Upanyasa - VNU547

ಶ್ರೀಮದ್ ಭಾಗವತಮ್ — 51 — ಸೂತಾಚಾರ್ಯರ ಮಾಹಾತ್ಮ್ಯ

ಸಾಂಪ್ರದಾಯಿಕ ಅರ್ಥಗಳಿಂದ ತಮ್ಮ ಗ್ರಂಥವನ್ನು ಶ್ರೀಮಂತಗೊಳಿಸಿರುವ ಶ್ರೀವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಸತ್ರ ಶಬ್ದದ ಅಪೂರ್ವ ಅರ್ಥಗಳ ಚಿಂತನೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಶಾಸ್ತ್ರಾಧ್ಯಯನ ನಡೆಯುವಾಗಲೂ ನಮ್ಮ ನಿತ್ಯದ ವಿಹಿತ ಕರ್ಮಗಳನ್ನು ಬಿಡುವಂತಿಲ್ಲ, ಮಾಡಲೇಬೇಕು, ಸಂಕೋಚ ಮಾಡಬಹುದು ಎನ್ನುವ ತತ್ವಗಳೊಂದಿಗೆ, ವಿಷ್ಣುಭಕ್ತರಾದ ಶೂದ್ರರಿಗೆ ಬ್ರಾಹ್ಮಣರು ಯಾವ ರೀತಿ ಗೌರವವನ್ನು ನೀಡಬೇಕು ಎನ್ನುವದರ ಕುರಿತ ಆಚಾರ್ಯರ ನಿರ್ಣಯದೊಂದಿಗೆ ಸೂತಾಚಾರ್ಯರ ಮಾಹಾತ್ಮ್ಯವನ್ನು ಇಲ್ಲಿ ನಿರೂಪಿಸಲಾಗಿದೆ. 

ಶೂದ್ರರಾದ ಸೂತಾಚಾರ್ಯರ ವೇಷ, ಭೂಷಣಗಳು ಹೇಗಿದ್ದವು, ಬ್ರಾಹ್ಮಣೋತ್ತಮರಾದ ಶೌನಕರು ಅವರಲ್ಲಿ ಯಾವ ರೀತಿ ಆದರ ಮಾಡುತ್ತಿದ್ದರು ಮಂತಾದವನ್ನು ತಿಳಿಸುವದರೊಂದಿಗೆ ಯಾವ ವರ್ಣಕ್ಕೆ ಯಾವ ರೀತಿ ಗೌರವ ನೀಡಬೇಕು ಎನ್ನುವದಕ್ಕೆ ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ನೀಡಿರುವ ನಿರ್ಣಯದ ವಿವರಣೆ ಇಲ್ಲಿದೆ. ಬ್ರಾಹ್ಮಣ-ಶೂದ್ರರ ಸಂಬಂಧ ಹೇಗಿದ್ದವು ಎನ್ನುವದನ್ನು ಅರಿಯಬಯಸುವ ಪ್ರತಿಯೊಬ್ಬರೂ ಕೇಳಬೇಕಾದ ಭಾಗ. 

ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — 

श्रीमद्भागवते प्रथमस्कन्धे प्रथमाध्यायः।

त एकदा तु मुनयः प्रातर्हुतहुताशनाः।
सत्कृतं सूतमासीनं पप्रच्छुरिदमादृताः॥ 5॥


Play Time: 43:54

Size: 7.60 MB


Download Upanyasa Share to facebook View Comments
4660 Views

Comments

(You can only view comments here. If you want to write a comment please download the app.)
 • Sowmya,Bangalore

  8:06 PM , 20/05/2022

  🙏🙏🙏
 • Mahadi Sethu Rao,Bengaluru

  3:19 PM , 19/06/2020

  HARE KRISHNA.
 • Praveen Patil,Bangalore

  9:37 AM , 04/12/2017

  ಗುರುಗಳಿಗೆ ನಮಸ್ಕಾರಗಳು, ಗುರುಗಳೆ ಸೂತಾಚಾರ್ಯರಿಗೆ ಯಾಕೆ ಉಗ್ರಶ್ರವ ಎಂದು ಕರೆಯುತ್ತಾರೆ. ಅವರಿಗೆ ಈ ಹೆಸರು ಹೇಗೆ ಬಂತು ಗುರುಗಳೆ..?
 • P.R.SUBBA RAO,BANGALORE

  7:34 AM , 01/11/2017

  Revised comment:
  ಶ್ರೀ ಗುರುಭ್ಯೋನಮಃ
  SB051- ಶಾಸ್ತ್ರಾಧ್ಯಯನಕ್ಕೆ ಗುರುಗಳ ಮಾರ್ಗದರ್ಶನ ಬಹಳ ಉಪಕಾರಿಯಾಗಿದೆ. ಮತ್ತೂ ಗುರುಗಳ ಇನ್ನಿತರ ಉಪದೇಶಗಳು ನಮಗೆ ಸದಾಚಾರ ಅಳವಡಿಸಿಕೊಳ್ಳಲಿಕ್ಕೆ ದಾರಿದೀಪವಾಗಿದೆ. ಗುರುಗಳ ಈ ಉಪದೇಶಗಳು ಬೆಲೆಕಟ್ಟಲಾಗದ್ದು. ಅತಿಶಯೋಕ್ತಿಯಿಲ್ಲ.
  
