Upanyasa - VNU604

ಶ್ರೀಮದ್ ಭಾಗವತಮ್ — 91 — ನಾರದರಿಗೆ ದೇವರ ದರ್ಶನ

“ಕೋಶ ಓದಬೇಕು, ದೇಶ ಸುತ್ತಬೇಕು” ಎಂಬ ನಾಣ್ಣುಡಿಯ ವಿವರಣೆಯೊಂದಿಗೆ, ಮನುಷ್ಯ ತನ್ನ ಅಹಂಕಾರವನ್ನು ಕತ್ತರಿಸಿಕೊಳ್ಳಲು ಪಶು, ಪಕ್ಷಿ, ಪ್ರಾಣಿ, ಪ್ರಕೃತಿಗಳನ್ನು ಗಮನಿಸಬೇಕು ಎನ್ನುವದನ್ನು ನಾರದರ ಸಂಚಾರದ ಮುಖಾಂತರ ಅರ್ಥ ಮಾಡಿಕೊಳ್ಳುತ್ತ ನಾರದರಿಗಾದ ದೇವರ ಸಾಕ್ಷಾತ್ಕಾರದ ಪರಮಾದ್ಭುತ ಚಿತ್ರಣವನ್ನು ಅವರ ಮುಖದಿಂದಲೇ ಕೇಳುತ್ತೇವೆ. ಮೈ ಮನಗಳನ್ನು ಪುಲಕಗೊಳಿಸುವ ಭಾಗ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಸ್ಫೀತಾನ್ ಜನಪದಾಂಸ್ತತ್ರ ಪುರಗ್ರಾಮವ್ರಜಾಕರಾನ್ ।
ಖೇಟಖರ್ವಟವಾಟೀಶ್ಚ ವನಾನ್ಯುಪವನಾನಿ ಚ ।। ೧೧ ।।

“ಮೃಗಯಾಜೀವಿನಾಂ ಖೇಟೋ ವಾಟೀ ಪುಷ್ಪೋಪಜೀವಿನಾಮ್ । 
ಗ್ರಾಮೋ ಬಹುಜನಾಕೀರ್ಣೋ ರಾಜರಾಜಾಶ್ರಯಂ ಪುರಮ್ ।। 
ಜಲಸ್ಥಲಾಯತಿಸ್ಫೀತಂ ಪಟ್ಟನಂ ಕೀರ್ತ್ಯತೇ ಬುಧೈಃ” ಇತಿ ಸ್ಕಾನ್ದೇ ।। ೧೧ ।।

ವಿಚಿತ್ರಧಾತುಚಿತ್ರಾದ್ರೀನಿಭಭಗ್ನಭುಜದ್ರುಮಾನ್ ।
ಜಲಾಶಯಾನ್ ಶಿವಜಲಾನ್ನಲಿನೀಃ ಸುರಸೇವಿತಾಃ ।। ೧೨ ।।

ಚಿತ್ರಸ್ವನೈಃ ಪತ್ರರಥೈಃ ವಿಭ್ರಮದ್ಭ್ರಮರಶ್ರಿಯಃ ।
ನಲವೇಣುಶರಸ್ತಮ್ಬಕುಶಕೀಚಕಗಹ್ವರಮ್ ।। ೧೩ ।।

ಏಕ ಏವಾತಿಯಾತೋಽಹಮದ್ರಾಕ್ಷಂ ವಿಪಿನಂ ಮಹತ್ ।
ಘೋರಂ ಪ್ರತಿಭಯಾಕಾರಂ ವ್ಯಾಲೋಲೂಕಶಿವಾಜಿರಮ್ ।। ೧೪ ।।

ಪರಿಶ್ರಾಂತೇಂದ್ರಿಯಾತ್ಮಾsಹಂ ತೃಟ್ಪರೀತೋ ಬುಭುಕ್ಷಿತಃ ।
ಸ್ನಾತ್ವಾ ಪೀತ್ವಾ ಹ್ರದೇ ನದ್ಯಾ ಉಪಸ್ಪೃಷ್ಟೋ ಗತಶ್ರಮಃ ।। ೧೫ ।।

