Upanyasa - VNU585

ಶ್ರೀಮದ್ ಭಾಗವತಮ್ — 80 — ದೇವರ ಮೂರು ಶರೀರಗಳು

ದೇವರಿಗೆ ಸ್ವರೂಪಭೂತವಾದ ಶರೀರವಿರುವಂತೆ, ಸಮಗ್ರ ಜೀವರಾಶಿಗಳನ್ನು, ಮತ್ತು ಸಮಗ್ರ ಅಚೇತನವಸ್ತುಗಳನ್ನೂ ಸಹ ದೇವರ ಶರೀರ ಎಂದು ಶಾಸ್ತ್ರಗಳು ತಿಳಿಸುತ್ತಾವೆ. ಅದಕ್ಕೆ ಕಾರಣ ಮತ್ತು ಅದರ ಕುರಿತ ಪ್ರಶ್ನೆಗಳಿಗೆ ಉತ್ತರ ಈ ಉಪನ್ಯಾಸದಲ್ಲಿದೆ. 

ದೇವರು, ಜೀವರು, ಜಗತ್ತು ಎಂಬ ಮೂರು ಪದಾರ್ಥಗಳು ಜಗತ್ತಿನಲ್ಲಿವೆ. ಇದರಲ್ಲಿ ಭಗವಂತ ಯಾವ ರೂಪದಲ್ಲಿದ್ದಾನೆಯೋ ಅದು ಅವನ ಶರೀರ. ಸ್ವರೂಪಭೂತವಾದ ಶರೀರ. ದೇವರಿಗೂ ದೇವರ ಶರೀರಕ್ಕೂ ಭೇದವಿಲ್ಲ ಎನ್ನುವದನ್ನು ಹಿಂದೆಯೇ ತಿಳಿದೆವು. ಜೀವರು ಪ್ರತಿಬಿಂಬಶರೀರರು. ಅಚೇತನಗಳು ಪ್ರತಿಮಾಶರೀರಗಳು. 


ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — 

ಏತದ್ ರೂಪಂ ಭಗವತೋ ಹ್ಯರೂಪಸ್ಯ ಚಿದಾತ್ಮನಃ।
ಮಾಯಾಗುಣೈರ್ವಿರಚಿತಂ ಮಹದಾದಿಭಿರಾತ್ಮನಿ	 ॥30॥

ಯಥಾ ನಭಸಿ ಮೇಘೌಘಾ ರೇಣುರ್ವಾ ಪಾರ್ಥಿವೋಽನಿಲೇ।
ಏವಂ ದ್ರಷ್ಟರಿ ದೃಶ್ಯತ್ವಮಾರೋಪಿತಮಬುದ್ಧಿಭಿಃ ॥31॥


ಭಾಗವತಾತ್ಪರ್ಯ — 

ಏತದ್ ಜಡರೂಪಮ್।

“ನಾರಾಯಣವರಾಹಾದ್ಯಾಃ ಪರಮಂ ರೂಪಮೀಶಿತುಃ।
ಜೈವಂ ತು ಪ್ರತಿಬಿಂಬಾಖ್ಯಂ ಜಡಮಾರೋಪಿತಂ ಹರೇಃ।
ಏವಂ ಹಿ ತ್ರಿವಿಧಂ ತಸ್ಯ ರೂಪಂ ವಿಷ್ಣೋರ್ಮಹಾತ್ಮನಃ” ಇತಿ ಪಾದ್ಮೇ ॥30॥

ದೃಶ್ಯತ್ವಂ ಜಡರೂಪತ್ವಮ್।

“ಅವಿಜ್ಞಾಯ ಪರಂ ದೇಹಮಾನಂದಾತ್ಮಾನಮವ್ಯಯಮ್।
ಆರೋಪಯಂತಿ ಜನಿಮತ್ ಪಂಚಭೂತಾತ್ಮಕಂ ಜಡಮ್” ಇತಿ ಸ್ಕಾಂದೇ ॥31॥

Play Time: 32:11

Size: 7.60 MB


Download Upanyasa Share to facebook View Comments
4759 Views

Comments

(You can only view comments here. If you want to write a comment please download the app.)
 • Sowmya,Bangalore

