Upanyasa - VNU602

ಶ್ರೀಮದ್ ಭಾಗವತಮ್ — 89 — ನಾರದರ ಕರ್ಮಸಿದ್ಧಾಂತ

ಅತ್ಯಂತ ಗಹನವಾದ ಶಾಸ್ತ್ರೀಯ ತತ್ವವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಹೇಳಬಲ್ಲ ಶ್ರೇಷ್ಠ ದೇವತೆಗಳು ನಮ್ಮ ನಾರದರು. ಮೋಕ್ಷಸಾಧನವಾದ ಕರ್ಮ ಎಂದರೆ ಅದೇನೋ ವಿಶಿಷ್ಟವಾದ ಕರ್ಮ ಎಂದು ತಿಳಿದಿರುವ ಸಾಮಾನ್ಯ ಜನರಿಗೆ, ಶಾಸ್ತ್ರಪ್ರಪಂಚದ ಅತಿ ಗಹನ ಕರ್ಮತತ್ವವನ್ನು ಅತ್ಯಂತ ಸರಳವಾಗಿ, ಅದ್ಭುತವಾದ ದೃಷ್ಟಾಂತದೊಂದಿಗೆ ನಾರದರು ಮನವರಿಗೆ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ. 

ಅಪರೋಕ್ಷಜ್ಞಾನಸಾಧನವಾದ ಕರ್ಮಕ್ಕೆ ಫಲ ದೊರೆಯುವದು ಪವಿತ್ರವಾದ ಭರತಭೂಮಂಡಲದಲ್ಲಿ ಮಾತ್ರ ಎಂಬ ಪ್ರಮೇಯದ ವಿವರಣೆಯೂ ಸಹ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಏತತ್ ಸಂಸೂಚಿತಂ ಬ್ರಹ್ಮನ್ ತಾಪತ್ರಯಚಿಕಿತ್ಸಿತಮ್ ।
ಯದೀಶ್ವರೇ ಭಗವತಿ ಕರ್ಮ ಬ್ರಹ್ಮಣಿ ಭಾವಿತಮ್ ॥ ೩೨ ॥

ಆಮಯೋಽಯಂ ಚ ಭೂತಾನಾಂ ಜಾಯತೇ ಯೇನ ಸುವ್ರತ ।
ತದೇವ ಹ್ಯಾಮಯದ್ರವ್ಯಂ ತತ್ ಪುನಾತಿ ಚಿಕಿತ್ಸಿತಮ್ ॥ ೩೩ ॥

ಏವಂ ನೃಣಾಂ ಕ್ರಿಯಾಯೋಗಾಃ ಸರ್ವೇ ಸಂಸೃತಿಹೇತವಃ ।
ತ ಏವಾಽತ್ಮವಿನಾಶಾಯ ಕಲ್ಪಂತೇ ಕಲ್ಪಿತಾಃ ಪರೇ ॥ ೩೪ ॥

ಯದತ್ರ ಕ್ರಿಯತೇ ಕರ್ಮ ಭಗವತ್ಪರಿತೋಷಣಮ್ ।
ಜ್ಞಾನಂ ಯತ್ ತದಧೀನಂ ಹಿ ಭಕ್ತಿಯೋಗಸಮನ್ವಿತಮ್ ॥ ೩೫ ॥

ಕುರ್ವಾಣಾ ಯತ್ರ ಕರ್ಮಾಣಿ ಭಗವಚ್ಛಿಕ್ಷಯಾಽಸಕೃತ್ ।
ಗೃಣಂತಿ ಗುಣನಾಮಾನಿ ಕೃಷ್ಣಸ್ಯಾನುಸ್ಮರಂತಿ ಚ ॥ ೩೬ ॥

ಓಂ ನಮೋ ಭಗವತೇ ತುಭ್ಯಂ ವಾಸುದೇವಾಯ ಧೀಮಹಿ ।
ಪ್ರದ್ಯುಮ್ನಾಯಾನಿರುದ್ಧಾಯ ನಮಃ ಸಂಕರ್ಷಣಾಯ ಚ ॥ ೩೭ ॥

ಇತಿ ಮೂರ್ತ್ಯಭಿಧಾನೇನ ಮಂತ್ರಮೂರ್ತಿಮಮೂರ್ತಿಕಮ್ ।
ಯಜತೇ ಯಜ್ಞಪುರುಷಂ ಸ ಸಮ್ಯಗ್ದರ್ಶನಃ ಪುಮಾನ್ ॥ ೩೮ ॥

ಇಮಂ ಸ್ವಧರ್ಮನಿಯಮಮವೇತ್ಯ ಮದನುಷ್ಠಿತಮ್ ।
ಅದಾನ್ಮೇ ಜ್ಞಾನಮೈಶ್ವರಂ ಸ್ವಸ್ಮಿನ್ ಭಾವಂ ಚ ಕೇಶವಃ ॥ ೩೯ ॥

ತ್ವಮಪ್ಯದಭ್ರಶ್ರುತ ವಿಶ್ರುತಂ ವಿಭೋಃ 
ಸಮಾಪ್ಯತೇ ಯೇನ ವಿದಾಂ ಬುಭುತ್ಸಿತಮ್ ।
ಪ್ರಖ್ಯಾಹಿ ದುಃಖೈರ್ಮುಹುರರ್ದಿತಾತ್ಮನಾಂ 
ಸಂಕ್ಲೇಶನಿರ್ವಾಣಮುಶನ್ತಿ ನಾನ್ಯಥಾ ॥ ೩೨ ॥

