Upanyasa - VNU548

ಶ್ರೀಮದ್ ಭಾಗವತಮ್ — 52 — ಸೂತಾಚಾರ್ಯರ ಜ್ಞಾನ

ಪುರಾಣಪ್ರಪಂಚದಲ್ಲಿ ಶ್ರೀ ಸೂತಾಚಾರ್ಯರನ್ನು ಮೇಲಿಂದಮೇಲೆ ಅನಘ ಎಂಬ ಶಬ್ದದಿಂದ ಕರೆಯಲಾಗಿದೆ. ಭಾಗವತದಲ್ಲಿಯೂ ಸಹ ಆ ಪ್ರಯೋಗವಿದೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಆಚಾರ್ಯರು ತಿಳಿಸಿದ ದಿವ್ಯಪ್ರಮೇಯದ ಆಧಾರದ ಮೇಲೆ ಹೇಳಿದ ಅರ್ಥದ ವಿವರಣೆಯೊಂದಿಗೆ ಶ್ರೀ ಸೂತಾಚಾರ್ಯರ ಜ್ಞಾನದ ಕುರಿತ ಶ್ರೇಷ್ಠ ಚಿತ್ರಣ ಇಲ್ಲಿದೆ. ಆಚಾರ್ಯರಿಲ್ಲದಿದ್ದರೆ ಶ್ರೀಮದ್ ಭಾಗವತದ ಅಪಾರ್ಥವನ್ನು ಮಾಡಿಕೊಂಡು ಪ್ರಪಾತಕ್ಕೆ ಬೀಳುತ್ತಿದ್ದೇವು ಎಂಬ ಮಾತನ್ನು ನಮಗೆ ಮನದಟ್ಟು ಮಾಡಿಸುವ ಭಾಗ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು. 

श्रीमद्भागवते प्रथमस्कन्धे प्रथमाध्यायः।

ऋषय ऊचुः —

त्वया खलु पुराणानि सेतिहासानि चानघ। 
आख्यातान्यप्यधीतानि धर्मशास्त्राणि तान्युत॥ 6॥

यानि वेद विदां श्रेष्ठो भगवान् बादरायणः।
अन्ये च मुनयः सूत परापरविदो विदुः ॥7॥ 

वेत्थ त्वं सौम्य तत् सर्वं तत्त्वतस्तदनुग्रहात्।
ब्रूयुः स्निग्धस्य शिष्यस्य गुरवो गुह्यमप्युत ॥8॥

भागवततात्पर्यम् — 

यानि भगवज्ज्ञातान्यन्यैरप्यृषिभिर्ज्ञायन्ते तानि वेत्थ। 

उक्तं हि ब्रह्माण्डे —

“द्वैपायनेन यद् बुद्धं ब्रह्माद्यैस्तन्न बुध्यते।
सर्वबुद्धं स वै वेद तद्बुद्धं नान्यगोचरम्” इति ॥
Play Time: 44:40

Size: 7.60 MB


Download Upanyasa Share to facebook View Comments
4230 Views

Comments

(You can only view comments here. If you want to write a comment please download the app.)
 • Sowmya,Bangalore

  8:14 PM , 06/06/2022

  🙏🙏🙏
 • Mahadi Sethu Rao,Bengaluru

  3:20 PM , 19/06/2020

  HARE KRISHNA.
 • Mrs laxmi laxman padaki,Pune

  11:31 AM, 03/11/2017

  👏👏👏👏👏
 • Mrs laxmi laxman padaki,Pune

  11:31 AM, 03/11/2017

  👏👏👏👏👏
 • P.R.SUBBA RAO,BANGALORE

  2:19 AM , 02/11/2017

  Revised comment:
  ಶ್ರೀ ಗುರುಭ್ಯೋನಮಃ
  SB052- ವಿಶ್ವನಂದಿನಿ app ನಲ್ಲಿ COMMENTS ವಿಭಾಗ ನಮಗೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ನಮಗೆ ತೋರದ ಆದರೆ ಬೇರೆಯವರಿಗೆ ತೋರಿದ ಸಂದೇಹಗಳು/ಸೂಕ್ಷ್ಮಗಳು/ಪ್ರಶ್ನೆಗಳು ಹಾಗೂ ಗುರುಗಳ ಉತ್ತರ ಎರಡೂ ತಿಳಿದು ಜ್ಞಾನ ವೃದ್ಧಿಯಾಗುತ್ತಿದೆ
  ಅನಂತಾನಂತ ಪ್ರಣಾಮಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ಬಹಳ ಸಂತೋಷ
  
 • PRASANNA KUMAR N S,Bangalore

  9:32 AM , 02/11/2017

  Thumbha authoritative vivarane.
  
