Upanyasa - VNU558

ಶ್ರೀಮದ್ ಭಾಗವತಮ್ — 61 — ಧರ್ಮಾರ್ಥಕಾಮಗಳ ಪ್ರಯೋಜನ

ನಿಶ್ಚಿತವಾಗಿ ಶ್ರೇಯಸ್ಸನ್ನು ಕರುಣಿಸುವ ಸಾಧನ, ಭಕ್ತಿ ಎಂದು ಶ್ರೀ ಸೂತಾಚಾರ್ಯರು ಹೇಳಿದರು. ಆದರೆ ವೇದಗಳಲ್ಲಿ “ಯಜ್ಞೇನ ದಾನೇನ ತಪಸಾ ಅನಾಶಕೇನ” ಎಂದು ಯಜ್ಞಾದಿಗಳಿಂದ ಶ್ರೇಯಸ್ಸುಂಟಾಗುತ್ತದೆ ಎಂದು ಹೇಳಿದ್ದಾರೆ, ವಿರೋಧವುಂಟಾಯಿತಲ್ಲ ಎಂಬ ಆಕ್ಷೇಪಕ್ಕೆ ಸೂತಾಚಾರ್ಯರು ಉತ್ತರ ನೀಡುತ್ತ ಧರ್ಮ-ಅರ್ಥ-ಕಾಮಗಳ ನಿಖರ ಪ್ರಯೋಜನವನ್ನು ತಿಳಿಸಿ ಹೇಳುತ್ತಾರೆ. ಕಡೆಯಲ್ಲಿ ದೇವರ ಕುರಿತು ತಿಳಿಯಬೇಕೆಂಬ ಹಂಬಲವಿಲ್ಲದೆ ಮಾಡುವ ಸಕಲ ಕರ್ಮಗಳೂ ವ್ಯರ್ಥ ಎಂಬ ಶಾಸ್ತ್ರದ ನಿರ್ಣಯವನ್ನು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ವಚನಗಳು —

ಪ್ರಥಮಸ್ಕಂಧ ದ್ವಿತೀಯಾಧ್ಯಾಯ

धर्मः स्वनुष्ठितः पुंसां विष्वक्सेनकथासु यः ।
नोत्पादयेद् यदि रतिं श्रम एव हि केवलम् 				॥ ८ ॥
धर्मस्य ह्यापवर्ग्यस्य नार्थोऽर्थायोपकल्पते ।
नार्थस्य धर्मैकान्तस्य कामो लाभाय हि स्मृतः 			॥ ९ ॥
कामस्य नेन्द्रियप्रीतिर्लाभो जीवेत यावता ।
जीवस्यातत्त्वजिज्ञासोर्नार्थो यश्चेह कर्मभिः 			॥ १० ॥Play Time: 53:14

Size: 6.91 MB


Download Upanyasa Share to facebook View Comments
6362 Views

Comments

(You can only view comments here. If you want to write a comment please download the app.)
 • Sowmya,Bangalore

  8:06 PM , 28/06/2022

  🙏🙏🙏
 • Shubha,Bangalore

  5:28 PM , 10/04/2018

  Ok
 • ಭಾರದ್ವಾಜ,ಬೆಂಗಳೂರು

  1:29 PM , 14/11/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏
  
  
  ವರ್ಣಸಂಕರ ಎಂದರೆ ಏನು? ದಯಮಾಡಿ ತಿಳಿಸಿ

  Vishnudasa Nagendracharya

  ಬೇರೆ ಬೇರೆ ಜಾತಿಯ ಪುರುಷ ಸ್ತ್ರೀಯರು, ‘ವ್ಯಭಿಚಾರದಿಂದ’ ಮುಖಾಂತರ ಮಕ್ಕಳನ್ನು ಪಡೆದಾಗ ಉಂಟಾಗುವದು ವರ್ಣಸಂಕರ. 
  
  
 • Pratimadhav,City of Sails

  5:45 AM , 14/11/2017

  Manah purvaka pranamagalu. Thank you for the quick response.
 • Jayashree Karunakar,Bangalore

  9:37 PM , 13/11/2017

  ಗುರುಗಳೆ
  ದೇವರು ಸ್ವಭಾವಗಳನ್ನು ಸೃಷ್ಟಿಸುವುದಿಲ್ಲ ಆದರೆ ನಿಯಮಿಸುತ್ತಾನೆ ಅಷ್ಟೆ ಅಂದಿರಿ.
  