ತಸ್ಮಿನ್ನಿರ್ಮನುಜೇಽರಣ್ಯೇ ಪಿಪ್ಪಲೋಪಸ್ಥ ಆಶ್ರಿತಃ ।
ಆತ್ಮನಾsತ್ಮಾನಮಾತ್ಮಸ್ಥಂ ಯಥಾಶ್ರುತಮಚಿನ್ತಯಮ್ ।। ೧೬ ।।

ಸ್ವಪ್ನೋ ಮಾಯಾಗ್ರಹಃ ಶಯ್ಯಾ ಜಾಗ್ರದಾಭಾಸ ಆತ್ಮನಃ ।
ನಾಮರೂಪಕ್ರಿಯಾವೃತ್ತಿಃ ಸಂವಿಚ್ಛಾಸ್ತ್ರಂ ಪರಂ ಪದಮ್ ।। ೧೭ ।। 

ನೇಂದ್ರಿಯಾರ್ಥಂ ನಚ ಸ್ವಪ್ನಂ ನ ಸುಪ್ತಂ ನ ಮನೋರಥಮ್ ।
ನ ನಿರೋಧಂ ಚಾನುಗಚ್ಛೇಚ್ಚಿತ್ರಂ ತದ್ ಭಗವತ್ಪದಮ್ ।। ೧೮ ।। 

ಸ ಏಕೋ ಭಗವಾನಗ್ರೇ ಕ್ರೀಡಿಷ್ಯನ್ನಿದಮಾತ್ಮನಃ।
ಸೃಷ್ಟ್ವಾ ವಿಹೃತ್ಯ ತಜ್ಜಗ್ಧ್ವಾ ಉದಾಸ್ತೇ ಕೇವಲಃ ಪುನಃ ।। ೧೯ ।। 

ಧ್ಯಾಯತಶ್ಚರಣಾಂಭೋಜಂ ಭಾವನಿರ್ವೃತಚೇತಸಃ ।
ಉತ್ಕಣ್ಠ್ಯಾಶ್ರುಕಲಾಕ್ಷಸ್ಯ ಹೃದ್ಯಾಸೀನ್ಮೇ ಶನೈರ್ಹರಿಃ ।। ೨೦ ।।

ಪ್ರೇಮಾತಿಭಾರನಿರ್ಭಿಣ್ಣಪುಲಕಾಙ್ಗೋಽತಿನಿರ್ವೃತಃ ।
ಆನನ್ದಸಮ್ಪ್ಲವೇ ಲೀನೋ ನಾಪಶ್ಯಮುಭಯಂ ಮುನೇ ।। ೨೧ ।।

ಉಭಯಂ ದ್ವಿತೀಯಂ ನಾಪಶ್ಯಂ ತಮೇವಾಪಶ್ಯಮ್ ।।
ರೂಪಂ ಭಗವತೋ ಯತ್ತನ್ಮನಃಕಾಂತಂ ಸುಖಾವಹಮ್ । 
ಅಪಶ್ಯನ್ ಸಹಸೋತ್ತಸ್ಥೌ ಕೈವಲ್ಯಾದ ದುರ್ಮನಾ ಇವ ।। ೨೨ ।।

ದಿದೃಕ್ಷುಸ್ತದಹಂ ಭೂಯಃ ಪ್ರಣಿಧಾಯ ಮನೋ ಹೃದಿ ।
ವೀಕ್ಷಮಾಣೋಽಪಿ ನಾಪಶ್ಯಮವಿತೃಪ್ತ ಇವಾತುರಃ ।। ೨೩ ।।

ಏವಂ ಯತಂತಂ ವಿಜನೇ ಮಾಮಾಹಾಗೋಚರೋ ಗಿರಾಮ್ ।
ಗಂಭೀರಶ್ಲಕ್ಷ್ಣಯಾ ವಾಚಾ ಶುಚಃ ಪ್ರಶಮಯನ್ನಿವ ।। ೨೪ ।।

ಹಂತಾಸ್ಮಿನ್ ಜನ್ಮನಿ ಭವಾನ್ ನ ಮಾಂ ದ್ರಷ್ಟುಮಿಹಾರ್ಹತಿ ।
ಅವಿಪಕ್ವಕಷಾಯಾಣಾಂ ದುರ್ದರ್ಶೋಽಹಂ ಕುಯೋಗಿನಾಮ್ ।। ೨೫ ।।