ತ್ವಮೀಶ್ವರೋಪಿ ।। ೪೦ ।। 

ಇತಿ ಶ್ರೀಮದ್ಭಾಗವತೇ ಪ್ರಥಮಸ್ಕಂಧೇ ಪಂಚಮೋಽಧ್ಯಾಯಃ ॥
Play Time: 35:04

Size: 7.60 MB


Download Upanyasa Share to facebook View Comments
3847 Views

Comments

(You can only view comments here. If you want to write a comment please download the app.)
 • Sowmya,Bangalore

  11:47 AM, 06/09/2022

  🙏🙏🙏
 • Mrs laxmi padaki,Pune

  11:59 AM, 01/06/2018

  👏👏👏👏👏
 • Latha Ramesh,Coimbatore

  8:39 AM , 23/02/2018

  Namaskaragalu Gurugalige 🙏🙏
 • Shantha raghottamachar,Bengaluru

  2:35 PM , 02/01/2018

  ನಾರದರ ಪ್ರಾರ್ಥನೆ ವೇದವ್ಯಾಸರ ಉಪದೇಶ ಅತ್ಯಂತ ಉಪಯುಕ್ತ ವಾದುದು ಸಾಧಕರಿಗೆ. ನಮೋನಮಃ
 • Raghoottam Rao,Bangalore

  12:47 PM, 02/01/2018

  ಭಾಗವತ ಕಥಾಮೃತ ಪಾನ ನಮಗೆ ಎಷ್ಟು ಸಂತೋಷ ನೀಡುತ್ತಿದೆ ಎಂದು ತಿಳಿಸಲು ನಮ್ಮ ಬಳಿ ಶಬ್ದಗಳಿಲ್ಲ. 
  
  ಆನಂದದಾಯಕವಾಗಿ ಸಾಧನೆಯ ಪಾಠಗಳನ್ನು ಕಲಿಯುತ್ತಿದ್ದೇವೆ. ನಮ್ಮ ಬದುಕು ಬದಲಾಗುತ್ತಿದೆ. 
  
  ಭಾಗವತವನ್ನು ಇಷ್ಟು ಅದ್ಭುತವಾಗಿ ನಮಗೆ ನೀಡುತ್ತಿರುವ ವಿಷ್ಣುದಾಸರಿಂದ ಆರಂಭಿಸಿ ಶ್ರೀ ಮಹಾವಿಷ್ಣುವಿನವರೆಗಿನ ಎಲ್ಲರಿಗೂ ಭಕ್ತಿಪೂರ್ವಕ ಶರಣಾಗತಿಯನ್ನು ಸಮರ್ಪಿಸುತ್ತೇವೆ. 
  
  ರಘೂತ್ತಮರಾವ್ ಮತ್ತು ಕುಟುಂಬದ ಸದಸ್ಯರು.
 • P N Deshpanse,Bangalore

  11:54 AM, 02/01/2018

  S.Namaskargalu Anugrahavirali
 • Mrs laxmi laxman padaki,Pune

  11:53 AM, 02/01/2018

  👏👏👏👏👏
 • Sangeetha prasanna,Bangalore

  9:34 AM , 02/01/2018

  ಹರೇ ಶ್ರೀನಿವಾಸ .ಇಹಪರದ ಚಿಂತೆ ಮರೆತು ಭಗವಂತನ ಕಥೆಯಲ್ಲಿ ಆಸಕ್ತ ರಾದವರಿಗೆ ಇಷ್ಟು ಬೇಗ ಸಮಯ ಸರಿಯಿತೆ ಎಂದಾಯಿತು .ನಾಳಿನ ಸುಸಮಯಕ್ಕಾಗಿ ಅತ್ಯಂತ ಕಾತರದಿ ಕಾಯುತ್ತಿರುತ್ತೇವೆ 🙏🙏🙏🙏🙏
 • Niranjan Kamath,Koteshwar

  8:00 AM , 02/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೊಂದು ಪರಮ ಕರುಣಾಳು ಶ್ರೀ ವೇದವ್ಯಾಸರು ಹಾಗೂ ಶ್ರೀ ನಾರದರು. ನಮ್ಮ ಮೇಲೆ ಮಾಡಿದ ಕರುಣೆಯಿಂದ ನಿಮ್ಮ ಮೂಲಕ ಇದನ್ನೆಲ್ಲ ಕೇಳಿಸಿಕೊಳ್ಳುವಂತಾಯಿತು. ಧನ್ಯೋಸ್ಮಿ.
 • Deshmukh seshagiri rao,Banglore

  7:43 AM , 02/01/2018

  ಶ್ರೀ ಗುರುಗಳಿಗೆ ನನ್ನ ಅನಂತಾ ಅನಂತ ಧನ್ಯವಾದಗಳು .
 • Srinath,Chikmagalur

  7:42 AM , 02/01/2018

  ನಾರದರ ಚರಣಕಮಲಗಳಿಗೆ ನಮೋನಮಃ.
  
  ನಿತ್ಯ ಮಾಡುವ ಕರ್ಮಗಳೇ ಮುಕ್ತಿ ನೀಡುವ ಕರ್ಮಗಳು ಎಂದು ತುಂಬಾ ಚನ್ನಾಗಿ ಅರ್ಥವಾಯಿತು...