  ಅಂದರೆ ಸ್ವಭಾವದ ಸೃಷ್ಠಿ ಭಗವಂತನ ಆಳ್ವಿಕೆಗೆ ಒಳಪಟ್ಟಿದ್ದಲ್ಲ ಅಂತಾದರೆ ಭಗವಂತನ ಸೃಷ್ಟಿ ಕತೃತ್ತ್ವಕ್ಕೆ ದೋಷಬಂದಂತಾಗಲಿಲ್ಲವೆ ? 
  ಅವನಧೀನದಲ್ಲಿ ಇರದೆ ಇರುವುದನ್ನು ಭಗವಂತ ಬರೀ ನಿಯಮನ ಮಾಡುತ್ತಾನೆ ಅಷ್ಟೆ ಅಂತಾಗಲಿಲ್ಲವೆ ?
  
  ೨. ಉತ್ತಮ ಜೀವರ ಸ್ವರೂಪದಲ್ಲಿ ದುಖಃವಿಲ್ಲ, ಆದರೆ ದುಖಃ ಅನುಭವಿಸುವ ಅಹ೯ತೆ ಇದೆ ಎನ್ನುವುದನ್ನು ವಿವರಿಸಿಕೊಡಿ ಗುರುಗಳೆ

  Vishnudasa Nagendracharya

  ೧. ನಿಮ್ಮ ಮನೆಗೆ ನೀವು ವಿದ್ಯುತ್ತಿನ ಸಂಪರ್ಕವನ್ನೇ ಪಡೆದಿಲ್ಲ ಎಂದರೆ ವಿದ್ಯುತ್ತಿನ ಬಿಲ್ಲನ್ನು ನೀವು ಕಟ್ಟುತ್ತಿಲ್ಲ ಎಂದು ಆರೋಪ ಮಾಡಲು ಸಾಧ್ಯವೇ. ಮಾಡಿದ ಆರೋಪ ಸತ್ಯವೇ? 
  
  ಹಾಗೆಯೇ ಜೀವರ ಸ್ವಭಾವ ಸೃಷ್ಟಿಯೇ ಆಗಿಲ್ಲದ ವಸ್ತು ಎಂದಾದ ಬಳಿಕ ಅದನ್ನು ಸೃಷ್ಟಿ ಮಾಡದಿರುವದು ದೇವರ ದೋಷ ಹೇಗಾಗಲು ಸಾಧ್ಯ? 
  
  ೨. ಅಧೀನತ್ವಕ್ಕೆ ಒಳಪಡದ್ದನ್ನು ನಿಯಮನ ಮಾಡಲು ಸಾಧ್ಯವಿಲ್ಲ. 
  
  ೩. ಸ್ವರೂಪದಲ್ಲಿಯೇ ದುಃಖವಿದ್ದರೇ ಮುಕ್ತರಾದ ಮೇಲೂ ದುಃಖವನ್ನು ಅನುಭವಿಸಬೇಕು. ದುಃಖ ಪಡುವ ಅರ್ಹತೆಯಿದ್ದರೆ, ಸಂಸಾರಕ್ಕೆ ಬಂದು ದುಃಖವನ್ನು ಪಟ್ಟು ಮುಕ್ತರಾಗಿ ದುಃಖದಿಂದ ದೂರವಾಗುತ್ತಾರೆ. ಇದೇ ವ್ಯತ್ಯಾಸ. 
 • Pratimadhav,City of Sails

  5:54 AM , 13/11/2017

  Sri Vedavyasa devura, Rudra devura maha karunedinda rahasya tattva bagge tiliyitu. 
  So far had just superficial knowledge about this. But the way it has been beautifully explained, step by step and in-detail …..and with precise clarity has rendered immense peace of mind.
  
  nimage ananta koti Dhanyavadagalu.
  
  Neevu samayaanukula nodikondu, ee nanna kelavu prashnagalige uttara needabeku anta prarthane.
  
