Upanyasa - VNU563

ಶ್ರೀಮದ್ ಭಾಗವತಮ್ — 65 — ಸಾತ್ವಿಕ ರಾಜಸ ತಾಮಸ ಕಾಮಕ್ರೋಧಾದಿಗಳು

ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯ ಎಂಬ ಆರು ಗುಣಗಳೂ ಹೌದು, ದೋಷಗಳೂ ಹೌದು. ಅವು ಕೇವಲ ಅರಿಷಡ್ವರ್ಗವಲ್ಲ, ಮಿತ್ರಷಡ್ವರ್ಗವೂ ಹೌದು. ಹರಿಗುರುಸೇವೆಯಿಂದ ದೊರೆತ ದೇವರ ಭಕ್ತಿ ನಮ್ಮಲ್ಲಿರುವ ರಾಜಸ-ತಾಮಸ ಷಡ್ವರ್ಗಗಳನ್ನು ನಾಶ ಮಾಡುತ್ತದೆ. ಶ್ರೀ ವಾದಿರಾಜಗುರುಸಾರ್ವಭೌಮರು ರುಗ್ಮಿಣೀಶವಿಜಯದಲ್ಲಿ ನಿರ್ಣಯಿಸಿದ ಕ್ರಮದಲ್ಲಿ ಇಲ್ಲಿ ಮೂರೂ ತರಹದ ಗುಣಗಳ ವಿಶ್ಲೇಷಣೆಯಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಶ್ಲೋಕ — 

तदा रजस्तमोभावाः कामलोभादयश्च ये ।
चेत एतैरनाविद्धं स्थितं सत्त्वे प्रसीदति ॥ २० ॥

ತದಾ ರಜಸ್ತಮೋಭಾವಾಃ
ಕಾಮಲೋಭಾದಯಶ್ಚ ಯೇ । 
ಚೇತ ಏತೈರನಾವಿದ್ಧಂ
ಸ್ಥಿತಂ ಸತ್ತ್ವೇ ಪ್ರಸೀದತಿ ।।  ೨೦।।

Play Time: 47:19

Size: 1.88 MB


Download Upanyasa Share to facebook View Comments
3901 Views

Comments

(You can only view comments here. If you want to write a comment please download the app.)
 • Sowmya,Bangalore

  8:20 PM , 06/07/2022

  🙏🙏🙏
 • Sowmya,Bangalore

  8:20 PM , 06/07/2022

  🙏🙏🙏
 • Ashok kulkarni,Banglore

  6:08 PM , 17/11/2017

  ಆಚಾರ್ಯರೇ  ಪ್ರಣಾಮಗಳು , 
  ನಿಮ್ಮ ಸುಮಾಧ್ವವಿಜಯ ಮತ್ತು ಈಗಿನ ಶ್ರೀಮದ್ಭಾಗವತ ನಮ್ಮ ಸ್ನೇಹಿತರಿಂದ mp3 ಹಾಕಿಕೊಂಡು ಕೇಳುತ್ತಿದ್ದೇನೆ . ನಿಜಕ್ಕೂ ನಿಮ್ಮಲ್ಲಿ ಅದು ಯಾವುದೋ ದೊಡ್ಡ ಶಕ್ತಿ ಅಡಗಿದೆ , ಅದಕ್ಕೆ ಅಷ್ಟು ಜ್ನ್ಯಾನ ಇದೆ. 
  ನನ್ನದೊಂದು ಪ್ರಶ್ನೆ ಇದೆ , ತಪ್ಪು ತಿಳಿಯಬೇಡಿ.  ದಯವಿಟ್ಟು ಉತ್ತರಿಸಬೇಕಾಗಿ ವಿನಂತಿ  : 
  1. ನಮ್ಮ.  31104  ಕೋಟಿ ವರ್ಷ  ಬ್ರಹ್ಮದೇವರುಗೆ 1 ವರ್ಷ ಅಂತ ಹೇಳಿದ್ರಿ.  ಹಾಗೆ ಬ್ರಹ್ಮದೇವರ 200 ವರ್ಷವಾದರೂ  ವಿಷ್ಣುದೇವರ 1 ನಿಮೇಷಕ್ಕೂ ಸಮ ಅಲ್ಲ ಅಂದ್ರಿ.
  ಒಟ್ಟಾರೆ ಅರ್ಧ ನಿಮೇಷ ಹಿಡಿದರು , ಹೀಗೆ ಹೀಗೇ ಸಾಗಿ  ಒಂದಲ್ಲ ಒಂದು ದಿನ ವಿಷ್ಣುದೇವರ 100 ವರ್ಷ ಆದಮೇಲೆ , ಮುಂದೆ ಏನು. ? 
  
