Upanyasa - VNU553

ಶ್ರೀಮದ್ ಭಾಗವತಮ್ — 56 — ಪುರಾಣದಲ್ಲಿ ಬರುವ ಎಲ್ಲವೂ ವೇದವ್ಯಾಸದೇವರ ವಾಕ್ಯಗಳೇ?

ಶೌನಕರ ಷಟ್-ಪ್ರಶ್ನೆಗಳಿಗೆ ಉತ್ತರವಾಗಿ ಭಾಗವತವೆಂಬ ಷಟ್-ಪ್ರಶ್ನೋಪನಿಷತ್ತು ಆರಂಭವಾಗುತ್ತದೆ. ಮೊಟ್ಟ ಮೊದಲ ಸೂತ ಉವಾಚ ಎಂಬ ಶಬ್ದದ ಅಭಿಪ್ರಾಯವನ್ನು ತಿಳಿಸುವಾಗ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಾವು ಪುರಾಣಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊಟ್ಟಮೊದಲಿಗೆ ಮೂಡುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಆ ಮಾತಿನ ವಿವರಣೆ ಇಲ್ಲಿದೆ. 

ಸೂತರು ಹೇಳುವ “ನಾನು ಶುಕಾಚಾರ್ಯರಿಗೆ ನಮಸ್ಕಾರ ಮಾಡುತ್ತೇನೆ” ಎಂಬ ಮಾತು ವೇದವ್ಯಾಸದೇವರ ವಚನವಾಗುತ್ತದೆಯೋ ಇಲ್ಲವೋ? ಎನ್ನುವದು ಪ್ರಶ್ನೆ. 

ಇಲ್ಲವಾದರೆ, ಇಡಿಯ ಭಾಗವತ ವೇದವ್ಯಾಸದೇವರ ವಚನ ಎಂದು ಹೇಗೆ ಹೇಳುವದು. ಮತ್ತು ವೇದವ್ಯಾಸದೇವರು ಇಂತಹ ಪುರಾಣದಲ್ಲಿ ಈ ಮಾತನ್ನು ಹೇಳಿದ್ದಾರೆ ಎಂದು ನಿರ್ಣಾಯಕವಾಗಿ ಹೇಗೆ ಪುರಾಣವಚನಗಳನ್ನು ಉದಾಹರಿಸುವದು. ಕಾರಣ, ಎಲ್ಲವೂ ಆಯಾಯ ವ್ಯಕ್ತಿಗಳ ಮಾತಾಯಿತು. ವೇದವ್ಯಾಸದೇವರ ಮಾತಾಗಲಿಲ್ಲ. 

ಹೌದಾದರೆ ವೇದವ್ಯಾಸದೇವರು ಶುಕಾಚಾರ್ಯರಿಗೆ ಹೇಗೆ ನಮಸ್ಕರಿಸಲು ಸಾಧ್ಯ? ಈ ಪ್ರಶ್ನೆಗೆ ಉತ್ತರವನ್ನು ಆಚಾರ್ಯರು ತೈತ್ತಿರೀಯಭಾಷ್ಯದಲ್ಲಿ ನೀಡಿದ್ದಾರೆ. ಶ್ರೀಮದ್ವಾದಿರಾಜಗುರುಸಾರ್ವಭೌಮರು ಆಚಾರ್ಯರ ಅಭಿಪ್ರಾಯವನ್ನು ತಿಳಿಯಾಗಿ ವಿವರಿಸಿ ಅರ್ಥ ಮಾಡಿಸಿದ್ದಾರೆ. ಆ ಮಹಾಗುರುಗಳ ಪವಿತ್ರ ವಚನಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ವಚನಗಳು. 

सूत उवाच — 

 यं प्रव्रजन्तमनुपेतमपेतकृत्यं द्वैपायनो विरहकातर आजुहाव ।
 पुत्रेति तन्मयतया तरवोऽभिनेदुस्तं सर्वभूतहृदयं मुनिमानतोऽस्मि ।।

 यः स्वानुभावमखिलश्रुतिसारमेकमध्यात्मदीपमतितितीर्षतां तमोऽन्धम्
 संसारिणां करुणयाह पुराणगुह्यं तं व्याससूनुमुपयामि गुरुं मुनीनाम् ।।

Play Time: 37:21

Size: 6.91 MB


Download Upanyasa Share to facebook View Comments
4789 Views

Comments

(You can only view comments here. If you want to write a comment please download the app.)
 • Sowmya,Bangalore

