Upanyasa - VNU579

ಶ್ರೀಮದ್ ಭಾಗವತಮ್ — 75 — ದೇವರ ದೇಹ ಪ್ರಾಕೃತವಲ್ಲ

ದೇವರ ಶರೀರವನ್ನು “ಮಹದಾದಿಭಿಃ ಸಂಭೂತಂ” ಎಂದು ಭಾಗವತ ಹೇಳುತ್ತದೆ. ಸಂಭೂತ ಎಂದರೆ ಉತ್ಪನ್ನವಾದದ್ದು. ದೇವರ ಶರೀರ ಅಪ್ರಾಕೃತ ಎಂದಾದಲ್ಲಿ, ಇಲ್ಲಿ ಸಂಭೂತ ಎಂಬ ಶಬ್ದವನ್ನು ಯಾವ ಕಾರಣಕ್ಕೆ ಬಳಸಲಾಗಿದೆ ಎಂಬ ಪ್ರಶ್ನೆಗೆ ಆಚಾರ್ಯರು ಉತ್ತರವನ್ನು ನೀಡುತ್ತ, ದೇವರ ರೂಪಗಳ ಕುರಿತು ತಿಳಿಯಬೇಕಾದ ಅಪೂರ್ವ ಮತ್ತು ರಹಸ್ಯದ ತತ್ವಗಳನ್ನು ಶಾಸ್ತ್ರಗಳ ವಚನಗಳ ಮುಖಾಂತರ ನಮಗೆ ಅರ್ಥ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕ —

ಶ್ರೀಮದ್ಭಾಗವತೇ ತೃತೀಯೋಧ್ಯಾಯಃ

ಸೂತ ಉವಾಚ —

ಜಗೃಹೇ ಪೌರುಷಂ ರೂಪಂ ಭಗವಾನ್ ಮಹದಾದಿಭಿಃ।
ಸಮ್ಭೂತಂ ಷೋಡಶಕಲಮಾದೌ ಲೋಕಸಿಸೃಕ್ಷಯಾ	॥1॥

ಭಾಗವತತಾತ್ಪರ್ಯ — 

“ಯತ್ಕಿಂಚಿದಿಹ ಲೋಕೇಽಸ್ಮಿನ್ ದೇಹಬದ್ಧಂ ವಿಶಾಂ ಪತೇ।
ಸರ್ವಂ ಪಂಚಭಿರಾವಿಷ್ಟಂ ಭೂತೈರೀಶ್ವರಬುದ್ಧಿಜೈಃ।

ಈಶ್ವರೋ ಹಿ ಜಗತ್ಸ್ರಷ್ಟಾ ಪ್ರಭುರ್ನಾರಾಯಣೋ ವಿರಾಟ್।
ಭೂತಾಂತರಾತ್ಮಾ ವಿಜ್ಞೇಯಃ ಸಗುಣೋ ನಿರ್ಗುಣೋಽಪಿ ಚ।
ಭೂತಪ್ರಲಯಮವ್ಯಕ್ತಂ ಶುಶ್ರೂಷುರ್ನೃಪಸತ್ತಮ” ಇತಿ ಮೋಕ್ಷಧರ್ಮೇ।

“ನಾಸೀದಹೋ ನ ರಾತ್ರಿರಾಸೀನ್ನಾಸದಾಸೀತ್ ತನ್ಮಹದ್ವಪುಸ್ತದಾಽಭವದ್ ವಿಶ್ವರೂಪಂ ಸಾ ವಿಶ್ವರೂಪಸ್ಯ ರಜನೀ” ಇತಿ ಭಾಲ್ಲವೇಯಶ್ರುತಿಃ।

“ನ ತಸ್ಯ ಪ್ರಾಕೃತಾ ಮೂರ್ತಿರ್ಮಾಂಸಮೇದೋಽಸ್ಥಿಸಮ್ಭವಾ।
ನ ಯೋಗಿತ್ವಾದೀಶ್ವರತ್ವಾತ್ ಸತ್ಯರೂಪಾಚ್ಯುತೋ ವಿಭುಃ” ಇತಿ ವಾರಾಹೇ।