  Namma Swami tanna ‘parivaara devate’ anta yaakagi maadida? Sarva samartha, Sarvagya, sarva kaaryaniyamaka naada Bhagavanta, ee devatagala srushti, taratamya…..heege idella vyavasthe yaakagi nirmana maadiddane? 
  
  
   2. Sri Hari yaakagi ‘Varnagalu’ anta maadiddane? Eegina samaajanaage naavellaru onde, naveellaru manushyare, nammellarinalli hariyo rakta onde etc etc. anta maatanaadutaare. Ee varnagalu, ee vibhajana ella hale suddi anta, idikke pradhanyate kodovudilla. Aadare,….. naavu ee vishayavanna hege artha maadikollabeku? Varna sankramana mahapapa, anarthakke kaaranavaguttade – idu Bhagavanta maadida ondu perfect systemge viruddhavaagi hogodarinda untaago parinama anta naavu tilukobeka? Sakala jeeva raasigalige kuritu nanna ee prasne.
  
  Namaskara.

  Vishnudasa Nagendracharya

  ತುಂಬ ದೀರ್ಘವಾಗಿ ಉತ್ತರಿಸಬೇಕಾದ ಪ್ರಶ್ನೆಗಳು. 
  
  ತಾರತಮ್ಯ ಎನ್ನುವದನ್ನು ದೇವರು ಸೃಷ್ಟಿಸಿಲ್ಲ. ಅದು ಅನಾದಿಕಾಲದಿಂದ ಇದೆ. ನಮ್ಮೆಲ್ಲರ ಸ್ವಭಾವದಲ್ಲಿಯೇ ಇದೆ. ದೇವರು ಸ್ವಭಾವವನ್ನು ಸೃಷ್ಟಿಸುವದಿಲ್ಲ. ನಿಯಮಿಸುತ್ತಾನಷ್ಟೆ. 
  
  ದೇವತೆಗಳು ತಾವು ಮಾಡಿದ ಶ್ರೇಷ್ಠ ಕರ್ಮಗಳ ಫಲವಾಗಿ ಭಗವಂತನ ಪರಿವಾರ ದೇವತೆಗಳಾಗುವ ಸೌಭಾಗ್ಯವನ್ನು ಪಡೆದುಕೊಳ್ಳುತ್ತಾರೆ. ಸೇವೆಗೆ ತಕ್ಕಂತೆ ಫಲ. 
  
  ಜಾತಿವಾದದ ಕುರಿತು ಈಗಾಗಲೇ ಹರಿಭಕ್ತಿಸಾರ, ಮಧ್ವವಿಜಯದ ಉಪನ್ಯಾಸಗಳಲ್ಲಿ ತಿಳಿಸಿದ್ದೇನೆ. ನಮ್ಮ ಗುಣ ಮತ್ತು ಕರ್ಮಗಳ ಆಧಾರದ ಮೇಲೆ ನಿರ್ಣಯವಾಗುವ ವಿಷಯ ಜಾತಿ. (ತುಂಬ ವಿಸ್ತಾರವಾಗಿ ತಿಳಿಸಬೇಕಾದ ವಿಷಯ.) 
  
  ಹೌದು ದೇವರು ನಿರ್ಮಾಣ ಮಾಡಿರುವ ವ್ಯವಸ್ಥೆಗೆ ವಿರುದ್ಧವಾಗಿ ಹೋದದ್ದರಿಂದಲೇ ವರ್ಣಸಂಕರ ಎನ್ನುವದು ಮಹತ್ತರ ಪಾಪ. 
  
  Tumba dīrghavāgi uttarisabēkāda praśnegaḷu. 
  
  Tāratamya ennuvadannu dēvaru sr̥ṣṭisilla. Adu anādikāladinda ide. Nammellara svabhāvadalliyē ide. Dēvaru svabhāvavannu sr̥ṣṭisuvadilla. Niyamisuttānaṣṭe. 
  
  Dēvategaḷu tāvu māḍida śrēṣṭha karmagaḷa phalavāgi bhagavantana parivāra dēvategaḷāguva saubhāgyavannu paḍedukoḷḷuttāre. Sēvege takkante phala. 
  