  8:01 PM , 10/06/2022

  🙏🙏🙏
 • ಭಾರದ್ವಾಜ,ಬೆಂಗಳೂರು

  1:01 PM , 09/12/2017

  ಶ್ರೀ ಗುರುಭ್ಯೋ ನಮಃ
  
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಇಲ್ಲಿ ಶ್ರೀಮದ್ವಾದಿರಾಜಗುರುಸಾರ್ವಭೌಮರು ತತ್ವವನ್ನು ತಿಳಿಸಬೇಕಾದರೆ "ತಂ ಸರ್ವಭೂತಹೃದಯಂ..." ಎಂದು ಉದಾಹರಿಸಲ್ಲಿಲ್ಲ, ಆದರೆ "ತಂ ವ್ಯಾಸಸೂನುಮುಪಯಾಮಿ" ಎಂದು ಉದಾಹರಿಸಿದ್ದಾರೆ ಎಂದಿರಿ. ಎರಡು ಶ್ಲೋಕಗಳಲ್ಲಿಯು ಶ್ರೀ ಸೂತಾಚಾರ್ಯರು ಅವರ ಗುರುಗಳಾದ ಶ್ರೀ ಶುಕಾಚಾರ್ಯರಿಗೆ ನಮಸ್ಕರಿಸುತಿದ್ದಾರೆ. ಎರಡರಲ್ಲು ವ್ಯತ್ಯಾಸವೇನು ಗುರುಗಳೇ? ಇದರ ಔಚಿತ್ಯವನ್ನು ದಯಮಾಡಿ ತಿಳಿಸಿ

  Vishnudasa Nagendracharya

  ಮೊದಲ ಶ್ಲೋಕದಲ್ಲಿ “ಸಕಲ ಜೀವರ ಮನೋಭಿಮಾನಿಗಳಾದ ರುದ್ರದೇವರ ಅವತಾರರಾದ ಶುಕಾಚಾರ್ಯರಿಗೆ ನಮಿಸುತ್ತೇನೆ” ಎಂದಿಗೆ. ಎರಡನೆಯ ಶ್ಲೋಕದಲ್ಲಿ “ವೇದವ್ಯಾಸದೇವರ ಪುತ್ರರಾದ ಶುಕಾಚಾರ್ಯರನ್ನು ಶರಣು ಹೋಗುತ್ತೇನೆ” ಎಂದಿದೆ. 
  
  ಚರ್ಚೆ ಇರುವದು ಇದು ವೇದವ್ಯಾಸದೇವರ ಶ್ಲೋಕವಾಗಲು ಸಾಧ್ಯವೇ ಇಲ್ಲವೇ ಎಂದು. ಮೊದಲ ಶ್ಲೋಕವನ್ನು ಕಥಂಚಿತ್ ವೇದವ್ಯಾಸದೇವರ ಶ್ಲೋಕ ಎನ್ನಬಹುದು. ಆದರೆ ಎರಡನೆಯ ಶ್ಲೋಕವನ್ನು ಅವರ ರಚನೆ ಎಂದು ಹೇಳಲಾಗುವದಿಲ್ಲ, ಕಾರಣ ತಮ್ಮ ಮಗನಿಗೆ ತಾವೇ ಹೇಗೆ ನಮಸ್ಕಾರ ಮಾಡಲು ಸಾಧ್ಯ. ಹೀಗಾಗಿ ಇದು ವೇದವ್ಯಾಸರ ಶ್ಲೋಕ ಅಲ್ಲವೇ ಅಲ್ಲ ಎಂದು ವಾದಿಸುವವರಿಗೆ, ಇದು ವೇದವ್ಯಾಸದೇವರೇ ರಚಿಸಿರುವ ಶ್ಲೋಕ. ಸೂತಾಚಾರ್ಯರ ಮಾತನ್ನಾಗಿ ವೇದವ್ಯಾಸದೇವರು ರಚಿಸಿದ್ದಾರೆ ಎಂದು ಉತ್ತರವನ್ನು ರಾಜರು ನೀಡುತ್ತಿದ್ದಾರೆ. 
  
