Upanyasa - VNU607

ಶ್ರೀಮದ್ ಭಾಗವತಮ್ — 94 — ಅಶ್ವತ್ಥಾಮಾಚಾರ್ಯರ ಕನಸು

ಅಶ್ವತ್ಥಾಮಾಚಾರ್ಯರು ದುರ್ಯೋಧನನಿಗಾಗಿ ಪಾಂಡವರ ಮಕ್ಕಳನ್ನು ಕೊಂದು, ಭೀಮನಿಂದ ಪರಾಜಿತರಾಗಿ, ಬ್ರಹ್ಮಶಿರೋಸ್ತ್ರವನ್ನು ಉಪಶಮನ ಮಾಡಲಾಗದೇ, ಶ್ರೀಕೃಷ್ಣನ ಮೇಲೂ ಸಿಟ್ಟಾಗಿ, ಉತ್ತರೆಯ ಗರ್ಭವನ್ನು ಕೊಂದೇ ಕೊಲ್ಲುತ್ತೇನೆ ಎಂದಾಗ ಶ್ರೀಕೃಷ್ಣ ವೇದವ್ಯಾಸರು ಅಶ್ವತ್ಥಾಮರನ್ನು ನಿಗ್ರಹಿಸಿದ ಪರಿಯ ನಿರೂಪಣೆ ಇಲ್ಲಿದೆ. 

ಆದರೆ ಭಾಗವತ ನಡೆದ ಘಟನೆಯನ್ನು ನಿರೂಪಿಸುವದಿಲ್ಲ. ಅಶ್ವತ್ಥಾಮಾಚಾರ್ಯರಿಗೆ ಬಿದ್ದ ಕನಸನ್ನು ಹೇಳುತ್ತದೆ. ನಡೆದ ಘಟನೆಯನ್ನು ಮಹಾಭಾರತ ಮತ್ತು ತಾತ್ಪರ್ಯನಿರ್ಣಯದ ಗ್ರಂಥಗಳ ಆಧಾರದ ಮೇಲೆ ಉಲ್ಲೇಖಿಸಿ ಭಾಗವತದ ಕನಸನ್ನೂ ಸಹ ನಿರೂಪಿಸಲಾಗಿದೆ. ಕನಸಿನ ಹಿಂದಿನ ಅಶ್ವತ್ಥಾಮಾಚಾರ್ಯರ ಭಾವದ ಚಿತ್ರಣದೊಂದಿಗೆ. 

ಇಲ್ಲಿಗೆ ಏಳನೆಯ ಅಧ್ಯಾಯದ ಅರ್ಥಾನುಸಂಧಾನ ಮುಗಿಯುತ್ತದೆ. ನಾಳೆಯಿಂದ ಎಂಟನೆಯ ಅಧ್ಯಾಯ ಆರಂಭ. 

ಇಲ್ಲಿ ನಿರೂಪಣೆಗೊಂಡ ಶ್ರೀಮದ್ ಭಾಗವತದ ಮತ್ತು ಭಾಗವತತಾತ್ಪರ್ಯದ ಶ್ಲೋಕಗಳು — 

ಯದಾ ಮೃಧೇ ಕೌರವಪಾಣ್ಡವಾನಾಂ ವೀರೇಷ್ವಥೋ ವೀರಗತಿಂ ಗತೇಷು ।
ವೃಕೋದರಾವಿದ್ಧಗದಾಭಿಮರ್ಶಭಗ್ನೋರುದಣ್ಡೇ ಧೃತರಾಷ್ಟ್ರಪುತ್ರೇ ।। ೧೩ ।। 

