾಸನದಲ್ಲಿ ಕುಳಿತ ಸೂತರ ಹತ್ಯೆ ಬ್ರಹ್ಮಹತ್ಯೆ ಎನ್ನುವದು ಶಾಸ್ತ್ರಗಳ ಸಿದ್ಧಾಂತ. ಬ್ರಾಹ್ಮಣನೊಬ್ಬ ಬ್ರಹ್ಮಾಸನದಲ್ಲಿ ಕುಳಿತಾಗ ಅವನನ್ನು ಕೊಂದರೆ ಬ್ರಹ್ಮಾಸನದಲ್ಲಿ ಕುಳಿತದ್ದಕ್ಕಾಗಿ ಬ್ರಹ್ಮಹತ್ಯೆ ಬಂದಿತು ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಹೀಗಾಗಿ ಬ್ರಾಹ್ಮಣನಲ್ಲದವನು ಬ್ರಹ್ಮಾಸನದಲ್ಲಿ ಕುಳಿತಾಗ ಕೊಂದರೆ, ಬ್ರಹ್ಮಹತ್ಯೆ ಬಂದರೆ ನಿರ್ಣಯವಾಗುತ್ತದೆ. ರೋಮಹರ್ಷಣರಿಗೆ ಸತ್ತು ಮತ್ತೆ ಹುಟ್ಟುವ ಕರ್ಮವಿತ್ತು (ಯಾವ ಕರ್ಮ ಎಂದು ಪುರಾಣಗಳನ್ನು ಸಂಶೋಧಿಸಿ ತಿಳಿಯಬೇಕು). ಬಲರಾಮದೇವರಿಗೆ ಕೊಲ್ಲುವ, ಕೊಂದವರನ್ನು ಮತ್ತೆ ಹುಟ್ಟಿಸುವ ಸಾಮರ್ಥ್ಯವಿತ್ತು. ಹೀಗಾಗಿ ಬಲರಾಮದೇವರಿಗೆ ತಪ್ಪು ತಿಳುವಳಿಕೆ ನೀಡಿ, ಅವರಿಂದ ಕೊಲ್ಲಿಸಿ, ಮತ್ತೆ ಸೂತರಿಗೆ ಜನ್ಮವನ್ನು ನೀಡಿಸಿ, ಅವರು ಬ್ರಹ್ಮಹತ್ಯೆಯ ಪರಿಹಾರಕ್ಕಾಗಿ ೧೨ ತಿಂಗಳ ವ್ರತವನ್ನು ಪಾಲಿಸುವಂತೆ ಭಗವಂತ ಮಾಡಿದ. 
  
  ನಡೆಯಬೇಕಾದ್ದು ನಡೆದೇ ನಡೆಯುತ್ತದೆ ಎನ್ನುವದಕ್ಕೆ ಈ ಕಥೆ ದೃಷ್ಟಾಂತವಾಗಿ ನಿಲ್ಲುತ್ತದೆ. 
 • Laxmirao,Bangalore

  9:03 AM , 02/11/2017

  Shounakara sahasra varshada gnanasatrakke prathi nimishavalla prathi kshana devathegala kshetravaada bhagavatha dhamakke VISHWANANDINI ya balagavannu avariddalle bhagavatha rasavannu vedavysaru tammalli nintu sakalarigu pustikodisuttiddare
 • Anup,Mysuru

  8:11 PM , 31/10/2017

  I like this
 • H. Suvarna kulkarni,Bangalore

  7:34 PM , 31/10/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಕೇಳುತ್ತ ಕೇಳುತ್ತ ನಾವುಧನ್ಯರಾಗುತ್ತಿದ್ದೇವೆ
 • ಭಾರದ್ವಾಜ,ಬೆಂಗಳೂರು

  9:29 PM , 30/10/2017

  ಶ್ರೀ ಗುರುಭ್ಯೋ ನಮಃ
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಕಥಾಭಾಗವನ್ನು ಕೇಳುವಾಗ ತತ್ವಗಳನ್ನು ಬರೆದಿಟ್ಟು ಕೊಳ್ಳುವುದು ಕಷ್ಟ. ಇದಕ್ಕೇ ಏನಾದರು ಉಪಾಯಿದ್ದರೆ ದಯವಿಟ್ಟು ತಿಳಿಸಿ

  Vishnudasa Nagendracharya

  ಉಪನ್ಯಾಸ ಮುಗಿದ ಬಳಿಕ, ಹತ್ತು ನಿಮಿಷ ಕಣ್ಣು ಮುಚ್ಚಿ ಕೇಳಿದ ವಿಷಯವನ್ನೆಲ್ಲ ಮೆಲುಕು ಹಾಕಬೇಕು. ಆಗ ಎಷ್ಟು ಕಥೆ ಕೇಳಿದೆವು ಯಾವಯಾವ ತತ್ವ ತಿಳಿದವು ತಿಳಿಯುತ್ತದೆ. ಅದನ್ನು ಬರೆದಿಟ್ಟುಕೊಳ್ಳಬೇಕು. 
  
  ಮುಖ್ಯವಾದ ವಿಷಯವೆಂದರೆ, ನಾವು ಸದಾಚಾರವನ್ನು ಕಲಿಯುವದೇ ಕಥೆಗಳಿಂದ. ಹೀಗಾಗಿ ದೊಡ್ಡವರ ಕಥೆಯನ್ನು ಹಾಗೆಯೇ ಬರೆಯುತ್ತ ಹೋಗಬೇಕು. ತತ್ವಗಳೊಂದಿಗೆ. ದೊಡ್ಡವರ ನಡತೆ ಸ್ಪಷ್ಟವಾಗಿ ಅರ್ಥವಾಗುತ್ತದೆ. 
  
 • Niranjan Kamath,Koteshwar

  9:52 AM , 31/10/2017

  Shri Narayana Akhila Guro Bhagavan Namasthe. Gurugala Charanaravinda galige Namo Namaha .Parama Mangala. Sarve janaha sukhnaha.Eshtu spastavagi ellaru samana embudannu tilisi heliddare. Dhanyosmi
 • P N Deshpande,Bangalore

  8:08 PM , 30/10/2017

  S.Namaskargalu. shravnamaadalu tumba aanandwaaguttade
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:27 PM , 30/10/2017

  ಗುರುಗಳಿಗೆ ನಮಸ್ಕಾರಗಳು.
 • Shantha.raghothamachar,Bangalore

  12:02 PM, 30/10/2017

  ನಮಸ್ಕಾರ ಗಳು
 • prema raghavendra,coimbatore

  10:05 AM, 30/10/2017

  Anantha namaskara! Danyavada!
 • Niranjan Kamath,Koteshwar

  8:12 AM , 30/10/2017

  Shri Narayan Akhila Guro Bhagavan Namasthe. gurugala charanaravinda galige Namo Namaha. Parama mangala ...Dhanyosmi. Shrimad Shukacharya, Shri Shounakadi Maha Yogigigala karune ellara melagali endu prarthisuthene.