  
  
  Sastanga namaskaragalu.
 • PRASANNA KUMAR N S,Bangalore

  1:30 PM , 01/11/2017

  ಶ್ರೀ ಗುರುಭ್ಯೋ ನಮಃ,
  
  ISKON ಅವರ ಪುಸ್ತಕದಲ್ಲಿ ಓದಿದ ನೆನಪು.
  
  ಕ್ಷ ತ್ರಿಯ ತಂದೆ ಮತ್ತು ಬ್ರಾಹ್ಮಣ ತಾಯಿ ಗೆ 
  
  ಜನಿಸಿದ್ದರಿಂದ ಸೂತಾಚಾರ್ಯರು ಶೂದ್ರರು.
  
  ಹಾಗೂ ಅವರು ದುರಂಹಕಾರಿಗಳಾದ್ದರಿಂದ ಶ್ರೀ 
  
  ಬಲರಾಮ ಕೇವಲ ಧರ್ಬೆಯಿಂದ ಅವರನ್ನು 
  
  ಕೊಂದರು ಅಂತ.
  
  ಈ ವಿವರಣೆ ದೋಷಯುಕ್ತ ಅನಿಸುತ್ತೆ.
  
  ದಯಮಾಡಿ ಸರಿಯಾದದ್ದನ್ನು ತಿಳಿಸಬೇಕಾಗಿ ವಿನಂತಿ.

  Vishnudasa Nagendracharya

  ಸೂತಾಚಾರ್ಯರು ವೇದವ್ಯಾಸದೇವರ ಪುತ್ರ ಎನ್ನುವದು ಸ್ವಯಂ ಶ್ರೀಮದಾಚಾರ್ಯರು ಮಾಡಿರುವ ನಿರ್ಣಯ. ಪ್ರಮಾಣವನ್ನು ಉಪನ್ಯಾಸದಲ್ಲಿ ನೀಡಿದ್ದೇನೆ. 
  
  ಶೌನಕರು ಸೂತರಿಗೆ ಬ್ರಹ್ಮಾಸನವನ್ನು ನೀಡಿರುತ್ತಾರೆ. ಬ್ರಹ್ಮಾಸನದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಲರಾಮದೇವರು ಬರುತ್ತಾರೆ. ಋಷಿಗಳೆಲ್ಲ ಎದ್ದು ಗೌರವ ಮಾಡಿದರೂ, ವ್ಯಾಸಪೀಠದಲ್ಲಿ ಕುಳಿತ ಕಾರಣಕ್ಕೆ ಸೂತರು ಎದ್ದು ಬಲರಾಮದೇವರಿಗೆ ನಮಸ್ಕರಿಸುವದಿಲ್ಲ. ಇದನ್ನು ಸೂತರ ಅವಿನಯ ಎಂದು ತಪ್ಪು ತಿಳಿದ ಬಲರಾಮದೇವರು ಕ್ಷಣಮಾತ್ರದಲ್ಲಿ ಅವರನ್ನು ಕೈಯಲ್ಲಿನ ದರ್ಭೆಯಿಂದ ಸಂಹರಿಸುತ್ತಾರೆ. ಕಣ್ರೆಪ್ಪೆ ಬಡಿಯುವಷ್ಟರಲ್ಲಿ ನಡೆದ ಘೋರವನ್ನು ಕಂಡು ಶೌನಕರು ಚಿಂತಾಕ್ರಾಂತರಾಗಿ ಬಲರಾಮದೇವರಬಳಿ, ತಾವೇ ಅವರಿಗೆ ಬ್ರಹ್ಮಾಸನವನ್ನು ನೀಡಿದ್ದೆವು, ಆಚಾರ್ಯರ ಸ್ಥಾನದಲ್ಲಿ ಕೂಡಿಸಿದ್ದೆವು ಎಂದು ತಿಳಿಸುತ್ತಾರೆ. ಅವರನ್ನು ಕೊಂದದ್ದರಿಂದ ಬ್ರಹ್ಮಹತ್ಯೆ ಬಂದಿದೆ ಅದರ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ವಿಜ್ಞಾಪಿಸಿಕೊಳ್ಳುತ್ತಾರೆ. 
  