“ಸರ್ವೇ ನಿತ್ಯಾಃ ಶಾಶ್ವತಾಶ್ಚ ದೇಹಾಸ್ತಸ್ಯ ಪರಾತ್ಮನಃ।
ಪರಮಾನಂದಸಂದೋಹಾ ಜ್ಞಾನಮಾತ್ರಾಶ್ಚ ಸರ್ವತಃ।

ಸರ್ವೇ ಸರ್ವಗುಣೈಃ ಪೂರ್ಣಾಃ ಸರ್ವೇ ಭೇದವಿವರ್ಜಿತಾಃ।
ಅನ್ಯೂನಾನಧಿಕಾಶ್ಚೈವ ಗುಣೈಃ ಸರ್ವೈಶ್ಚ ಸರ್ವತಃ।

ದೇಹಿದೇಹಭಿದಾ ಚಾತ್ರ ನೇಶ್ಚರೇ ವಿದ್ಯತೇ ಕ್ವಚಿತ್।
ತತ್ಸ್ವೀಕಾರಾದಿಶಬ್ದಸ್ತು ಹಸ್ತಸ್ವೀಕಾರವತ್ ಸ್ಮೃತಃ।

ವೈಲಕ್ಷಣ್ಯಾನ್ನ ವಾ ತತ್ರ ಜ್ಞಾನಮಾತ್ರಾರ್ಥಮೀರಿತಮ್।
ಕೇವಲೈಶ್ವರ್ಯಸಂಯೋಗಾದೀಶ್ವರಃ ಪ್ರಕೃತೇಃ ಪರಃ।
ಜಾತೋ ಗತಸ್ತ್ವಿದಂ ರೂಪಂ ತದಿತ್ಯಾದಿ ವಿವಕ್ಷ್ಯತೇ” ಇತಿ ಮಹಾವಾರಾಹೇ।

“ಏಕಮೇವಾದ್ವಿತೀಯಮ್”

“ನೇಹ ನಾನಾಽಸ್ತಿ ಕಿಂಚನ”,

“ಏವಂ ಧರ್ಮಾನ್ ಪೃಥಕ್ ಪಶ್ಯನ್” ಇತ್ಯಾದಿ ಚ।

ತಸ್ಯೈವಾಸ್ಥೂಲತ್ವಾದ್ಯೈಶ್ವರ್ಯಯೋಗಾತ್। 

ತಥಾಚ ಕೌರ್ಮೇ —

“ಅಸ್ಥೂಲಶ್ಚಾನಣುಶ್ಚೈವ ಸ್ಥೂಲೋಽಣುಶ್ಚೈವ ಸರ್ವತಃ।
ಅವರ್ಣಃ ಸರ್ವತಃ ಪ್ರೋಕ್ತಃ ಶ್ಯಾಮೋ ರಕ್ತಾಂತಲೋಚನಃ।

ಐಶ್ವರ್ಯಯೋಗಾದ್ ಭಗವಾನ್ ವಿರುದ್ಧಾರ್ಥೋಽಭಿಧೀಯತೇ।
ತಥಾಽಪಿ ದೋಷಾಃ ಪರಮೇ ನೈವಾಹಾರ್ಯಾಃ ಕಥಂಚನ।
ಗುಣಾ ವಿರುದ್ಧಾ ಅಪಿ ತು ಸಮಾಹಾರ್ಯಾಶ್ಚ ಸರ್ವತಃ” ಇತಿ।

ವಿಷ್ಣುಧರ್ಮೋತ್ತರೇ ಚ —

“ಗುಣಾಃ ಸರ್ವೇಽಪಿ ಯುಜ್ಯಂತೇ ಹ್ಯೈಶ್ವರ್ಯಾತ್ ಪುರುಷೋತ್ತಮೇ।
ದೋಷಾಃ ಕಥಂಚಿನ್ನೈವಾತ್ರ ಯುಜ್ಯಂತೆ ಪರಮೋ ಹಿ ಸಃ।