ಭರ್ತುಃ ಪ್ರಿಯಂ ದ್ರೌಣಿರಿತಿ ಸ್ಮ ಪಶ್ಯನ್ ಕೃಷ್ಣಾಸುತಾನಾಂ ಸ್ವಪತಾಂ ಶಿರಾಂಸಿ
ಅಪಾಹರದ್ ವಿಪ್ರಿಯಮೇತದಸ್ಯ ಜುಗುಪ್ಸಿತಂ ಕರ್ಮ ವಿಗರ್ಹಯನ್ತೀ ।। ೧೪ ।। 
ಸ್ವಾತ್ಮನ ಏವ ವಿಪ್ರಿಯಮ್ । ನ ಭರ್ತುಃ । ಪ್ರಯೋಜನಾಭಾವಾದ್ ವಿಪ್ರಿಯಮಿವ । ತಸ್ಯ ಪ್ರಿಯಮಿತಿ ಹಿ ಪ್ರಸ್ವಾಪೋಕ್ತಮ್ ।
ಸ್ವಪ್ನೋsಯಮ್ । 
“ಪಾರ್ಥಾನುಯಾತಮಾತ್ಮಾನಂ ದ್ರೌಣಿಃ ಸ್ವಪ್ನೇ ದದರ್ಶ ಹ । 
ಬನ್ಧನಂ ಚಾಽತ್ಮನಸ್ತತ್ರ ದ್ರೌಪದ್ಯಾ ಚೈವ ಮೋಕ್ಷಣಮ್” ಇತಿ ಸ್ಕಾನ್ದೇ । 
ತಸ್ಮಾತ್ ನ ಐಷೀಕವಿರೋಧಃ ।
ಮಾತಾ ಶಿಶೂನಾಂ ನಿಧನಂ ಸುತಾನಾಂ ನಿಶಮ್ಯ ಘೋರಂ ಪರಿತಪ್ಯಮಾನಾ ।
ತದಾರುದದ್ ಬಾಷ್ಪಕಲಾಕುಲಾಕ್ಷೀ ತಾಂ ಸಾನ್ತ್ವಯನ್ನಾಹ ಕಿರೀಟಮಾಲೀ ।। ೧೫ ।। 
ತನ್ಮಾ ಶುಚಸ್ತೇ ಪ್ರಮೃಜಾಮಿ ಭದ್ರೇ ಯದ್ ಬ್ರಹ್ಮಬನ್ಧೋಃ ಶಿರ ಆತತಾಯಿನಃ ।
ಗಾಣ್ಡೀವಮುಕ್ತೈರ್ವಿಶಿಖೈರುಪಾಹರೇ ತ್ವಾಕ್ರಮ್ಯ ಯತ್ ಸ್ನಾಸ್ಯಸಿ ನೇತ್ರಜೈರ್ಜಲೈಃ ।। ೧೬ ।। 
ಇತಿ ಪ್ರಿಯಾಂ ವಲ್ಗುವಿಚಿತ್ರಜಲ್ಪೈಃ ಸ ಸಾನ್ತ್ವಯಿತ್ವಾಽಚ್ಯುತಮಿತ್ರಸೂತಃ
ಅಭ್ಯದ್ರವದ್ ದಂಶಿತ ಉಗ್ರಧನ್ವಾ ಕಪಿಧ್ವಜೋ ಗುರುಪುತ್ರಂ ರಥೇನ ।। ೧೭ ।। 
ತಮಾಪತನ್ತಂ ಸ ವಿಲೋಕ್ಯ ದೂರಾತ್ ಕುಮಾರಹೋದ್ವಿಗ್ನಮನಾ ರಥೇನ ।
ಪರಾದ್ರವತ್ ಪ್ರಾಣಪರೀಪ್ಸುರುರ್ವ್ಯಾಂ ಯಾವದ್ಗಮಂ ರುದ್ರಭಯಾದ್ ಯಥಾಽರ್ಕಿಃ ।। ೧೮ ।। 
ಯದಾಽಶರಣಮಾತ್ಮಾನಮೈಕ್ಷತ ಶ್ರಾನ್ತವಾಜಿನಮ್ ।
ಅಸ್ತ್ರಂ ಬ್ರಹ್ಮಶಿರೋ ಮೇನ ಆತ್ಮತ್ರಾಣಂ ದ್ವಿಜಾತ್ಮಜಃ ।। ೧೯ ।। 
ಅಥೋಪಸ್ಪೃಶ್ಯ ಸಲಿಲಂ ಸನ್ದಧೇsಸ್ತ್ರಂ ಸಮಾಹಿತಃ
ಅಜಾನನ್ನಪಿ ಸಂಹಾರಂ ಪ್ರಾಣಕೃಚ್ಛ್ರ ಉಪಸ್ಥಿತೇ ।। ೨೦ ।। 
ತತಃ ಪ್ರಾದುಷ್ಕೃತಂ ತೇಜಃ ಪ್ರಚಣ್ಡಂ ಸರ್ವತೋ ದಿಶಮ್
ಪ್ರಾಪತತ್ ತದಭಿಪ್ರೇಕ್ಷ್ಯ ವಿಷ್ಣುಂ ಜಿಷ್ಣುರುವಾಚ ಹ ।। ೨೧ ।। 
ಅರ್ಜುನ ಉವಾಚ — 
ಕೃಷ್ಣಕೃಷ್ಣ ಮಹಾಭಾಗ ಭಕ್ತಾನಾಮಭಯಙ್ಕರ ।
ತ್ವಮೇಕೋ ದಹ್ಯಮಾನಾನಾಮಪವರ್ಗೋಽಸಿ ಸಂಸೃತೇಃ ।। ೨೨ ।। 
ತ್ವಮಾದ್ಯಃ ಪುರುಷಃ ಸಾಕ್ಷಾದೀಶ್ವರಃ ಪ್ರಕೃತೇಃ ಪರಃ ।
ಮಾಯಾಂ ವ್ಯುದಸ್ಯ ಚಿಚ್ಛಕ್ತ್ಯಾ ಕೈವಲ್ಯೇ ಸ್ಥಿತ ಆತ್ಮನಿ ।। ೨೩ ।। 
ಸ ಏವ ಜೀವಲೋಕಸ್ಯ ಮಾಯಾಮೋಹಿತಚೇತಸಃ ।
ವಿಧತ್ಸುಃ ಸ್ವೇನ ವೀರ್ಯೇಣ ಶ್ರೇಯೋ ಧರ್ಮಾದಿಲಕ್ಷಣಮ್ ।। ೨೪ ।। 
ತಥಾsಯಂ ಚಾವತಾರಸ್ತೇ ಭುವೋ ಭಾರಜಿಹೀರ್ಷಯಾ ।
ಸ್ವಾನಾಂ ಚಾನನ್ಯಭಾವಾನಾಮನುಧ್ಯಾನಾಯ ಚಾಸಕೃತ್ ।। ೨೫ ।। 
ಕಿಮಿದಂ ಸ್ವಿತ್ ಕುತೋ ವೇತಿ ದೇವದೇವ ನ ವೇದ್ಮ್ಯಹಮ್ ।
