Upanyasa - VNU574

ಶ್ರೀಮದ್ ಭಾಗವತಮ್ — 70 — ನಮ್ಮ ನೈವೇದ್ಯ ದೇವರು ಸ್ವೀಕರಿಸುತ್ತಾನೆಯೇ?

ನಾವು ದೇವರಿಗೆ ನೈವೇದ್ಯ ಮಾಡುತ್ತೇವೆ. ಅದನ್ನು ದೇವರು ಸ್ವೀಕರಿಸುತ್ತಾನೆಯೋ ಇಲ್ಲವೋ?

ಸ್ವೀಕರಿಸುವದಿಲ್ಲ ಎಂದಾದಲ್ಲಿ, ನಾವೇಕೆ ನೈವೇದ್ಯ ಮಾಡಬೇಕು ಮತ್ತು ನೈವೇದ್ಯ ಮಾಡಿದ್ದು ಪ್ರಸಾದ ಎಂದು ಹೇಗಾಗಲು ಸಾಧ್ಯ? 

ಸ್ವೀಕರಿಸುತ್ತಾನೆ ಎಂದರೆ, ಈ ಪ್ರಾಕೃತ ಪದಾರ್ಥಗಳನ್ನು ದೇವರು ಉಣ್ಣುತ್ತಾನೆ ಎಂದಾಯಿತು. ಅಂದ ಮೇಲೆ ಅದರಿಂದ ಸುಖ ದುಃಖಗಳಿವೆ ಎಂದಾಯಿತು. ದುಃಖವಿಲ್ಲ ಕೇವಲ ಸುಖವಿದೆ ಎಂದರೂ, ದೇವರಿಗೆ ಇದರಿಂದ ಸುಖ ‘ಉಂಟಾಯಿತು’ ಹೊಸದಾಗಿ ಉತ್ಪನ್ನವಾಯಿತು ಎಂದಾಯಿತು. ಅಂದರೆ ದೇವರಿಗೂ ನಮ್ಮಂತೆ ಹೊಸದಾಗಿ ಸುಖ ನಿರ್ಮಾಣವಾಗುತ್ತದೆ ಎಂದಾಯಿತು. ದೇವರಲ್ಲಿ ಹೊಸದಾಗಿ ಸುಖ ಬಂದರೆ ಅವನು ವಸ್ತು, ವಾಸ್ತವ ಹೇಗಾದ? ಅವನು ಅನಾದಿಕಾಲದಿಂದಲೂ ಒಂದೇ ರೀತಿಯಲ್ಲಿ ಇರುವವನಲ್ಲವೇ ? 

ದೇವರು ಎಲ್ಲವನ್ನೂ ಅನುಭವಿಸುತ್ತಾನೆಯೇ ಎನ್ನುವದು ಮತ್ತೊಂದು ಪ್ರಶ್ನೆ. ಇಲ್ಲ ಎಂದಾದರೆ ದೇವರಿಗೆ ದುಃಖ, ನೋವು, ದುಷ್ಟಪದಾರ್ಥಗಳ ಜ್ಞಾನವಿಲ್ಲ ಎಂದಾಯಿತು. ಮತ್ತು “ಭುಂಕ್ತೇ ವಿಶ್ವಭುಕ್” ಎಂಬ ಮಾತು ಸುಳ್ಳಾಗುತ್ತದೆ. ಎಲ್ಲವನ್ನೂ ಅನುಭವಿಸುತ್ತಾನೆ ಎಂದಾದರೆ, ದೇವರಿಗೂ ದುಃಖ, ದುರ್ಗಂಧ, ದುಷ್ಟಪದಾರ್ಥಗಳಿಂದ ತೊಂದರೆಯಾಗಬೇಕಲ್ಲವೇ? 

ಎಂಬ ಪ್ರಶ್ನೆಗಳಿಗೆ ಉತ್ತರ ಇಂದಿನ ಶ್ರೀಮದ್ ಭಾಗವತದ ಉಪನ್ಯಾಸದಲ್ಲಿದೆ. 

ಅದರ ಜೊತೆಯಲ್ಲಿ ಸಂಸಾರದಲ್ಲಿರುವ ನಾವು ತಿನ್ನದೇ, ಕುಡಿಯದೇ, ಪದಾರ್ಥಗಳನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಈ ಪದಾರ್ಥಗಳ ಅನುಭವವೇ ನಮ್ಮನ್ನು ಮತ್ತೆ ಸಂಸಾರದಲ್ಲಿ ಬೀಳುವಂತೆ ಮಾಡುವದು. ಹಾಗಾದರೆ ಇದರಿಂದ ಉದ್ಧಾರವಾಗುವ ಬಗೆಯೆಂತು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಉಪದೇಶಿಸಿದ ಪರಮಮಂಗಲವಾದ ರಹಸ್ಯ ತತ್ವದ ವಿವರಣೆಯೂ ಇಂದಿನ ಭಾಗವತದ ಉಪನ್ಯಾಸದಲ್ಲಿದೆ. 