  11:22 AM, 04/08/2022

  🙏🙏🙏
 • Mrs laxmi laxman padaki,Pune

  11:13 AM, 15/12/2017

  👏👏👏👏👏
 • Karthik,Bangalore

  8:54 AM , 14/12/2017

  Parama Adabutha vada vishayavanu tilisidira Acharyare.
 • Madhura,Bangalore

  8:29 PM , 10/12/2017

  Ee Bhagavatha. Illade navy onndu dinavuu iralareu guruugale
 • Venkatesh CL,Channapatna

  7:19 PM , 10/12/2017

  C l Venkatesh Channapatna Kannada
 • P N Deshpande,Bangalore

  11:05 AM, 09/12/2017

  S.Namaskargalu. Bhagwantana divywaad muuru rupagal vrnane tiliyatakkaddu. Manan maaduwadarind pnhaa punha shravandinda daardhya baruttade Marui sariyaada tilwalikea untaagi jananabhivraddhi aagttade. Tamma anugrhadind ellwu saddya samshaykke aspadvilla
 • Jayashree Karunakar,Bangalore

  3:15 PM , 08/12/2017

  ಗುರುಗಳೆ
  
  ದಿನ ದಿನವೂ ಮತ್ತಷ್ಟು ಶ್ರೇಷ್ಟವಾದ ತತ್ತ್ವಗಳನ್ನು ಇನ್ನಷ್ಟು ವಿಸ್ತಾರವಾಗಿ ತಿಳಿಯುತ್ತಾ ಹೋಗುತ್ತಿದ್ದೇವೆ.
  
  ನಮ್ಮ ಜ್ಞಾನದ ಹಂತವನ್ನು ಎತ್ತರಕ್ಕೆ ಕೊಂಡ್ಯೂಯುತ್ತಾ ನಾವು ಅನುಷ್ಟಾನ ಮಾಡಲೇಬೇಕಾದಂತಹ ಹೆಚ್ಚಿನ ಜವಾಬ್ದಾರಿಯನ್ನು ನಮಗೆ ನೀಡುತಿದ್ದೀರಿ.
  
  ಶಾಸ್ತ್ರಜ್ಞಾನವಿಲ್ಲದಂತಹ ಸಾಮಾನ್ಯರಾದ ನಮಗೂ ಸಹ ಇಂತಹ ತತ್ತ್ವಗಳನ್ನು ತಮ್ಮಿಂದ ತಿಳಿಯುವ ಅವಕಾಶ ಮತ್ತು ಯೋಗ ಸಿಕ್ಕಿರುವುದು ನಮ್ಮ ಭಾಗ್ಯವೆ ಸರಿ.
  
  ಗುರುಗಳೆ ಒಂದು ಗೊಂದಲ..
  
  ಭಗವಂತ ಜ್ಞಾನಾಂದಾತ್ಮಕನಾಗಿ ತಿರುಪತಿಯ ಶಿಲೆಯಲ್ಲಿಯೂ ಇದ್ದಾನೆ, ಸಕಲ ಜಡ ಪದಾಥ೯ದಲ್ಲಿಯೂ ಇದ್ದಾನೆ ಅಂತಾದರೆ, ತಿರುಪತಿಯ ವಿಗ್ರಹದ ಮುಂದೆ ನಿಂತಾಗ ಮ್ಯರೋಮಾಂಚನಗೊಂಡು ಆನಂದಭಾಷ್ಪವಾಗುವಂತೆ ಮಾಡಿ, ಬೇರೆಯ ಜಡ ಪದಾಥ೯ಗಳ ಮುಂದೆ ನಿಂತಾಗ ಬರಿ "ಈ ಪದಾಥ೯ಗಳಲ್ಲಿಯೂ ಭಗವಂತ ಇದ್ದಾನೆ" ಅನ್ನುವ ಅಷ್ಟೇ ಜ್ಞಾನವನ್ನು ಯಾಕೆ ನೀಡುತ್ತಾನೆ ?
  
  ಎಲ್ಲದರಲ್ಲಿರುವ ಭಗವಂತನ ಸನ್ನಿಧಾನವು ಒಂದೇತೆರನಾದದ್ದು ಅಲ್ಲವೆ ?
 • Krishnaa,Bangalore

  10:07 AM, 08/12/2017

  Sri gurubhyo namah.
  