ಸರ್ವತೋ ಮುಖಮಾಯಾತಿ ತೇಜಃ ಪರಮದಾರುಣಮ್ ।। ೨೬ ।। 
ಶ್ರೀಭಗವಾನುವಾಚ — 
ವೇತ್ಥೇದಂ ದ್ರೋಣಪುತ್ರಸ್ಯ ಬ್ರಾಹ್ಮಮಸ್ತ್ರಂ ಪ್ರದರ್ಶಿತಮ್ ।
ನೈವಾಸೌ ವೇದ ಸಂಹಾರಂ ಪ್ರಾಣಬಾಧ ಉಪಸ್ಥಿತೇ ।। ೨೭ ।। 
ನ ಹ್ಯಸ್ಯಾನ್ಯತಮಂ ಕಿಞ್ಚಿದಸ್ತ್ರಂ ಪ್ರತ್ಯವಕರ್ಷಣಮ್ ।
ಜಹ್ಯಸ್ತ್ರತೇಜ ಉನ್ನದ್ಧಮಸ್ತ್ರಜ್ಞೋ ಹ್ಯಸ್ತ್ರತೇಜಸಾ ।। ೨೮ ।। 
ಸೂತ ಉವಾಚ — 
ಶ್ರುತ್ವಾ ಭಗವತಾ ಪ್ರೋಕ್ತಂ ಫಾಲ್ಗುನಃ ಪರವೀರಹಾ ।
ಸ್ಪೃಷ್ಟ್ವಾsಪಸ್ತಂ ಪರಿಕ್ರಮ್ಯ ಬ್ರಾಹ್ಮಂ ಬ್ರಾಹ್ಮಾಸ್ತ್ರಂ ಸನ್ದಧೇ ।। ೨೯ ।। 
ಸಂಹತ್ಯಾನ್ಯೋನ್ಯಮುಭಯೋಸ್ತೇಜಸೀ ಶರಸಂವೃತೇ ।
ಆವೃತ್ಯ ರೋದಸೀ ಖಂ ಚ ವವೃಧಾತೇಽರ್ಕವಹ್ನಿವತ್ ।। ೩೦ ।। 
ದೃಷ್ಟ್ವಾಸ್ತ್ರತೇಜಸ್ತು ತಯೋಸ್ತ್ರೀಲ್ಲೋಕಾನ್ ಪ್ರದಹನ್ ಮಹತ್ ।
ದಹ್ಯಮಾನಾಃ ಪ್ರಜಾಃ ಸರ್ವಾಃ ಸಾಂವರ್ತಕಮಮಂಸತ ।। ೩೧ ।। 
ಪ್ರಜೋಪದ್ರವಮಾಲಕ್ಷ್ಯ ಲೋಕವ್ಯತಿಕರಂ ಚ ತಮ್ ।
ಮತಂ ಚ ವಾಸುದೇವಸ್ಯ ಸಞ್ಜಹಾರಾರ್ಜುನೋ ದ್ವಯಮ್ ।। ೩೨ ।। 
ತತ ಆಸಾದ್ಯ ತರಸಾ ದಾರುಣಂ ಗೌತಮೀಸುತಮ್ ।
ಬಬನ್ಧಾಮರ್ಷತಾಮ್ರಾಕ್ಷಃ ಪಶುಂ ರಶನಯಾ ಯಥಾ ।। ೩೩ ।। 
ಶಿಬಿರಾಯ ನಿನೀಷನ್ತಂ ರಜ್ಜ್ವಾ ಬದ್ಧ್ವಾ ರಿಪುಂ ಬಲಾತ್ ।
ಪ್ರಾಹಾರ್ಜುನಂ ಪ್ರಕುಪಿತೋ ಭಗವಾನಮ್ಬುಜೇಕ್ಷಣಃ ।। ೩೪ ।। 
ಮೈನಂ ಪಾರ್ಥಾರ್ಹಸಿ ತ್ರಾತುಂ ಬ್ರಹ್ಮಬನ್ಧುಮಿಮಂ ಜಹಿ ।
ಯೋಽಸಾವನಾಗಸಃ ಸುಪ್ತಾನವಧೀನ್ನಿಶಿ ಬಾಲಕಾನ್ ।। ೩೫ ।। 
ಮತ್ತಂ ಪ್ರಮತ್ತಮುನ್ಮತ್ತಂ ಸುಪ್ತಂ ಬಾಲಂ ಸ್ತ್ರಿಯಂ ಜಡಮ್ ।
ಪ್ರಪನ್ನಂ ವಿರಥಂ ಭೀತಂ ನ ರಿಪುಂ ಹನ್ತಿ ಧರ್ಮವಿತ್ ।। ೩೬ ।। 
ಸ್ವಪ್ರಾಣಾನ್ ಯಃ ಪರಪ್ರಾಣೈಃ ಪ್ರಪುಷ್ಣಾತ್ಯಘೃಣಃ ಖಲಃ ।
ತದ್ವಧಸ್ತಸ್ಯ ಹಿ ಶ್ರೇಯೋ ಯದ್ದೋಷಾದ್ ಯಾತ್ಯಧಃ ಪುಮಾನ್ ।। ೩೭ ।। 
ಪ್ರತಿಶ್ರುತಂ ಚ ಭವತಾ ಪಾಞ್ಚಾಲ್ಯೈ ಶೃಣ್ವತೋ ಮಮ ।
ಆಹರಿಷ್ಯೇ ಶಿರಸ್ತಸ್ಯ ಯಸ್ತೇ ಮಾನಿನಿ ಪುತ್ರಹಾ ।। ೩೮ ।। 
ತದಸೌ ವಧ್ಯತಾಂ ಪಾಪ ಆತತಾಯ್ಯಾತ್ಮಬನ್ಧುಹಾ ।
ಭರ್ತುಶ್ಚ ವಿಪ್ರಿಯಂ ವೀರ ಕೃತವಾನ್ ಕುಲಪಾಂಸನಃ ।। ೩೯ ।। 
ಸೂತ ಉವಾಚ — 
ಏವಂ ಪರೀಕ್ಷತಾ ಧರ್ಮಂ ಪಾರ್ಥಃ ಕೃಷ್ಣೇನ ಚೋದಿತಃ ।
ನೈಚ್ಛದ್ಧನ್ತುಂ ಗುರುಸುತಂ ಯದ್ಯಪ್ಯಾತ್ಮಹನಂ ಮಹಾನ್ ।। ೪೦ ।। 
ಅಥೋಪೇತ್ಯ ಸ್ವಶಿಬಿರಂ ಗೋವಿನ್ದಪ್ರಿಯಸಾರಥಿಃ ।
ನ್ಯವೇದಯತ್ ತಂ ಪ್ರಿಯಾಯೈ ಶೋಚನ್ತ್ಯಾ ಆತ್ಮಜಾನ್ ಹತಾನ್ ।। ೪೧ ।। 
ತಥಾಹೃತಂ ಪಶುವತ್ ಪಾಶಬದ್ಧಮವಾಙ್ಮುಖಂ ಕರ್ಮಜುಗುಪ್ಸಿತೇನ ।