ಗುಣದೋಷೌ ಮಾಯಯೈವ ಕೇಚಿದಾಹುರಪಂಡಿತಾಃ।
ನ ತತ್ರ ಮಾಯಾ ಮಾಯಾವೀ ತದೀಯೌ ತೌ ಕುತೋ ಹ್ಯತಃ।

ತಸ್ಮಾನ್ನ ಮಾಯಯಾ ಸರ್ವಂ ಸರ್ವಮೈಶ್ವರ್ಯಸಮ್ಭವಮ್।
ಅಮಾಯೋ ಹೀಶ್ವರೋ ಯಸ್ಮಾತ್ ತಸ್ಮಾತ್ ತಂ ಪರಮಂ ವಿದುಃ” ಇತಿ ॥1॥ 

Play Time: 45:08

Size: 7.60 MB


Download Upanyasa Share to facebook View Comments
3643 Views

Comments

(You can only view comments here. If you want to write a comment please download the app.)
 • Sowmya,Bangalore

  11:39 AM, 27/07/2022

  🙏🙏🙏
 • Madhura,Bangalore

  7:36 PM , 07/12/2017

  Dhanyalade bhagavathavu keli anantha namaskaragalu nimage madhura Bangalore
 • P N Deshpande,Bangalore

  10:08 AM, 03/12/2017

  S.Namaskargalu. The way pravachan is being told by you it is so easy & understandable for L Kg students in this line. It is really worth of it please do keep same style of explaining in future too so that all will enjoy & will be enable to reach to their respective hight.Rehards
 • Shantha raghottamachar,Bengaluru

  10:22 PM, 02/12/2017

  ನಮಸ್ಕಾರ ಗಳು
 • Jayashree Karunakar,Bangalore

  6:51 PM , 02/12/2017

  ಗುರುಗಳೆ 
  
  ನಾವು ಶ್ರೀಮದ್ಭಾಗವತದ ಮೊದಲ ಪದ್ಯದಲ್ಲಿ ತಿಳಿದ ಭಗವಂತನ ೮ ಕ್ರಿಯೆಗಳಲ್ಲಿ ನಮಗೆ ತೊರುವ ಭೇಧಗಳು "ಅಭೇಧದಲ್ಲಿರುವ ಕೆಲವು ವಿಶೇಷ" ಗಳಿಂದ ಅಂದಿರಲ್ಲ, ಇದನ್ನು ನಾವು ಶ್ರೀಮದ್ಭಾಗವತದಲ್ಲಿಯೆ ತಿಳಿಯಲು ಸಾಧ್ಯವಿಲ್ಲವೆ ? 
  
  ಶ್ರೀಮದ್ಭಾವತದಲ್ಲಿ ಭಗವಂತನ ೮ ಕ್ರಿಯೆಗಳೇ ತುಂಬಿದೆ , ನಾವು ಮುಂದೆ ಮುಂದೆ ಸಾಗುತ್ತಿರುವಾಗ ಇದು ಪ್ರಶ್ನೆಯಾಗಿಯೆ ಉಳಿದರೆ, ನಮಗೆ ಅಥ೯ಮಾಡಿಕೊಳ್ಳಲು ಕಷ್ಟವಾಗುವುದಿಲ್ಲವೆ ?

  Vishnudasa Nagendracharya

  SB079 ರಲ್ಲಿ ವಿಶೇಷದ ಕುರಿತು ತಿಳಿಸುತ್ತೇನೆ ಎಂದು ಹೇಳಿದೆನಲ್ಲ. 
  
  ಕೆಲವು ವಿಷಯಗಳು ಪಾಠದ ರೂಪದಲ್ಲಿ ಹೇಳಿದಾಗ ಮಾತ್ರ ಪರಿಪೂರ್ಣವಾಗಿ ಅರ್ಥವಾಗುವದು. 
  