  ವೇದವ್ಯಾಸರ ರಚನೆಯಲ್ಲ ಎಂದು ಹೇಳಲು ಪೂರ್ವಪಕ್ಷಿಗಳಿಗೆ ಗಟ್ಟಿಯಾದ ಕಾರಣವಿರುವದು ಎರಡನೆಯ ಶ್ಲೋಕದಲ್ಲಿ, ಆದ್ದರಿಂದ ಆ ಶ್ಲೋಕವನ್ನೇ ಕೈಗೆತ್ತಿಕೊಂಡು ಪೂರ್ವಪಕ್ಷಕ್ಕೆ ಉತ್ತರ ನೀಡಿದರು ನಮ್ಮ ಶ್ರೀಮದ್ವಾದಿರಾಜಗುರುಸಾರ್ವಭೌಮರು. 
 • Shantha.raghothamachar,Bangalore

  4:31 PM , 17/11/2017

  ನಮಸ್ಕಾರಗಳು
 • Jayashree Karunakar,Bangalore

  7:42 PM , 06/11/2017

  ಗುರುಗಳೆ
  
  ಶ್ರೀಮದ್ಭಾಗವತವು ಸೂತ ಶೌನಕರ ಸಂವಾದಾ ರೂಪವಾಗಿಯೇ ಯಾಕೆ ನಮ್ಮಮುಂದಿದೆ ?
  ನಾರದ ಸನಕಾದಿಗಳ ಸಂವಾದ ರೂಪದಲ್ಲಿರಬಹುದಾಗಿತ್ತು
  
  ಶುಕಾಚಾಯ೯ ಪರೀಕ್ಷಿತ ಮಹಾರಾಜರ ಸಂವಾದರೂಪವಾಗಿರಬಹುದಿತ್ತು
  
  ವೇದವ್ಯಾಸ ದೇವರ ಮತ್ತು ಶುಕಾಚಾಯ೯ರ ಸಂವಾದ ರೂಪದಲ್ಲಿರ ಬಹುದಿತ್ತು
   
  ಮತ್ತು ಧುಂಧುಕಾರಿಯ ಸಂದಭ೯ದಲ್ಲಿಯೂ ಪ್ರಕಟವಾಗಬಹುದಿತ್ತು ಅಲ್ಲವೆ ?
  ತಪ್ಪಾಗಿ ಪ್ರಶ್ನಿಸಿದ್ದರೆ ಕ್ಷಮಿಸಿ ಗುರುಗಳೆ

  Vishnudasa Nagendracharya

  ಈ ರೀತಿಯ ಪ್ರಶ್ನೆಗಳಿಗೆ ಕೊನೆ ಇರುವದಿಲ್ಲ. ನಾರದ-ಸನಕಾದಿ ಸಂವಾದದ ರೂಪದಲ್ಲಿದ್ದರೆ ಸೂತ-ಶೌನಕರ ಸಂವಾದದಲ್ಲಿ ಏಕಿಲ್ಲ ಎಂಬ ಪ್ರಶ್ನೆಯನ್ನು ಮಗದೊಬ್ಬರು ಕೇಳುತ್ತಾರೆ. 
  
  ಸೂತ-ಶೌನಕ ಸಂವಾದದಲ್ಲಿ ಏಕೆ ದೊರೆತಿದೆ ಎಂಬ ಪ್ರಶ್ನೆಗೆ ಉತ್ತರಗಳು ಹೀಗಿವೆ. 
  
  ಉತ್ತರ ೧ - ಶ್ರೀ ವೇದವ್ಯಾಸದೇವರು ಇದನ್ನು ಸೂತ-ಶೌನಕ ಸಂವಾದ ರೂಪದಲ್ಲಿ ಬರೆದರು ಅದಕ್ಕಾಗಿ, ಇದು ಸೂತ ಶೌನಕ ಸಂವಾದದಲ್ಲಿದೆ. 
  
  ಉತ್ತರ ೨ 
  
   ಇದು ನಾರಾಯಣ-ಬ್ರಹ್ಮಸಂವಾದವೂ ಹೌದು. ಪರೀಕ್ಷಿತ್ -ಶುಕ ಸಂವಾದವೂ ಹೌದು. ಮುಂದೆ ಈ ಸಂವಾದಗಳನ್ನು ಕೇಳುತ್ತೇವೆ. 
  
  ಆದರೆ ನಾರದ-ಸನಕಾದಿ ಸಂವಾದವಲ್ಲ. 
  
  ಕಾರಣ, ಬ್ರಹ್ಮ-ನಾರಾಯಣ, ಶುಕ-ಪರೀಕ್ಷಿತ್- ಸೂತ-ಶೌನಕ ಸಂವಾದಗಳಲ್ಲಿ ಭಾಗವತದಲ್ಲಿ ಸೇರಿಸಬೇಕಾದ ವಿಷಯಗಳು ಬಂದಿವೆ. ಹೀಗಾಗಿ ಈ ಮೂರೂ ಸೇರಿ ಭಾಗವತವಾಯಿತು. 
  
