Upanyasa - VNU566

ಶ್ರೀಮದ್ ಭಾಗವತಮ್ — 67 — ಭಕ್ತಿ ಅಭಿವ್ಯಕ್ತವಾಗಲು ಏನು ಮಾಡಬೇಕು

ಇಂತಹ ಬಟ್ಟೆಯನ್ನೇ ಏಕೆ ಹಾಕಬೇಕು, ಇಂತಹುದನ್ನು ಏಕೆ ತಿನ್ನಬಾರದು ಎಂದು ಇವತ್ತಿನ ಜನ ಕೇಳುವ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರೇ ಸಾಕ್ಷಾತ್ತಾಗಿ ನೀಡಿದ ಉತ್ತರ ಇಲ್ಲಿದೆ. 

ಶ್ರೇಯಸ್ಸನ್ನು ನಿಶ್ಚಿತವಾಗಿ ನೀಡುವ ಸಾಧನ ಭಕ್ತಿ. ಭಕ್ತಿ ಎಂದಿಗೂ ದುಷ್ಫಲ ನೀಡುವದಿಲ್ಲ, ವಿಫಲವಾಗುವದಿಲ್ಲ ಎನ್ನುವದನ್ನು ಹಿಂದೆ ನಿರೂಪಿಸಿದ ಸೂತಾಚಾರ್ಯರು, ಆ ಭಕ್ತಿ ನಮ್ಮಲ್ಲಿ ಹೇಗೆ ಬೆಳೆಯಲು ಸಾಧ್ಯ ಎನ್ನುವ ಮಹತ್ತ್ವದ ಪ್ರಶ್ನೆಗೆ ಉತ್ತರ ನೀಡುತ್ತಾರೆ. 

ಸಾಧನೆ ಮಾಡಲು ನಮ್ಮೊಡನೆ ಇರಬೇಕಾದ ಮೂಲಭೂತವಾದ ವಸ್ತುವಿನ ಕುರಿತ ರಹಸ್ಯತತ್ವವನ್ನು ಭಾಗವತ ನಮಗಿಲ್ಲಿ ತಿಳಿಸುತ್ತದೆ. 

ಮದುವೆಯ ಮಹತ್ತ್ವ. ಆಹಾರದ ಮಹತ್ತ್ವಗಳನ್ನು ಭಗವದ್ಗೀತೆಯ ಹದಿನೇಳು ಮತ್ತು ಹದಿನೆಂಟನೆಯ ಅಧ್ಯಾಯಗಳ ವಚನಗಳಿಂದ ಇಲ್ಲಿ ನಿರೂಪಿಸಲಾಗಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

सत्त्वं रजस्तम इति प्रकृतेर्गुणाः
तैर्युक्तः परः पुरुष एक इहास्य धत्ते ।
स्थित्यादये हरिविरिञ्चहरेति सञ्ज्ञाः 
श्रेयांसि तत्र खलु सत्त्वतनौ नृणां स्युः ॥ २४ ॥

ಸತ್ತ್ವಂ ರಜಸ್ತಮ ಇತಿ ಪ್ರಕೃತೇರ್ಗುಣಾಃ
ತೈರ್ಯುಕ್ತಃ ಪರಃ ಪುರುಷ ಏಕ ಇಹಾಸ್ಯ ಧತ್ತೇ।
ಸ್ಥಿತ್ಯಾದಯೇ ಹರಿವಿರಿಂಚಹರೇತಿ ಸಂಜ್ಞಾಃ
ಶ್ರೇಯಾಂಸಿ ತತ್ರ ಖಲು ಸತ್ತ್ವತನೌ ನೃಣಾಂ ಸ್ಯುಃ ।। २४ ।।

ಶ್ರೀಮದ್ ಭಾಗವತತಾತ್ಪರ್ಯದ ವಚನಗಳು — 


विष्णोरेव त्रिसञ्ज्ञाः। वामनपुराणे च —

“ब्रह्मविष्ण्वीशरूपाणि त्रीणि विष्णोर्महात्मनः।
ब्रह्मणि ब्रह्मरूपः स शिवरूपी शिवे स्थितः।
पृथगेव स्थितो देवो विष्णुरूपो जनार्दनः” इति।