  ಮತ್ತು ವಿಶೇಷದಂತಹ ಗಂಭೀರ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶಾಸ್ತ್ರಜ್ಞಾನವನ್ನು ಮೊದಲೇ ಪಡೆದಿರಬೇಕು. ಇಲ್ಲದಿದ್ದರೆ ನೀರಿಳಿಯಿದ ಬಾಯಲ್ಲಿ ಕಡುಬು ತುರುಕಿದಂತಾಗುತ್ತದೆ. 
  
  ಈಗ ಭಾಗವತದಲ್ಲಿ ಬರುತ್ತಿರುವ ವಿಷಯಗಳನ್ನು ಮೇಲಿಂದ ಮೇಲೆ ಕೇಳುತ್ತಿರಿ. ಒಂದು ಹಂತದ ಶಾಸ್ತ್ರೀಯ ಜ್ಞಾನ ಪಡೆದ ಬಳಿಕ, ಸಿದ್ಧಾಂತದ ಚೌಕಟ್ಟು ಅರ್ಥವಾದ ಬಳಿಕ ಸ್ವಾಧ್ಯಾಯಸುರಭಿಯಲ್ಲಿ ಇದರ ಕುರಿತು ಪೂರ್ಣವಾಗಿ ತಿಳಿಯುವವರಿದ್ದೀರಿ. 
  
  
  ಮತ್ತು ಎಲ್ಲ ವಿಷಯಗಳನ್ನೂ ಒಂದೇ ಬಾರಿ ಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ, ಅಲ್ಲವೇ.
  
  ಇದರ ಕುರಿತು ಮುಂದೆ ತಿಳಿಯಲಾಗುವದು ಎಂದು ತಿಳಿದೇ ಮುಂದೆ ಹೋಗಬೇಕಲ್ಲವೇ? ಲೋಕದಲ್ಲಿ ಸಹಿತ ಹೀಗೆಯೇ ವ್ಯವಹಾರವಿದೆ. ಯಾವುದಾದರೂ ಸಂಸ್ಥೆಯವರು ನಿಮ್ಮನ್ನು ಎಲ್ಲಿಗಾದರೂ ಕಳುಹಿಸುತ್ತಾರೆ. ನಿಮ್ಮ ಟಿಕೆಟನ್ನು Aiport ನಲ್ಲಿಯೇ ನೀಡಲಾಗುವದು ಎನ್ನುತ್ತಾರೆ. ನೀವು ಇಂತಹುದೊಂದು ಸ್ಥಳಕ್ಕೆ ಹೋದ ನಂತರ ನಿಮಗೆ ಮುಂದಿನ ವಿಷಯವನ್ನು ತಿಳಿಸಲಾಗುವದು ಎನ್ನುತ್ತಾರೆ. ಜನರು ಅದನ್ನು ಅನುಸರಿಸುತ್ತಾರೆ, ತಾನೇ. ಈಗಲೇ ಎಲ್ಲ ವಿವರ ಕೊಡಿ. ಇಲ್ಲದಿದ್ದರೆ ಮುಂದೆ ಹೋಗಲಾಗುವದಿಲ್ಲ ಎನ್ನಲಾಗುತ್ತದೆಯೇ?
  
  ಹಾಗೆ, ಶಾಸ್ತ್ರದಲ್ಲಿಯೂ ಒಂದು ವಿಷಯವನ್ನು ಮುಂದೆ ತಿಳಿಸಲಾಗುವದು ಎಂದರೆ ಈಗ ತಿಳಿಸುವ ಹಂತವನ್ನು ನಾವಿನ್ನೂ ಮುಟ್ಟಿಲ್ಲ ಎಂದರ್ಥ. ಅಥವಾ ಅದನ್ನು ಹೇಳುವ ಪ್ರಸಂಗವಲ್ಲ ಎಂದರ್ಥ. 
  
  ಹೀಗಾಗಿ ಈಗ ಕಲಿಯುತ್ತಿರುವ ವಿಷಯಗಳನ್ನು ಪೂರ್ಣ ಕಲಿತು, ಇದು ಕಲಿಯಬೇಕಾದ, ಪೂರ್ಣ ತಿಳಿಯಬೇಕಾದ ವಿಷಯಗಳು ಎಂದು ನಿರ್ಧರಿಸಿಕೊಂಡು ಮುಂದುವರೆಯಬೇಕು. 
  
