10/12/2017
ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಉಪದೇಶಿಸಿದ ಗ್ರಂಥ ಭಾಗವತ. ಶುಕಾಚಾರ್ಯರ ಉಪದೇಶ ಆರಂಭವಾಗುವದೇ ಎರಡನೆಯ ಸ್ಕಂಧದಿಂದ. ಅಂದಮೇಲೆ ಮೊದಲನೆಯ ಸ್ಕಂಧದಲ್ಲಿ ಬಂದಿರುವ ವಿಷಯಗಳನ್ನು ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಹೇಳಲೇ ಇಲ್ಲ. ಹೀಗಾಗಿ ಈ ಪ್ರಥಮಸ್ಕಂಧ ಭಾಗವತ ಅಲ್ಲವೇ ಅಲ್ಲ. ಅಕಸ್ಮಾತ್ ಭಾಗವತವೇ ಆಗಿದ್ದರೆ, ಶುಕಾಚಾರ್ಯರು ಯಾಕೆ ಇದನ್ನು ಪರೀಕ್ಷಿದ್ರಾಜರಿಗೆ ಹೇಳಲೇ ಇಲ್ಲ, ಅಪೂರ್ಣವಾಗಿ ಭಾಗವತವನ್ನು ಹೇಳಿದಂತಾಯಿತಲ್ಲವೇ ಎಂಬ ಪ್ರಶ್ನೆಗಳಿಗೆ ಸ್ವಯಂ ವೇದವ್ಯಾಸದೇವರೇ ಸೂಚಿಸಿರುವ ಉತ್ತರದ ವಿವರಣೆ ಇಲ್ಲಿದೆ. ಹಾಗೆಯೇ, ಮಂಗಳಾಚರಣೆಯ ಮಹತ್ತ್ವವನ್ನು ಶಾಸ್ತ್ರ ಸಾರುತ್ತದೆ, ಆದರೆ ಶುಕಾಚಾರ್ಯರು ಮಂಗಳಾಚರಣೆ ಮಾಡಿಯೇ ಇಲ್ಲವಲ್ಲ ಎಂಬ ಪ್ರಶ್ನೆಗೂ ಇಲ್ಲಿಯೂ ಉತ್ತರವನ್ನು ನೀಡಲಾಗಿದೆ. ಈ ಉಪನ್ಯಾಸದಿಂದ ನಾಲ್ಕನೆಯ ಅಧ್ಯಾಯದ ಅರ್ಥಾನುಸಂಧಾನ ಆರಂಭವಾಗುತ್ತದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಶ್ರೀಮದ್ಭಾಗವತೇ ಚತುರ್ಥೋಽಧ್ಯಾಯಃ। ಇತಿ ಬ್ರುವಾಣಂ ಸಂಸ್ತೂಯ ಮುನೀನಾಂ ದೀರ್ಘಸತ್ರಿಣಾಮ್। ವೃದ್ಧಃ ಕುಲಪತಿಃ ಸೂತಂ ಬಹ್ವೃಚಃ ಶೌನಕೋಽಬ್ರವೀತ್ ॥ 1॥ ಶೌನಕ ಉವಾಚ — ಸೂತಸೂತ ಮಹಾಭಾಗ ವದ ನೋ ವದತಾಂ ವರ। ಕಥಾಂ ಭಾಗವತೀಂ ಪುಣ್ಯಾಂ ಯಾಮಾಹ ಭಗವಾಞ್ಛುಕಃ ॥ 2॥ ಕಸ್ಮಿನ್ ಯುಗೇ ಪ್ರವೃತ್ತೇಯಂ ಸ್ಥಾನೇ ವಾ ಕೇನ ಹೇತುನಾ। ಕುತಃ ಸಂಚೋದಿತಃ ಕೃಷ್ಣಃ ಕೃತವಾನ್ ಸಂಹಿತಾಂ ಮುನಿಃ ॥ 3॥ ತಸ್ಯ ಪುತ್ರೋ ಮಹಾಯೋಗೀ ಸಮದೃಙ್ ನಿರ್ವಿಕಲ್ಪಕಃ। ಏಕಾನ್ತಗತಿರುನ್ನಿದ್ರೋ ಗೂಢೋ ಮೂಢ ಇವೇಯತೇ ॥ 4॥ ನಿರ್ವಿಕಲ್ಪಕಃ ಮದೀಯಂ ತದೀಯಮಿತಿ ಭೇದಮಪಹಾಯ ಸರ್ವಮೀಶ್ವರಾಧೀನಮಿತಿ ವಿಜ್ಞಾಯ ಸ್ಥಿತಃ । “ಸಾಮ್ಯಮೀಶ್ವರರೂಪೇಷು ಸರ್ವತ್ರ ತದಧೀನತಾಮ್ । ಪಶ್ಯತಿ ಜ್ಞಾನಸಂಪತ್ತ್ಯಾ ವಿನಿದ್ರೋ ಯಃ ಸ ಯೋಗವಿತ್” ಇತಿ ಬ್ರಾಹ್ಮೇ ।।4।। ಕಥಮಾಲಕ್ಷಿತಃ ಪೌರೈಃ ಸಂಪ್ರಾಪ್ತಃ ಕುರುಜಾಂಗಲಮ್। ಉನ್ಮತ್ತಮೂಕಜಡವದ್ ವಿಚರನ್ ಗಜಸಾಹ್ವಯೇ ॥ 5॥ ಕಥಂ ವಾ ಪಾಂಡವೇಯಸ್ಯ ರಾಜರ್ಷೇರ್ಮುನಿನಾ ಸಹ। ಸಂವಾದಃ ಸಮಭೂತ್ ತಾತ ಯತ್ರೈಷಾ ಸಾತ್ವತೀ ಶ್ರುತಿಃ ॥ 6॥ ಸ ಗೋದೋಹನಮಾತ್ರಂ ಹಿ ಗೃಹೇಷು ಗೃಹಮೇಧಿನಾಮ್। ಅವೇಕ್ಷತೇ ಮಹಾಭಾಗಃ ತೀರ್ಥೀಕುರ್ವಂಸ್ತದಾಶ್ರಮಮ್ ॥ 7॥ ಅಭಿಮನ್ಯುಸುತಂ ಸೂತ ಪ್ರಾಹುರ್ಭಾಗವತೋತ್ತಮಮ್। ತಸ್ಯ ಜನ್ಮ ಮಹಾಶ್ಚರ್ಯಂ ಕರ್ಮಾಣಿ ಚ ಗೃಣೀಹಿ ನಃ ॥ 8॥ ಸ ಸಮ್ರಾಟ್ ಕಸ್ಯ ವಾ ಹೇತೋಃ ಪಾಂಡೂನಾಂ ಮಾನವರ್ಧನಃ। ಪ್ರಾಯೋಪವಿಷ್ಟೋ ಗಂಗಾಯಾಂ ಅನಾದೃತ್ಯಾಧಿರಾಟ್ಛ್ರಿಯಮ್ ॥ 9॥ ನಮಂತಿ ಯತ್ಪಾದನಿಕೇತಮಾತ್ಮನಃ ಶಿವಾಯ ಚಾಽನೀಯ ಧನಾನಿ ಶತ್ರವಃ। ಕಥಂ ಸ ಧೀರಃ ಶ್ರಿಯಮಂಗ ದುಸ್ತ್ಯಜಾ- ಮಿಯೇಷ ಚೋತ್ಸ್ರಷ್ಟುಮಹೋ ಸಹಾಸುಭಿಃ ॥ 10॥ ಶಿವಾಯ ಲೋಕಸ್ಯ ಭವಾಯ ಭೂತಯೇ ಯ ಉತ್ತಮಶ್ಲೋಕಪರಾಯಣಾ ಜನಾಃ। ಜೀವಂತಿ ನಾಽತ್ಮಾರ್ಥಮಸೌ ಪರಾಂ ಶ್ರಿಯಂ ಮುಮೋಚ ನಿರ್ವಿದ್ಯ ಕುತಃ ಕಲೇವರಮ್ ॥ 11॥ ತತ್ ಸರ್ವಂ ನಃ ಸಮಾಚಕ್ಷ್ವ ಪೃಷ್ಟೋ ಯದಿಹ ಕಿಂಚನ। ಮನ್ಯೇ ತ್ವಾಂ ವಿಷಯೇ ವಾಚಾಂ ಸ್ನಾತಮನ್ಯತ್ರ ಛಾಂದಸಾತ್ ॥ 12॥
Play Time: 43:16
Size: 7.60 MB