ಶ್ರೀ ಕವೀಂದ್ರತೀರ್ಥಶ್ರೀಪಾದಂಗಳವರ ಪರಂಪರೆಯ ಭೂಷಾಮಣಿಗಳಾದ ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರು ತಮ್ಮ ಭಾವರತ್ನಕೋಶ ಎಂಬ ಗ್ರಂಥದಲ್ಲಿ ಅತ್ಯಂತ ವಿಸ್ತೃತವಾಗಿ ಈ ತತ್ವವನ್ನು ಚರ್ಚಿಸಿ ಭಗವತ್ಪಾದರ ಅಭಿಪ್ರಾಯವನ್ನು ನಮಗೆ ನಿರ್ಣಯಿಸಿ ತಿಳಿಸಿದ್ದಾರೆ. ಅದರಲ್ಲಿನ ಒಂದು ಭಾಗದ ಅನುವಾದ ಇಂದಿನ ಉಪನ್ಯಾಸ. 

ನೈವೇದ್ಯ ಮಾಡಬೇಕಾದರೆ ನಮಗಿರಲೇಬೇಕಾದ ಅನುಸಂಧಾನಗಳ ವಿವರಣೆ ಇಲ್ಲಿದೆ. 

ಇಂದಿನ ಉಪನ್ಯಾಸದಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

असौ गुणमयैर्भावैर्भूतसूक्ष्मेन्द्रियादिभिः
स्वनिर्मितेषु निर्विष्टो भुङ्क्ते भूतेषु तद्गुणान् 			॥ ३४॥

ಅಸೌ ಗುಣಮಯೈರ್ಭಾವೈಃ 
ಭೂತಸೂಕ್ಷ್ಮೇಂದ್ರಿಯಾದಿಭಿಃ। 
ಸ್ವನಿರ್ಮಿತೇಷು ನಿರ್ವಿಷ್ಟೋ
ಭುಂಕ್ತೇ ಭೂತೇಷು ತದ್ಗುಣಾನ್ ।।
ಶ್ರೀಮದ್ ಭಾಗವತತಾತ್ಪರ್ಯ — 

तद्गुणानेव भुङ्क्ते न दोषान्।
“सर्वत्र सारभुग् देवो नासारं स कदाचन” इति वामनपुराणे।
“अनश्नन्” इत्यशुभापेक्षया परवशत्वापेक्षया क्लृप्त्यपेक्षया च।
“अक्लृप्त्या च स्वतन्त्रत्वादशुभस्य च वर्जनात्।
अभोक्ता शुभभोक्तृत्वाद् भोक्तेत्येव च तं विदुः।
अन्यूनानधिकत्वाच्च पूर्णस्वानन्दभोजनात्।
विरागाच्च परस्यास्य भोक्तृत्वप्रतिषेधनम्” इति स्कान्दे ॥34॥

ತದ್ಗುಣಾನೇವ ಭುಂಕ್ತೇ, ನ ದೋಷಾನ್ । 
 
“ಸರ್ವತ್ರ ಸಾರಭುಗ್ ದೇವೋ 
ನಾಸಾರಂ ಸ ಕದಾಚನ” ಇತಿ ವಾಮನಪುರಾಣೆ। 

ಅನಶ್ನನ್ನಿತಿ ಇತ್ಯಶುಭಾಪೇಕ್ಷಯಾ, ಪರವಶತ್ವಾಪೇಕ್ಷಯಾ, ಪರವಶತ್ವಾಪೇಕ್ಷಯಾ, ಕ್ಲಪ್ತ್ಯಪೇಕ್ಷಯಾ ಚ। 

“ಅಕ್ಲೃಪ್ತ್ಯಾ ಚ ಸ್ವತಂತ್ರತ್ವಾತ್
ಅಶುಭಸ್ಯ ಚ ವರ್ಜನಾತ್
ಅಭೋಕ್ತಾ ಶುಭಭೋಕ್ತೃತ್ವಾತ್
ಭೋಕ್ತೇತ್ಯೇವ ತಂ ವಿದುಃ