ಸಕೃದ್ ಯದ್ ದರ್ಶಿತಂ ರೂಪಮೇತತ್ಕಾಮಾಯ ತೇಽನಘ ।
ಮತ್ಕಾಮಃ ಶನಕೈಃ ಸಾಧು ಸರ್ವಾನ್ ಮುಂಚತಿ ಹೃಚ್ಛಯಾನ್ ।। ೨೬ ।।

ಸತ್ಸೇವಯಾ ದೀರ್ಘಯಾ ವೈ ಜಾತಾ ಮಯಿ ದೃಢಾ ಮತಿಃ ।
ಹಿತ್ವಾsವದ್ಯಮಿಮಂ ಲೋಕಂ ಗಂತಾ ಮಜ್ಜನತಾಮಸಿ ।। ೨೭ ।।

ಮತಿರ್ಮಯಿ ನಿಬದ್ಧೇಯಂ ನ ವಿಪದ್ಯೇತ ಕರ್ಹಿಚಿತ್ ।
ಪ್ರಜಾಸರ್ಗನಿರೋಧೇಽಪಿ ಸ್ಮೃತಿಶ್ಚ ಮದನುಗ್ರಹಾತ್ ।। ೨೮ ।।

ಏತಾವದುಕ್ತ್ವೋಪರರಾಮ ತನ್ಮಹದ್ಭೂತಂ ನಭೋಲಿಂಗಮಲಿಂಗಮೀಶ್ವರಮ್ ।
ಅಹಂ ಚ ತಸ್ಮೈ ಮಹತಾಂ ಮಹೀಯಸೇ ಶೀರ್ಷ್ಣಾವನಾಮಂ ವಿದಧೇಽನುಕಂಪಿತಃ ।। ೨೯ ।।Play Time: 60:00

Size: 7.60 MB


Download Upanyasa Share to facebook View Comments
3852 Views

Comments

(You can only view comments here. If you want to write a comment please download the app.)
 • Sowmya,Bangalore

  10:03 AM, 08/09/2022

  🙏🙏🙏
 • Sowmya,Bangalore

  10:38 AM, 07/09/2022

  🙏🙏🙏
 • Latha Ramesh,Coimbatore

  9:37 AM , 26/02/2018

  Namaskaragalu Gurugalige 🙏🙏
 • Ashok,Bangalore

  4:50 PM , 04/01/2018

  ಗುರುಗಳೇ, ನಾರದರಿಗೆ ಆದದ್ದು bimba ರೂಪದ ದರ್ಶನವೇ ?

  Vishnudasa Nagendracharya

  ಬಿಂಬರೂಪದ ದರ್ಶನವೆಂದೇ ತೋರುತ್ತದೆ. ನಿರ್ಣಯವಾಗಬೇಕಾದರೆ ಮತ್ತಷ್ಟು ಸಂಶೋಧನೆಯಾಗಬೇಕು. 
  
  ಕಾರಣ ತಿಳಿಯಬೇಕಾದ ವಿಷಯಗಳಿವೆ. 
  
  1. ಧ್ಯಾನದಲ್ಲಿ ಚಿಂತನೆ ಮಾಡುವದು ವಾಸನಾಮಯರೂಪವನ್ನು. ಅಂದರೆ ನಾವು ಹೊರಗಡೆ ಕಾಣುವ ಪ್ರತಿಮೆಯಂತೆ ಅದು. ಸಾಕ್ಷಾದ್ ದೇವರಲ್ಲ. ಆ ವಾಸನಾಮಯರೂಪದಲ್ಲಿ ದೇವರನ್ನು ಚಿಂತನೆ ಮಾಡಬೇಕು. 
  
  2. ನಾವು ವ್ಯಾಸರೂಪವನ್ನು ಚಿಂತನೆ ಮಾಡುವಾಗ ನಮಗೆ ವ್ಯಾಸರೂಪ ದರ್ಶನ ನೀಡಬಹುದು. ಅಂದರೆ ಚಿದಾನಂದಾತ್ಮಕವಾದ ದೇವರ ಶರೀರವನ್ನೇ ನಾವು ಕಾಣುತ್ತೇವೆ. ಆದರೆ ಅದು ಬಿಂಬರೂಪವೇ ಆಗಿರಬೇಕು ಎಂಬ ನಿಯಮವಿಲ್ಲ. 
  
