Upanyasa - VNU549

ಶ್ರೀಮದ್ ಭಾಗವತಮ್ — 53 — ಮೊದಲ ಮೂರು ಪ್ರಶ್ನೆಗಳು

ಕಲಿಯುಗದ ಸಜ್ಜನರ ಮೇಲಿನ ಅಪಾರ ಕೃಪೆಯಿಂದ ಅವರ ಉದ್ಧಾರಕ್ಕಾಗಿ ಶೌನಕಾದಿ ಮಹರ್ಷಿಗಳು ಸೂತಾಚಾರ್ಯರಿಗೆ ಆರು ಪ್ರಶ್ನೆಗಳನ್ನು ಮಾಡುತ್ತಾರೆ. ಅದರಲ್ಲಿ ಮೂರು ಪ್ರಶ್ನೆಗಳ ವಿವರಣೆ ಇಲ್ಲಿದೆ. ಆಯುಷ್ಮನ್ ಎನ್ನುವ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅರ್ಥದಿಂದ ಅವರಿಗಿರುವ ಟೀಕಾಗ್ರಂಥಗಳ ಜ್ಞಾನ ಎಷ್ಟು ಆಳ ಮತ್ತು ವಿಸ್ತಾರವಾದದ್ದು ಎನ್ನುವದು ತಿಳಿಯುತ್ತದೆ. ಆ ಮಹಾನುಭಾವರ ತಿಳಿಸಿದ ಅರ್ಥಗಳ ವಿವರಣೆ ಈ ಭಾಗದಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕಗಳು — 

श्रीमद्भागवते प्रथमस्कन्धे प्रथमाध्यायः।

तत्रतत्राञ्जसाऽऽयुष्मन् भवता यद् विनिश्‍चितम्।
पुंसामेकान्ततः श्रेयस्तन्नः शंसितुमर्हसि॥ 9॥

प्रायेणाल्पायुषो मर्त्याः कलावस्मिन् युगे जनाः।
मन्दाः सुमन्दमतयो मन्दभाग्या ह्युपद्रुताः॥ 10॥

भूरीणि भूरिकर्माणि श्रोतव्यानि विभागशः।
अतः साधोऽत्र यत् सारं समुद्गृह्य मनीषया।
ब्रूहि भद्राय भूतानां येनात्माऽऽशु प्रसीदति॥ 11॥

सूत जानासि भद्रं ते भगवान् सात्वतां पतिः।
देवक्यां वसुदेवस्य जातो यस्य चिकीर्षया॥ 12॥

तन्नः शुश्रूषमाणानामर्हस्यङ्गानुवर्णितुम्।
यस्यावतारो भूतानां क्षेमाय विभवाय च॥ 13॥


Play Time: 34:10

Size: 6.64 MB


Download Upanyasa Share to facebook View Comments
4309 Views

Comments

(You can only view comments here. If you want to write a comment please download the app.)
 • Sowmya,Bangalore

  7:44 PM , 07/06/2022

  🙏🙏🙏
 • Dharma theja,Chennai

  11:41 AM, 11/08/2019

  🙏🏻
 • HARIPRIYA KIDAMBI,BANGALORE

  10:56 AM, 26/02/2018

  नमस्ते महोदय, संस्कृतभाषायाम् विवरणानि भवन्ति चेत् महदुपकार: भवतीति मम विचार:, कृपया चिन्तयतु

  Vishnudasa Nagendracharya

  सर्वैरप्यवगन्तु न शक्यते यदि संस्कृतभाषायां विव्रियते। प्रथमं भाषैव पाठनीया, ततस्तस्यां विवरणं कार्यम्। संस्कृतसुरभ्या संस्कृतं पाठयित्वा, ततः संस्कृतभाषायामपि प्रवचनानि करिष्यामि। 
 • Shantha.raghothamachar,Bangalore

  3:54 PM , 13/11/2017

  ನಮಸ್ಕಾರಗಳು
 • P.R.SUBBA RAO,BANGALORE

  11:20 PM, 04/11/2017

  🙏🏻🙏🏻🙏🏻
 • Jayashree Karunakar,Bangalore

  10:11 AM, 04/11/2017

  ಸುಬ್ಬರಾವು ಸರ್ ನೀವು ಹೇಳಿದ ಮಾತು ಅಕ್ಷರಶಃ ಸತ್ಯವಾದದ್ದೆ. 
  
  ನಮ್ಮಂತಹ ಸಾಮಾನ್ಯ ಜನರಿಗೆ, ಶ್ರೀಮದ್ಭಾವಗದ ಶ್ರವಣದಿಂದ ಆಗುತ್ತಿರುವ ಸಂತೋಷವನ್ನು ಪದಗಳಿಂದ ಹೇಳಲೂ ಬರುವುದಿಲ್ಲ.
  