  2. ಈ ಪ್ರಪಂಚದಲ್ಲಿ ಅಸ್ತಿತ್ವಕ್ಕೆ ಇದ್ದು ಹುಟ್ಟಿಲ್ಲದ ವಸ್ತು ಯಾವದು ? ಅದು ಹೇಗೆ ನಂಬೋದು ?  ಆ ಭಗವಂತ ಇದ್ದಾನೆ ಅಂದ ಮೇಲೆ ಹುಟ್ಟಿರಬೇಕು ಅಲ್ವಾ . 
  ಭಗವಂತ , ಈ ಜೀವರು ಅನಾದಿ ಇಂದ ಅನಂತದವರೆಗೂ ಇರುತ್ತಾರೆ ಅಂದ್ರಿ. ಭಗವಂತನಿಗೆ ಆ ಶಕ್ತಿ , ಆನಂದ ಹೇಗೆ ಬಂತು. ? (ಸ್ವರೂಪತಹ ಇದೆ ಅಂದ್ರೆ ಮೂಲ ಬೇಕು ಅಲ್ವಾ ) . 
   ಅನಾದಿ ಅಂದ್ರು ಒಂದು  starting ಬೇಕಲ್ವಾ. ಅನಾದಿ ಅಂದು ಬಿಟ್ರೆ ಹೇಗೆ ? , ಪ್ರಪಂಚದ ನಿಗೂಢವು ಆಧ್ಯಾತ್ಮವೂ ಉತ್ತರಿಸಲಿಕ್ಕೆ ಆಗಲಿಲ್ಲ ಅನಿಸುತ್ತಿದೆ. 
  ಒಟ್ಟಿನಲ್ಲಿ   ವಿಜ್ನ್ಯಾನಕ್ಕೂ  , ಮತ್ತು ಆಧ್ಯಾತ್ಮಕ್ಕೂ ಭಗವಂತ , ಈ ಪ್ರಕೃತಿ , universe ಇವೆಲ್ಲದರ ಹುಟ್ಟಿನ ಬಗ್ಗೆ ಮಾಹಿತಿ ಇಲ್ಲ ಅನಿಸುತ್ತಿದೆ.

  Vishnudasa Nagendracharya

  1. ಮೊದಲಿಗೆ ದೇವರ ಆಯುಷ್ಯ ನೂರುವರ್ಷವಲ್ಲ. ದೇವರಿಗೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಬ್ರಹ್ಮದೇವರ ನೂರು ವರ್ಷದ ಆಯುಷ್ಯ ದೇವರ ಲೆಕ್ಕದಲ್ಲಿ ನಿಮೇಷವೂ ಅಲ್ಲ ಎನ್ನುವದು ದೇವರ ಅಗಾಧತೆಯನ್ನು ಸೂಚಿಸುತ್ತದೆಯೇ ಹೊರತು ದೇವರ ಆಯುಷ್ಯ ಅದರಿಂದ ನಿರ್ಣಯವಾಗುವದಿಲ್ಲ. ಕಾರಣ, ಮೊದಲು ಕೊನೆ ಎನ್ನುವದಿಲ್ಲ. 
  
  2. ಹುಟ್ಟಿಲ್ಲದ ವಸ್ತು ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆ ಕಾಲ. ಇಂತಹ ಕಾಲದಲ್ಲಿ ಕಾಲ ಇರಲಿಲ್ಲ ಎಂದು ಹೇಳಲು ಸಾಧ್ಯವೇ? ಕಾರಣ ಯಾವ ಕಾಲದಲ್ಲಿ ಕಾಲ ಇರಲಿಲ್ಲ ಎಂದು ಹೇಳಬೇಕಾದರೆ ಕಾಲ ಇರಲೇಬೇಕಲ್ಲವೇ? 
  