त्रयोऽपि गुणा विष्ण्वाश्रयाः। तथाऽपि सत्वतनौ जीवे श्रेयांसि स्युः ॥

ವಿಷ್ಣೋರೇವ ತ್ರಿಸಂಜ್ಞಾಃ । ವಾಮನಪುರಾಣೇ ಚ — 

“ಬ್ರಹ್ಮವಿಷ್ಣ್ವೀಶರೂಪಾಣಿ
ತ್ರೀಣಿ ವಿಷ್ಣೋರ್ಮಹಾತ್ಮನಃ । 
ಬ್ರಹ್ಮಣಿ ಬ್ರಹ್ಮರೂಪಃ ಸ 
ಶಿವರೂಪೀ ಶಿವೇ ಸ್ಥಿತಃ ।
ಪೃಥಗೇವ ಸ್ಥಿತೋ ದೇವೋ
ವಿಷ್ಣುರೂಪೋ ಜನಾರ್ದನಃ” ಇತಿ ।

ತ್ರಯೋಪಿ ಗುಣಾ ವಿಷ್ಣ್ವಾಶ್ರಯಾಃ । ತಥಾsಪಿ ಸತ್ತ್ವತನೌ ಜೀವೇ ಶ್ರೇಯಾಂಸಿ ಸ್ಯುಃ ।
Play Time: 47:02

Size: 7.60 MB


Download Upanyasa Share to facebook View Comments
5946 Views

Comments

(You can only view comments here. If you want to write a comment please download the app.)
 • Sowmya,Bangalore

  12:01 PM, 12/07/2022

  🙏🙏🙏
 • Latha Ramesh,Coimbatore

  9:14 AM , 23/01/2018

  🙏🙏
 • Aprameya,Bangalore

  12:02 PM, 21/01/2018

  Sri Gurubhyo Namaha. Namaskara Gurugale. Nandu ondu prashne ittu. Kshatriyaru avara Dharma acharane prakara Tamo gunada ahara sevene madabahudu. Idrinda avaralli Bhakti hechu hege agatte (Rajaru, Chakravarthigalu). Idru bagge swalpa vistara vagi tilisi anta vinanti. Tappiddalli kshamisi. -Aprameya
 • P.R.SUBBA RAO,BANGALORE

  8:37 PM , 25/11/2017

  ಶ್ರೀ ಗುರುಭ್ಯೋನಮಃ
  SB067 - ಮುಖ್ಯ ವಿಷಯದ ಜೊತೆಗೆ ಸಾಮಾಜಿಕ, ವೈವಾಹಿಕ, ವೈಯುಕ್ತಿಕ ಜೀವನದ ಬಗ್ಗೆ ಅತ್ಯಂತ ಉಪಯುಕ್ತವಾದ, ಪವಿತ್ರವಾದ ವಿಚಾರಗಳೂ ತಿಳಿಯಿತು. ಈ ವಿಚಾರಗಳು ಬಹಳ ಬಹಳ ಮೊದಲು ತಿಳಿದಿರಬೇಕಾಗಿತ್ತು. ನಾವು ಲೌಕಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟು, ನಿಜವಾಗಿ ತಿಳಿದಿರಬೇಕಾದ, ಸರಿಯಾದ ಜೀವನ ಕ್ರಮವನ್ನೇ ತಿಳಿದಿಲ್ಲ. ದುರಂತವೆಂದರೆ ನಮಗೆ ಏನು ಗೊತ್ತಿಲ್ಲ ಎನ್ನುವುದೇ ಗೊತ್ತಿಲ್ಲ/ಗೊತ್ತಿರಲಿಲ್ಲ. ಈಗಲಾದರೂ ತಿದ್ದಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು, ಕಷ್ಟವಿದೆ. ಜೀವನದ ಕ್ರಮ ಸರಿಯಿದ್ದರೆ ಸಾತ್ವಿಕ ಗುಣದ ಅಭಿವೃದ್ಧಿಯಿಂದ ಭಕ್ತಿ ಅಭಿವೃದ್ಧಿ. ದೇವರು ಗುರುಗಳ ಅನುಗ್ರಹ ಬೇಕು.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • Jayashree Karunakar,Bangalore

