Upanyasa - VNU573

ಶರಣಾಗತಿಯ ಮಾಹಾತ್ಮ್ಯ

25/11/2017

ಮಾಡಿದ ದುಷ್ಕರ್ಮಕ್ಕೆ ದುಷ್ಫಲ ತಪ್ಪಿದ್ದಲ್ಲ, ಬಂದೇ ಬರುತ್ತದೆ ಎಂದಾದ ಬಳಿಕ ದೇವರಿಗೆ ಶರಣಾಗಿ ಉಪಯೋಗವೇನು ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಕರ್ಣನ ದೃಷ್ಟಾಂತದ ಮೂಲಕ ನೀಡಿದ ದಿವ್ಯವಾದ ಉತ್ತರದ ವಿವರಣೆ ಇಲ್ಲಿದೆ. 

Play Time: 22:21

Size: 6.91 MB


Download Upanyasa Share to facebook View Comments
3427 Views

Comments

(You can only view comments here. If you want to write a comment please download the app.)
 • H. Suvarna kulkarni,Bangalore

  10:28 AM, 21/12/2017

  ಗುರುಗಳಿಗೆ ಪ್ರಣಾಮಗಳು ಅದ್ಬುತವಾದ ವಿಶ್ಲೇಷಣೆ ಮತ್ತು ವಿವರಣೆ ನಾವು ಭಗವಂತನ ಚರಣಗಳಿಗೆ ಎರಗಬೇಕು ಎನ್ನುವ ತತ್ವವನ್ನು ಮನವರಿಕೆ ಮಾಡಿಸಿದಿರಿ ಧನ್ಯವಾದಗಳು
 • Chandresh,Mumbai

  1:55 AM , 16/12/2017

  Guruji namaskaragalu nemage danyavadagalu
 • Jayashree Karunakar,Bangalore

  7:18 PM , 26/11/2017

  ಗುರುಗಳೆ
  
  ಶ್ರೀಕೃಷ್ಣಪರಮಾತ್ಮನು, ಕಣ೯ನಿಗೆ ಧುಯೊ೯ಧನನ  ಪಕ್ಷವನ್ನು ತೊರೆದು ಪಾಂಡವರ ಪಕ್ಷಕ್ಕೆ ಬಾ ಅಂತ ಕರೆದಾಗ ಬಂದಿದ್ದರೆ ಅವನ ತಪ್ಪನ್ನೆಲ್ಲ ಮನ್ನಿಸಿ ಅವನನ್ನು ಪಾಂಡವ ಪಕ್ಷದ ಜೇಷ್ಟನನ್ನಾಗಿ ಮಾಡುತಿದ್ದ ಭಗವಂತ ಎಂದಿರಿ.
  
  ಆದರೆ ಮನುಷ್ಯನಾದ ಕಣ೯ನಿಗೆ ಭಗವಂತನ ಉದ್ದೇಶ ಅಥ೯ವಾಗುವುದಾದರೂ ಹೇಗೆ ? ಕಣ೯ನಿಗೆ ತನ್ನನ್ನು ಕರೆಯುತ್ತಿರುವುದು ಭಗವಂತನೆ ಅನ್ನುವ ಜ್ಞಾನವನ್ನು ಭಗವಂತ ಕೊಟ್ಟಿದ್ದನೇ ? ಭಗವಂತ ಜ್ಞಾನವನ್ನು ನೀಡದೆ ಸುಮ್ಮನೆ ಪಾಂಡವರ ಪಕ್ಷಕ್ಕೆ ಬಾ ಅಂತಕರೆದರೆ ಕಣ೯ನಿಗೆ ಹೇಗೆ ಗೊತ್ತಾಗುತ್ತದೆ ?
  
  ಅದರ ಬದಲು ಭಗವಂತನು ಕಣ೯ನ ಮನಸ್ಸನ್ನೇ ಬದಲಿಸ ಬಹುದಿತ್ತಲ್ಲವೆ ? 
  