  ಮತ್ತು ಚೇತನ ಎನ್ನುವ ವಸ್ತು ಹುಟ್ಟಲು ಸಾಧ್ಯವಿಲ್ಲ. ಕಾರಣ, ಚೇತನ ಹುಟ್ಟಬೇಕಾದರೆ ಮತ್ತೊಂದು ಚೇತನ ಇರಲೇಬೇಕು. ಅಚೇತನದಿಂದ ಚೇತನ ಹುಟ್ಟಲು ಸಾಧ್ಯವಿಲ್ಲ. ಚೇತನವೂ ಹುಟ್ಟುತ್ತದೆ ಎಂದರೆ (ನಮ್ಮ ದೇಹಕ್ಕೆ ಹುಟ್ಟಿದೆ, ಚೇತನಕ್ಕಿಲ್ಲ, ನಾವಿಲ್ಲಿ ಚೇತನದ ಕುರಿತು ಮಾತನಾಡುತ್ತಿದ್ದೇವೆ) ಆ ಚೇತನಕ್ಕೆ ಕಾರಣವಾದ ಮತ್ತೊಂದು ಚೇತನ ಇರಲೇಬೇಕು. ಅದರ ಹುಟ್ಟು ಹೇಗೆ. ಅದಕ್ಕೆ ಮತ್ತೊಂದು ಚೇತನ ಎಂದರೆ ಆ ಚೇತನದ ಹುಟ್ಟು ಹೇಗೆ. ಹೀಗೆ ಅದು ಕೊನೆಗೊಳ್ಳುವದೇ ಇಲ್ಲ. ಹೀಗಾಗಿ ಚೇತನ ಎನ್ನವ ವಸ್ತುವಿಗೆ ಹುಟ್ಟಿರಲು ಸಾಧ್ಯವೇ ಇಲ್ಲ. ಹೀಗೆ, ಪ್ರಕೃತಿ ಎಂಬ ಜಡವಸ್ತುವಿಗೂ ಹುಟ್ಟಿರಲು ಸಾಧ್ಯವಿಲ್ಲ. ಕಾರಣ, ಅಚೇತನ ಹುಟ್ಟಿದರೂ ಅಚೇತನದಿಂದಲೇ ಹುಟ್ಟಬೇಕು. ಚೇತನದಿಂದ ಅಚೇತನ ಹುಟ್ಟಲು ಸಾಧ್ಯವಿಲ್ಲ. ಆದ್ದರಿಂದ, ಎಲ್ಲ ಚೇತನರು, ಎಲ್ಲ ಅಚೇತನಕ್ಕೆ ಮೂಲಭೂತವಾದ ಪ್ರಕೃತಿ, ಕಾಲ, (ಅವ್ಯಾಕೃತಾಕಾಶ ಮತ್ತು ವೇದಗಳು) ಈ ಎಲ್ಲವನ್ನೂ ನಿಯಮಿಸುವ ಚೇತನೋತ್ತಮನಾದ ಶ್ರೀಹರಿ ಇವರೆಲ್ಲರನ್ನೂ ಅನಾದಿ ಎಂದು ಒಪ್ಪಲೇಬೇಕು. ಒಪ್ಪುವ ಅನಿವಾರ್ಯತೆಯಿದೆ. 
 • P N Deshpande,Bangalore

  9:13 AM , 17/11/2017

  S.Namaskargalu Kamakroadhadigalu nashwaagi bhakkti vraddhiyaaguwantea anugrhisabeaku
 • Jayateertha B,Davanagere

  5:11 PM , 16/11/2017

  Guruvaryare,
  
  The way you are explaining Bhagavat is extraordinary. 
  
  Till date we had heard only stories, now we are listening to every shlokas of Bhagavat.
  
  This series of pathas is going to be the most precious thing of this century. 
  
  All I can say about you is, you are born with a mission. 
  
  We are grateful to you forever for introducing Madhwa Shastra to common man like me. 
  
  These two months of my life is most auspicious. 
  
  Sashtanga pranamagalu.
 • Shantha.raghothamachar,Bangalore

  12:34 PM, 16/11/2017

  ನಮಸ್ಕಾರ ಗಳು
 • Mrs laxmi laxman padaki,Pune

  12:28 PM, 16/11/2017

  👏👏👏👏👏
 • Mrs laxmi laxman padaki,Pune

  12:28 PM, 16/11/2017

  👏👏👏👏👏
 • G A,Nadiger

  9:14 AM , 16/11/2017

  Wonderful analysis. Namonnamah.
 • Veena Rao,Bengaluru

  9:11 AM , 16/11/2017

  🙏🙏🙏🙏🙏🙏
 • Niranjan Kamath,Koteshwar

  8:35 AM , 16/11/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರನಾರವಿಂದಗಳಿಗೆ ನಮೋ ನಮಃ. ಮಂಗಲ ಪ್ರದವಾಗಿತ್ತು. ಕಾಮ ಕ್ರೋಧ ಲೋಭ ಮೋಹ ಗಳು ನಮ್ಮಿಂದ ದೂರವಾಗಿ ಭಗವಂತನಲ್ಲಿ ಭಕ್ತಿ ಮೂಡಿ ಸದಾ ಒಳ್ಳೆಯದು ನಡೆಯಲಿ. ನಮ್ಮ ದುರ್ಬುದ್ಧಿ ದೂರವಾಗಲಿ. ಭಗವಂತನಲ್ಲಿ ಪರಮ ನಿಷ್ಠೆ ಬರುವಂತಗಲಿ ಎಂದು ಬೇಡುತ್ತೆನೆ. ಧನ್ಯೋಸ್ಮಿ.