Upanyasa - VNU568

ಶ್ರೀಮದ್ ಭಾಗವತಮ್ — 68 — ಸತ್ವಗುಣವೇ ಏಕೆ ಉತ್ತಮ

ಹೆಣವನ್ನು ಸುಡುವದು ವಾತಾವರಣಕ್ಕೆ ವಿರೋಧಿ ಎನ್ನುವ ಇತ್ತೀಚಿನವರ ವಾದಕ್ಕೆ ಐದು ಸಾವಿರ ವರ್ಷಗಳ ಹಿಂದೆಯೇ ಶ್ರೀ ವೇದವ್ಯಾಸದೇವರು ಭಾಗವತದಲ್ಲಿ ನೀಡಿದ ಉತ್ತರದ ವಿವರಣೆ ಇಲ್ಲಿದೆ. 

ಒಂದು ಪುಸ್ತಕದಲ್ಲಿ ಭಾಗವತಾದಿ ಗ್ರಂಥಗಳು ಮುದ್ರಣವಾಗುತ್ತವೆ. ಮತ್ತೊಂದು ಪುಸ್ತಕದಲ್ಲಿ ಲೌಕಿಕದ ವಿಷಯಗಳು. ಮತ್ತೊಂದು ಪುಸ್ತಕದಲ್ಲಿ ಸಮಾಜಘಾತಕವಾದ, ಮನುಷ್ಯನನ್ನು ಅಧಃಪಾತಕ್ಕಿಳಿಸುವ ವಿಷಯಗಳು. ಎಲ್ಲ ಪುಸ್ತಕಗಳ ಹಾಳೆಯೂ ಮರದಿಂದಲೇ ಮಾಡಲ್ಪಟ್ಟಿದ್ದು. ಹೀಗೇಕೆ. ಜಡವಸ್ತುವಿಗಂತೂ ಪುಣ್ಯಪಾಪವಿಲ್ಲ. ಅಂದಮೇಲೆ ಈ ವ್ಯತ್ಯಾಸ ಏಕೆ ಎಂಬ ಪ್ರಶ್ನೆಗೂ ಭಾಗವತ ಇಲ್ಲಿ ಉತ್ತರ ನೀಡಿದೆ. ನೀವೂ ಕೇಳಿ. ನಿಮ್ಮ ಮಕ್ಕಳಿಗೂ ತಪ್ಪದೇ ಕೇಳಿಸಿ. 

ಸತ್ವಗುಣ, ರಜೋಗುಣ, ತಮೋಗುಣ ಮೂರೂಗುಣಗಳು ದೇವರಿಂದಲೇ ಸೃಷ್ಟಿಯಾದದ್ದು. ಅದರಲ್ಲಿ ಸತ್ವಗುಣ ಮಾತ್ರ ಏಕೆ ಶ್ರೇಷ್ಠ ಎನ್ನುವ ಪ್ರಶ್ನೆಗೆ ಭಾಗವತ ದಿವ್ಯವಾದ ಉತ್ತರವನ್ನು — ಸತ್ವಗುಣದಿಂದಲೇ ದೇವರ ಸಾಕ್ಷಾತ್ಕಾರ ಎಂಬ ಉತ್ತರವನ್ನು — ನೀಡುತ್ತದೆ. ಆ ನಂತರ ಜಗತ್ತಿನ ಎಲ್ಲವೂ ಸಾತ್ವಿಕ, ರಾಜಸ, ತಾಮಸ ಎಂಬ ವಿಭಾಗದಲ್ಲಿ ಸೇರಿದೆ ಎಂದು ಪ್ರತಿಪಾದಿಸುತ್ತ, ದೇವರ ಪೂಜೆಯಲ್ಲಿಯೂ ಈ ವಿಭಾಗವಿದೆ ಎಂದು ಭಾಗವತ ಪ್ರತಿಪಾದಿಸುತ್ತದೆ. ಯಾವ ರೀತಿ ನಮ್ಮಿಂದ ಭಗವದಾರಾಧನೆ ನಡೆಯಬೇಕು ಎನ್ನುವದದನ್ನು ಅರ್ಥ ಮಾಡಿಸುವ ಭಾಗ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

पार्थिवाद् दारुणो धूमस्तस्मादग्निस्त्रयीमयः
तमसस्तु रजस्तस्मात् सत्त्वं यद् ब्रह्मदर्शनम् 	 ॥ २५ ॥


भेजिरे मुनयोऽथाग्रे भगवन्तमधोक्षजम्
सत्त्वं विशुद्धं क्षेमाय कल्पते नेतराविह ॥ २६ ॥

मुमुक्षवो घोररूपान् हित्वा भूतपतीनथ ।
नारायणकलाः शान्ता भजन्ति ह्यनसूयवः 	॥ २७ ॥

रजस्तमःप्रकृतयः समशीलान् भजन्ति वै
पितृभूतप्रजेशादीन् श्रियैश्वर्यप्रजेप्सवः ॥ २८ ॥