ಅನ್ಯೂನಾಧಿಕತ್ವಾಚ್ಚ
ಪೂರ್ಣಸ್ವಾನಂದಭೋಜನಾತ್
ವಿರಾಗಾಚ್ಚ ಪರಸ್ಯಾಸ್ಯ
ಭೋಕ್ತೃತ್ವಪ್ರತಿಷೇಧನಮ್” ಇತಿ ಸ್ಕಾಂದೇ ।
Play Time: 60:00

Size: 7.60 MB


Download Upanyasa Share to facebook View Comments
5857 Views

Comments

(You can only view comments here. If you want to write a comment please download the app.)
 • Sowmya,Bangalore

  11:10 AM, 15/07/2022

  🙏🙏🙏
 • Shreesha Vitthala,Bangalore

  12:28 AM, 13/11/2020

  ನಮಸ್ಕಾರಗಳು, ಧನ್ಯವಾದಗಳು. 
  
  1. ಮಡಿಯಲ್ಲಿ ಮಾಡಿರುವ ರುಚಿ ಇಲ್ಲದಂಥ/ಅರ್ಧ ಬೆಂದಿರುವ/ಸೀದಿರುವ ಅಡುಗೆಯನ್ನು ಭಕ್ತಿಯಿಂದ ನೈವೇದ್ಯ ಮಾಡಿದರೆ ದೇವರು ತಿನ್ನುತ್ತಾನೆಯೇ
  
  2. ದೇವರು ತತ್ವಾಭಿಮಾನಿ ದೇವತೆಗಳ ಮೂಲಕ ಕೆಲಸ ಮಾಡುವ ಹಾಗೆ ಅವರ ಮೂಲಕವೇ ಪ್ರಾಕೃತ ಅಡುಗೆ ತಿನ್ನುತ್ತಾನೆಯೇ? ಅಂದರೆ ಕೇವಲ ಪದಾರ್ಥಗಳ ರಸಾನುಭವ ಮಾತ್ರ ಪಡೆದು ಪದಾರ್ಥಗಳನ್ನು ದೇವತೆಗಳಿಗೆ ಹಂಚುತ್ತಾನೆಯೇ? ಅವನು ಅಥವಾ ಅವರು ತಿನ್ನುವುದೇ ಆದರೆ ನೈವೇದ್ಯದ ನಂತರ ಅಡುಗೆ ಪ್ರಮಾಣ ಯಾಕೆ ಕಡಿಮೆಯಾಗಲ್ಲ?
 • Shreesha Vitthala,Bangalore

  12:28 AM, 13/11/2020

  ನಮಸ್ಕಾರಗಳು, ಧನ್ಯವಾದಗಳು. 
  
  1. ಮಡಿಯಲ್ಲಿ ಮಾಡಿರುವ ರುಚಿ ಇಲ್ಲದಂಥ/ಅರ್ಧ ಬೆಂದಿರುವ/ಸೀದಿರುವ ಅಡುಗೆಯನ್ನು ಭಕ್ತಿಯಿಂದ ನೈವೇದ್ಯ ಮಾಡಿದರೆ ದೇವರು ತಿನ್ನುತ್ತಾನೆಯೇ
  
  2. ದೇವರು ತತ್ವಾಭಿಮಾನಿ ದೇವತೆಗಳ ಮೂಲಕ ಕೆಲಸ ಮಾಡುವ ಹಾಗೆ ಅವರ ಮೂಲಕವೇ ಪ್ರಾಕೃತ ಅಡುಗೆ ತಿನ್ನುತ್ತಾನೆಯೇ? ಅಂದರೆ ಕೇವಲ ಪದಾರ್ಥಗಳ ರಸಾನುಭವ ಮಾತ್ರ ಪಡೆದು ಪದಾರ್ಥಗಳನ್ನು ದೇವತೆಗಳಿಗೆ ಹಂಚುತ್ತಾನೆಯೇ? ಅವನು ಅಥವಾ ಅವರು ತಿನ್ನುವುದೇ ಆದರೆ ನೈವೇದ್ಯದ ನಂತರ ಅಡುಗೆ ಪ್ರಮಾಣ ಯಾಕೆ ಕಡಿಮೆಯಾಗಲ್ಲ?
 • T venkatesh,Hyderabad

