Upanyasa - VNU557

ಶ್ರೀಮದ್ ಭಾಗವತಮ್ — 60 — ಭಕ್ತಿ ಹೇಗಿರಬೇಕು

ಎಲ್ಲ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಶ್ರೀಮದ್ ಭಾಗವತವನ್ನು ಅಧ್ಯಯನ ಮಾಡದೇ ಇದ್ದಲ್ಲಿ ಮನುಷ್ಯ ಏನು ಕಳೆದುಕೊಳ್ಳುತ್ತಾನೆ ಎನ್ನುವದನ್ನು ಸೂತಾಚಾರ್ಯರು ನಮಗಿಲ್ಲಿ ಮನದಟ್ಟು ಮಾಡಿಸುತ್ತ, ಸಮಗ್ರ ಶಾಸ್ತ್ರಪ್ರಪಂಚದ ರಹಸ್ಯತತ್ವವನ್ನು ತಿಳಿಸಲಾರಂಭಿಸುತ್ತಾರೆ. 

ಅಧೋಕ್ಷಜ ಎಂಬ ಶಬ್ದದ ಅರ್ಥವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

ಪ್ರಥಮಸ್ಕಂಧದ ದ್ವಿತೀಯಾಧ್ಯಾಯ. 

मुनयः साधु पृष्टोऽहं भवद्भिर्लोकमङ्गलम्
यत्कृतः कृष्णसम्प्रश्नो येनात्माsशु प्रसीदति ॥ ५ ॥ 
स वै पुंसां परो धर्मो यतो भक्तिरधोक्षजे
अहैतुक्यव्यव्यहिता ययाsत्माsशु प्रसीदति ॥ ६ ॥
वासुदेवे भगवति भक्तियोगः प्रयोजितः
जनयत्याशु वैराग्यं ज्ञानं च यदहैतुकम् ॥ ७ ॥
धर्मः स्वनुष्ठितः पुंसां विष्वक्सेनकथासु यः
नोत्पादयेद्यदि रतिं श्रम एव हि केवलम् ॥ ८ ॥


Play Time: 42:02

Size: 7.71 MB


Download Upanyasa Share to facebook View Comments
5313 Views

Comments

(You can only view comments here. If you want to write a comment please download the app.)
 • Sowmya,Bangalore

  7:45 PM , 16/06/2022

  ಗುರುಗಳಿಗೆ ನಮಸ್ಕಾರ, ಮೊದಲನೇ ಉತ್ತರಕ್ಕೆ ಕಣ್ಣುಗಳು ತುಂಬಿ ಬಂತು... 🙏🙏🙏
 • P.R.SUBBA RAO,BANGALORE

  11:40 PM, 10/11/2017

  ಶ್ರೀ ಗುರುಭ್ಯೋನಮಃ
  SB060_b - ಹಿಂದಿನ ಕಾಮೆಂಟಿನಲ್ಲಿ ಕೋರಿದ ಮನವಿಯ ಮುಂದುವರೆದ ಭಾಗ (... ಗುರುಗಳು ನನ್ನ ಅತಿಆಸೆಗೆ ಕ್ಷಮಿಸಬೇಕು) 
  - ಶ್ರಿಜಗನ್ನಾಥದಾಸಾರ್ಯರ, ಫಲವಿದು ಬಾಳ್ದುದಕೆ -. ದಯವಿಟ್ಟು ಗುರುಗಳು ಮುಂದೆ ಯಾವತ್ತಾದರೂ ಅನುಗ್ರಹಿಸಬೇಕೆಂದು ಮನವಿ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ಫಲವಿದು ಬಾಳ್ದುದಕೆ ಪದ್ಯದ ಅರ್ಥವಿವರಣೆಯನ್ನು ಮಾಡಿದರು ನಾನು ಬದುಕಿರುವದಕ್ಕೆ ಫಲ ದೊರೆತಂದಾಗುತ್ತದೆ. ಅಂತಹ ಅತ್ಯಮೋಘ ಕೃತಿಯದು. ಮೈಮರೆತು ಆಸ್ವಾದಿಸುವ ಕೃತಿ. ಶ್ರೀಜಗನ್ನಾಥದಾಸಾರ್ಯರೇ ನಿಂತು ಅದರ ಅರ್ಥಾನುಸಂಧಾನವನ್ನು ಮಾಡಿಸಬೇಕು. ಪ್ರಾರ್ಥಿಸೋಣ. ಅವರ ಅನುಗ್ರಹಕ್ಕಾಗಿ ಕಾಯೋಣ. 
 • P.R.SUBBA RAO,BANGALORE

