Upanyasa - VNU578

ಶ್ರೀಮದ್ ಭಾಗವತಮ್ — 74 — ದೇವರ ಅವತಾರಗಳ ವೈಶಿಷ್ಟ್ಯ

ಈ ಉಪನ್ಯಾಸದಲ್ಲಿ ಪ್ರಥಮಸ್ಕಂಧದ ಎರಡನೆಯ ಅಧ್ಯಾಯ ಸಮಾಪ್ತವಾಗಿ, ಮೂರನೆಯ ಅಧ್ಯಾಯದ ಅನುವಾದ ಆರಂಭವಾಗುತ್ತದೆ. 

“ಜಗೃಹೇ ಪೌರುಷಮ್” ಎಂಬ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೇ. ದೇವರು ರೂಪವನ್ನು ಸ್ವೀಕಾರ ಮಾಡುತ್ತಾನೆ ಎಂದಿದೆ. ಅಂದ ಮೇಲೆ ದೇವರಿಗೂ ದೇವರ ಅವತಾರಕ್ಕೂ ಭೇದವಿದೆ ಎಂದಾಯಿತು. ಕಾರಣ ಸ್ವೀಕಾರ ಮಾಡುವವನು, ಸ್ವೀಕರಿಸಲ್ಪಡುವ ವಸ್ತುವಿನಲ್ಲಿ ಭೇದವಿರಬೇಕಲ್ಲವೇ. ಹಾಗೆಯೇ “ಮಹದಾದಿಭಿಃ ಸಂಭೂತಮ್” ಎಂದಿದೆ. ಸಂಭೂತ ಎಂದರೆ ಹುಟ್ಟಿದ್ದು. ದೇವರ ರೂಪ ಮಹತ್ತತ್ವ ಮುಂತಾದ ತತ್ವಗಳಿಂದ ಹುಟ್ಟಿದ್ದು ಎಂದು ಭಾಗವತದಲ್ಲಿಯೇ ಇದೆಯಲ್ಲ ಎಂದು. ದೇವರ ರೂಪಗಳಲ್ಲಿ ಭೇದವಿದೆ ಎಂದು ತಿಳಿದರೆ, ದೇವರಿಗೆ ಪ್ರಾಕೃತರೂಪವಿದೆ ಎಂದು ತಿಳಿದರೆ ತಮಸ್ಸಾಗುತ್ತದೆ ಎಂದು ಕಾಠಕೋಪನಿಷತ್ತು ಹೇಳುತ್ತದೆ. ಹೀಗೆ ಭಾಗವತ ಅರ್ಥವಾಗದೇ ನಿಂತಾಗ, ತಪ್ಪು ದಾರಿಯಲ್ಲಿ ನಡೆಯುವ ಪ್ರಸಂಗ ಬಂದಾಗ ಗೆಳೆಯನಂತೆ ಜೊತೆಯಲ್ಲಿ ಬಂದು ಸರಿದಾರಿಯಲ್ಲಿ ನಡೆಸುವ ನಮ್ಮ ಗೆಳೆಯ ಭಾಗವತತಾತ್ಪರ್ಯದ ರೂಪದಲ್ಲಿರುವ ಶ್ರೀಮದಾಚಾರ್ಯರು. 

ಮೇಲ್ಕಾಣಿಸಿದ ಪ್ರಶ್ನೆಗಳಿಗೆ ಆಚಾರ್ಯರು ತಿಳಿಸಿದ ಶಾಸ್ತ್ರಸಮ್ಮತವಾದ ಉತ್ತರಗಳ ವಿವರಣೆ ಈ ಉಪನ್ಯಾಸದಲ್ಲಿದೆ. ದೇವರು ಅವತಾರ ಮಾಡುವ ರೀತಿ, ಅವತಾರದಲ್ಲಿ ವರ್ತಿಸುವ ರೀತಿಯ ಕುರಿತು ಶ್ರೀಮದಾಚಾರ್ಯರು ತಿಳಿಸಿದ ಅಪೂರ್ವ ಪ್ರಮೇಯಗಳ ಸಂಗ್ರಹದೊಂದಿಗೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

भावयन्नेष सत्त्वेन लोकान् वै लोकभावनः
लीलावतारानुरतो देवतिर्यङ्नरादिषु ॥ ३५ ॥
श्रीमद्भागवते तृतीयोध्यायः

सूत उवाच —
जगृहे पौरुषं रूपं भगवान् महदादिभिः।
सम्भूतं षोडशकलमादौ लोकसिसृक्षया ॥1॥

ಭಾವಯನ್ನೇಷ ಸತ್ವೇನ
ಲೋಕಾನ್ ವೈ ಲೋಕಭಾವನಃ ।
ಲೀಲಾವತಾರಾನುಗತೋ
ದೇವ-ತಿರ್ಯಙ್-ನರಾದಿಷು ।।

ಜಗೃಹೇ ಪೌರುಷಂ ರೂಪಂ 
ಭಗವಾನ್ ಮಹದಾದಿಭಿಃ ।
ಸಂಭೂತಂ ಷೋಡಶಕಲಂ 
ಆದೌ ಲೋಕಸಿಸೃಕ್ಷಯಾ ।।

ಭಾಗವತತಾತ್ಪರ್ಯ — 

व्यक्त्यपेक्षया जगृह इति। तथाहि तन्त्रभागवते — 
“अहेयमनुपादेयं यद् रूपं नित्यमव्ययम्।
स एवापेक्ष्य रूपाणां व्यक्तिमेव जनार्दनः।

