Upanyasa - VNU583

ಶ್ರೀಮದ್ ಭಾಗವತಮ್ — 78 — ಅವತಾರದ ಕ್ರಮ

ಭಾಗವತದಲ್ಲಿ 22 ಅವತಾರಗಳನ್ನು ಹೇಳುವಾಗ, ಮೊದಲು ಅವತಾರ ಮಾಡಿದ ನರಸಿಂಹರೂಪವನ್ನು ನಂತರ ಉಲ್ಲೇಖ ಮಾಡಿ, ನಂತರ ಅವತಾರ ಮಾಡಿದ ಕೂರ್ಮ, ಧನ್ವಂತರಿ, ಮೋಹನಿರೂಪಗಳನ್ನು ಮೊದಲು ಉಲ್ಲೇಖ ಮಾಡಲಾಗಿದೆ. ವರಾಹ ರೂಪದ ನಂತರ ಮತ್ಸ್ಯರೂಪವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ದಶಾವತರಗಳ ಉಲ್ಲೇಖದಲ್ಲಿಯೂ ಕೂರ್ಮ ಮೊದಲು ನರಸಿಂಹ ನಂತರ. ಈ ರೀತಿಯಾಗಿ ಕ್ರಮವನ್ನು ವ್ಯತ್ಯಾಸ ಮಾಡಿ ಉಲ್ಲೇಖಿಸುವ ಹಿಂದಿನ ಕಾರಣವನ್ನು ಆಚಾರ್ಯರು ತಂತ್ರಸಾರಸಂಗ್ರಹದಲ್ಲಿ ತಿಳಸಿದ್ದಾರೆ. ಶ್ರೀ ಶೇಷಚಂದ್ರಿಕಾಚಾರ್ಯರ ವಚನಗಳ ವಿವರಣೆಯೊಂದಿಗೆ ಆ ಪ್ರಮೇಯವನ್ನು ಇಲ್ಲಿ ನಿರೂಪಿಸಲಾಗಿದೆ. 

ಡಾರ್ವಿನ್ನಿನ ವಿಕಾಸವಾದವನ್ನು ಶಾಸ್ತ್ರವೂ ಒಪ್ಪಿದೆ ಎನ್ನುವ ಭರದಲ್ಲಿ ದಶಾವತಾರಗಳನ್ನು ವಿಕಾಸವಾದದೊಂದಿಗೆ ಸಮೀಕರಿಸುವ ಆಧುನಿಕರ ವಾದದ ವಿಮರ್ಶೆಯೊಂದಿಗೆ. 

ಮತ್ಸ್ಯ ಜಲಚರ, 
ಕೂರ್ಮ ಉಭಯಚರ, 
ವರಾಹ ಭೂಚರ, 
ನರಸಿಂಹ ಅರ್ಧಮೃಗ, 
ವಾಮನ ಪೂರ್ಣ ಬೆಳೆಯದ ಕುಳ್ಳ ಮನುಷ್ಯ, 
ಕೊಡಲಿ ಹಿಡಿದು ಕಂಡವರನ್ನು ಕೊಂದು ಹಾಕಿದ ಪರಶುರಾಮ ಒರಟ, 
ಸಮಸ್ಯೆಗೀಡಾದ ಮನುಷ್ಯ ರಾಮ, 
ವಿಪರೀತ ತುಂಟಾಟದ, ವಿಪರೀತ ಬೆಳವಣಿಗೆಯ ಮನುಷ್ಯ ಕೃಷ್ಣ, 
ಜ್ಞಾನೋದಯ ಪಡೆದ ಮನುಷ್ಯ ಬುದ್ಧ, 
ಕಡೆಗೆ ಎಲ್ಲರನ್ನೂ ಕೊಂದು ಹಾಕುವ ಕಲ್ಕಿ 

ಎಂದು ಬನ್ನಂಜೆ ಮುಂತಾದ ಕೆಲವು ಆಧುನಿಕರು ಹೇಳುತ್ತಾರೆ. ಆದರೆ ಮತ್ಸ್ಯಾದಿಗಳ ಕಾಲದಲ್ಲಿಯೇ ಪೂರ್ಣ ವಿಕಾಸಗೊಂಡ ಮನುಷ್ಯರಿದ್ದರು ಮುಂತಾದ ಕಾರಣಗಳೊಂದಿಗೆ ಅವರ ವಾದವನ್ನು ಇಲ್ಲಿ ವಿಮರ್ಶಿಸಲಾಗಿದೆ. 


Play Time: 41:56

Size: 7.60 MB


Download Upanyasa Share to facebook View Comments
3962 Views

Comments

(You can only view comments here. If you want to write a comment please download the app.)
 • Sowmya,Bangalore

  11:34 AM, 31/07/2022

  🙏🙏🙏
 • Ananthapadmanabhan,kolar

  9:41 AM , 09/12/2017

  super sir. .  you clarified darvin theory how doesnot match to Dasavathara krama
 • P N Deshpande,Bangalore

  11:17 AM, 07/12/2017

  S.Namaskargalu. Bannjeaavru mattu itare wyakktigalu tilisida kramwu tappu mattu Bhagwantnind Brahma devrige updesh maadiddu sat samprdaya wendu manmuttuwante tilisddri dhanywaadagalu
 • Deviprasada,Sullia

  2:42 PM , 06/12/2017

  Swamy bannanje govinda acharyaru e riti helillavalla......

  Vishnudasa Nagendracharya

  ಬನ್ನಂಜೆಯ ಕೃತಿಯ ವಾಕ್ಯಗಳನ್ನೇಇಲ್ಲಿ ಉಲ್ಲೇಖಿಸಿದ್ದೇನಲ್ಲ. 
 • Shantha raghottamachar,Bengaluru

  11:30 AM, 06/12/2017

  ನಮೋನಮಃ, ನಮಸ್ಕಾರ ಗಳು.
 • Niranjan Kamath,Koteshwar

  10:11 AM, 06/12/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ಥೆ. ಗುರುಗಳ ಚರಣಗಳಿಗೆ ನಮೋ ನಮಃ. ಭಗವಂತನ ಅವತಾರಗಳ ಬಗ್ಗೆ ಅತ್ಯಂತ ಪರಿಪೂರ್ಣ ತತ್ವ ತಿಳಿಸಿದ್ದೀರಿ ಹಾಗೂ ಯಾರೇ ಆಗಲಿ ತತ್ವವನ್ನು ತಿರುಚಿ ಸ್ವಂತ ಅಭಿಪ್ರಾಯ ತಿಳಿಸಿ ದವರಿಗೆ ಖಂಡನಾ ಪೂರ್ವಕವಾಗಿ ಶ್ರೀಮದ್ ಭಾಗವತದ , ಶ್ರೀಮದ್ ಆಚಾರ್ಯರ ಅರ್ಥಅನುಸಂಧಾನವೇ ಸರಿ ಎಂದು ತಿಳಿಸಿ ಹೇಳಿದ ಪರಿ ಸೂಕ್ತವಾಗಿತ್ತು. ಧನಯೋಸ್ಮಿ.
 • Deshmukh seshagiri rao,Banglore

  6:08 AM , 06/12/2017

  ಶ್ರೀ ಗುರುಭೂಌನಮಃ