ನಿರೀಕ್ಷ್ಯ ಕೃಷ್ಣಾsಪಕೃತಂ ಗುರೋಃ ಸುತಂ ವಾಮಸ್ವಭಾವಾ ಕೃಪಯಾ ನನಾಮ ।। ೪೨ ।। 
ಉವಾಚ ಚಾಸಹನ್ತ್ಯಸ್ಯ ಬನ್ಧನಾನಯನಂ ಸತೀ ।
ಮುಚ್ಯತಾಂಮುಚ್ಯತಾಮೇಷ ಬ್ರಾಹ್ಮಣೋ ನಿತರಾಂ ಗುರುಃ ।। ೪೩ ।। 
ಸರಹಸ್ಯೋ ಧನುರ್ವೇದಃ ಸವಿಸರ್ಗೋಪಸಂಯಮಃ ।
ಅಸ್ತ್ರಗ್ರಾಮಶ್ಚ ಭವತಾ ಶಿಕ್ಷಿತೋ ಯದನುಗ್ರಹಾತ್ ।। ೪೪ ।। 
ಸ ಏಷ ಭಗವಾನ್ ದ್ರೋಣಃ ಪ್ರಜಾರೂಪೇಣ ವರ್ತತೇ ।
ತಸ್ಯಾಽತ್ಮನೋಽರ್ಧಂ ಪತ್ನ್ಯಾಸ್ತೇ ನಾನ್ವಗಾದ್ ವೀರಸೂಃ ಕೃಪೀ ।। ೪೫ ।। 
ತದ್ಧರ್ಮಜ್ಞ ಮಹಾಭಾಗ ಭವದ್ಭಿರ್ಗೌರವಂ ಕುಲಮ್ ।
ವೃಜಿನಂ ನಾರ್ಹತಿ ಪ್ರಾಪ್ತುಂ ಪೂಜ್ಯಂ ವನ್ದ್ಯಮಭೀಕ್ಷ್ಣಶಃ ।। ೪೬ ।। 
ಮಾ ರೋದೀದಸ್ಯ ಜನನೀ ಗೌತಮೀ ಪತಿದೇವತಾ ।
ಯಥಾಽಹಂ ಮೃತವತ್ಸಾಽರ್ತಾ ರೋದಿಮ್ಯಶ್ರುಮುಖೀ ಮುಹುಃ ।। ೪೭ ।। 
ಯೈಃ ಕೋಪಿತಂ ಬ್ರಹ್ಮಕುಲಂ ರಾಜನ್ಯೈರಕೃತಾತ್ಮಭಿಃ ।
ತತ್ಕುಲಂ ಪ್ರದಹತ್ಯಾಶು ಸಾನುಬನ್ಧಂ ಶುಚಾರ್ಪಿತಮ್ ।। ೪೮ ।। 
ಸೂತ ಉವಾಚ — 
ಧರ್ಮ್ಯಂ ನ್ಯಾಯ್ಯಂ ಸಕರುಣಂ ನಿರ್ವ್ಯಲೀಕಂ ಸಮಂ ಮಹತ್ ।
ರಾಜಾ ಧರ್ಮಸುತೋ ರಾಜ್ಞ್ಯಾಃ ಪ್ರತ್ಯನನ್ದದ್ ವಚೋ ದ್ವಿಜಾಃ ।। ೪೯ ।। 
ನಕುಲಃ ಸಹದೇವಶ್ಚ ಯುಯುಧಾನೋ ಧನಞ್ಜಯಃ ।
ಭಗವಾನ್ ದೇವಕೀಪುತ್ರೋ ಯೇ ಚಾನ್ಯೇ ಯಾಶ್ಚ ಯೋಷಿತಃ ।। ೫೦ ।। 
ತತ್ರಾಽಹಾಮರ್ಷಿತೋ ಭೀಮಸ್ತಸ್ಯ ಶ್ರೇಯಾನ್ ವಧಃ ಸ್ಮೃತಃ ।
ನ ಭರ್ತುರ್ನಾಽತ್ಮನಶ್ಚಾರ್ಥೇ ಯೋಽಹನ್ ಸುಪ್ತಾನ್ ಶಿಶೂನ್ ವೃಥಾ ।। ೫೧ ।। 
ನಿಶಮ್ಯ ಭೀಮಗದಿತಂ ದ್ರೌಪದ್ಯಾಶ್ಚ ಚತುರ್ಭುಜಃ ।
ಆಲೋಕ್ಯ ವದನಂ ಸಖ್ಯುರಿದಮಾಹ ಹಸನ್ನಿವ ।। ೫೨ ।। 
ಶ್ರೀಭಗವಾನುವಾಚ — 
ಬ್ರಹ್ಮಬನ್ಧುರ್ನ ಹನ್ತವ್ಯ ಆತತಾಯೀ ವಧಾರ್ಹಣಃ ।
ಮಯೈವೋಭಯಮಾಮ್ನಾತಂ ಪರಿಪಾಹ್ಯನುಶಾಸನಮ್ ।। ೫೩ ।। 
ಕುರು ಪ್ರತಿಶ್ರುತಂ ಸತ್ಯಂ ಯತ್ತತ್ ಸಾನ್ತ್ವಯತಾ ಪ್ರಿಯಾಮ್ ।
ಮತಂ ಚ ಭೀಮಸೇನಸ್ಯ ಪಾಞ್ಚಾಲ್ಯಾ ಮಹ್ಯಮೇವ ಚ ।। ೫೪ ।। 
ಸೂತ ಉವಾಚ — 
ಅರ್ಜುನಃ ಸಹಸಾಽಜ್ಞಾಯ ಹರೇರ್ಹಾರ್ದಮಥಾಸಿನಾ ।
ಮಣಿಂ ಜಹಾರ ಮೂರ್ಧನ್ಯಂ ದ್ವಿಜಸ್ಯ ಸಹಮೂರ್ಧಜಮ್ ।। ೫೫ ।। 
ವಿಮುಚ್ಯ ರಶನಾಬದ್ಧಂ ಬಾಲಹತ್ಯಾಹತಪ್ರಭಮ್ ।
ತೇಜಸಾ ಮಣಿನಾ ಹೀನಂ ಶಿಬಿರಾನ್ನಿರಯಾಪಯತ್ ।। ೫೬ ।। 
ಬನ್ಧನಂ ದ್ರವಿಣಾದಾನಂ ಸ್ಥಾನಾನ್ನಿರ್ಯಾಪಣಂ ತಥಾ ।
ಏಷ ಹಿ ಬ್ರಹ್ಮಬನ್ಧೂನಾಂ ವಧೋ ನಾನ್ಯೋಽಸ್ತಿ ದೈಹಿಕಃ ।। ೫೭ ।। 
ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಸಪ್ತಮೋಧ್ಯಾಯಃ । 
Play Time: 61:01

