31/12/2017
ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಒಂದಲ್ಲ ಒಂದು ಬಾರಿ ಎದುರಾಗುವ ಪ್ರಶ್ನೆ — ಕುಟುಂಬವನ್ನು ಪೋಷಿಸುವದೋ, ಸಾಧನೆಯನ್ನು ಮಾಡುವದೋ? ಭಗವಂತನಿಂದಲೇ ಸಾಕ್ಷಾತ್ತಾಗಿ ಉಪದೇಶ ಪಡೆದ ಮಹಾನುಭಾವರು ನಾರದರಿಗೆ ತತ್ವೋಪದೇಶ ಮಾಡಿದ್ದಾರೆ. ಅಂದರೆ ಪರೋಕ್ಷಜ್ಞಾನ ಸಿದ್ಧಿಸಿದೆ. ಐದು ವರ್ಷದ ಆ ಸಣ್ಣ ಕೂಸಿಗೆ ಜಗತ್ತೆಲ್ಲ ಸುತ್ತಾಡುತ್ತ ಹರಿಯ ಆರಾಧನೆ ಮಾಡಬೇಕೆಂಬ ಅದಮ್ಯ ಬಯಕೆಯಿದೆ. ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸಂನ್ಯಾಸಿಗಳಂತೆ ಬದುಕಬೇಕೆಂಬ ಆಸೆ ಆ ಹುಡುಗನಿಗೆ. ಆದರೆ, ವೃದ್ಧಳಾದ ತಾಯಿ. ತನ್ನೊಂದಿಗೆ ಬರಲಿಕ್ಕೆ ಸಾಧ್ಯವಿಲ್ಲ. ತನಗಿಲ್ಲೇ ಇರಲು ಅಪೇಕ್ಷೆ ಇಲ್ಲ. ತಮ್ಮ ಅದಮ್ಯ ಬಯಕೆಯನ್ನೂ ದಮಿಸಿ ನಾರದರು ತಾಯಿ ಬದುಕಿರುವವರೆಗೆ ತಾಯಿಯ ಸೇವೆಯನ್ನೇ ಮಾಡಿಕೊಂಡಿರುತ್ತಾರೆ. ನಮ್ಮ ಕರ್ತವ್ಯದಿಂದ ನಾವು ತಪ್ಪಿಸಿಕೊಂಡು ಸರ್ವಥಾ ಸಾಧನೆಯ ಮಾರ್ಗವನ್ನು ಹಿಡಿಯತಕ್ಕದ್ದಲ್ಲ. ಕುಟುಂಬದ ಕುರಿತ ನಮ್ಮ ಕರ್ತವ್ಯ ಬೇರೆ, ಕುಟುಂಬದಲ್ಲಿ ಆಸಕ್ತಿ ಬೇರೆ. ಕುಟುಂಬವನ್ನಷ್ಟೇ ಪೋಷಿಸುವ ಮಾರ್ಗವನ್ನು ಭಾಗವತ ನಿಂದಿಸುತ್ತದೆ. ಆದರೆ ಕುಟುಂಬದ ಕುರಿತ ನಮ್ಮ ಕರ್ತವ್ಯವನ್ನು ನಿಭಾಯಿಸುವದೂ ಸಹ ಶ್ರೇಷ್ಠ ಭಾಗವತ ಧರ್ಮವೇ ಎನ್ನುವ ಸೂಕ್ಷ್ಮತತ್ವವನ್ನು ನಾರದರ ಪೂರ್ವಜನ್ಮದ ಕಥೆಯ ಮುಖಾಂತರ ನಾವಿಲ್ಲಿ ತಿಳಿಯುತ್ತೇವೆ. ಸಾವಿನಲ್ಲಿರುವ ನಾಲ್ಕು ತರಹದ ವೈವಿಧ್ಯಗಳ ಕುರಿತ ಚಿತ್ರಣ, ಜಗನ್ನಾಥದಾಸಾರ್ಯರ ಒಂದು ಅದ್ಭುತ ಉಪದೇಶದ ಅರ್ಥಾನುಸಂಧಾನ, ಸ್ವಯಂ ಶ್ರೀಮದಾಚಾರ್ಯರು ನಡೆದು