Upanyasa - VNU612

ಶ್ರೀಮದ್ ಭಾಗವತಮ್_99_ಧರ್ಮರಾಜರ ಸಂಶಯ

ಭೀಷ್ಮ-ದುರ್ಯೋಧನ ಮೊದಲಾದವರನ್ನು ಕೊಲ್ಲುವದು ತಪ್ಪಲ್ಲವೇ ಎಂದು ಯುದ್ಧಕ್ಕಿಂತ ಮೊದಲು ಅರ್ಜುನ ಸಂಶಯಕ್ಕೀಡಾದರೆ, ಯುದ್ಧ ಮುಗಿದ ನಂತರ ಕೊಂದದ್ದು ತಪ್ಪಲ್ಲವೇ ಎಂದು ಧರ್ಮರಾಜರು ಸಂಶಯಕ್ಕೀಡಾಗುತ್ತಾರೆ. ವಿದೇಶಪ್ರವಾಸ, ಯಜ್ಞದಲ್ಲಿ ಪಶುಬಲಿ, ನಿಷಿದ್ಧವಾದುದದನ್ನು ತಿನ್ನುವದು ಮುಂತಾದ ದೃಷ್ಟಾಂತಗಳ ಮುಖಾಂತರ, ದಿನನಿತ್ಯದ ಜೀವನದಲ್ಲಿ ನಾವೆಷ್ಟು ಸಂಶಯಕ್ಕೀಡಾಗುತ್ತಿರುತ್ತೇವೆ ಎನ್ನುವದನ್ನು ನಿರೂಪಿಸು ನಮಗಿಷ್ಟವಾದುದು ಧರ್ಮ, ನಮಗಿಷ್ಟವಿಲ್ಲದ್ದು ಅಧರ್ಮ ಎಂಬ ವಿಚಿತ್ರ ಮನೋಭಾವ ತಪ್ಪು, ಶಾಸ್ತ್ರ ಹೇಳುವದು ಧರ್ಮ, ಶಾಸ್ತ್ರ ನಿಷೇಧಿಸುವದು ಅಧರ್ಮ ಎನ್ನುವದೇ ಸರಿಯಾದದದ್ದು ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಅಥ ನವಮೋಽಧ್ಯಾಯಃ। 