Size: 7.60 MB


Download Upanyasa Share to facebook View Comments
3898 Views

Comments

(You can only view comments here. If you want to write a comment please download the app.)
 • K Guru Rajesh,Bhubaneswar

  9:31 PM , 09/01/2018

  Acharyarige namaskaragalu, Krishna roopa dalli bhagavantha arjunanige asthravannu prayogamadanta helidagoskarave Arjuna asvatthamaacharyara asthrakka pratiyagi prayogamadida... Antha sandarbhadalli vyasaroopadalli bhagavanta bandu aa asthragala madhya ninthu arjanannu etakke tappu madidavanante helidaru? adakke Arjuna etakke kshame bedabekayitu? Asthraprayogavanna bhagavanthana matinindale Arjuna maadidanalla...

  Vishnudasa Nagendracharya

  ಇದಕ್ಕೆ ಕಾರಣಗಳು ಹೀಗಿವೆ — 
  
  1. ಎಲ್ಲ ಅಸ್ತ್ರಗಳನ್ನೂ ಅದೇ ಮತ್ತೊಂದು ಅಸ್ತ್ರ ಉಪಶಮನ ಗೊಳಿಸುತ್ತದೆ. ಆದರೆ ಬ್ರಹ್ಮಶಿರೋಸ್ತ್ರವನ್ನು ಮತ್ತೊಂದು ಬ್ರಹ್ಮಶಿರೋಸ್ತ್ರವೂ ಉಪಶಮನಗೊಳಿಸಲು ಸಾಧ್ಯವಿಲ್ಲ ಎಂದು ಜಗತ್ತಿಗೆ ತೋರಿಸಬೇಕಾಗಿತ್ತು. ಹೀಗಾಗಿ ಕೃಷ್ಣರೂಪದಿಂದ ಪ್ರೇರಿಸಿ, ವ್ಯಾಸರೂಪದಿಂದ ನಿಲ್ಲಿಸುತ್ತಾನೆ. 
  