  ಈ ವಿಶೇಷದ ಕುರಿತು ಈಗಾಗಲೇ ಮಧ್ವವಿಜಯದ ಹದಿನೈದನೆಯ ಸರ್ಗದ ಮತ್ತು ಎಂಟನೆಯ ಸರ್ಗದ ಅನುವಾದಗಳಲ್ಲಿ, ಆರಂಭಿಕ ಹಂತದಲ್ಲಿ ತಿಳಿಯಬೇಕಾದ ವಿಷಯಗಳನ್ನು ತಿಳಿಸಿದ್ದೇನೆ. ಅಲ್ಲಿ ನೀಡಲಾಗಿದೆ ಎಂದು ಇಲ್ಲಿ ಮತ್ತೆ ಹೇಳಿಲ್ಲ. 
   
  
  
 • Jayashree Karunakar,Bangalore

  2:47 PM , 02/12/2017

  ಗುರುಗಳೆ
  ೧. ಭಗವಂತ ಪುರುಷ ರೂಪವನ್ನು ಸ್ವೀಕಾರ ಮಾಡುವ ಮುಂಚೆ ಯಾವ ರೂಪದಲ್ಲಿ ಇದ್ದ ?
  
  ೨. ಭಗವಂತ ಸೃಷ್ಟಿಯ ಆರಂಭದಲ್ಲಿ ಅವ್ಯಾಕೃತ ಆಕಾಶದಲ್ಲಿದ್ದುಕೊಂಡು ಮೂಲಪ್ರಕೃತಿಯನ್ನು ಸೃಷ್ಟಿಮಾಡಿದನೆ ?
  
  ೩.ಭಗವಂತ ಸತ್ವ ರಜೋ ತಮ ಗುಣ, ಮಹತತ್ವ, ಅಹಂಕಾರ ತತ್ವಗಳಿಂದ ದೇವತೆಗಳನ್ನು ತತ್ವಾಭಿಮಾನಿ ದೇವತೆಗಳನ್ನು, ಬ್ರಹ್ಮಾಂಡವನ್ನು ಸೃಷ್ಟಿಮಾಡಿದ ಎಂದಿರಿ. ಆಗ ಜೀವ, ಲಿಂಗದೇಹ ಮುಂತಾದ ಅನಾದಿ ಪದಾಥ೯ಗಳು ಎಲ್ಲಿದ್ದವು ?
  
  ೪. ಭಗವಂತ ಬ್ರಹ್ಮಾಂಡದ ಆಚೆ ತಾನು ಸೃಷ್ಟಿ ಮಾಡಿದ ಎಲ್ಲವನ್ನೂ ತನ್ನ ಉದರದಲ್ಲಿ ಹಾಕಿಕೊಂಡು ಬ್ರಹ್ಮಾಂಡವನ್ನು ಪ್ರವೇಶಮಾಡಿದ ಎಂದಿರಿ, ಆಗ ಬ್ರಹ್ಮಾಂಡದ ಆಚೆ ಖಾಲಿಯಾಯಿತೆ ? ಅಲ್ಲಿ ಎನೂ ಉಳಿಯಲಿಲ್ಲವೆ ? ಅವೆಲ್ಲವನ್ನೂ ಬ್ರಹ್ಮಾಂಡದ ಒಳಗೇ ಸೃಷ್ಟಿಮಾಡಬಹುದಿತ್ತಲ್ಲವೆ ? ಒಳಗೆ ಬಂದನಂತರ ಅವುಗಳಿಗೆ ಮತ್ತೆ ಸೃಷ್ಟಿ ನೀಡಿದನೆ ?ಯಾಕೆ ?
  
   ೫.ಭಗವಂತನ ಅವಯವಗಳಿಗೂ ಭಗವಂತನಿಗೂ ಭೇಧವಿಲ್ಲ ಎಂದಾದರೆ, ಧ್ಯಾನದಲ್ಲಿ ಭಗವಂತನ ಚರಣಕಮಲಗಳಿಂದಲೇ ಯಾಕೆ ಆರಂಭ ?
  