  9:36 AM , 21/11/2017

  ಗುರುಗಳೆ
  ಹಾಗಾದರೆ ನೀರು, ಹಣ, ಭೂಮಿ ಇವುಗಳೂ ಜಡ, ಇದಕ್ಕೊ ಅದೇ ನಿಯಮ ಅನ್ವಯವಾಗುತ್ತದೆಯೆ ?

  Vishnudasa Nagendracharya

  ಹೌದು. ಸಮಸ್ತ ಜಡ ಪದಾರ್ಥಗಳ ನಿರ್ಮಾಣಕ್ಕೂ ಅವನ್ನು ಅನುಭವಿಸುವ ಜೀವರ ಕರ್ಮಗಳೇ ಕಾರಣ. ಚೇತನರಿಗಾಗಿಯೇ ಜಡ ಪದಾರ್ಥಗಳ ನಿರ್ಮಾಣ. ಬೇರೆ ಉದ್ದೇಶವಿಲ್ಲ. 
 • Jayashree Karunakar,Bangalore

  4:31 PM , 20/11/2017

  ಗುರುಗಳೆ
  
  ೧. ಸ್ಥೂಲವಾದ ಸತ್ವ ರಜೋ ತಮೋ ಗುಣ ಮತ್ತು ಸೂಕ್ಷ್ಮವಾದವುಗಳಿಗೆ ಎನು ವೆತ್ಯಾಸ ? ಎರಡೂ ಕಣ್ಣಿಗೆ ಕಾಣುವುದಿಲ್ಲವಲ್ಲ ?
  
  ೨. ನಾವು ಸತ್ವಗುಣಗಳನ್ನು ಯಾವ ರೀತಿಯಾಗಿ ಬೆಳೆಸಿಕೊಂಡು ಭಕ್ತಿಮಾಡಲು, ನಮ್ಮನ್ನು ನಾವು ಯೋಗ್ಯವನ್ನಾಗಿಸಿಕೊಳ್ಳಬೇಕೆಂದು ತಿಳಿಸಿದಿರಿ.ಇಲ್ಲಿ ನಮ್ಮ ಪ್ರಯತ್ನವಿದೆ , ಆದರೆ  ತಾವು ಪುಸ್ತಕದ ಉದಾಹರಣೆ ಕೊಡುಸಂಧಭ೯ದಲ್ಲಿ ಹೇಳಿದಿರಿ "ಒಂದು ಹಾಳೆಯಲ್ಲಿ ಸತ್ವಗುಣ ಅಧಿಕವಾಗಿರಿವುದರಿಂದ ಅದರಲ್ಲಿ ಭಾಗವತ ಮುದ್ರಣವಾಗಿದೆ" ಎಂದು ಜಡವಸ್ತುವಿನ ಪ್ರಯತ್ನವೆ ಇಲ್ಲದೆ ಅದರಲ್ಲಿ ಆ ಗುಣ ಬಂದದ್ದು ಹೇಗೆ ?

  Vishnudasa Nagendracharya

  1. ಗುಣತ್ರಯಗಳಲ್ಲಿ ಸ್ಥೂಲ ಸೂಕ್ಷ್ಮ ವಿಭಾಗ ಕಣ್ಣಿಗೆ ಕಾಣಿಸುವಿಕೆ ಮತ್ತು ಕಾಣಿಸದಿರುವಿಕೆಯಿಂದ ನಿರ್ಧಾರವಾಗುವದಲ್ಲ. ಅವುಗಳ ಕಾರ್ಯದಿಂದ. 
  