  2. ವೇದವ್ಯಾಸದೇವರು ಪ್ರಧಾನವಾಗಿ ಬೈಯುವದು ಅಶ್ವತ್ಥಾಮಾಚಾರ್ಯರನ್ನು. ಕಾರಣ ವಿನಾಶಕ್ಕಾಗಿಯೇ ಅವರು ಪ್ರಯೋಗ ಮಾಡಿದ್ದು. ಆದರೆ, ಅರ್ಜುನ ಪ್ರಯೋಗ ಮಾಡಿದ್ದು ಅಶ್ವತ್ಥಾಮಾಚಾರ್ಯರಿಗೂ ಒಳ್ಳೆಯದಾಗಲಿ ಎಂದು. ಅರ್ಜುನನ ಈ ಅಭಿಪ್ರಾಯ ಜಗತ್ತಿಗೆ ತಿಳಿಸಬೇಕಾಗಿತ್ತು. 
  
  3. ಇನ್ನು, ಅರ್ಜುನನಿಗೆ ತನ್ನ ಅಸ್ತ್ರವನ್ನೂ ಪರರ ಅಸ್ತ್ರವನ್ನೂ ಉಪಶಮನಗೊಳಿಸುವ ಸಾಮರ್ಥ್ಯವಿದೆ, ಅವನಿಗಿಂತ ಉತ್ತಮರಾದ ಅಶ್ವತ್ಥಾಮಾಚಾರ್ಯರು ಆ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎನ್ನುವದನ್ನು ಸೂಚಿಸುವದಕ್ಕಾಗಿ. ಇದರ ಆಧ್ಯಾತ್ಮಿಕ ಅರ್ಥ ಇನ್ನೂ ಅದ್ಭುತವಾಗಿದೆ. ಮಹಾಭಾರತದ ಉಪನ್ಯಾಸದ ಸಂದರ್ಭದಲ್ಲಿ ಅದನ್ನು ವಿವರಿಸುತ್ತೇನೆ. 
  
  4. ಎಲ್ಲದಕ್ಕಿಂತ ಮುಖ್ಯ ಕಾರಣ, ದೇವರ ಆಟವೇ ಹೀಗಿರುತ್ತದೆ. ಒಂದು ರೂಪದಿಂದ ಕಟ್ಟಿ ಹಾಕುತ್ತಾನೆ, ಮತ್ತೊಂದು ರೂಪದಿಂದ ಬಂಧನ ಬಿಡಿಸುತ್ತಾನೆ. ಅವನ ಮನಸ್ಸಿನ ಮೂಲ ಅಭಿಪ್ರಾಯವನ್ನು ತಿಳಿದು ವರ್ತಿಸಿದಾಗ ಪರಮಾನುಗ್ರಹವನ್ನು ಮಾಡುತ್ತಾನೆ. ಹಾಗೆ, ಕೃಷ್ಣರೂಪದಿಂದ ಅಸ್ತ್ರ ಪ್ರಯೋಗ ಮಾಡು ಎಂದು ಹೇಳಿದ. ವ್ಯಾಸರೂಪದಿಂದ ಅಸ್ತ್ರಪ್ರಯೋಗ ಮಾಡಬೇಕಾದ ಸಂದರ್ಭ ಕ್ರಮಗಳ ಎಚ್ಚರವಿರಬೇಕು ಎಂದು ತಿಳಿಸಿ ಹೇಳಿದ. 
  
  Idakke kāraṇagaḷu hīgive — 
  
  1. Ella astragaḷannū adē mattondu astra upaśamana goḷisuttade. Ādare brahmaśirōstravannu mattondu brahmaśirōstravū upaśamanagoḷisalu sādhyavilla endu jagattige tōrisabēkāgittu. Hīgāgi kr̥ṣṇarūpadinda prērisi, vyāsarūpadinda nillisuttāne. 
  
  2. Vēdavyāsadēvaru pradhānavāgi baiyuvadu aśvatthāmācāryarannu. Kāraṇa vināśakkāgiyē avaru prayōga māḍiddu. Ādare, arjuna prayōga māḍiddu aśvatthāmācāryarigū oḷḷeyadāgali endu. Arjunana ī abhiprāya jagattige tiḷisabēkāgittu. 
  
  3. Innu, arjunanige tanna astravannū parara astravannū upaśamanagoḷisuva sāmarthyavide, avaniginta uttamarāda aśvatthāmācāryaru ā sāmarthyavannu kaḷedukoṇḍiddāre ennuvadannu sūcisuvadakkāgi. Idara ādhyātmika artha innū adbhutavāgide. Mahābhāratada upanyāsada sandarbhadalli adannu vivarisuttēne. 
  