  The beauty of this upanyasa is that it feels more like a lesson learnt at the feet of our gurugalu. Words about bruhadaaranyaka and yaajnavalkyaru has made me yearn for more, acharyare.
  
  Namaskaaragalu.

  Vishnudasa Nagendracharya

  ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯಗಳನ್ನು ಅಧ್ಯಯನ ಮಾಡುವವರಿಗೆ ಅನುಕೂಲವಾಗಲಿ ಎಂದು ಪ್ರವಚನಕ್ಕಿಂತ ಹೆಚ್ಚಾಗಿ ಪಾಠದ ಶೈಲಿಯಲ್ಲಿಯೇ ಈ ಅರ್ಥಾನುಸಂಧಾನಗಳನ್ನು ರೂಪಿಸುತ್ತಿದ್ದೇನೆ. 
 • Jayashree Karunakar,Bangalore

  10:08 AM, 08/12/2017

  ಗುರುಗಳೆ
  
  ಕಥೆಗಳು, ಭಗವಂತನ ಅವತಾರಗಳು ನೆನಪಿನಲ್ಲಿ ಉಳಿದರೂ,
  ಅಷ್ಟೂ ತತ್ತ್ವಗಳೂ ನಮ್ಮಂತಹ ಅತೀ ಸಾಮಾನ್ಯರಾದವರ ಬುದ್ದಿಯಲ್ಲಿ ನಿಲ್ಲುತ್ತದಾ ಗುರುಗಳೆ...

  Vishnudasa Nagendracharya

  ಪ್ರಯತ್ನ ಪಡಬೇಕು. ಅದೇ ಸಾಧನೆ. ನಮ್ಮ ಬುದ್ಧಿ ಎಷ್ಟಿದಿಯೋ ಅಷ್ಟೆಲ್ಲದರಲ್ಲೂ ಶ್ರೀಹರಿಯೇ ತುಂಬಿರಬೇಕು. 
 • Niranjan Kamath,Koteshwar

  8:32 AM , 08/12/2017

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಅಬ್ಬಾ....ಎಷ್ಟೊಂದು ತತ್ವಗಳು ತಿಳಿಯಲಿಕ್ಕೆ ಇದೆ. ನಾವು ಎಷ್ಟು ಅಲ್ಪಮತಿಗಳಾಗಿದ್ದೇವೆ....ಇದೆಲ್ಲ ಕೇಳಿ ನಾವು ಧನ್ಯರಾಗುವಂತೆ ಭಗವಂತನ ಪ್ರೇರಣೆಯಾಗಲಿ ಎಂದು ಪ್ರಾರ್ಥನೆ. ಧನ್ಯೋಸ್ಮಿ.

  Vishnudasa Nagendracharya

  ಭಾಗವತ ಮತ್ತು ಭಾಗವತ ತಾತ್ಪರ್ಯಗಳೆಂದರೆ ಪ್ರಮೇಯಸಮುದ್ರಗಳು. ನಾವು ತಿಳಿಯಬೇಕಾದ ಸಕಲ ತತ್ವಗಳ ವಿವರಣೆ ಈ ಗ್ರಂಥಗಳಲ್ಲಿದೆ. 
  
  ಇದು ಆರಂಭ ಮಾತ್ರ. 
  
  ಈ ತತ್ವಗಳ ಅಗಾಧತೆಯ ಅರಿವು ಪ್ರತಿ ಸ್ಕಂಧಕ್ಕೂ ಹೆಚ್ಚಾಗುತ್ತ ಹೋಗುತ್ತದೆ. ಏಕಾದಶಸ್ಕಂಧದಲ್ಲಿ ಈ ತತ್ವರಾಶಿಯ ವಿಶ್ವರೂಪವನ್ನು ಕಾಣುತ್ತೇವೆ. 
 • Shantha raghottamachar,Bengaluru

  10:01 AM, 08/12/2017

  ನಮಸ್ಕಾರ ಗಳು. ಇಂದಿನ ಉಪನ್ಯಾಸ ದಲ್ಲಿ ಭಗವಂತನ ಸತ್ತಾತ್ರಯಗಳನ್ನು ತಿಳಿಯಲು ಸಾಧ್ಯವಾಯಿತು.ಧನ್ಯವಾದಗಳು.