अगृह्णाद् व्यसृजच्चेति कृष्णरामादिकां तनुम्।
पठ्यते भगवानीशो मूढबुद्धिव्यपेक्षया॥

तमसा ह्युपगूढस्य यत्तमःपानमीशितुः।
एतत् पुरुषरूपस्य ग्रहणं समुदीर्यते
कृष्णरामादिरूपाणां लोकव्यक्तिमपेक्षया” इति।

ವ್ಯಕ್ತ್ಯಪೇಕ್ಷಯಾ ಜಗೃಹೇ ಇತಿ। ತಥಾಹಿ ತಂತ್ರಭಾಗವತೇ — 
“ಅಹೇಯಮನುಪಾದೇಯಂ
ಯದ್ ರೂಪಂ ನಿತ್ಯಮವ್ಯಯಮ್ ।
ಸ ಏವಾಪೇಕ್ಷ್ಯ ರೂಪಾಣಾಂ 
ವ್ಯಕ್ತಿ ಮೇವ ಜನಾರ್ದನಃ ।।

ಅಗೃಹ್ಣಾದ್ ವ್ಯಸೃಜಚ್ಚೇತಿ 
ಕೃಷ್ಣರಾಮಾದಿಕಂ ತನುಮ್ ।
ಪಠ್ಯತಂ ಭಗವಾನೀಶೋ 
ಮೂಢಬುದ್ಧಿವ್ಯಪೇಕ್ಷಯಾ ।।

ತಮಸಾ ಹ್ಯುಪಗೂಢಸ್ಯ
ಯತ್ ತಮಃಪಾನಮೀಶಿತುಃ ।
ಏತತ್ ಪುರುಷರೂಪಸ್ಯ 
ಗ್ರಹಣಂ ಸಮುದೀರ್ಯತೇ ।
ಕೃಷ್ಣರಾಮಾದಿರೂಪಾಣಾಂ
ಮೂಢಬುದ್ಧಿವ್ಯಪೇಕ್ಷಯಾ” ಇತಿ।Play Time: 45:13

Size: 7.60 MB


Download Upanyasa Share to facebook View Comments
3778 Views

Comments

(You can only view comments here. If you want to write a comment please download the app.)
 • Sowmya,Bangalore

  11:08 AM, 26/07/2022

  🙏🙏🙏
 • Shantha raghottamachar,Bengaluru

  3:22 PM , 01/12/2017

  ನಮಸ್ಕಾರ ಗಳು
 • Jayashree Karunakar,Bangalore

  12:31 PM, 01/12/2017

  ಗುರುಗಳೆ
  
  ೧. ಪುರುಷ ಶಬ್ದದ ಅಥ೯ವೇನು ?
     ಪುಲ್ಲಿಂಗ ವೆಂದೆ ?
  
  ೨. ಭಗವಂತನು ೧೪ ಲೋಕಗಳ ಸೃಷ್ಟಿಯಾಗುವುದಕ್ಕೆ ಮುಂಚೆ, ಪುರಷ ರೂಪವನ್ನು ಸ್ವೀಕಾರಮಾಡಿ, ಕತ್ತಲೆಯನ್ನು ತನ್ನ ಉದರದಲ್ಲಿ ಹಾಕಿಕೊಂಡು, ಅಭಿವ್ಯಕ್ತನಾದ ಎಂದಿರಲ್ಲ, ಅದು ಯಾರಿಗೆ ಅಭಿವ್ಯಕ್ತನಾದದ್ದು ?

  Vishnudasa Nagendracharya

  ಪುರು-ಷ ಎಂದರೆ ಪೂರ್ಣವಾದ ಷಡ್ಗುಣಗಳುಳ್ಳವನ್ನು ಎಂದರ್ಥ. ಐಶ್ವರ್ಯ, ಸಾಮರ್ಥ್ಯ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ ಎಂಬ ಆರುಗುಣಗಳುಳ್ಳವನು ಎಂದರ್ಥ. 
  
  ಮುಂದೆ ತನ್ನ ಪದ್ಮದಲ್ಲಿ ಹುಟ್ಟಿಬರಲಿರುವ ಬ್ರಹ್ಮದೇವರೇ ಮೊದಲಾದ ದೇವತೆಗಳಿಗಾಗಿ ಅಭಿವ್ಯಕ್ತನಾದದ್ದು. 
  
  
 • P N Deshpande,Bangalore

  9:55 AM , 01/12/2017

  S.Namaskargalu. Bhagwantana ella avatarda katheagalu namminda bhakktipirwaka aalisuwantaagali namma ee bhavapashdinda mukktarannagi maadali.
 • P N Deshpande,Bangalore

  9:45 AM , 01/12/2017

  S.Namaskargalu. Bhagwantana ella avataar katheagalu nammannu ee bhavapashdinda mukkta maadi bhakkti abhivraddhiyaagwante anugrahisali