  ೬. ಭಗವಂತನ ಅವತಾರಗಳಲ್ಲಿ, ಗುಣಗಳಲ್ಲಿ, ಭೇಧವಿಲ್ಲ ಎಂದು ತಿಳಿಸಿದ್ದೀರಿ. ಆದರೆ ಭಗವಂತನ ಕ್ರಿಯೆಗಳಲ್ಲಿ ಭೇಧವಿಲ್ಲ ಎಂದು ಹೇಗೆ ಅಥ೯ಮಾಡಿಕೊಳ್ಳುವುದು ?
   "ಜನ್ಮಾದ್ಯಿಸ್ಯಯತಹ" ಅನ್ನುವ ಸಂಧಭ೯ದಲ್ಲಿ ನಾವು ಭಗವಂತನಲ್ಲಿ  ೮ ತರಹದ ಕ್ರಿಯೆಗಳನ್ನು ಅಥ೯ಮಾಡಿಕೊಂಡೆವಲ್ಲ ? ಆ ಎಲ್ಲಾ ಕ್ರಿಯೆಗಳಿಗೂ ಒಂದಕ್ಕೂಂದು ಭೇಧವಿದೆಯಲ್ಲ ?

  Vishnudasa Nagendracharya

  1. ವಿಷ್ಣು ಎನ್ನುವ ಹೆಸರಿನ ರೂಪ. ಇದಲ್ಲದೇ ಅನಂತ ರೂಪಗಳೂ ಬ್ರಹ್ಮಾಂಡದ ಆಚೆಯೇ ಸೃಷ್ಟಿಯಾಗಿದ್ದವು. 
  
  2. ಮೂಲಪ್ರಕೃತಿ ಅನಾದಿಯಾದ ವಸ್ತು. ಅದು ಸೃಷ್ಟಿಯಾಗಿಲ್ಲ. ಮೂಲಪ್ರಕೃತಿಯಿಂದ ಮಹದಾದಿ ತತ್ವಗಳನ್ನು ಮತ್ತು ಆ ತತ್ವಗಳಿಂದ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ. ಇವೆಲ್ಲವೂ ಅವ್ಯಾಕೃತಾಕಾಶದಲ್ಲಿಯೇ ಇರುವದು. 
  
  3. ಆಯಾಯ ಜೀವರ ಲಿಂಗದೇಹ ಜೀವರ ಜೊತೆಯಲ್ಲಿಯೇ ಇರುತ್ತವೆ. ಜೀವರು ದೇವರ ಉದರದಲ್ಲಿದ್ದರು. 
  
  4. ಬ್ರಹ್ಮಾಂಡದ ಆಚೆ ಸೃಷ್ಟಿಯಾಗಿದ್ದ ತತ್ವಗಳ ಒಂದು ಅಂಶವನ್ನು ಅದರ ಅಭಿಮಾನಿ ದೇವತೆಗಳನ್ನೂ ತನ್ನೊಳಗೆ ಇಟ್ಟುಕೊಂಡು ದೇವರು ಬ್ರಹ್ಮಾಂಡದ ಒಳಗೆ ಪ್ರವೇಶ ಮಾಡಿದ. ಹೊರಗೆ ಖಾಲಿಯಾಗಲಿಲ್ಲ. ಒಳಗೆ ಬಂದ ನಂತರ ಮತ್ತೆ ಅವನ್ನೇ ಸೃಷ್ಟಿ ಮಾಡಲಿಲ್ಲ. ಅವುಗಳಿಂದ ಲೋಕಗಳನ್ನು ಸೃಷ್ಟಿ ಮಾಡಿಸಿದ. 
  
  5. ಅಭೇದವಿದ್ದರೂ ‘ವಿಶೇಷ’ವಿದೆ. ಇದರ ಕುರಿತು SB079 ರಲ್ಲಿ ವಿವರಣೆ ದೊರೆಯುತ್ತದೆ. 
  