  Jātivādada kuritu īgāgalē haribhaktisāra, madhvavijayada upanyāsagaḷalli tiḷisiddēne. Namma guṇa mattu karmagaḷa ādhārada mēle nirṇayavāguva viṣaya jāti. (Tumba vistāravāgi tiḷisabēkāda viṣaya.) 
  
  Haudu dēvaru nirmāṇa māḍiruva vyavasthege viruddhavāgi hōdaddarindalē varṇasaṅkara ennuvadu mahattara pāpa.
 • P N Deshpande,Bangalore

  11:19 AM, 12/11/2017

  S.Namaskargalu pnaha punha keali digest maadikoallwa sunder mattu nammellariguu annwayisuwa mahattwada vishya
 • Madhura,Bangalore

  7:12 PM , 11/11/2017

  Poojya gurugalige anantha. vandanegalu
 • Madhura,Bangalore

  7:07 PM , 11/11/2017

  Namma ee jeevanadlli bhagavathavu aparavada chaytanyavannu thandide
 • ಜ್ಯೋತಿ ಪ್ರಕಾಶ್ ಲಕ್ಷ್ಮಣ ರಾವ್,ಧರ್ಮಪುರಿ

  6:28 PM , 11/11/2017

  ಆಚಾರ್ಯರಿಗೆ ಅನಂತಾನಂತ ನಮಸ್ಕಾರಗಳು. ನಿಮ್ಮ ಪ್ರವಚನದಿಂದ ದೇವರ ಬಗ್ಗೆ ಬಹಳ ಅದ್ಭುತವಾದ ವಿಷಯ ತಿಳಿದು ಕೊಳ್ಳುತ್ತಿದ್ದೇನಕೊಳ್ಳುತ್ತಿದ್ದೇವೆ.
 • P.R.SUBBA RAO,BANGALORE

  11:19 AM, 11/11/2017

  ಶ್ರೀ ಗುರುಭ್ಯೋನಮಃ
  SB061-b - ಶ್ರಿವಿಜಯದಾಸಾರ್ಯರ ::ನಿನ್ನ ಒಲುಮೆಯಿಂದ:: ಎಂಬ ದೇವರನಾಮದಲ್ಲಿ :: ವೈದಿಕ ಪದವಿಯ ಕೊಡುವನಿಗೆ :: ಎಂಬ ಶಬ್ದಗಳಿಗೆ ಈ ಭಾಗದ ಉಪನ್ಯಾಸ ಕೇಳಿದಮೇಲೆ ಸರಿಯಾದ ಅರ್ಥ ತಿಳಿಯಿತು. ಗುರುಗಳು ಹಿಂದಿನ ಪ್ರವಚನಗಳಲ್ಲಿ ತಿಳಿಸಿದಂತೆ ಶ್ರಿಮದ್ಭಾಗವತ ಶ್ರವಣ ಮಾಡುತ್ತಾ ದಾಸರ ಪದಗಳಲ್ಲಿ ಹೊಸ ಅರ್ಥಗಳು ಸ್ಪುರಿಸುತ್ತಾ ಇದೆ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ದಾಸಸಾಹಿತ್ಯಕ್ಕೂ ಭಾಗವತಕ್ಕೂ ಅವಿನಾಭಾವಸಂಬಂಧ. 
 • Jayashree Karunakar,Bangalore

  1:44 PM , 11/11/2017

  ಗುರುಗಳೆ
  
  ೧. ಧಮಾ೯ಚರಣೆ ಮಾಡುವಾಗ ಭಗವಂತನ ಪ್ರೀತಿಗಾಗಿ ಮಾಡುತ್ತಿದ್ದೇನೆ ಮತ್ತು ಅವನನ್ನು ಪಡೆಯಲು ಮಾಡುತಿದ್ದೇನೆ ಅನ್ನುವ ಜ್ಞಾನವು ಬರುವುದೆ ಇಂತಹ ಪವಿತ್ರವಾದ ಶ್ರೀಮದ್ಭಾಗವತಾದಿ ಕಥಾ ಶ್ರವಣದಿಂದ ಪಡೆದ ಜ್ಞಾನ ಭಕ್ತಿ ವೆರಾಗ್ಯಗಳ ಸಮೇತ ಮಾಡಿದ ಅವನ ನಾಮಸ್ಮರಣೆಯಿಂದಲೇ ಅಲ್ಲವೆ ?
  