  9:30 AM , 11/11/2017

  ಶ್ರೀ ಗುರುಭ್ಯೋನಮಃ
  SB060-c - ನನಗೂ ಸಹ ಲೌಕಿಕ ಕೆಲಸಗಳ ಒತ್ತಡದಿಂದ ಶುದ್ಧವಾದ ಕ್ರಮದಿಂದ ಶ್ರಿಮದ್ಭಾಗವತದ ಶ್ರಾವಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ಸರಿಯಾದ ವೇಳೆಗೆಂದು ಕಾದರೆ ಇನ್ನೂ ಶ್ರವಣ ಮಾಡಬೇಕಾದ ಉಪನ್ಯಾಸಗಳ ಪಟ್ಟಿ ದೊಡ್ಡ ದಾಗುತ್ತಿತ್ತು. ಆದ್ದರಿಂದ ಸಮಯಾವಕಾಶವಾದಾಗ ಮನಸ್ಸಿಟ್ಟು ಕೇಳುತ್ತಿದ್ದೆ. ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ. ಇದರಿಂದ ಮನಸ್ಸಿನಲ್ಲಿ guilty feeling ಇತ್ತು/ಇದೆ. ಗುರುಗಳ ಈ ಕೆಳಗಿನ ಉತ್ತರದಿಂದ ಸಮಾಧಾನವಾಗಿದೆ. ಪ್ರಶ್ನೆ ಕೇಳಿದವರಿಗೂ, ಗುರುಗಳಿಗೂ ಕೃತಜ್ಞತೆಗಳು. ಕಾಮೆಂಟ್ ವಿಭಾಗದ ಉತ್ತಮ ಉಪಯೋಗ ಇದಾಗಿದೆ. 
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • P.R.SUBBA RAO,BANGALORE

  11:30 PM, 10/11/2017

  ಶ್ರೀ ಗುರುಭ್ಯೋನಮಃ
  SB060 - ಇದುವರೆಗೆ ಶ್ರಿಮದ್ಭಾಗವತ ಪ್ರವಚನದಲ್ಲಿ... ಭಗವಂತನ ಕಾರುಣ್ಯ, ವ್ಯಾಪ್ತತ್ವ, ಲಕ್ಷಣಗಳು, ಸರ್ವಜ್ಞತ್ವ, ಸ್ವಾತಂತ್ರ್ಯತ್ವ, ಜ್ಞಾನಪ್ರದತ್ವ, ನಿಯಾಮನತ್ವ, ಸೃಷ್ಟ್ಯಾದಿ ವ್ಯಾಪಾರಗಳು, ಭಕ್ತರನ್ನು ಅನುಗ್ರಹಿಸುವ ಬಗೆ ಮತ್ತು ಪರಮ ಭಾಗವತರು, ಆ ಭಕ್ತರು ನಮ್ಮ ಉದ್ಧಾರಕ್ಕಾಗಿ ತೋರಿಸಿದ ಕರುಣೆ, ಪುರುಷಾರ್ಥಗಳು, ಧ್ಯಾನ, ಧ್ಯಾನದ ಕ್ರಮ ಇವೆಲ್ಲವನ್ನೂ ಕೇಳಿದೆವು. ಇಷ್ಟು ಕೇಳಿದ ಮೇಲೆ, ಶ್ರಿವಿಜಯದಾಸಾರ್ಯರ - ನಿನ್ನ ದರುಶನಕೆ ಬಂದವನಲ್ಲವೋ - ಎಂಬ ದೇವರ ನಾಮದ ಅರ್ಥಾನುಸಂಧಾನ ಗುರುಗಳಿಂದ ಕೇಳಬೇಕೆಂಬ ಅಪೇಕ್ಷೆಯಾಗಿದೆ. ಖಂಡಿತ ಈಗ ಆ ದೇವರ ನಾಮದ impact (ಭಕ್ತಿಯ ಉದ್ರೇಕ) ಬೇರೆಯದೇ ಸ್ತರದಲ್ಲಿ ಆಗುತ್ತದೆಂಬ ಭರವಸೆ ಇದೆ. ದಯವಿಟ್ಟು ಗುರುಗಳು ಅನುಗ್ರಹಿಸಬಬೇಕೆಂದು ಮನವಿ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  4:30 PM , 10/11/2017