  ವಿಷಯ ತಿಳಿದ ಬಲರಾಮದೇವರು ಸೂತರ ದೇಹದಿಂದಲೇ ಸತ್ತು ಹೋದ ಸೂತರನ್ನು ಮತ್ತೆ ಹುಟ್ಟಿಸುತ್ತಾರೆ. (ಇವತ್ತಿನ CLONE ಗೆ ಇದು ಹೋಲುತ್ತದೆ ) ಸತ್ತ ಮತ್ತು ಹುಟ್ಟಿದ ಜೀವ ಒಂದೇ ಎಂದು ಎಲ್ಲ ಋಷಿಗಳಿಗೆ ತಿಳಿಸುತ್ತಾರೆ. ಇಬ್ಬರೂ ಒಂದೇ ಆದ ಕಾರಣಕ್ಕೇ ಸೂತ ಮತ್ತು ಸೂತಪುತ್ರ ಇಬ್ಬರ ಜ್ಞಾನವೂ ಒಂದೇ. ಆ ನಂತರ ಶೌನಕರ ಸತ್ರಕ್ಕೆ ವಿಘ್ನ ಮಾಡುತ್ತಿದ್ದ ವಲ್ವಲ (ಅಗಸ್ತ್ಯರಿಂದ ಸತ್ತು ಹೋದ ಇಲ್ವಲನ ಮಗ) ಎಂಬ ರಾಕ್ಷಸನನ್ನು ಕೊಂದು ಹಾಕಿ, ಶೌನಕರು ಹೇಳಿದಂತೆ ಒಂದು ವರ್ಷ ತೀರ್ಥಯಾತ್ರೆಗೆ ತೆರಳುತ್ತಾರೆ, ಬಲರಾಮದೇವರು. 
  
  ಇದು ನಡೆದ ಘಟನೆ. 
  
  ಶ್ರೀಮದ್ ಭಾಗವತದ ಹತ್ತನೆಯ ಸ್ಕಂಧದ 96ನೆಯ ಅಧ್ಯಾಯದಲ್ಲಿ ನಿರೂಪಿತವಾಗಿದೆ. 
 • Gururaj,Mysuru

  12:17 PM, 01/11/2017

  ಪೂಜ್ಯ ಆಚಾರ್ಯರೇ, ಸೂತಾಚಾರ್ಯರು ವೇದವ್ಯಾಸದೇವರ ಮಗ ಎಂದಮೇಲೆ ಅವರು ಶೂದ್ರರು ಎಂದು ಹೇಗೆ ತಿಳಿಯಬೇಕು? ಕೇವಲ ವ್ಯಾಸದೇವರ ದೇಹದ ರೋಮಾಂಚನದಿಂದ ಹುಟ್ಟಿದವರ ವರ್ಣ ಹೇಗೆ ನಿರ್ಣಯಿಸಲ್ಪಡುತ್ತದೆ? ಅವರ ಸ್ವರೂಪದ ಆಧಾರದ ಮೇಲೆಯೇ? ಸ್ವರೂಪದಲ್ಲಿ ಶೂದ್ರರಾಗಿದ್ದರೂ ಆ ದೇಹದಲ್ಲಿ ಶೂದ್ರರು ಎಂದು ಹೇಗೆ ನಿರ್ಣಯ? ದಯವಿಟ್ಟು ತಿಳಿಸಿ.

