10/12/2017
ಧರ್ಮ ಉಳಿಯಬೇಕಾದರೆ ಎರಡು ಶಕ್ತಿಗಳು ಆವಶ್ಯಕ. ಮೊದಲನೆಯದು ಜ್ಞಾನಶಕ್ತಿ. ಕಾರಣ ಯಾವುದು ಧರ್ಮ ಯಾವುದು ಅಧರ್ಮ ಎಂದು ನಿರ್ಣಯಿಸುವ ಸಾಮರ್ಥ್ಯ ಬರುವದೇ ಜ್ಞಾನದಿಂದ. ಎರಡನೆಯದು ದೇಹಶಕ್ತಿ. ದೇಹ-ಇಂದ್ರಿಯ-ಮನಸ್ಸುಗಳಲ್ಲಿ ಶಕ್ತಿ ಇಲ್ಲದಿದ್ದರೆ ಧರ್ಮದ ಆಚರಣೆಯನ್ನು ಮಾಡಲು ಸಾಧ್ಯವಿಲ್ಲ. ಇದು ವೈಯಕ್ತಿಕ ಮಟ್ಟದಲ್ಲಾಯಿತು. ಇನ್ನು ಸಮಗ್ರ ರಾಷ್ಟ್ರದ ದೃಷ್ಟಿಯಿಂದ ಕಂಡಾಗ, ಈಗ ಅನುಸರಿಸಬೇಕಾದ ಧರ್ಮ ಯಾವುದು ಎಂದು ನಿರ್ಣಯಿಸಬೇಕಾದವರು ಸರ್ವಜ್ಞರಾದ ಗುರುಗಳು. ದುಷ್ಟರ ಆಕ್ರಮಣದಿಂದ ಆ ಧಾರ್ಮಿಕರನ್ನು ರಕ್ಷಣೆ ಮಾಡಲು, ಅವರನ್ನು ಪೋಷಿಸಲು, ಮಹಾಪರಾಕ್ರಮಿಯಾದ ಕರುಣಾಳುವಾದ ರಾಜನಿರಬೇಕು. ಸರ್ವಜ್ಞಗುರುಗಳ ಮತ್ತು ಈ ಮಹಾರಾಜರ ಕಾರ್ಯವನ್ನು ಕಲಿಯುಗದಲ್ಲಿ ನಿಭಾಯಿಸಲು ರಚಿತವಾದ ಗ್ರಂಥವೇ ಶ್ರೀಮದ್ ಭಾಗವತ. ಇದನ್ನು ಆಶ್ರಯಿಸಿರುವದರಿಂದ ನಮಗೆ ನಮ್ಮನಮ್ಮ ಧರ್ಮದ ಜ್ಞಾನ ನಮಗೆ ದೊರೆಯುತ್ತದೆ. ತಿಳಿದ ಧರ್ಮದ ಆಚರಣೆಯನ್ನು ಮಾಡಲು ದೇಹ-ಮನಸ್ಸು-ಇಂದ್ರಿಯಗಳಿಗೆ ಶಕ್ತಿಯನ್ನು ನೀಡುವ, ಆವಶ್ಯಕವಾದ ಸಂಪತ್ತನ್ನು ಕರುಣಿಸುವ ರಾಜ ಶ್ರೀಮದ್ ಭಾಗವತ ಎಂಬ ದಿವ್ಯತತ್ವದ ವಿವರಣೆ ಇಲ್ಲಿದೆ. ಸೂತಾಚಾರ್ಯರು — “ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಹೇಳಿದ ಭಾಗವತವನ್ನು ನಾನು ಕೇಳಿದ್ದೇನೆ. ಅದನ್ನೇ ನಿಮಗೆ ಹೇಳುತ್ತೇನೆ, ನನಗೆ ತಿಳಿದಷ್ಟು” ಎನ್ನುತ್ತಾರೆ. ಅಂದರೆ, ಶುಕಾಚಾರ್ಯರು ಹೇಳಿದಷ್ಟೂ ಅರ್ಥಗಳು ನಮಗೆ ದೊರೆತಿಲ್ಲ. ಸೂತಾಚಾರ್ಯರಿಗೆ ಎಷ್ಟು ಅರ್ಥವಾಯಿತೋ ಅಷ್ಟು ಮಾತ್ರ ದೊರೆತಂತಾಯಿತಲ್ಲವೇ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ. “ಧರ್ಮಃ ಕಂ ಶರಣಂ ಗತಃ” ಎಂಬ ಆರನೆಯ ಪ್ರಶ್ನೆಯ ಉತ್ತರದ ವಿವರಣೆ ಇಂದಿನ ಭಾಗವತದ ಉಪನ್ಯಾಸದಲ್ಲಿದೆ. ಇಲ್ಲಿಗೆ ಪ್ರಥಮಸ್ಕಂಧದ ಮೂರನೆಯ ಅಧ್ಯಾಯ ಮುಗಿಯುತ್ತದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್। ಉತ್ತಮಶ್ಲೋಕಚರಿತಂ ಚಕಾರ ಭಗವಾನೃಷಿಃ। ನಿಶ್ರೇಯಸಾಯ ಲೋಕಸ್ಯ ಧನ್ಯಂ ಸ್ವಸ್ತ್ಯಯನಂ ಮಹತ್ ॥ 40॥ “ಧರ್ಮಃ ಕಂ ಶರಣಂ ಗತಃ” ಇತ್ಯಸ್ಯ ತಮೇವ ವ್ಯಾಸರೂಪಿಣಮಿತಿ ಪರಿಹಾರ ಉಚ್ಯತೇ — ಇದಂ ಭಾಗವತಮಿತ್ಯಾದಿನಾ। ತದಿದಂ ಗ್ರಾಹಯಾಮಾಸ ಸುತಮಾತ್ಮವತಾಂ ವರಮ್। ಸರ್ವವೇದೇತಿಹಾಸಾನಾಂ ಸಾರಂಸಾರಂ ಸಮುದ್ಧೃತಮ್ ॥ 41॥ ಸ ತು ಸಂಶ್ರಾವಯಾಮಾಸ ಮಹಾರಾಜಂ ಪರೀಕ್ಷಿತಮ್ । ಪ್ರಾಯೋಪವಿಷ್ಟಂ ಗಂಗಾಯಾಂ ಪರೀತಂ ಪರಮರ್ಷಿಭಿಃ ॥ 42॥ ತಸ್ಯ ಕೀರ್ತಯತೋ ವಿಪ್ರಾ ರಾಜರ್ಷೇರ್ಭೂರಿತೇಜಸಃ। ಅಹಂ ಚಾಧ್ಯಗಮಂ ತತ್ರ ನಿವಿಷ್ಟಸ್ತದನುಗ್ರಹಾತ್ ಸೋಽಹಂ ವಃ ಶ್ರಾವಯಿಷ್ಯಾಮಿ ಯಥಾಧೀತಂ ಯಥಾಮತಿ ॥ 43॥ ಕೃಷ್ಣೇ ಸ್ವಧಾಮೋಪಗತೇ ಧರ್ಮಜ್ಞಾನಾದಿಭಿಃ ಸಹ। ಕಲೌ ನಷ್ಟದೃಶಾಂ ಪುಂಸಾಂ ಪುರಾಣಾರ್ಕೋಽಮುನೋದಿತಃ ॥ 44॥ ಇತಿ ಶ್ರೀಮದ್ಭಾಗವತೇ ಪ್ರಥಮಸ್ಕಂಧೇ ತೃತೀಯೋಽಧ್ಯಾಯಃ
Play Time: 40:44
Size: 1.88 MB