  ಗುರುಗಳಿಗೆ ಅನಂತ ನಮಸ್ಕಾರಗಳು. ನಿಮ್ಮ ಉತ್ತರಗಳು ಪ್ರಶ್ನೆ ಕೇಳಿದವರಿಗೆ ಮಾತ್ರವಲ್ಲ,  ಎಲ್ಲರಿಗೂ ಸಂದೇಹ ತೀರುವಂತಿದೆ.
 • Mrs laxmi laxman padaki,Pune

  2:59 PM , 10/11/2017

  👏👏👏👏👏
 • Jayashree Karunakar,Bangalore

  11:00 AM, 10/11/2017

  ಗುರುಗಳೆ
  ಮನಸ್ಸಿನಲ್ಲಿ ಅಪರಾಧೀಭಾವ ಕಾಡುತ್ತದೆ.ತಾವು ಶ್ರೀಮದ್ಭಾಗವತವನ್ನು ಶುದ್ಧವಾದ ಕ್ರಮದಲ್ಲಿ ಮತ್ತು ಬೆಳಗಿನ ಸಮಯದಲ್ಲಿ ಮಾಡಲು ತಿಳಿಸಿದ್ದೀರಿ. ಇದು ವಾರದಲ್ಲಿ ಒಂದೆರಡುಬಾರಿ ಸಾಧ್ಯವಾಗಬಹುದು. ಯಾಂತ್ರಿಕವಾದ ಜೀವನದಲ್ಲಿ ನಾವೂ ಕೂಡ ಯಂತ್ರಗಳಂತಾಗಿದ್ದೇವೆ. ಗೃಹಕೃತ್ಯದಲ್ಲಿ ಮುಳುಗಿಬಿಟ್ಟಿದ್ದೇವೆ. ನಿಗದಿತವಾದ ಸಮಯದಲ್ಲಿ ಶ್ರವಣ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಮಗೆ ದೊರೆತ ಸಮಯವನ್ನು ವ್ಯಥ೯ಮಾಡದೆ ಶ್ರವಣದಲ್ಲಿ ತೊಡಗುತ್ತೇವೆ.ಆದರೆ ಆ ಶ್ರವಣವು ಶಾಸ್ತ್ರ ತಿಳಿಸಿದ ರೀತಿಯಲ್ಲಿರವುದಿಲ್ಲ. ಸ್ನಾನ ಮಾಡಿರುತ್ತೇವೆ ಆದರೆ ಪ್ರಯಾಣ ಮಾಡಾತ್ತಿರುವ ಸಂಧಭ೯, ಆಫೀಸಿನ ಬಿಡುವಿನ ವೇಳೆಯಲ್ಲಿಯೂ, ಇರುತ್ತದೆ. ಮನೆಯಲ್ಲಿದ್ದಂತೆ ಶುದ್ಧತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಮಾಡುತ್ತಿರುವ ಈ ಅಲ್ಪವನ್ನೂ ಬಿಟ್ಟರೆ ವಂಚಿತರಾಗುವ ಸಾಧ್ಯತೆಯೇ ಹೆಚ್ಚು. ಭಗವಂತ ಇದನ್ನು ಕ್ಷಮಿಸಿ ಫಲವನ್ನು ನೀಡುತ್ತಾನ ಗುರುಗಳೆ ? 
  ದಿನದಿನಕ್ಕೂ ಶ್ರೀಮದ್ಭಾಗವತವು ಅಥ೯ವಿಸಾರವಾಗುತ್ತಾ ಹೋಗುತ್ತಿದೆ. ಕೆಲವೂಮ್ಮೆ ಈಗ ತಾವು ತಿಳಿಸುವ ವಿಷಯಗಳನ್ನು ಕೇಳುವಾಗ, ವಿಷಯವನ್ನು ಮತ್ತಷ್ಟು ತಿಳಿಯಲು, ಮೊದಲಿನ ಭಾಗಗಳನ್ನು ಮತ್ತೂಮ್ಮೆ ಕೇಳಬೇಕಾಗುತ್ತದೆ. ಹಾಗಾಗಿ ಸಿಕ್ಕ ಸಮಯವನ್ನು ವ್ಥಥ೯ಮಾಡದೆ ಪರಿಶುಧ್ಧಕ್ರಮವನ್ನು ಪರಿಗಣಿಸದೆ ವಿಷಯವನ್ನು ತಿಳಿಯುವ ಅಪೇಕ್ಷೆಯಿಂದ ಶ್ರವಣಮಾಡಿಬಿಡುತ್ತೇವೆ. ಎಲ್ಲವನ್ನೂ ತಿಳಿಯಬೇಕೆಂಬ ಹಂಬಲವೂ ದಿನೇದಿನೇ ಹೆಚ್ಚುತ್ತ್ದಿದೆ, ಜ್ಞಾನ ಭಕ್ಕಿ ವೆರಾಗ್ಯಗಳು ಮನಸ್ಸಿನಲ್ಲಿ ನಮಗರಿವಿಲ್ಲದಂತೆಯೆ ವೃಧ್ಧಿಯಾಗುತ್ತದೆ. 
  ನಮ್ಮ ಈ ಪುಟ್ಟದಾದ ಬುದ್ದಿ, ಹೃದಯಗಳಿಗೆ ಎಲ್ಲವನ್ನೂ ಆಸ್ವಾದನೆ ಮಾಡುವ ಶಕ್ತಿ ಸಾಮ೯ಥ್ಯವನ್ನು ಆಭಗವಂತ ನೀಡುತ್ತನಾ ಗುರುಗಳೆ ?