  ಸನಕಾದಿಗಳು, ಗೋಕರ್ಣ ಇತ್ಯಾದಿ ಪ್ರವಕ್ತೃಗಳು ಈ ಭಾಗವತವನ್ನೇ ಹೇಳಿದರು. ಭಾಗವತಕ್ಕೆ ಸೇರಿಸಬೇಕಾದ್ದು ಯಾವುದೂ ಅವರ ಸಂವಾದದಲ್ಲಿ ಇರಲಿಲ್ಲವಾದ್ದರಿಂದ ಅದು ಭಾಗವತವಾಗುವದಿಲ್ಲ. ಭಾಗವತದ ಅನುವಾದವಾಯಿತು. ನಾರದ ಬ್ರಹ್ಮಸಂವಾದ ನಾರದಪುರಾಣವಾಗಿದೆ. ಸನಕಾದಿಗಳಲ್ಲೊಬ್ಬರಾದ ಸನಾತನರು ಧೃತರಾಷ್ಟ್ರನಿಗೆ ಮಾಡಿದ ಉಪದೇಶ ಸನತ್ಸುಜಾತೀಯವಾಗಿ ಮಹಾಭಾರತದಲ್ಲಿದೆ. ಹೀಗೆ ಭಾಗವತಕ್ಕಿಂತ ಶ್ರೇಷ್ಠ ಮತ್ತು ಕನಿಷ್ಠವಾದ ಸಂವಾದಗಳನ್ನು ಆ ಮಹಾನುಭಾವರು ಮಾಡಿದ್ದಾರೆ. ಈ ಪ್ರಸಂಗದಲ್ಲಿ ಕೇವಲ ಭಾಗವತದ ಪ್ರವಚನವನ್ನು ಮಾಡಿದ್ದಾರೆ. 
  
  
  
  
 • Mrs laxmi laxman padaki,Pune

  10:57 AM, 07/11/2017

  👏👏👏👏👏
 • Mrs laxmi laxman padaki,Pune

  10:57 AM, 07/11/2017

  👏👏👏👏👏
 • Mrs laxmi laxman padaki,Pune

  10:57 AM, 07/11/2017

  👏👏👏👏👏
 • ARUNDHATI SURESH KULKARNI,BANGALORE

  10:21 AM, 07/11/2017

  ಶ್ರೀ ಗುರುಭ್ಯೋ ನಮ: ಶ್ರೀ ಶುಕಾಚಾರ್ಯರ ಸನ್ಯಾಸ ಧೀಕ್ಷೆಯ ಪ್ರಸಂಗದ ಪರಮಾಧ್ಭುತ ವರ್ಣನೆಯನ್ನು ತಮ್ಮಿಂದ ಶ್ರವಣ ಮಾಡುತ್ತಿರುವಾಗ ರೋಮಾಂಚನವಾಗುತ್ತದೆ. ಭಾವುಕರಾಗುತ್ತೇವೆ. ಭಗವಂತನ ಪ್ರಾ ಪ್ತಿ ಗೆ ಸನ್ಯಾಸಿಗಳಂತೆ ,  ಗೃಹಸ್ಥರೂ, ಬೇರೆಯವರೂ ದೇಹೇಂದ್ರಯಗಳ ಅಭಿಮಾನ ತ್ಯಾಗ ಮಾಡಿ, ವಿಹಿತವಾದ ಧರ್ಮಾಚರಣೆಯಿಂದ ಭಗವಂತನ ಪ್ರಾಪ್ತಿಯನ್ನು ಪಡೆಯಬಹುದು ಎನ್ನುವ ಅಂಶ ಅಧ್ಭುತ. ಭಕ್ತಿ ಪೂರಕ ಪ್ರಣಾಮಗಳು
 • PRASANNA KUMAR N S,Bangalore

  11:09 AM, 06/11/2017

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು,
  
  ನಮಗೆ ತುಂಬಾ ತಾಪತ್ರಯಗಳು ಇವೆ. ತುಂಬಾ 
  
  ಪಾಪಗಳನ್ನು ಮಾಡಿದ್ದೇವೆ ಅನಿಸುತ್ತೆ.
  
  Simultaneously, ತುಂಬಾಪುಣ್ಯದ ಕೆಲಸ 
  
  ಕೂಡ ಖಂಡಿತ ಮಾಡಿರುತ್ತೇವೆ ಅನಿಸುತ್ತೆ.
  
  ದೇವರ ವಿಷಯದ PHD level 
  
  ಜ್ಞಾನವನ್ನ primary class students level 
  
  ನಾದವರಾದ ನನ್ನಂತಹವರಿಗೂ ಅರ್ಥ 
  
  ಮಾಡಿಸುವಂತ ನೀವು ನಮಗೆ ದಾರಿ 
  
  ದೀಪವಾಗಿರುವುದೇ ಸಾಕ್ಷಿ.