  ತನಗೆ ಒಳಿತಾಗಬೇಕು ಎಂದು ಮತ್ತೊಬ್ಬರಿಗೆ ಕೇಡುಂಟು ಮಾಡಿಸುವ ತಮೋಗುಣ ಸ್ಥೂಲ. ದೇವರನ್ನು, ಶಾಸ್ತ್ರವನ್ನು ದ್ವೇಷ ಮಾಡಿಸುವ ತಮೋಗುಣ ಸೂಕ್ಷ್ಮ. ಹೀಗೆಲ್ಲ ವಿವರಗಳಿವೆ. ಮುಂದೆ ಭಾಗವತದಲ್ಲಿಯೇ ಇದರ ನಿರೂಪಣೆ ವಿಸ್ತಾರವಾಗಿ ಬರುತ್ತದೆ. 
  
  2. ಜಡವಸ್ತುಗಳಲ್ಲಿ ಜ್ಞಾನ, ಇಚ್ಛಾ ಪ್ರಯತ್ನ ಮೂರೂ ಇರುವದಿಲ್ಲ. ಜೀವರಿಗಾಗಿ ಜಡದ ಸೃಷ್ಟಿ. ಹೀಗಾಗಿ ಒಂದು ಜಡದಲ್ಲಿ ಯಾವ ಗುಣ ಅಧಿಕವಾಗಿರಬೇಕು ಎನ್ನುವದು ಆ ಜಡವಸ್ತುವನ್ನು ಉಪಯೋಗಿಸುವ/ಅದರ ಪರಿಣಾಮವನ್ನು ಹೊಂದುವ ಜೀವರ ಕರ್ಮಗಳ ಮೇಲೆ ಅಧಿಕವಾಗಿರುತ್ತದೆ. 
 • [email protected] S,Bangalore

  6:21 PM , 19/11/2017

  Acharyare, are ganagalu( deva, manushya and rakshasa) derived from satva, rajas and tamo gunas?

  Vishnudasa Nagendracharya

  ಜ್ಯೋತಿಃಶಾಸ್ತ್ರದಲ್ಲಿ ನಕ್ಷತ್ರದ ಆಧಾರದ ಮೇಲೆ ದೇವ-ರಾಕ್ಷಸ-ಮನುಷ್ಯ ಎಂದು ಗಣಗಳನ್ನು ವಿಭಾಗಿಸಲಾಗಿದೆ. ಇದೂ ಸಹ ಸತ್ವ-ರಜಸ್-ತಮೋಗುಣಗಳ ಆಧಾರದ ಮೇಲೆಯೇ ವಿಭಾಗ. ಆದರೆ, ಇದು ಶಾಶ್ವತವಲ್ಲ. ಗುರು ದೇವತೆಗಳ ಅನುಗ್ರಹದಿಂದ ರಜೋಗುಣದ ಮತ್ತು ತಮೋಗುಣದ ಪ್ರಭಾವವನ್ನು ಮೀರಬಹುದು ಮತ್ತು ಸತ್ತ್ವಗುಣದ ಪ್ರಭಾವವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು. 
 • ಜ್ಯೋತಿ ಪ್ರಕಾಶ್ ಲಕ್ಷ್ಮಣ ರಾವ್,ಧರ್ಮಪುರಿ

  6:50 PM , 18/11/2017

  ಗುರುಗಳಿಗೆ ಅನಂತಾನಂತ ನಮಸ್ಕಾರಗಳು.
 • Ashok Prabhanjana,Bangalore

  2:30 PM , 18/11/2017

  ಗುರುಗಳೇ, ಮೂಲ ಪ್ರಕ್ರುತಿಯಲ್ಲಿ ಇರುವುದು ಕೇವಲ ಸತ್ವ ಬಿಂದುಗಳ ರಾಶಿ ಮತ್ತು ತಮೋ ಬಿಂದುಗಳ ರಾಶಿ ಎಂದು ಮತ್ತು ಆ ಸತ್ವ ತಮೋ ಬಿಂದುಗಳ ರಾಶಿಯಿಂದ ಸತ್ವ ರಜೋ ತಮೋ ಗುಣಗಳ ಸ್ರುಷ್ಟಿಯನ್ನು ಭಗವಂತ ಮಾಡುತಾನೆ ಎಂದು ಕೇಳಿದ್ದೆನೆ. ಮೂಲ ಪ್ರಕ್ರುತಿಯಲ್ಲಿ ರಜೋ ಬಿಂದುಗಳ ರಾಶಿ ಎಂಬುದು ಇಲ್ಲಾ ಎಂದು, ಅದು ನಿಜವೇ? ಇದರ ಸ್ಪಷ್ಟ ವಿವರಗಳನ್ನು ನೀಡ ಬೇಕೆಂದು ಹ್ರುದ್ಪೂರ್ವಕವಾಗಿ ತಮ್ಮಲ್ಲಿ ಬೇಡಿಕೊತೇನೆ