  ಬ್ರಾಹ್ಮಣರು ಇತರ ವರ್ಣದವರಿಗೆ ನಮಸ್ಕಾರ ಮಾಡಿದರೆ, ನಮಸ್ಕಾರ ಮಾಡಿಸಿಕೊಂಡವರಿಗೆ ಆಯಸ್ಸು ಹ್ರಾಸ ಆಗುತ್ತದೆ ಅಂತ ಕೇಳಿದ್ದೇನೆ. ಇದು ಸತ್ಯವೇ ಗುರುಗಳೇ?
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ವಿಶ್ವನಂದಿನಿ ನಿಮ್ಮೆಲ್ಲರ ಜ್ಞಾನದಾಹ ತೀರಿಸುತ್ತಿರುವದು ಅಪಾರ ತೃಪ್ತಿಯನ್ನು ನೀಡುತ್ತಿದೆ. 
  
  ಊರ್ಧ್ವಂ ಪ್ರಾಣಾ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ ಎನ್ನುವದು ಮಹಾಭಾರತದ ವಚನ. ದೊಡ್ಡವರು ಬಂದಾಗ ಎದ್ದು ನಮಸ್ಕರಿಸದಿದ್ದರೆ ಆಯುಷ್ಯ ಹಾನಿಯಾಗುತ್ತದೆ ಎನ್ನುವದು ಇದರ ತಾತ್ಪರ್ಯ. 
  
  ನಮಸ್ಕರಿಸಬಾರದವರಿಗೆ ನಮಸ್ಕರಿಸುವದು ಶಾಸ್ತ್ರವಿರುದ್ಧ. ಅದರಿಂದ ಕೇವಲ ಆಯುಷ್ಯಹಾನಿಯಲ್ಲಿ ಶಾಸ್ತ್ರದ್ರೋಹದ ಪಾಪವೂ ಬರುತ್ತದೆ. 
  
  ನಮಸ್ಕರಿಸಬೇಕಾದವರಿಗೆ ನಮಸ್ಕರಿಸದೇ ಇರಬಾರದು. ನಮಸ್ಕರಿಸಬಾರದವರಿಗೆ ನಮಸ್ಕಾರ ಮಾಡಬಾರದು. 
  
  
 • P.R.SUBBA RAO,BANGALORE

  10:01 PM, 31/10/2017

  ಶ್ರೀ ಗುರುಭ್ಯೋನಮಃ
  SB051- ಶಾಸ್ತ್ರಾಧ್ಯಯನಕ್ಕೆ ಗುರುಗಳ ಮಾರ್ಗದರ್ಶನ ಬಹಳ ಉಪಕಾರಿಯಾಗಿದೆ. ಮತ್ತೂ ಗುರುಗಳ ಇನ್ನಿತರ ಉಪದೇಶಗಳು ನಮಗೆ ಸದಾಚಾರ ಅಳವಡಿಸಿಕೊಳ್ಳಲಿಕ್ಕೆ ದಾರಿದೀಪವಾಗಿದೆ. ಗುರುಗಳ ಈ ಉಪದೇಶಗಳು ಬೆಲೆಕಟ್ಟಲಾಗದ್ದು. ಅತಿಶಯೋಕ್ತಿಯಿಲ್ಲ.
  
  ಬ್ರಾಹ್ಮಣರು ಇತರ ವರ್ಣದವರಿಗೆ ನಮಸ್ಕಾರ ಮಾಡಿದರೆ, ನಮಸ್ಕಾರ ಮಾಡಿಕೊಂಡವರಿಗೆ ಆಯಸ್ಸು ಹ್ರಾಸ ಆಗುತ್ತದೆ ಅಂತ ಕೇಳಿದ್ದೇನೆ. ಇದು ಸತ್ಯವೇ ಗುರುಗಳೇ?
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • P N Deshpande,Bangalore

  8:01 PM , 31/10/2017

  S.Namaskargalu.parmadbutwaad pravachana.Nawu heegeaye SrmadBhagwatwannu aalistta hoadalli parma bhakkti eambdu shatasiddha. Anugrhavirali
 • Jayashree Karunakar,Bangalore