ಪಾರ್ಥಿವಾದ್ದಾರುಣೋ ಧೂಮಸ್ತಸ್ಮಾದಗ್ನಿಸ್ತ್ರಯೀಮಯಃ।
ತಮಸಸ್ತು ರಜಸ್ತಸ್ಮಾತ್ಸತ್ತ್ವಂ ಯದ್ಬ್ರಹ್ಮದರ್ಶನಮ್ ॥25॥

ಭೇಜಿರೇ ಮುನಯೋಽಥಾಗ್ರೇ ಭಗವಂತಮಧೋಕ್ಷಜಮ್।
ಸತ್ತ್ವಂ ವಿಶುದ್ಧಂ ಕ್ಷೇಮಾಯ ಕಲ್ಪಂತೇ ನೇತರಾವಿಹ ॥26॥

ಮುಮುಕ್ಷವೋ ಘೋರರೂಪಾನ್ ಹಿತ್ವಾ ಭೂತಪತೀನಥ।
ನಾರಾಯಣಕಲಾಃ ಶಾಂತಾ ಭಜಂತಿ ಹ್ಯನಸೂಯವಃ ॥27॥

ರಜಸ್ತಮಃಪ್ರಕೃತಯಃ ಸಮಶೀಲಾನ್ ಭಜಂತಿ ವೈ।
ಪಿತೃಭೂತಪ್ರಜೇಶಾದೀನ್ ಶ್ರಿಯೈಶ್ವರ್ಯಪ್ರಜೇಪ್ಸವಃ ॥28॥

ಶ್ರೀಮದ್ ಭಾಗವತತಾತ್ಪರ್ಯದ ವಚನಗಳು — 

मेघरूपत्वाद् धूम उत्तमः ।
सात्त्विकानां वासुदेवे भक्तिरुत्पद्यते ।
भूतेशप्रजेशादीन् ॥

ಮೇಘರೂಪತ್ವಾದ್ ಧೂಮ ಉತ್ತಮಃ ।

ಸಾತ್ವಿಕಾನಾಂ ವಾಸುದೇವೇ ಭಕ್ತಿರುತ್ಪದ್ಯತೇ ।

ಭೂತೇಶಪ್ರಜೇಶಾದೀನ್ ।

Play Time: 57:53

Size: 7.60 MB


Download Upanyasa Share to facebook View Comments
4697 Views

Comments

(You can only view comments here. If you want to write a comment please download the app.)
 • Sowmya,Bangalore

  10:59 AM, 13/07/2022

  🙏🙏🙏
 • Mudigal Prakash,Bangaluru

  1:19 PM , 04/12/2017

  ತಮ್ಮ ಈ ಪರಮ ಮಂಗಳಯುಕ್ತವಾದ ಸತ್ವಗುಣ ಉಪನ್ಯಾಸವು ನಮ್ಮ ಮನದೊಳಗೆ ಸದಾಕಾಲ ನಿಂತು ಹರ್ಯನುಗ್ರಹಕ್ಕೆ ಪಾತ್ರರನ್ನಾಗುವಂತೆ ಮಾಡಿಸಿದ ತಮಗೆ ಅತ್ಯಂತ ಋಣಿಗಳು ನಾವು.
 • P N Deshpande,Bangalore

  12:41 PM, 20/11/2017

  S.Namaskargalu Anugrahvirili
 • Niranjan Kamath,Koteshwar

  9:03 AM , 20/11/2017

  ಶ್ರಿ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣರವಿಂದ ಗಳಿಗೆ ನಮೋ ನಮಃ. ಸಕಲವು ಭಗವಂತನಿಗೆ ಸಂಪ್ರೀತವಾಗಿ , ಭಾಗವತ್ ಪ್ರೇರಣೆಯಿಂದಲೇ ಆಗುವಂತಹುದು...ಎಂದು ತಿಳಿಸಿಕೊಟ್ಟ ಈ ಮಾಲಿಕೆ ಅತ್ಯಂತ ಮಧುರ ಹಾಗೂ ನಮ್ಮಿಂದ ನಡೆಯಬೇಕಾದ ಮೂಲ ಧರ್ಮ. ಇದು ನಡೆಯುವಂತೆ ಶ್ರೀ ಮಧ್ವಅಂತರ್ಗತ ಶ್ರೀ ವೇದವ್ಯಾಸ ದೇವರ ಅನುಗ್ರಹವಾಗಲಿ ಎಂದು ಪ್ರಾರ್ಥಿಸುತೇನೆ.
 • M S Jagadish,Bangalore

  7:56 AM , 20/11/2017

  Thathparyada vachanagalannu Kannada Dali kodabahuduantha
 • Shantha.raghothamachar,Bangalore

  6:23 AM , 20/11/2017

  ನಮೋನಮಃ