  ೨. ರಾಜಸೂಯ ಯಾಗ ಮಾಡಿದ ಧಮ೯ರಾಜರು ಪಡೆದ ಪುಣ್ಯಕ್ಕಿಂತಲೂ, ಅದನ್ನು ಮಾಡಲು ಪ್ರತಿಬಂಧಕವಾಗಿದ್ದ ಜರಾಸಂಧನ ವಧೆ ಮಾಡಿದ ಭೀಮಸೇನ ದೇವರಿಗೆ ದೊಡ್ಡದಾದ ಬ್ರಹ್ಮಪದವಿಯು ದೊರೆತದ್ದು ಹೇಗೆ. ಧಮ೯ರಾಜರು ಮಾಡಿದ ಧಮಾ೯ಚರಣೆಯು ಭಗವಂತನ ಪ್ರೀತ್ಯಥ೯ವಾಗಿ ಮಾಡಿದ ಕಮ೯ವಲ್ಲವೆ ?

  Vishnudasa Nagendracharya

  1. ಈಗಾಗಲೇ ಉಪನ್ಯಾಸಗಳಲ್ಲಿ ಉತ್ತರಿಸಿದ್ದೇನೆ. ಹಿಂದಿನದು ಮುಂದಿನದಕ್ಕೆ ಕಾರಣ, ಮುಂದಿನದು ಅದರ ಮುಂದಿನದಕ್ಕೆ. 
  
  ಈಗ ಉದಾಹರಣೆ ಸಮೇತ ನೀಡುತ್ತೇನೆ. 
  
  ತಂದೆ ತಾಯಿಯರು, ಗುರುಗಳು ಮುಂತಾದವರು ಹೇಳಿಕೊಡುತ್ತಾರೆ. ಏನು ಮಾಡಿದರೂ ದೇವರ ಪ್ರೀತಿಗಾಗಿ ಮಾಡಬೇಕು ಎಂದು. ಅಷ್ಟು ತಿಳಿದು ಮಾಡುತ್ತೇವೆ. ಶ್ರೀಕೃಷ್ಣಾರ್ಪಣಮಸ್ತು ಎನ್ನುತ್ತಿರುತ್ತೇವೆ. ಅದರಿಂದ ಪ್ರೀತನಾದ ದೇವರು ಉತ್ತಮ ತೀರ್ಥ ಕ್ಷೇತ್ರಗಳನ್ನು ಸೇವಿಸುವ ಅನುಗ್ರಹ ಮಾಡುತ್ತಾನೆ. ಅದರಿಂದ ಮುಂದೆ ಕಾಯೇನ ವಾಚಾ ಎಂಬ ಶ್ಲೋಕವನ್ನು ಹೇಳಿ ಅರ್ಥಾನುಸಂಧಾನಪೂರ್ವಕವಾಗಿ ಶ್ರೀಕೃಷ್ಣಾರ್ಪಣಮಸ್ತು ಎನ್ನುತ್ತೇವೆ. ಅದರಿಂದ ಮಹಜ್ಜನರ ಸಂಪರ್ಕ. ಆ ನಂತರ ಕರ್ಮದ ಆರಂಭ ಅಂತ್ಯಗಳಲ್ಲಿ ಸದಾ ಹರಿಸ್ಮರಣೆಯೊಂದಿಗೆ ಹೆಚ್ಚಿನ ಭಕ್ತಿಯಿಂದ. ಆ ನಂತರ ಭಾಗವತಾದಿಕಥಾಶ್ರವಣ. ಆ ನಂತರ ಇನ್ನೂ ಹೆಚ್ಚಿನ ಜ್ಞಾನ ಭಕ್ತಿಗಳಿಂದ. ಹೀಗೆ ಬೆಳೆಯುತ್ತ ಸಮಗ್ರ ಜೀವದ ಜ್ಞಾನ ಭಕ್ತಿ ವೈರಾಗ್ಯಗಳಿಂದ ಸಮರ್ಪಿಸುತ್ತೇವೆ. ಪೂರ್ಣ ಫಲ ಪಡೆಯುತ್ತೇವೆ. ಏನೂ ತಿಳಿಯದ ವಯಸ್ಸಿನಲ್ಲಿ ತಂದೆ ತಾಯಿಯರು ಹೇಳಿದ್ದೂ ಭಾಗವತವೇ. ಆ ನಂತರ ಮಹಜ್ಜನರು ಹೇಳಿದ್ದೂ ಭಾಗವತವೇ. ಆ ನಂತರ ನಾವು ಅಧ್ಯಯನ ರೂಪದಲ್ಲಿ ಮಾಡಿದೆವು. ಆ ನಂತರ ಮನನ ಧ್ಯಾನಗಳ ರೂಪದಲ್ಲಿ. ಹೀಗೆ ಪ್ರತಿಯೊಂದು ಬೆಳೆಯುತ್ತದೆ. ಬೆಳದು ನಮ್ಮನ್ನೂ ಬೆಳೆಸುತ್ತದೆ. ಎತ್ತರಕ್ಕೆ ಕೊಂಡೊಯ್ಯುತ್ತದೆ. 
  