   6. ಭಗವಂತನ ಗುಣ, ರೂಪ, ಕ್ರಿಯೆಗಳಿಗೆ ಪರಸ್ಪರವಾಗಿ ಅಭೇದವಿದೆ. ಆ ಗುಣ, ರೂಪ, ಕ್ರಿಯೆಗಳು ಪ್ರತ್ಯೇಕವಾಗಿ ಅನಂತವಾಗಿದ್ದರೂ ಅವು ಪರಸ್ಪರ ಅಭಿನ್ನವೇ. ಭೇದವಿಲ್ಲ, ಆದರೆ ‘ವಿಶೇಷ’ವಿರುವದರಿಂದ ಭೇದದ ವ್ಯವಹಾರ ನಡೆಯುತ್ತದೆ. ಈ ‘ವಿಶೇಷ’ ಎನ್ನುವದು ತುಂಬ ವಿಸ್ತೃತವಾಗಿ ಅರ್ಥ ಮಾಡಿಸಬೇಕಾದ ವಿಷಯ. ಪಾಠದ ರೂಪದಲ್ಲಿಯೇ ತಿಳಿಸಬೇಕು. ಮುಂದೊಂದು ದಿವಸ ವಿಶ್ವನಂದಿನಿಯಲ್ಲಿ ಅದರ ಕುರಿತು ತಿಳಿಸಲು ಪ್ರಯತ್ನಿಸುತ್ತೇನೆ. 
 • Jayashree Karunakar,Bangalore

  6:17 PM , 02/12/2017

  ಗುರುಗಳೆ
  
  ೧. ಬ್ರಹ್ಮಾಂಡದ ಆಚೆ ಇದ್ದ ತತ್ವಗಳ ಒಂದಂಶವನ್ನು ಮತ್ತು ತತ್ವಾಭಿಮಾನಿ ದೇವತೆಗಳನ್ನು ಭಗವಂತ ತನ್ನ ಉದರದಲ್ಲಿ ಹಾಕಿಕೊಂಡ ನಂತರ ಬ್ರಹ್ಮಾಂಡದೊಳಗೆ ಪ್ರವೇಶಿಸಿದ ನಂತರ ಲೋಕಗಳನ್ನು ಸೃಷ್ಟಿಮಾಡಿದ ಎಂದಿರಲ್ಲ, ಬ್ರಹ್ಮಾಂಡದ ಆಚೆ ಮತ್ತಷ್ಟು ಉಳಿದ ತತ್ತ್ವಗಳನ್ನು ಭಗವಂತ ಎನುಮಾಡಿದ ? ಬ್ರಹ್ಮಾಂಡದ ಸೃಷ್ಟಿಗಾಗಿಯೇ ಅವುಗಳು ಇದ್ದದ್ದು ಅಲ್ಲವೆ ? ಅದಾದಬಳಿಕಯಾತಕ್ಕಾಗಿ ಬೇಕು ಅವುಗಳು ?
  
  ೨. ದೇವತೆಗಳು ಮತ್ತು ತತ್ತ್ವಾಭಿಮಾನಿ ದೇವತೆಗಳು ಭಗವಂತನ ಉದರದಿಂದ ಯಾವಾಗ ಆಚೆಬಂದರು ?

  Vishnudasa Nagendracharya

  ತತ್ವಗಳಿಂದ ಬ್ರಹ್ಮಾಂಡ ಸೃಷ್ಟಿಯಾಗುತ್ತದೆ. ಸೃಷ್ಟಿಯಾದ ಬ್ರಹ್ಮಾಂಡ ಮುನ್ನಡೆಯಲೂ ಸಹ ತತ್ವಗಳು ಬೇಕು. ಹೀಗಾಗಿ ತತ್ವಗಳು ಆಚೆಯಲ್ಲಿ ಬೇಕು. 
  
  ತತ್ವಗಳ ಕೆಲವು ಅಂಶಗಳಿಂದ ಬ್ರಹ್ಮಾಂಡದೊಳಗಣ ಪದಾರ್ಥಗಳು ಸೃಷ್ಟಿಯಾಗುತ್ತವೆ. 
  