  3:03 PM , 31/10/2017

  ಗುರುಗಳೆ
  ಭಗವಂತನ ಆನಂದ ಒಂದೇ ರೀತಿಯಾಗಿರುವುದಿಲ್ಲವೆ ?
   ಭಗವಂತನು ತನ್ನ ಗುಣಗಳ ಚಿಂತನೆ ಮಾಡುವ ಸಂದಭ೯ದಲ್ಲಿ ಹೆಚ್ಚಿನ ಆನಂದದ ಅಭಿವ್ಯಕ್ತಿಯಾಗುತ್ತದೆಯಾ ?
  ಆ ಎಲ್ಲಾ ಸಂಧಭ೯ಗಳಲ್ಲಿ ಇಂತಹ ಜ್ಞಾನಿಗಳು ಹುಟ್ಟಿ ಬರುತ್ತಾರ ?
  ತಪ್ಪಾಗಿ ಕೇಳಿದ್ದರೆ ಕ್ಷಮಿಸಿ ಗುರುಗಳೆ

  Vishnudasa Nagendracharya

  ದೇವರ ಸಕಲ ಗುಣಗಳೂ ಸದಾ ಇರುತ್ತವೆ. ವೃದ್ಧಿ ಹ್ರಾಸಗಳಿರುವದಿಲ್ಲ. 
  
  ರೋಮಾಂಚನಾದಿಗಳನ್ನು ಜನರಿಗೆ ತೋರಿಸಬೇಕು ಎಂದು ಭಗವಂತ ಅಪೇಕ್ಷೆ ಪಟ್ಟಾಗ ಅವು ತೋರುತ್ತವೆ ಅಷ್ಟೆ. 
  
  ಇನ್ನು ಜೀವರ ಸೃಷ್ಟ್ಯಾದಿಗಳು ಅವರ ಕರ್ಮದ ಅನುಸಾರಿಯಾಗಿ ನಡೆಯುವಂತಹುದು. ಹೀಗಾಗಿ ಎಲ್ಲ ಕಾಲದಲ್ಲಿಯೂ ಇರುವದಿಲ್ಲ. ಪರಮಾತ್ಮ ಕೇವಲ ತನ್ನಿಚ್ಛೆಯಿಂದಲೇ ಸೃಷ್ಟಿ ಮಾಡಬಲ್ಲನಾದ್ದರಿಂದ ತಾನನುಭವಿಸುವ ರೋಮಾಂಚವನ್ನು ಜನರಿಗೆ ಅಭಿವ್ಯಕ್ತ ಮಾಡುವ ಕಾಲದಲ್ಲಿ, ಆ ರೋಮಾಂಚದಿಂದಲೇ ರೋಮಹರ್ಷಣರನ್ನು ಸೃಷ್ಟಿಸಬೇಕೆಂದು ಅಪೇಕ್ಷಿಸಿದ. ರೋಮಹರ್ಷಣರು ಹುಟ್ಟಿಬಂದರು. 
  
 • Jayashree Karunakar,Bangalore

  2:37 PM , 31/10/2017

  ಗುರುಗಳೆ
   
  ೧. ವೇದವ್ಯಾಸ ದೇವರು ಮಹಾಭಾರತಾದಿಗಳಲ್ಲಿದ್ದ ತನ್ನ ಗುಣಗಳ ಚಿಂತನೆಯನ್ನು ಮಾಡಿ ರೋಮ ಹಷ೯ಣವಾದಾಗ ಸೂತಾಚಾಯ೯ರು ಹುಟ್ಟಿದರು ಎಂದಿರಿ.
  ವೇದವ್ಯಾಸದೇವರು ಆಪ್ತಕಾಮನಾದ ಪರಮಾತ್ಮನಲ್ಲವೇ
  ದೇವರಿಗೂ ಮನುಷ್ಯರಂತೆ ಅಂತಹ
   ಅನುಭವವಾಗುವುದುಂಟೆ ? 
  ೨. ಶೂದ್ರರೆ ಯಾಕೆ ಹುಟ್ಟಿ ಬಂದದ್ದು 
  ಆಗ ?

  Vishnudasa Nagendracharya

  ೧. ರೋಮಾಂಚನ ಎನ್ನುವದು ಆನಂದದ ಅಭಿವ್ಯಕ್ತಿ. ಆನಂದ ಉಳ್ಳ ಎಲ್ಲರಿಗೂ ಅದು ಉಂಟಾಗುತ್ತದೆ. ಶ್ರೀಹರಿಯಲ್ಲಿಯೂ. 
  
  ೨. ಕೇವಲ ಬ್ರಾಹ್ಮಣಾದಿಗಳಿಗೆ ಮಾತ್ರ ಜ್ಞಾನವಲ್ಲ, ಶೂದ್ರಾದಿಗಳಿಗೂ ಜ್ಞಾನ ನೀಡುತ್ತೇನೆ ಎನ್ನುವದನ್ನು ಸೂಚಿಸಲು. 
 • Shantha.raghothamachar,Bangalore

  1:36 PM , 31/10/2017

  ನಮಸ್ಕಾರ ಗಳು
 • prema raghavendra,coimbatore

  11:35 AM, 31/10/2017

  Anantha namaskara! Danyavada!