  4. Elladakkinta mukhya kāraṇa, dēvara āṭavē hīgiruttade. Ondu rūpadinda kaṭṭi hākuttāne, mattondu rūpadinda bandhana biḍisuttāne. Avana manassina mūla abhiprāyavannu tiḷidu vartisidāga paramānugrahavannu māḍuttāne. Hāge, kr̥ṣṇarūpadinda astra prayōga māḍu endu hēḷida. Vyāsarūpadinda astraprayōga māḍabēkāda sandarbha kramagaḷa eccaravirabēku endu tiḷisi hēḷida.
  
  
  
  
 • ಭಾರದ್ವಾಜ,ಬೆಂಗಳೂರು

  11:09 AM, 09/01/2018

  ಶ್ರೀ ಗುರುಭ್ಯೋ ನಮಃ
  
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ಇಲ್ಲಿ ಶ್ರೀ ಸೂತಾಚಾರ್ಯರು, ಶ್ರೀ ಅಶ್ವತ್ಥಾಮಾಚಾರ್ಯರಿಗೆ ಬಿದ್ದ ಕನಸನ್ನು ಉಲ್ಲೇಖಿಸಲು ಕಾರಣವೇನು ? ಮಹಾಭಾರತದಲ್ಲಿ ನಡೆದ ನಿಜವಾದ ಘಟನೆಯಲ್ಲಿ ಎರಡು ಭಗವದ್ರೂಪಗಳ ಮಹಾತ್ಮ್ಯ ಇರುವಾಗು ಕನಸಿನಲ್ಲಿ ಬಂದ ಘಟನೆಗಳನ್ನು ಏಕೆ ಉಲ್ಲೇಖಿಸಿದ್ದಾರೆ. ದಯಮಾಡಿ ತಿಳಿಸಿ.

  Vishnudasa Nagendracharya

  ದೇವರ ಸ್ತೋತ್ರಗಳು, ಮಾಹಾತ್ಮ್ಯ ಎಲ್ಲಿ ಪರಿಸ್ಪಷ್ಟವಾಗಿ ಅಡಕವಾಗಿದೆಯೋ ಆ ಘಟನೆಗಳನ್ನು ಮಾತ್ರ ಭಾಗವತ ಉಲ್ಲೇಖಿಸುತ್ತದೆ. ನೈಜ ಘಟನೆಯಲ್ಲಿ ಈ ಸ್ತೋತ್ರ ಇಲ್ಲ. 
  
  ಅಶ್ವತ್ಥಾಮರ ಕನಸಿನಲ್ಲಿ ಅರ್ಜುನ ಮಾಡಿದ ಸ್ತೋತ್ರವಿದೆ. ಅದಕ್ಕಾಗಿ ಉಲ್ಲೇಖ. 
  
  ಹಾಗೆಯೇ, ಉತ್ತರಾದೇವಿ ಮಾಡಿದ ಸ್ತೋತ್ರ, ಕುಂತೀಸ್ತೋತ್ರ, ಭೀಷ್ಮಸ್ತೋತ್ರ ಇವುಗಳಿಗಾಗಿ ಆ ಘಟನೆಗಳು ಉಲ್ಲೇಖ ಗೊಂಡಿವೆ. 
 • Raghoottam Rao,Bangalore

  1:35 PM , 08/01/2018

  ತಮಗೆ ಯಾವ ರೀತಿ ಕೃತಜ್ಞತೆ ನಮಸ್ಕಾರಗಳನ್ನು ತಿಳಿಸಬೇಕೋ ನಮಗೆ ತಿಳಿಯುತ್ತಿಲ್ಲ, ಗುರುಗಳೆ. 
  
  ದಿವಸದಿಂದ ದಿವಸಕ್ಕೆ ತಾವು ಜ್ಞಾನವನ್ನು ಕೈತುಂಬಿ ನೀಡುತ್ತಿದ್ದೀರಿ. ಅದೆಷ್ಟು ಚನ್ನಾಗಿ ಭಾಗವತ ಹೇಳುತ್ತಿದ್ದೀರಿ. 
  
  ದುರ್ಯೋಧನ ಅಶ್ವತ್ಥಾಮರು ಮಾತನಾಡುತ್ತಿದ್ದರೆ ನಾವೇ ಪಕ್ಕದಲ್ಲಿ ನಿಂತಿರುತ್ತೇವೆ. ಅಶ್ವತ್ಥಾಮ ಶಿಬಿರವನ್ನು ನಾಶ ಮಾಡುತ್ತಿದ್ದರೆ ನಾವು ಭಯಮಿಶ್ರಿತ ಭಾವದಿಂದ ನೋಡುತ್ತಿದ್ದೇವೆ. ದ್ರೌಪದಿಯ ಮಕ್ಕಳನ್ನು ಕೊಂದಾಗ ನಿಟ್ಟಿಸಿರು ಬಿಡುತ್ತೇವೆ. ಅಶ್ವತ್ಥಾಮ ಓಡಿ ಹೋಗುವಾಗ ನಾವೂ ಬೆನ್ನಟ್ಟಿ ಹೋಗುತ್ತೇವೆ. ಅಸ್ತ್ರಗಳ ಘರ್ಷಣೆಯಲ್ಲಿ ಮಧ್ಯ ನಿಂತ ವೇದವ್ಯಾಸರನ್ನು ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದೇವೆ. ಅಶ್ವತ್ಥಾಮರಿಗಲ್ಲ ಕನಸು ಬಿದ್ದದ್ದು, ನಮಗೇ ಕನಸು ಬೀಳುತ್ತಿದೆ ಎಂಬಂತೆ ಭಾಸವಾಗುತ್ತದೆ. 
  