  ೨. ಜರಾಸಂಧನ ವಧೆಯಾಗದಿದ್ದರೆ ರಾಜಸೂಯವೇ ಆಗುತ್ತಿರಲಿಲ್ಲ. ಹೀಗಾಗಿ ಜರಾಸಂಧನ ವಧೆಯಿಂದ ರಾಜಸೂಯದ ಪೂರ್ಣ ಫಲವನ್ನು ಭೀಮಸೇನದೇವರು ಪಡೆದರು. ಯಾವ ಕಾರ್ಯದಲ್ಲಿ ಯಾವುದು ಪ್ರಧಾನವೋ ಅದನ್ನು ಯಾರು ಮಾಡುತ್ತಾರೆಯೋ ಅವರಿಗೆ ಅದರ ಪೂರ್ಣ ಫಲ ದೊರೆಯುತ್ತದೆ. 
  
  ಬೇರೆಯ ಸಂದರ್ಭಗಳಲ್ಲಿ ರಾಜಸೂಯದ ಯಜ್ಞಭಾಗವೇ ಪ್ರಧಾನ. ಆದರೆ ಇಲ್ಲಿ ಜರಾಸಂಧನ ವಧೆಯೇ ಪ್ರಧಾನ. ಕಾರಣ ಅವನನ್ನು ಕೊಂದಿರಲಿಲ್ಲವಾಗಿದ್ದಲ್ಲಿ ಯಜ್ಞ ನಡೆಯುತ್ತಲೇ ಇರಲಿಲ್ಲ. ಹೀಗಾಗಿ ಆ ಪ್ರಧಾನ ಭಾಗವನ್ನು ಮಾಡಿದ್ದರಿಂದ ಭೀಮಸೇನ ದೇವರಿಗೆ ಪೂರ್ಣವಾದ ಫಲ ದೊರೆಯಿತು. ಮತ್ತು, ರಾಜಸೂಯದ ಪೂರ್ಣ ಫಲವನ್ನು ಪಡೆಯುವ ಅರ್ಹತೆ ಅವರಲ್ಲಿದ್ದದ್ದೂ ಸಹ ಪ್ರಧಾನ ಕಾರಣ. 
 • Shantha.raghothamachar,Bangalore

  11:00 AM, 11/11/2017

  ನಮಸ್ಕಾರ ಗಳು
 • Mrs laxmi laxman padaki,Pune

  10:24 AM, 11/11/2017

  👏👏👏👏👏
 • P.R.SUBBA RAO,BANGALORE

  10:06 AM, 11/11/2017

  ಶ್ರೀ ಗುರುಭ್ಯೋನಮಃ
  SB061 - ಧರ್ಮಾರ್ಥ ಕಾಮಗಳ ನಿಜವಾದ/ ಸರಿಯಾದ ಉದ್ದೇಶ/ಕ್ರಮ ವನ್ನು ಮನ ಮುಟ್ಟುವ ಹಾಗೆ ತಿಳಿಸಿದ ಸಮಸ್ತ ಗುರುವೃಂದಕ್ಕೆ
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