  ಮಹತ್ತತ್ವವನ್ನು ಸೃಷ್ಟಿ ಮಾಡುವ ಮುಂಚೆ ಪ್ರದ್ಯುಮ್ನ ರೂಪದ ಭಗವಂತ ತನ್ನ ಉದರದಿಂದ ಜೀವರನ್ನು ತೆಗೆದು ಅನಿರುದ್ಧರೂಪದ ಭಗವಂತನಿಗೆ ನೀಡುತ್ತಾನೆ. ಅನಿರುದ್ಧದೇಹದ ಸೃಷ್ಟಿಯಾಗುತ್ತದೆ. 
  
  ಆ ನಂತರ ವೈಕಾರಿಕ ಅಹಂಕಾರ ತತ್ವವನ್ನು (ಈ ಎಲ್ಲ ವಿಷಯಗಳೂ ಮುಂದೆ ಬರುತ್ತವೆ. ದಯವಿಟ್ಟು ತಾಳ್ಮೆಯಿಂದಿರಿ.) ಸೃಷ್ಟಿ ಮಾಡುವಾಗ ದೇವತೆಗಳ ದೇಹ ಸೃಷ್ಟಿಯಾಗುತ್ತದೆ. ದೇವತೆಗಳು ತಾತ್ವಿಕಶರೀರ ಪಡೆದು ಹುಟ್ಟಿ ಬರುತ್ತಾರೆ. 
  
  ಆ ಬಳಿಕ ಅನಿರುದ್ಧ ದೇಹ ಪಡೆದ ಸಮಸ್ತ ಜೀವರನ್ನೂ ಬ್ರಹ್ಮಾಂಡದೊಳಗೆ ದೇವರು ನೂ ಬ್ರಹ್ಮದೇವರಿಗೆ ನೀಡುತ್ತಾನೆ. ಅವರು ಲೋಕಗಳಲ್ಲಿ ಸೃಷ್ಟಿ ಮಾಡುತ್ತಾರೆ. 
 • Geetha v rao,Bangalore

  12:29 PM, 02/12/2017

  ಗುರುಗಳಿಗೆ ನಮಸ್ಕಾರಗಳು. ದೆವರ ದೆಹದ ಭಗೆ ವಿಷಯ ಚೆನ್ನಾಗಿ ಅರ್ಥವಾಗುವಂತೆ ಹೆಳ್ಳಿದೀರಿ.ಒಂದು ಶಂಶಯ ಲಕುಮೀದೇವಿ ದೇಹವು ಹಾಗೆ ಅಲ್ಲವೇ.

  Vishnudasa Nagendracharya

  ಹೌದು. 
 • Niranjan Kamath,Koteshwar

  9:26 AM , 02/12/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ಥೆ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೊಂದು ಮೈ ರೋಮಾಂಚನಗೊಳಿಸುವ ತತ್ವಗಳು. ಮುಖ್ಯವಾಗಿ ಈ ತತ್ವ ಗಳಗೆ ಪ್ರಶ್ನೆಯನ್ನು ಕೂಡ ಹಾಕಿ ಉತ್ತರ ನೀಡಿದ್ದು ಪರಮಾದ್ಭುತ. ಇಂಥಹ ಪ್ರಶ್ನೆಗಳೂ ಕೂಡ ನಮ್ಮಲ್ಲಿ ಬರದೇ ಇರುವಂತಹ ಅಜ್ಞಾನಿಗಳಗಿ ಬಿಟ್ಟಿದ್ದೇವೆ. ಉದ್ಧಾರ ಮಾಡಿದ್ದಕ್ಕೆ ಶ್ರೀಮದ್ ಆಚಾರ್ಯರ ಕಾರುಣ್ಯಕ್ಕೆ ಪಾತ್ರರನ್ನಾಗಿ ಮಾಡಿದ ನಿಮಗೆ ಶರಣು.ಧನ್ಯೋಸ್ಮಿ.