  Vishnudasa Nagendracharya

  ಉತ್ತಮ ಪ್ರಶ್ನೆ. ಉತ್ತಮ ಕ್ರಮದಲ್ಲಿ ಕೇಳಿದ್ದೀರಿ. ಕಡೆಯ ಪ್ರಶ್ನೆ ತುಂಬ ಇಷ್ಟವಾಯಿತು. 
  
  ವೇದವ್ಯಾಸದೇವರು ತಮ್ಮ ಈ ಮಗ ಶೂದ್ರನಾಗಿರಬೇಕು ಎಂದು ಅಪೇಕ್ಷೆ ಪಟ್ಟಿದ್ದರಿಂದಲೇ ಶೂದ್ರರಾದ ಶ್ರೀ ಸೂತರು ಹುಟ್ಟಿಬಂದರು. ಪರಮಾತ್ಮನ ಮುಖದಿಂದ ಬ್ರಾಹ್ಮಣ, ಕೈಗಳಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ, ಕಾಲಿನಿಂದ ಶೂದ್ರ ಹುಟ್ಟಿ ಬರಲಿಲ್ಲವೇ? ಹಾಗೆ. ತಮ್ಮ ಮತ್ತೊಬ್ಬ ಮಾನಸಪುತ್ರ ಶುಕಾಚಾರ್ಯರನ್ನು ಬ್ರಾಹ್ಮಣರನ್ನಾಗಿಯೂ, ಈ ಮಾನಸಪುತ್ರ ಸೂತರನ್ನು ಶೂದ್ರರನ್ನಾಗಿಯೂ ಪಡೆದರು. 
  
  ಸೂತ ಜಾತಿಯೂ ಶೂದ್ರ ಜಾತಿಯ ಒಂದು ಭಾಗವೇ. ಮುಂದೆ ದಶಮಸ್ಕಂಧದಲ್ಲಿ ಇದು ಸ್ಪಷ್ಟವಾಗುತ್ತದೆ. (ಈ ಪ್ರಶ್ನೆಯನ್ನು ನೀವು ಕೇಳಿಲ್ಲ. Whatsapp ನಲ್ಲಿ ಒಬ್ಬರು ಕೇಳಿದ್ದರು. ಪ್ರಸಂಗವಿರುವದರಿಂದ ಇಲ್ಲಿಯೂ ಸೇರಿಸಿದ್ದೇನೆ) 
  
  ಸೂತರ ದೇಹದ ಜಾತಿ ನಿರ್ಣಯವಾದದ್ದು ರೋಮಾಂಚದಿಂದ ಅಲ್ಲ, ವೇದವ್ಯಾಸದೇವರ ಅಪೇಕ್ಷೆಯಿಂದ. ಮುಖದಿಂದ ಹುಟ್ಟಿದ ಬ್ರಹ್ಮದೇವರು ಬ್ರಾಹ್ಮಣರಾಗಲಿ ಎಂಬ ಭಗವಂತನ ಅಪೇಕ್ಷೆಯಂತೆ ಬ್ರಹ್ಮದೇವರು ಬ್ರಾಹ್ಮಣರಾದಂತೆ. 
  
  ಹೀಗೆ ಸೂತರನ್ನು ಪಡೆದದ್ದೂ, ಅವರ ಜಾತಿನಿರ್ಣಯವನ್ನು ಮಾಡಿದ್ದೂ ಸಹ ವೇದವ್ಯಾಸದೇವರ ಅಪಾರಸಾಮರ್ಥ್ಯದ ದ್ಯೋತಕ. 
  
  
 • Niranjan Kamath,Koteshwar

  10:05 AM, 01/11/2017

  Srimad Soothacharya charanaravindagalige Namo namaha.
 • prema raghavendra,coimbatore

  9:44 AM , 01/11/2017

  Anantha namaskara! Dangavada!
 • H. Suvarna kulkarni,Bangalore

  8:08 AM , 01/11/2017

  ಗುರುಗಳಿಗೆ ಪ್ರಣಾಮಗಳು ಅನಂತಾನಂತ ಧನ್ಯವಾದಗಳು
 • Yasin,4

  8:07 AM , 01/11/2017

  1
 • Shantha.raghothamachar,Bangalore

  6:04 AM , 01/11/2017

  ನಮಸ್ಕಾರ ಗಳೂ