  "ಧುಯೊ೯ಧನನ ಪಕ್ಷ ಅಧ೯ಮದ ಪಕ್ಷ, ಹಾಗಾಗಿ ನಾನು ಭಗವಂತನ ಕಾಲಿಗೆ ಎರಗಿ ಪಾಂಡವರ ಪಕ್ಷಕ್ಕೆ ಹೋದರೆ ಭಗವಂತ ನನ್ನ ಹಿಂದಿನ ಜನ್ಮದಲ್ಲಿ ನನ್ನ ಅಣ್ಣನನ್ನು ಕೊಂದ ಪಾಪದ ಜೋತೆಗೆ ಈಗ ಮಾಡಿದ ಪಾಪವನ್ನೂ ಭಗವಂತ ಮನ್ನಿಸುತ್ತಾನೆ" ಅನ್ನುವ ಜ್ಞಾನವನ್ನೇ ಕಣ೯ನಿಗೆ ಭಗವಂತ ನೀಡಬಹುದಿತ್ತಲ್ಲವೆ ? ಹೀಗೆ ಜ್ಞಾನವನ್ನು ಕೊಟ್ಟು ಕರೆದಿದ್ದರೆ ಕಣ೯ ಅವಶ್ಯವಾಗಿ ಹೋಗುತಿದ್ದ ಅಲ್ಲವೆ ?
  
  ಹಾಗಾದರೆ ಇಲ್ಲಿ ಭಗವಂತನ ಉದ್ದೇಶವೇನು ? ಕಣ೯ನು ತಾನು ಮಾಡಿದ ಕಮ೯ದ ಫಲವನ್ನು ಅನುಭವಿಸಲಿ ನಂತರವೇ ಅವನನ್ನು ಉದ್ಧರಿಸುವುದು ಎಂದೆ ?. ಹಾಗಾದರೆ ಕರೆದದ್ದು ಯಾಕೆ ?

  Vishnudasa Nagendracharya

  ಈಗಾಗಲೇ ಹತ್ತಾರು ಬಾರಿ ಬೇರೆ ಬೇರೆ ಉಪನ್ಯಾಸಗಳಲ್ಲಿ ಉತ್ತರಿಸಲ್ಪಟ್ಟ ಪ್ರಶ್ನೆಯಿದು. 
  
  ದೇವರೇಕೆ ನಮಗೆ ನೇರವಾಗಿ ಉಪದೇಶಿಸುವದಿಲ್ಲ ಎಂಬ ಉಪನ್ಯಾಸದಲ್ಲಿಯೂ ಉತ್ತರವಿದೆ. ಕೇಳಿ. 
 • Ashok Prabhanjana,Bangalore

  11:27 AM, 26/11/2017

  ಗುರುಗಳೇ, ಭಗವಂತನ ಪಾದಗಳಿಗೆ ಎರಗಿ ನಾವು ಶರಣಾಗತರಾದರೆ ಗೋಹತ್ಯಾ, ಬ್ರಹ್ಮಹತ್ಯಾದಿ ಉದೇಶಪೂವಕವಾಗಿ ಮಾಡಿರುವ ಮಹಾಪಾಪಗಳನ್ನು ಕ್ಷಮಿಸಿ ಆ ಮಹಾಪಾಪಗಳನ್ನು ನಾಶ ಮಾಡುತಾನೆಯೇ? ದಯವಿಟ್ಟು ತಿಳಿಸಿ ಕೊಡಿ

  Vishnudasa Nagendracharya

  ಬುದ್ಧಿಪೂರ್ವಕವಾಗಿ ಮಾಡಿರುವ ಪಾಪಗಳನ್ನು ಕಳೆದುಕೊಳ್ಳಲು ಪ್ರಾಯಶ್ಚಿತ್ತಪುರಸ್ಸರವಾಗಿಯೇ ದೇವರ ಕಾಲಿಗೆರಗಬೇಕು. ಇಲ್ಲದಿದ್ದರೆ ನಾಶವಾಗುವದಿಲ್ಲ. 
  
  ತುಂಬ ವಿರಳವಾದ ಪ್ರಸಂಗಗಳಲ್ಲಿ ಮಾತ್ರ ಪ್ರಾಯಶ್ಚಿತ್ತವಿಲ್ಲದಾಗಲೂ ಸಹ ಬುದ್ಧಿಪೂರ್ವಕಪಾಪಗಳು ನಾಶವಾಗಿವೆ. ಅದಕ್ಕೂ ಕಾರಣ ಮಹತ್ತರವಾದ ಭಕ್ತಿ. ಪಾಪ ಮಾಡಿದವರ ಮೇಲೆ ಅನುಗ್ರಹ ಮಾಡಿದ ಮಹಾನುಭಾವರ ಸಾಮರ್ಥ್ಯ.