  Vishnudasa Nagendracharya

  ವೇದ-ಉಪನಿಷತ್ತುಗಳ ಅರ್ಥವನ್ನು ತಿಳಿಸುವ ಉಪನ್ಯಾಸಗಳನ್ನು ಪ್ರಯಾಣ ಮಾಡುವಾಗ ಕೇಳುವದು ಬೇಡ. 
  
  ಭಾಗವತ-ಭಾರತ-ಗೀತಾ ಗುರುಪರಂಪರೆಯ ಉಪನ್ಯಾಸಗಳನ್ನು ಪ್ರಯಾಣ ಮಾಡುತ್ತ ಕೇಳಬಹುದು. ಆಫೀಸಿನಲ್ಲಿಯೂ ಕೇಳಬಹುದು. 
  
  ಮಲಮೂತ್ರ ವಿಸರ್ಜನೆ ಮಾಡಿ ಕೈ ಕಾಲು ತೊಳೆಯದಿದ್ದಲ್ಲಿ ಕೇಳುವದು ಬೇಡ. 
  
  ನಿಮ್ಮ ಕಡೆಯ ಪ್ರಶ್ನೆಗೆ ಉತ್ತರ -- 
  
  ಸಮುದ್ರದ ನೀರನ್ನು ಬಿಂದಿಗೆಯಲ್ಲಿಯೂ ತುಂಬಿಸಿಕೊಳ್ಳಬಹುದು, ತಂಬಿಗೆಯಲ್ಲಿಯೂ ತುಂಬಿಸಿಕೊಳ್ಳಬಹುದು. ಉದ್ಧರಣೆಯಲ್ಲಿಯೂ ಸಹ. ನಾವು ಎಷ್ಟನ್ನು ತಿಳಿಯಲು ಸಾಧ್ಯವೋ ಅಷ್ಟನ್ನೂ ಅವಶ್ಯವಾಗಿ ತಿಳಿದೇ ತಿಳಿಯುತ್ತೇವೆ. 
 • P N Deshpande,Bangalore

  10:43 AM, 10/11/2017

  S.Namaskargalu. Bhakktiya vraddhiyaagali eandu anugrhisbaku
 • Niranjan Kamath,Koteshwar

  10:14 AM, 10/11/2017

  Aho bhagyam. Dhanyosmi.
 • Shantha.raghothamachar,Bangalore

  9:21 AM , 10/11/2017

  ನಮಸ್ಕಾರ ಗಳು