03/01/2018
ನಾರದರು ನಿರ್ಗಮಿಸಿದ ನಂತರ ಯಾವ ಕ್ರಮದಲ್ಲಿ ಶ್ರೀಮದ್ ಭಾಗವತದ ರಚನೆಯನ್ನು ಮಾಡಿದರು ಎನ್ನುವದನ್ನು ತಿಳಿಸುವ ಸೂತಾಚಾರ್ಯರು ಭಾಗವತದ ಕುರಿತ ಕೆಲವು ಅತ್ಯಪೂರ್ವ ವಿಷಯಗಳನ್ನು ನಿರೂಪಿಸುತ್ತ “ಎಲ್ಲವನ್ನೂ ತೊರೆದ ಶುಕಾಚಾರ್ಯರು ಭಾಗವತವನ್ನೇಕೆ ಅಧ್ಯಯನ ಮಾಡಿದರು” ಎಂಬ ಶೌನಕರ ಪ್ರಶ್ನೆಗೆ ಸೂತಾಚಾರ್ಯರು ನೀಡಿರುವ ಅದ್ಭುತವಾದ ಉತ್ತರದ ವಿವರಣೆ ಇಲ್ಲಿದೆ. ಶ್ರೀಮದ್ ಭಾಗವತವೆಂಬ ಕಲ್ಪವೃಕ್ಷದ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ. ಭಾಗವತದ ಪ್ರಥಮಸ್ಕಂಧದ ಏಳನೆಯ ಅಧ್ಯಾಯದ ಮೊದಲ ಹನ್ನೆರಡು ಶ್ಲೋಕಗಳ ವಿವರಣೆ ಇಲ್ಲಿದೆ. ಅಥ ಸಪ್ತಮೋಧ್ಯಾಯಃ ಶೌನಕ ಉವಾಚ — ನಿರ್ಗತೇ ನಾರದೇ ಸೂತ ಭಗವಾನ್ ಬಾದರಾಯಣಃ । ಶ್ರುತವಾಂಸ್ತದಭಿಪ್ರೇತಂ ತತಃ ಕಿಮಕರೋದ್ ವಿಭುಃ ।। ೧ ।। ಸೂತ ಉವಾಚ — ಬ್ರಹ್ಮನದ್ಯಾಃ ಸರಸ್ವತ್ಯಾ ಆಶ್ರಮಃ ಪಶ್ಚಿಮೇ ತಟೇ । ಶಮ್ಯಾಪ್ರಾಸ ಇತಿ ಪ್ರೋಕ್ತ ಋಷೀಣಾಂ ಸತ್ರವರ್ಧನಃ ।। ೨ ।। ಶಮ್ಯಾಂ ಪ್ರಾಸ್ಯ ತತ್ರ ಶಾಲಾಂ ಕೃತ್ವಾ ಯತ್ರ ಯಜ್ಞಃ ಕ್ರಿಯತೇ ಸ ಶಮ್ಯಾಪ್ರಾಸಃ ।। ೨ ।। ತಸ್ಮಿನ್ ಋಷ್ಯಾಶ್ರಮೇ ವ್ಯಾಸೋ ಬದರೀಷಣ್ಡಮಣ್ಡಿತೇ ಆಸೀನೋಽಪ ಉಪಸ್ಪೃಶ್ಯ ಪ್ರಣಿದಧ್ಯೌ ಮನಶ್ಚಿರಮ್ ।। ೩ ।। ಭಕ್ತಿಯೋಗೇನ ಮನಸಿ ಸಮ್ಯಕ್ಪ್ರಣಿಹಿತೇಽಮಲೇ । ಅಪಶ್ಯತ್ ಪುರುಷಂ ಪೂರ್ಣಂ ಮಾಯಾಂ ಚ ತದಪಾಶ್ರಯಮ್ ।। ೪ ।। ಭಕ್ತಿಯೋಗೇನ ಸಮ್ಯಕ್ ಪ್ರಣಿಹಿತೇ ಲೋಕಾನಾಂ ಮನಸಿ ।। ೪ ।। ಯಯಾ ಸಮ್ಮೋಹಿತೋ ಜೀವ ಆತ್ಮಾನಂ ತ್ರಿಗುಣಾತ್ಮಕಮ್ । ಪರೋಽಪಿ ಮನುತೇಽನರ್ಥಂ ತತ್ಕೃತಂ ಚಾಭಿಪದ್ಯತೇ ।। ೫ ।। ಅನರ್ಥೋಪಶಮಂ ಸಾಕ್ಷಾದ್ ಭಕ್ತಿಯೋಗಮಧೋಕ್ಷಜೇ । ಲೋಕಸ್ಯಾಜಾನತೋ ವಿದ್ವಾಂಶ್ಚಕ್ರೇ ಸಾತ್ವತಸಂಹಿತಾಮ್ ।। ೬ ।। ಯಸ್ಯಾಂ ವೈ ಶ್ರೂಯಮಾಣಾಯಾಂ ಕೃಷ್ಣೇ ಪರಮಪೂರುಷೇ । ಭಕ್ತಿರುತ್ಪದ್ಯತೇ ಪುಂಸಾಂ ಶೋಕಮೋಹಭಯಾಪಹಾ ।। ೭ ।। ಸ ಸಂಹಿತಾಂ ಭಾಗವತೀಂ ಕೃತ್ವಾಽನುಕ್ರಮ್ಯ ಚಾಽತ್ಮಜಮ್ ಶುಕಮಧ್ಯಾಪಯಾಮಾಸ ನಿವೃತ್ತಿನಿರತಂ ಮುನಿಃ ।। ೮ ।। ಶೌನಕ ಉವಾಚ — ಸ ವೈ ನಿವೃತ್ತಿನಿರತಃ ಸರ್ವತ್ರೋಪೇಕ್ಷಕೋ ಮುನಿಃ । ಕಸ್ಯ ವಾ ಬೃಹತೀಮೇತಾಮಾತ್ಮಾರಾಮಃ ಸಮಭ್ಯಸತ್ ।। ೯ ।। ಸೂತ ಉವಾಚ — ಆತ್ಮಾರಾಮಾಶ್ಚ ಮುನಯೋ ನಿರ್ಗ್ರಾಹ್ಯಾ ಅಪ್ಯುರುಕ್ರಮೇ । ಕುರ್ವನ್ತ್ಯಹೈತುಕೀಂ ಭಕ್ತಿಮಿತ್ಥಮ್ಭೂತಗುಣೋ ಹರಿಃ ।। ೧೦ ।। ಹರೇರ್ಗುಣಾಕ್ಷಿಪ್ತಮತಿರ್ಭಗವಾನ್ ಬಾದರಾಯಣಿಃ । ಅಧ್ಯಗಾನ್ಮಹದಾಖ್ಯಾನಂ ನಿತ್ಯಂ ವಿಷ್ಣುಜನಪ್ರಿಯಮ್ ।। ೧೧ ।। ಪರೀಕ್ಷಿತೋಽಥ ರಾಜರ್ಷೇರ್ಜನ್ಮಕರ್ಮವಿಲಾಪನಮ್ । ಸಂಸ್ಥಾಂ ಚ ಪಾಣ್ಡುಪುತ್ರಾಣಾಂ ವಕ್ಷ್ಯೇ ಕೃಷ್ಣಕಥೋದಯಮ್ ।। ೧೨ ।।
Play Time: 43:05
Size: 7.84 MB