  Vishnudasa Nagendracharya

  ಪ್ರಳಯಕಾಲದಲ್ಲಿ ಸತ್ವ, ರಜಸ್, ತಮಸ್, ಈ ಮೂರೂ ಗುಣಗಳು ಸೂಕ್ಷ್ಮಾವಸ್ಥೆಯಲ್ಲಿರುತ್ತವೆ. ಸೃಷ್ಟಿಕಾಲದಲ್ಲಿ ಭಗವಂತ ಅದನ್ನು ಸ್ಥೂಲವಾಗಿ ನಿರ್ಮಾಣ ಮಾಡುತ್ತಾನೆ. 
  
  ಭಾಗವತದ ಎರಡನೆಯ ಮತ್ತು ಮೂರನೆಯ ಸ್ಕಂಧಗಳಲ್ಲಿ ಇದರ ವಿಸ್ತೃತ ವಿವರಣೆ ಬರುತ್ತದೆ. 
  
  ಮೂಲಪ್ರಕೃತಿಯಲ್ಲಿ ರಜೋಗುಣದ ಅಂಶ ಇದ್ದೇ ಇದೆ. 
 • P N Deshpande,Bangalore

  4:34 PM , 18/11/2017

  S.Namaskargalu.This is a fantastic one. The best of all whole lot. You have explained the reality of reachng to the parmbhakkti & attaining the final goal of our birth in the SriMadand thirthara matadlli huttiddakkea sarthyakkya. It is best explanation.Dhanywaadgalu
 • Mrs laxmi laxman padaki,Pune

  2:21 PM , 18/11/2017

  👏👏👏👏👏
 • Shantha.raghothamachar,Bangalore

  12:24 PM, 18/11/2017

  ನಮಸ್ಕಾರಗಳು
 • Niranjan Kamath,Koteshwar

  8:15 AM , 18/11/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣರವಿಂದ ಗಳಿಗೆ ನಮೋ ನಮಃ. ಭಕ್ತಿ ಮೂಡಲು ಬೇಕಾಗುವ ಹಾಗೂ ನಮ್ಮಿಂದ ಆಚರಿಸಲ್ಪಡುವ ಕರ್ಮಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದೀರಿ. ಹಾಗೆ ನಮ್ಮಿಂದ ಸತ್ಕರ್ಮಗಳು ನಡೆಸುವಂತೆ ಶ್ರೀ ವೇದವ್ಯಾಸ ದೇವರಿಂದ ಆಜ್ಞಾ ಪೂರಕ ಶ್ರೀಮದ್ ಭಾಗವತದ ಮೂಲಕ ಪ್ರಚೋದನೆ ಆಗಲಿ ಎಂದು ಪ್ರಾರ್ಥಿಸುತೇನೆ.

  Vishnudasa Nagendracharya

  ಶ್ರೀಮದ್ಭಾಗವತಕಥಾಶ್ರವಣ ಮಾಡುತ್ತಿರುವ ಸಮಸ್ತ ಸಜ್ಜನರಿಗೂ ಶ್ರೀಹರಿ ನಿರ್ಮಲವಾದ ಭಕ್ತಿ, ಪ್ರಾಮಾಣಿಕವಾದ ವೈರಾಗ್ಯ ಮತ್ತು ಪರಿಶುದ್ಧವಾದ ಜ್ಞಾನವನ್ನು ಕರುಣಿಸಲಿ.