  5:19 PM , 12/11/2020

  "ಭುಂಕ್ತೇ ಭೂತೇಷು ತದ್ಗುಣಾನ್"
 • T venkatesh,Hyderabad

  5:18 PM , 12/11/2020

  "ಭುಂಕ್ತೇ ಭೂತೇಷು ತದ್ಗುಣಾನ್" 👌👌🙏
 • T venkatesh,Hyderabad

  5:18 PM , 12/11/2020

  "ಭುಂಕ್ತೇ ಭೂತೇಷು ತದ್ಗುಣಾನ್" 👌👌🙏
 • Chandrashekhar M. Wadawadgi,Bengaluru

  7:29 PM , 04/05/2020

  ಆಚಾರ್ಯರಿಗೆ, ಕೋಟಿ,ಕೋಟಿ ದಂಡವತ್ ಪ್ರಣಾಮಗಳು. ಕೊಂಡು ತಂದ ತುಳಸಿ , ಹೂಗಳನ್ನು ದೇವರು ಸ್ವೀಕಾರ ಮಾಡುವದಿಲ್ಲವೆಂದರೆ ನಾವು ಬೆಂಗಳೂರಿನಲ್ಲಿ ಕೊಂಡು ತಂದ ತುಳಸಿ ಮತ್ತು ಹೂಗಳನ್ನು ಅರ್ಪಿಸುತ್ತೀವೆ.ಇದಕ್ಕೆ ಏನು ಪರಿಹಾರ.
  

  Vishnudasa Nagendracharya

  ಈಗಾಗಲೇ ಕೆಲವು ಮನೆಗಳಲ್ಲಿ ಅಡಿಗೆ ಮಾಡುವದನ್ನು ಬಿಟ್ಟಿದ್ದಾರೆ. ಈಗಿನ ಬಹುತೇಕ ಹೆಣ್ಣುಮಕ್ಕಳಿಗೆ ಅಡಿಗೆಯೇ ಬರುವದಿಲ್ಲ. ಎಲ್ಲರೂ ಹೋಟೆಲ್ಲುಗಳನ್ನು, Home delivery ಗಳನ್ನು ಅವಲಂಬಿಸಿದ್ದಾರೆ. ಮುಂದೇ ಇದೇ ಎಲ್ಲ ಕಡೆಯೂ ಆಗಿಬಿಡುತ್ತದೆ. ಮನೆಯಲ್ಲಿ ಅಡಿಗೆ ಮಾಡಿಲ್ಲ ಎಂದು ಹೋಟೆಲ್ಲಿನಲ್ಲಿ ಪರಮ ಅಶುದ್ಧವಾಗಿ ಮಾಡಲ್ಪಟ್ಟ ಅನ್ನವನ್ನು ನೈವೇದ್ಯ ಮಾಡಲಾಗುತ್ತದೆಯೇ. 
  
  ಕೊಂಡ, ಹೂ ತುಳಸಿಯನ್ನು ಸಮರ್ಪಿಸಬಾರದು ಎಂದರೆ ಸಮರ್ಪಿಸಬಾರದು. ತುಳಸಿಗಿಡ ಇಲ್ಲದ ಮನೆ ಮನೆಯೇ ಅಲ್ಲ. ಮಹಾ ಪ್ರಯತ್ನಪಟ್ಟು ತುಳಸಿ ಹೂಗಳನ್ನು ಮನೆಯಲ್ಲಿ ಬೆಳೆಸಬೇಕು. 
  
  
 • ಭಾರದ್ವಾಜ,ಬೆಂಗಳೂರು

  2:14 PM , 18/02/2018

  ಶ್ರೀ ಗುರುಭ್ಯೋ ನಮಃ 
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಇಲ್ಲಿ ಶ್ರೀ ಯಾದವಾರ್ಯರು ತಿಳಿಸಿದ ಹಾಗೆ ಭಗವಂತ ಸ್ವತಂತ್ರವಾಗಿ ಭೋಗ ಮಾಡುತ್ತಾನೆ ಹೀಗಾಗಿ ಭೋಕ್ತ ಎಂದಿದ್ದಾರೆ...ಹಾಗೇ ಅವನು ಸ್ವಾತಂತ್ರ್ಯೇಣ ಅಭೋಕ್ತ ಹೇಗೆ ಆಗುತ್ತಾನೆ ಎಂದು ದಯಮಾಡಿ ತಿಳಿಸಿ

  Vishnudasa Nagendracharya

  ಇನ್ನೊಬ್ಬರು ತಿನ್ನಬೇಡ ಎಂದು ಹೇಳಿದ ಬಳಿಕ ದೇವರು ಭೋಗ ಮಾಡದೇ ಇದ್ದಿದ್ದರೆ, 
  
  ಭೋಗಿಸುವ ವಸ್ತುವಿನಿಂದ ತೊಂದರೆ ಉಂಟಾಗುತ್ತದೆ ಎಂದು ದೇವರು ಭೋಗ ಮಾಡದೇ ಇದ್ದಿದ್ದರೆ ಆಗ ದೇವರು ಪರಾಧೀನನಾದ್ದರಿಂದ ಅಭೋಕ್ತಾ ಎನ್ನಬಹುದಿತ್ತು. 
  