  ಕತೆಗಳು ನಮ್ಮ ಮುಂದೆಯೇ ನಡೆಯುತ್ತಿದೆ. ನಿಮ್ಮನ್ನು ನಮಗೆ ನೀಡಿದ ದೇವರಿಗೆ, ಭಾಗವತದ ಮುಖಾಂತರ ದೇವರನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ವಂದನೆಗಳು. 
  
  ರಘೂತ್ತಮರಾವ್ ಮತ್ತು ಕುಟುಂಬದ ಸದಸ್ಯರು.
 • Aruna,Mumbai

  11:52 AM, 08/01/2018

  Acharyarige vinaypurvak vandanegalu Ashavthamacharyaru brahmacharigalagiddu Duryodhanan patniyondige kauravar vasha belesalu oppige kotiddu yake dayavittu tilisi namaskargalu

  Vishnudasa Nagendracharya

  Asuraveshadinda.
 • Shantha raghottamachar,Bengaluru

  11:56 AM, 08/01/2018

  ನಮೋನಮಃ ಸ್ವಪ್ನ ಮತ್ತು ನೈಜಘಟನೆಯ ವಿವರಣೆ ತುಂಬಾ ಚೆನ್ನಾಗಿ ತಿಳಿಸಿ ದ್ದೀರಿ. ನಮೋನಮಃ
 • G A,Nadiger

  11:24 AM, 08/01/2018

  Pranamagalu. Adbhuta katha nirupaNa shaili; Enu heLuvadu ?
 • P N Deshpanse,Bangalore

  11:24 AM, 08/01/2018

  SrimadBhagwatdaill baruwa kanasu matuu Mahabharat dalii baruwa naija ghatneaya vivrane tumba tiliyagiddu nijwaada vishayawannu atee sundarwaagi neerupeesiddri.Dhanywaadgalu
 • Niranjan Kamath,Koteshwar

  10:58 AM, 08/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಪರಮ ಪರಮ ಪರಮ ಮಂಗಲ. ಧನ್ಯ ಧನ್ಯ ಧನ್ಯ.... ಈ ಪರಿಯ ಸೊಗಸು ....ಇಂತಹ ಕಾರುಣ್ಯದ ದೇವಿ ದ್ರೌಪದಿಯ ಭಾವನೆ....ಗುರುಪುತ್ರ ಅಶ್ವತ್ಥಾಮರ  ಛಲ , ದ್ವೇಷ, ಧರ್ಮಪ್ರಜ್ಞೆ,. ಭೀಮ ಅರ್ಜುನರ ಬಲ , ಧರ್ಮರಾಯರ ಧರ್ಮ...ಈ ಎಲ್ಲವನ್ನೂ ನೆಡೆಸಿ, ಎಲ್ಲವನ್ನು ಗೊತ್ತಿದ್ದು, ಗೊತ್ತಿಲ್ಲದಂತೆ ನಟನೆ ಮಾಡಿದ ಶ್ರೀ ಕೃಷ್ಣ ಭಗವಂತನ ಮಹಿಮೆ , ಶ್ರೀ ವೇದವ್ಯಾಸರ ಚಿಂತನೆ....ಹಾಗೂ ಎಲ್ಲವನ್ನು ಅಲ್ಲೇ ನಿಂತು ನೋಡಿದಂತೆ ಭಾಸವಾಗಿಸುವ ನಿಮ್ಮ ವಾಕ್ ಚಾತುರ್ಯ, ಪರಮ ಧನ್ಯರು ನಾವು. ನಿಮ್ಮ ಈ ಧರ್ಮಾಚರಣೆಗೆ ಭಗವಂತನ ಸಂಪೂರ್ಣ ಆಶೀರ್ವಾದ ಹಾಗೂ ನಮಗೂ ಕೇಳುವಂತಹ ಭಾಗ್ಯ ಸಿಗಲಿ ಎಂದು ಬೇಡುತ್ತೆನೆ. ಧನ್ಯೋಸ್ಮಿ. ಧನ್ಯೋಸ್ಮಿ.. ಧನ್ಯೋಸ್ಮಿ.
 • Deshmukh seshagiri rao,Banglore

  8:27 AM , 08/01/2018

  ಶ್ರೀ ಗುರುಗಳಿಗೆ ನನ್ನ ಅನಂತ ಧನ್ಯವಾದಗಳು
 • Srinath,Chikmagalur

  7:10 AM , 08/01/2018

  ಕನಸು ಮತ್ತು ಸತ್ಯಘಟನೆಗಳ ಸಮನ್ವಯ ಅದ್ಭುತವಾಗಿ ಮೂಡಿಬಂದಿದೆ. 
  
  ನಾವೇ ಯುದ್ಧಭೂಮಿಯಲ್ಲಿ ನಿಂತು ಯುದ್ಧವನ್ನು ನೋಡುತ್ತಿರುವ ಅನುಭವ 
   ಉಂಟಾಗಿದೆ.
  
  ನಿಮ್ಮ ಪ್ರವಚನಶೈಲಿಗೆ ನಿಮಗಿದೋ ನನ್ನ ಕೋಟಿ ನಮನ.