  3. ಬಿಂಬರೂಪದ ದರ್ಶನವೂ ಹೀಗೆಯೇ ಆಗುತ್ತದೆ. ಅಂದರೆ ಧ್ಯಾನದ ನಂತರದಲ್ಲಿಯೇ ಆಗುತ್ತದೆ. 
  
  ಧ್ಯಾನದ ನಂತರದಲ್ಲಿ ಆಗುವ ದರ್ಶನ ಬಿಂಬರೂಪದ ದರ್ಶನವೇ ಆಗಬೇಕಿಲ್ಲವಾದ್ದರಿಂದ ನಾರದರಿಗಾದದ್ದು ಬಿಂಬರೂಪದ ದರ್ಶನವೋ ಹೌದೋ ಅಲ್ಲವೋ ಎನ್ನುವದನ್ನು ಪುರಾಣಗಳ ಅಧ್ಯಯನವನ್ನು ಮಾಡಿ ನಿರ್ಣಯಿಸಿಕೊಳ್ಳಬೇಕು. 
  
  ಇಲ್ಲಿ ಆದ ದರ್ಶನ ಒಂದು ರೂಪದ್ದಾಗಿ, ಆ ನಂತರ ಮತ್ತೊಂದು ಜನ್ಮದಲ್ಲಿ ಅಪರೋಕ್ಷಜ್ಞಾನವಾಗಿರಬಹುದು. ಆ ರೀತಿಯಾಗಿ ತಿಳಿಯಲು ಪ್ರಮಾಣ ಬೇಕಾಗುತ್ತದೆ. 
  
  ಪುರಾಣಗಳ ಸಂಶೋಧನೆ ಮಾಡುವಾಗ ಈ ವಿಷಯಗಳು ದೊರೆತಲ್ಲಿ ತಿಳಿಸುತ್ತೇನೆ. 
 • Shantha raghottamachar,Bengaluru

  12:15 PM, 04/01/2018

  ನಮೋನಮಃ ಪ್ರತಿ ಶ್ಲೋಕ ಅರ್ಥಾನುವಾದ ಅತ್ಯಂತ ಅದ್ಭುತ ಅಮೋಘವಾದುವು. ಪ್ರವಚನಮುಗಿಯುವವರೆಗೂ ಚಿತ್ತ ಕ್ಷಣ ವೂ ಅತ್ತಿತ್ತ ಚಲಿಸಲಿಲ್ಲ.ಪ್ರಕೃತಿ,ಪ್ರಾಣಿಸಂಕುಲ ಒಂದೊಂದು ವಿವರಣೆಯೂ ಅದ್ಭುವಾಗಿತ್ತು.ನಮೋನಮಃ.
 • Geetha v rao,Bangalore

  12:14 PM, 04/01/2018

  No words to describe the experience only can say namaskaragalu
 • Sangeetha prasanna,Bangalore

  10:11 AM, 04/01/2018

  ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .ಭಯ ಎನ್ನುವುದು ಭಗವಂತನಿಗೆ ಮಾಡುವ ಅವಮಾನ ಎನ್ನುವ ಮಾತು ನಮ್ಮ ಮನದ ಭಯವನ್ನು ಕಳೆದ ಅನುಭವವನ್ನು ನೀಡಿಟು .ಸಂಪೂರ್ಣ ಭಗವಂತನಿಗೆ ಶರಣಾಗತಿಯ ಸೌಭಾಗ್ಯ ನಮ್ಮಂಥ ಸಾಮಾನ್ಯರಿಗೆ ದೊರೆಯುವುದೆ ?ಸ್ವಾಮಿ ಅನುಗ್ರಹಿಸುತ್ತಾನೆಯೆ ?ಏಕೆನ್ನುವಿರೋ ?ಸಾಮಾನ್ಯರಲ್ಲೇ ಸಾಮಾನ್ಯರು ನಾವು .ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏🙏🙏🙏🙏

  Vishnudasa Nagendracharya

  ಖಂಡಿತವಾಗಿ. 
  