  ದೇವರು ತನ್ನ ಸ್ವೇಚ್ಛೆಯಿಂದಲೇ ಯಾವುದನ್ನೂ ತನ್ನ ಪ್ರಯೋಜನಕ್ಕಾಗಿ ಭೋಗಿಸುವದಿಲ್ಲವಾದ್ದರಿಂದ ಅವನ ಅಭೋಕ್ತೃತ್ವವೂ ಸ್ವತಂತ್ರವೇ. 
 • Latha Ramesh,Coimbatore

  10:16 AM, 28/01/2018

  Anantha koti Namaskaragalu nanna Gurugalige
 • P.R.SUBBA RAO,BANGALORE

  11:33 PM, 06/12/2017

  ಶ್ರೀ ಗುರುಭ್ಯೋನಮಃ
  SB070 - ದೇವರ ಭೋಕ್ತ್ರುತ್ವವನ್ನು ಹೇಗೆ ಚಿಂತನೆ ಮಾಡಬೇಕು? ದೇವರ ಈ ಗುಣವನ್ನು ಚಿಂತನೆ ಮಾಡಿದರೆ ನಮಗೆ ಯಾವ ರೀತಿಯ ಗುಣಾಭಿವೃದ್ಧಿಯಾಗುತ್ತದೆ?
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ಉಪನ್ಯಾಸದಲ್ಲಿಯೇ ಈ ವಿಷಯ ನಿರೂಪಿತವಾಗಿದೆ. 
 • prema raghavendra,coimbatore

  6:48 PM , 06/12/2017

  Anantha Namaskara! Danyavada!
 • Mrs laxmi laxman padaki,Pune

  2:03 PM , 01/12/2017

  👏👏👏👏👏
 • mudigal sreenath,bangalore

  1:24 PM , 28/11/2017

  acharyare bhagavatha pravachana moolaka prathidhinavu ondondhu hosavishayagalannu namage thilisutha iddeeri.bahula santhosha vaguthaxe
 • Meera gj,Bangalore

  10:25 AM, 28/11/2017

  👌👌👌👌👌👌👌👌
 • Murali,kakiada

  10:23 PM, 27/11/2017

  V yet
 • Niranjan Kamath,Koteshwar

  1:40 PM , 27/11/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ಥೆ. ಗುರುಗಳ ಚರಣ ಗಳಿಗೆ ವಂದನೆ. ಅಹೋ ಭಾಗ್ಯಮ್...ಶ್ರೀಮದ್ ಭಾಗವತ ಕೇಳಲು ಉತ್ಸುಕರಾಗಿ ಕಾಯುತ್ತಿದ್ದೆವು.ಧನ್ಯೋಸ್ಮಿ. ನೈವೇದ್ಯ ಸ್ವೀಕರಿಸುವ ಪರಿ ಹಾಗೂ ಅರ್ಥವನ್ನು ಕೇಳಿ ಪರಮಾನಂದವಾಯಿತು.
 • P N Deshpande,Bangalore

  10:36 AM, 27/11/2017

  S.Namaskargalu. Rajo tamo gunagalu namminda duurawaagi sattwa dinda SriHari nammannu uddharisali eandu tammalli savinaynadind prathisuttene
 • H. Suvarna kulkarni,Bangalore

  6:47 AM , 27/11/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ಅದ್ಭುತವಾಗಿ ಮೂಡಿ ಬರುತ್ತಿದೆ ಕೇಳುತ್ತಾ ಕೇಳುತ್ತಾ ನಮ್ಮಲ್ಲಿ ಬದಲಾವಣೆ ಯಾಗುತ್ತಿದೆ ಅಂತರ್ಮುಖಿ ಯಾಗುತ್ತದ್ದೇನೆ ಇದುಭಾಗ್ಯ ಇದುಭಾಗ್ಯ ಇದುಭಾಗ್ಯವಯ್ಯ ನಾವು ಪುಣ್ಯ ಮಾಡಿದ್ದೇವೆ ಧನ್ಯವಾದಗಳು

  Vishnudasa Nagendracharya

  ಬಹಳ ಸಂತೋಷ. 
  
  ದೇವರು ಗುರುಗಳು ಇದೇ ರೀತಿಯಲ್ಲಿ ಪೂರ್ಣಾನುಗ್ರಹ ಮಾಡಲಿ.