  ಶ್ರೀಮದ್ಭಾವತದ ಶ್ರವಣ ಯೋಗವನ್ನು ಪ್ರತಿನಿತ್ಯ ಕರುಣಿಸುತ್ತಿರುವ ಗುರುಗಳಿಗೆ ಭಕ್ತಿಪೂವ೯ಕ ನಮಸ್ಕಾರಗಳು.
 • P.R.SUBBA RAO,BANGALORE

  3:26 AM , 04/11/2017

  ಶ್ರೀ ಗುರುಭ್ಯೋನಮಃ
  SB053- ಶ್ರೀ ಸುಮಧ್ವ ವಿಜಯದಲ್ಲಿ ತಿಳಿಸಿದ ಹಾಗೆ ಶ್ರೀಮನ್ ವಾಯುದೇವರಿಂದ ಹಿಡಿದು ಶ್ರಿಸೂತಾಚಾರ್ಯರು, ಶ್ರೀಶೌನಕಾದಿಗಳು, ಸಮಸ್ತ ಶ್ರಿಮನ್ಮಾಧ್ವಯತಿಗಳು, ಸಕಲ ದಾಸವರೇಣ್ಯರು ಮತ್ತು ನಮ್ಮ ಉದ್ಧಾರಕ್ಕಾಗಿ ಶ್ರಿಮದ್ಭಾಗವತವನ್ನು ನಮಗೆ ಪಾಠ ಮಾಡುತ್ತಿರುವ ಶ್ರಿವಿಷ್ಣುದಾಸವರ್ಯರು... ಈ ಎಲ್ಲರೂ ಭಗವಂತನ ಆದೇಶ ಮತ್ತು ಅನುಗ್ರಹದಂತೆ ನಮ್ಮ ಉದ್ಧಾರಕ್ಕಾಗಿಯೆ ಈ ಜ್ಞಾನಕಾರ್ಯವನ್ನು ನಡೆಸುತ್ತಿರುವಂತೆ ತೋರುತ್ತಿದೆ. ಉತ್ಪ್ರೇಕ್ಷೆಯ ಮಾತಲ್ಲ. ಈ ಶುದ್ಧ ಜ್ಞಾನಕ್ಕಾಗಿ ಸರಿಯಾದ ಗುರುಗಳನ್ನು ನಿಜವಾಗಲೂ ಹುಡುಕಿ ಸುಸ್ತಾದವರಿಗೆ ಮಾತ್ರ ಈ ಮಾತುಗಳು ಅನುಭವವೇದ್ಯವಾಗುತ್ತದೆ. ಪ್ರತಿದಿನ ಭಾಗವತದ ಜೊತೆಗೆ ಸಮಸ್ತ ಸಂಬಂಧಪಟ್ಟ ವ್ಯಾಖ್ಯಾನ, ಟೀಕಾ, ಟಿಪ್ಪಣಿ, ಪ್ರಮಾಣಗಳ ಮಾಹಿತಿಗಳನ್ನು ಭಕ್ತಿ ಪುರಸ್ಸರವಾಗಿ ಪ್ರಕಟಿಸುತ್ತಿರುವ, ಮತ್ತೂ ಈ ಕಾರ್ಯಕ್ಕೆ ತಮ್ಮ ಸಮಸ್ತ ಹತ್ತಾರು ವರ್ಷಗಳ ಕಠಿಣ ಅಧ್ಯಯನದ ಸಾರವನ್ನು ನಿಸ್ಪೃಹತೆಯಿಂದ ಧಾರೆ ಎರೆಯುತ್ತಿರುವ ಗುರುಗಳಿಗೆ...
  ಅನಂತಾನಂತ ಪ್ರಣಾಮಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ದೇವರ ಆಟದಲ್ಲಿ ಎಲ್ಲರೂ ಕೈಗೊಂಬೆಗಳು. ಭಗವಂತನ ಈ ಶಾಸ್ತ್ರಶ್ರವಣದ ಆಟದಲ್ಲಿ ಆತನ ಕೈಗೊಂಬೆಯಾಗಿರುವದು ಅನಂತ ಸೌಭಾಗ್ಯದ ಪ್ರತಿಫಲ. ಅವನ ಕಾರುಣ್ಯದ ಕುರುಹು. 
  
  ನಮ್ಮೆಲ್ಲರನ್ನೂ ಭಾಗವತಾದಿ ಶಾಸ್ತ್ರದಲ್ಲಿ ಸದಾ ಆಸಕ್ತರನ್ನಾಗಿಸಿ ಈ ಸಂಸಾರದಾಟವನ್ನು ಮುಗಿಸಲಿ ಎಂದು ಪ್ರಾರ್ಥಿಸಿಕೊಳ್ಳೋಣ. 
 • Mrs laxmi laxman padaki,Pune

  12:07 PM, 03/11/2017

  👏👏👏👏👏
 • Jayashree Karunakar,Bangalore

  3:04 PM , 02/11/2017

  ಗುರುಗಳೆ
  
  ಶ್ರೀಮದ್ಭಾಗವತದ  ಉಪನ್ಯಾಸವನ್ನು ತಾವೇನು ನೀಡುತ್ತಾ ಹೋಗುತ್ತೀರಿ, ಅದೇ ವಿಷಯಗಳನ್ನೊಳಗೊಂಡ ತಮ್ಮದೆ ಆದ ಒಂದು ಗ್ರಂಥವನ್ನೂ ನೀಡಬಹುದೆ ?
  ಶ್ರವಣದ ಜೋತೆಗೆ ನಮಗೆ ಅಧ್ಯಯನ ಮಾಡಲು ತುಂಬಾ ಅನುಕೂಲವಾಗುತ್ತದೆ . ಕೇಳಿದ ವಿಷಯಗಳನ್ನು ಮನನ ಮಾಡಲು ಸಹಾಯವಾಗುತ್ತದೆ
 • P N Deshpande,Bangalore

  10:37 AM, 02/11/2017

  S.Namaskagalu Anugrahavirili