ವ್ಯಾಸಾದ್ಯೈರೀಶ್ವರೇಹಾಜ್ಞೈಃ ಕೃಷ್ಣೇನಾದ್ಭುತಕರ್ಮಣಾ।

ಪ್ರಬೋಧಿತೋಽಪೀತಿಹಾಸೈರ್ನಾಬುಧ್ಯತ ಶುಚಾರ್ಪಿತಃ ॥ ೧ ॥

ಆಹ ರಾಜಾ ಧರ್ಮಸುತಃ ಚಿಂತಯನ್ ಸುಹೃದಾಂ ವಧಮ್।

ಪ್ರಾಕೃತೇನಾಽತ್ಮನಾ ವಿಪ್ರಾಃ ಸ್ನೇಹಮೋಹವಶಂ ಗತಃ ॥ ೨ ॥

ಅಹೋ ಮೇ ಪಶ್ಯತಾಜ್ಞಾನಂ ಹೃದಿ ರೂಢಂ ದುರಾತ್ಮನಃ।

ಪಾರಕ್ಯಸ್ಯೈವ ದೇಹಸ್ಯ ಬಹ್ವ್ಯೋ ಮೇಽಕ್ಷೋಹಿಣೀರ್ಹತಾಃ ॥ ೩ ॥

ನ ಮೇ ಸ್ಯಾನ್ನಿರಯಾನ್ಮೋಕ್ಷೋ ಹ್ಯಾಪಿ ವರ್ಷಾಯುತಾಯುತೈಃ।

ಬಾಲದ್ವಿಜಸುಹೃನ್ಮಿತ್ರಪಿತೃಭ್ರಾತೃಗುರುದ್ರುಹಃ ॥ ೪ ॥

ನೈನೋ ರಾಜ್ಞಾಃ ಪ್ರಜಾಭರ್ತುರ್ಧರ್ಮ್ಯೋ ಯುದ್ಧೇ ವಧೋ ದ್ವಿಶ್ಯಾಮ್।

ಇತಿ ಮೇ ನತು ಬೋಧಾಯ ಕಲ್ಪತೇ ಶಾಶ್ವತಂ ವಚಃ ॥ ೫ ॥

ಭಾಗವತತಾತ್ಪರ್ಯಮ್ — 
“ಯಃ ಪದಾತಿಂ ಹನ್ತಿ ಸ ಭವತಿ ಚಾತುರ್ಮಾಸ್ಯಯಾಜೀ ಯಃ ಸಾದಿನಂ ಸೋಗ್ನಿಷ್ಟೋಮಸ್ಯ ಯೋ ಹನ್ತಿ ಗಜರಥೌ ಸೋಽಶ್ವಮೇಧರಾಜಸೂಯಾಭ್ಯಾಮ್” ಇತ್ಯಾದಿ ಶಾಶ್ವತಂ ವಚಃ ।

ಸ್ತ್ರೀಣಾಂ ಮದ್ಧತಬನ್ಧೂನಾಂ ದ್ರೋಹೋ ಯೋಽಸಾವಿಹೋತ್ಥಿತಃ।

ಕರ್ಮರ್ಭಿರ್ಹಯಮೇಧೀಯೈರ್ನಾಹಂ ಕಲ್ಪೋ ವ್ಯಪೋಹಿತುಮ್ ॥ ೬ ॥

ಯಥಾ ಪಂಕೇನ ಪಂಕಾಂಭಃ ಸುರಯಾ ವಾ ಸುರಾಕೃತಮ್।

ಭೂತಹತ್ಯಾಂ ತಥೈವೈತಾಂ ನ ಯಜ್ಞೈರ್ಮಾರ್ಷ್ಟುಮರ್ಹತಿ ॥ ೭ ॥

Play Time: 44:37

Size: 7.60 MB


Download Upanyasa Share to facebook View Comments
3495 Views

Comments

(You can only view comments here. If you want to write a comment please download the app.)
 • Sangeetha prasanna,Bangalore

  8:15 AM , 14/01/2018

  ಹರೇ ಶ್ರೀನಿವಾಸ .ಪ್ರಾಣಿಬಲಿ ಬಗ್ಗೆ ನಮಗೆ ತಿಳಿಯದೆ ಇರುವ ವಿಷಯ .ನಿಮ್ಮಿಂದ ತಿಳಿದು ಬಹಳ ಸಂತೋಷವಾಯಿತು.ಎಣೆ ಇಲ್ಲದ ತಮ್ಮ ಅಧ್ಬುತವಾದ ಜ್ನ್ಯಾನಕ್ಕೆ ನಮ್ಮ ಅನಂತಾನಂತ ಕೋಟಿ ನಮನಗಳು .🙏🙏🙏🙏🙏
 • Raghoottam Rao,Bangalore

  6:15 PM , 13/01/2018

  ಅತ್ಯುತ್ತಮ ಪ್ರವಚನ.
  
  ವಿದೇಶ ಪ್ರವಾಸದ ಕುರಿತು ತುಂಬ ಚನ್ನಾಗಿ ಮೂಡಿಬಂದಿದೆ. 
  
  ಮತ್ತೆ ಮತ್ತೆ ಕೇಳಬೇಕಾದ ಪ್ರವಚನ
 • Shantha raghottamachar,Bengaluru

  5:03 PM , 13/01/2018

  ನಮೋನಮಃ ಪಶುಬಲಿಬಗ್ಗೆ ,ಯಜ್ಞ ಪಶುವಿನಬಗ್ಗೆ,ಋಷಿ ಗಳ ಜ್ಞಾನದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ ನಮಸ್ಕಾರಗಳು.
 • Niranjan Kamath,Koteshwar

  10:04 AM, 13/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಧರ್ಮ ರಾಯರ ಧರ್ಮ ಪ್ರಜ್ಞೆ ಹಾಗೂ ಧರ್ಮ ಶಾಸ್ತ್ರದಲ್ಲಿ ವ್ಯಕ್ತವಾದ ವಿಚಾರಗಳು ಪರಮ ಮಂಗಲ. ಧನ್ಯೋಸ್ಮಿ.
 • P N Deshpanse,Bangalore

  9:54 AM , 13/01/2018

  S.Namaskaragalu.As conveyed by you in the last every thing is done finally by Almighty only. Because he wanted that Dharmraja must be advised by Bhishamachar he made Dharmraja not to listen to any body including SriVedavyyasaru. This is the secret of him which we should learn in daytodate life. Dhanywaadagalu