ತೋರಿದ ದಾರಿ ಈ ವಿಷಯಗಳ ಕುರಿತೂ ಸಹ ಇಲ್ಲಿ ಚಿಂತನೆಯಿದೆ. ಇಲ್ಲಿ ವಿವರಣೆಗೊಂಡ ಭಾಗವತದ ವಚನಗಳು — ಅಥ ಷಷ್ಠೋಽಧ್ಯಾಯಃ । ಸೂತ ಉವಾಚ — ಏವಂ ನಿಶಮ್ಯ ಭಗವಾನ್ ದೇವರ್ಷೇರ್ಜನ್ಮ ಕರ್ಮ ಚ । ಭೂಯಃ ಪಪ್ರಚ್ಛ ತಂ ಬ್ರಹ್ಮನ್ ವ್ಯಾಸಃ ಸತ್ಯವತೀಸುತಃ ।। ೧ ।। ವ್ಯಾಸ ಉವಾಚ — ಭಿಕ್ಷುಭಿರ್ವಿಪ್ರವಸಿತೇ ವಿಜ್ಞಾನಾದೇಷ್ಟೃಭಿಸ್ತವ । ವರ್ತಮಾನೋ ವಯಸ್ಯಾದ್ಯೇ ತತಃ ಕಿಮಕರೋದ್ ಭವಾನ್ ।। ೨ ।। ಸ್ವಾಯಂಭುವ ಕಯಾ ವೃತ್ತ್ಯಾ ವರ್ತಿತಂ ತೇ ಪರಂ ವಯಃ । ಕಥಂ ಚೇದಮುದಸ್ರಾಕ್ಷೀಃ ಕಾಲೇ ಪ್ರಾಪ್ತೇ ಕಲೇವರಮ್ ।। ೩ ।। ಪ್ರಾಕ್ಕಲ್ಪವಿಷಯಾಮೇತಾಂ ಸ್ಮೃತಿಂ ತೇ ಮುನಿಸತ್ತಮ । ನ ಹ್ಯೇಷ ವ್ಯವಧಾತ್ ಕಾಲ ಏಷ ಸರ್ವನಿರಾಕೃತಿಃ ।। ೪ ।। ನಾರದ ಉವಾಚ — ಭಿಕ್ಷುಭಿರ್ವಿಪ್ರವಸಿತೇ ವಿಜ್ಞಾನಾದೇಷ್ಟೃಭಿರ್ಮಮ । ವರ್ತಮಾನೋ ವಯಸ್ಯಾದ್ಯೇ ತತ ಏತದಕಾರಷಮ್ ।। ೫ ।। ಏಕಾತ್ಮಜಾ ಮೇ ಜನನೀ ಯೋಷಿನ್ಮೂಢಾ ಚ ಕಿಂಕರೀ । ಮಯ್ಯಾತ್ಮಜೇಽನನ್ಯಗತೌ ಚಕ್ರೇ ಸ್ನೇಹಾನುಬನ್ಧನಮ್ ।। ೬ ।। ಸಾಸ್ವತಂತ್ರಾ ನ ಕಲ್ಯಾಽಸೀದ್ಯೋಗಕ್ಷೇಮಂ ಮಮೇಚ್ಛತೀ । ಈಶಸ್ಯ ಹಿ ವಶೇ ಲೋಕೋ ಯೋಷಾ ದಾರುಮಯೀ ಯಥಾ ।। ೭ ।। ಅಹಂ ಚ ತದ್ಬ್ರಹ್ಮಕುಲೇ ಊಷಿವಾಂಸ್ತದಪೇಕ್ಷಯಾ । ದಿಗ್ದೇಶಕಾಲಾವ್ಯುತ್ಪನ್ನೋ ಬಾಲಕಃ ಪಂಚಹಾಯನಃ ।। ೮ ।। ಏಕದಾ ನಿರ್ಗತಾಂ ಗೇಹಾದ್ ದುಹಂತೀಂ ನಿಶಿ ಗಾಂ ಪಥಿ । ಸರ್ಪೋಽದಶತ್ ಪದಾ ಸ್ಪೃಷ್ಟಃ ಕೃಪಣಾಂ ಕಾಲಚೋದಿತಃ ।। ೯ ।। ತದಾ ತದಹಮೀಶಸ್ಯ ಭಕ್ತಾನಾಂ ಶಮಭೀಪ್ಸತಃ । ಅನುಗ್ರಹಂ ಮನ್ಯಮಾನಃ ಪ್ರಾತಿಷ್ಠಂ ದಿಶಮುತ್ತರಾಮ್ ।। ೧೦ ।।
Play Time: 46:52
Size: 7.60 MB