  ಜಗತ್ತಿನ ಕಟ್ಟ ಕಡೆಯ ಸಜ್ಜನನಿಗೂ ಭಗವಂತ ದರ್ಶನವನ್ನಿತ್ತು ಮೋಕ್ಷ ನೀಡುತ್ತಾನೆ. ಸಕಲ ಸಜ್ಜೀವರೂ ದೇವರನ್ನು ಕಂಡೇ ಕಾಣುತ್ತಾರೆ. 
 • P N Deshpanse,Bangalore

  9:40 AM , 04/01/2018

  S.Nanaskargalu. Bhagwantana srasttiyelli pranigaligea kotta tilwalikea mattu janada mahimeayennu tumba channagi tilisiddiri dhanywaadgalu
 • Srinath,Chikmagalur

  9:04 AM , 04/01/2018

  ಅದ್ಭುತ ನಿರೂಪಣೆ.
  
  ನಾರದರ ದೇಶ ಪರ್ಯಟನೆಯನ್ನು ತಾವು ವರ್ಣಿಸುತ್ತಿದ್ದರೆ ನಾವೂ ಅವರೊಡನೆ ಓಡಾಡಿದ ಅನುಭವ!
  
  ಅವರು ಕುಳಿತದ್ದು ಧ್ಯಾನ ಮಾಡಿದ್ದು ದೇವರನ್ನು ಕಂಡಿದ್ದು ಮತ್ತೆ ಕಾಣಲಿಕ್ಕಾಗಿ ತಪಿಸಿದ್ದು ಎಲ್ಲವೂ ಕಣ್ಣ ಮುಂದೆಯೇ ನಡೆದಂತಿತ್ತು. 
  
  ಮತ್ತೆ ಕೇಳಲೇಬೇಕು. 
  
  ನಮ್ಮ ಕಣ್ಣ ಮುಂದೆಯೇ ಭಾಗವತ ನಡೆಯುತ್ತಿದೆ.
 • H. Suvarna Kulkarni,Bangalore

  8:55 AM , 04/01/2018

  ಗುರುಗಳಿಗೆ ಪ್ರಣಾಮಗಳು ಪ್ರಕೃತಿ ಯ ವಣ೯ನೆ ಸುಂದರವಾಗಿತ್ತು ನಾವು ನಾರದರೊಡನೆ ಸುತ್ತಿಬಂದಂತಾಯಿತು ನಾರದರು ಭಗವಂತನ ದಶ೯ನ ಮಾಡಿದ ಆ ಸನ್ನಿವೇಶ  ರೋಮಾಂಚನ ಉಂಟು ಮಾಡಿತು ಆ ಭಗವಂತನನ್ನು ಕಾಣಲು ನಾವೆಷ್ಟು ಪರಿಶುದ್ಧ ರಗಿರಬೇಕು ಎಂಬ ಅರಿವು ಮೂಡಿತು ಧನ್ಯವಾದಗಳು
 • Niranjan Kamath,Koteshwar

  8:33 AM , 04/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ರೋಮಾಂಚನವಾಯಿತು...ಅತ್ಯಂತ ಸುಮಧುರ , ಪುಲಕಿತ , ಕಾರುಣ್ಯಭರಿತ ಶ್ರೀಮನ್ ನಾರದರ ಚರಿತ್ರ. ನೀವೇ ಇಷ್ಟೊಂದು ರೋಮಾಂಚನವಾಗಿ ಅನುಸಂಧಾನ ಮಾಡಿರುವಾಗ, ಸಾಕ್ಷಾತ್ ಶ್ರೀ ನಾರದರು , ಶ್ರೀ ವೇದವ್ಯಾಸ ದೇವರಲ್ಲಿ ನಿವೇದನೆ ಮಾಡುವಾಗ ಎಷ್ಟೊಂದು ಸುಮಧುರವಾಗಿ ಇತ್ತೋ ?? ಆನಂದ್ ಭಾಷ್ಪವಾಯಿತು. ಶ್ರೀಮನ್ನರಾಯಣ ಸ್ಮರಣೆಯಾಯಿತು.ಧನ್ಯೋಸ್ಮಿ.
 • Deshmukh seshagiri rao,Banglore

  8:30 AM , 04/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು